Site icon Vistara News

Sudha Murty: ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ನೋಡಿ ಶ್ಲಾಘಿಸಿದ ಸುಧಾ ಮೂರ್ತಿ

Sudha Murty Vivek Agnihotri

ಬೆಂಗಳೂರು: ವಿವೇಕ್ ಅಗ್ನಿಹೋತ್ರಿ ಅವರ `ದಿ ವ್ಯಾಕ್ಸಿನ್ ವಾರ್‌‘ (The Vaccine War) ಟ್ರೈಲರ್‌ ಈಗಾಗಲೇ ಬಿಡುಗಡೆಯಾಗಿದೆ. ದಿ ವ್ಯಾಕ್ಸಿನ್ ವಾರ್‌ ವಿಶೇಷ ಪ್ರದರ್ಶನವನ್ನು ಚಿತ್ರತಂಡ ಆಯೋಜಿಸಿತ್ತು. ಸುಧಾ ಮೂರ್ತಿಯವರು ಸಿನಿಮಾ ನೋಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೋವಾಕ್ಸಿನ್‌ ಬೆಳವಣಿಗೆಯ ಕಥೆಯನ್ನು ಹೇಳಿದ್ದಕ್ಕಾಗಿ ಸುಧಾ ಮೂರ್ತಿ(Sudha Murty) ಅವರು ವಿವೇಕ್ ಅಗ್ನಿಹೋತ್ರಿಯನ್ನು ಶ್ಲಾಘಿಸಿದರು.

`ದಿ ವ್ಯಾಕ್ಸಿನ್ ವಾರ್‌’ ಸಿನಿಮಾ ಸೆಪ್ಟೆಂಬರ್ 28ರಂದು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ. ‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲಿ ಮಾತು ಆರಂಭಿಸಿ ಆ ಬಳಿಕ ಇಂಗ್ಲಿಷ್​ನಲ್ಲಿ ತಮ್ಮ ವಿಮರ್ಶೆ ತಿಳಿಸಿದರು. ಚಿತ್ರದ ಕುರಿತು ಮಾತನಾಡಿದ ಸುಧಾ ಮೂರ್ತಿ, “ಈ ಸಿನಿಮಾ ಹೃದಯ ಸ್ಪರ್ಶಿಯಾಗಿದೆ. ಮಹಿಳೆಯ ಪಾತ್ರವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಕುಟುಂಬ ಹಾಗೂ ಕೆಲಸವನ್ನು ಸಮದೂಗಿಸಿಕೊಂಡು ಹೋಗುವುದು ಕಷ್ಟ. ಕೆಲವರು ಈ ವಿಚಾರದಲ್ಲಿ ಅದೃಷ್ಟಶಾಲಿಗಳು. ಮಹಿಳೆ ತನ್ನ ಮಕ್ಕಳೊಂದಿಗೆ ತನ್ನ ವೃತ್ತಿಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಅಷ್ಟು ಸುಲಭದ ಮಾತವಲ್ಲ. ಆಕೆಗೆ ಉತ್ತಮ ಕುಟುಂಬದ ಬೆಂಬಲ ಬೇಕು. ನಾನು ಯಾವಾಗಲೂ ಹೇಳುತ್ತೇನೆ, ಪ್ರತಿಯೊಬ್ಬ ಯಶಸ್ವಿ ಮಹಿಳೆಯ ಹಿಂದೆ, ಒಬ್ಬ ಅರ್ಥಮಾಡಿಕೊಳ್ಳುವ ಪುರುಷನಿರಬೇಕು, ಇಲ್ಲದಿದ್ದರೆ ಅವಳು ಇಂತಹ ಸಾಧನೆ ಮಾಡಲು ಸಾಧ್ಯವಿಲ್ಲʼʼಎಂದರು.

ಮಾತು ಮುಂದುವರಿಸಿ ಮಹಿಳಾ ವಿಜ್ಞಾನಿಗಳು ಕೊವಿಡ್ ಸಂದರ್ಭದಲ್ಲಿ ಲ್ಯಾಬ್​ಗೆ ಬಂದು ಸಂಶೋಧನೆ ಮಾಡಿದ್ದರು. ಇದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಸುಧಾ ಮೂರ್ತಿ, ‘ಮಕ್ಕಳು ಚಿಕ್ಕವರಿರಬಹುದು. ಆದರೆ ಅವರು ತಮ್ಮ ತಾಯಿಯ ಬಗ್ಗೆ ಮತ್ತು ಅವರು ಏನು ಮಾಡಿದ್ದಾರೆಂದು ಹೆಮ್ಮೆಪಡುತ್ತಾರೆ’ ಎಂದಿದ್ದಾರೆ.

“ಈ ಚಲನಚಿತ್ರ ನಿಜವಾಗಿಯೂ ತಂಡದ ಶ್ರಮ ಮತ್ತು ನಿಸ್ವಾರ್ಥ ಕೆಲಸವನ್ನು ತೋರಿಸುತ್ತದೆ. ನಾವೆಲ್ಲರೂ ಪ್ರಜಾಪ್ರಭುತ್ವ ಭಾರತದಲ್ಲಿ ಸಂತೋಷದಿಂದ ಮತ್ತು ಆರೋಗ್ಯಕರವಾಗಿ ಬದುಕಲು ಎಲ್ಲಾ ವಿಜ್ಞಾನಿಗಳ ಕೊಡುಗೆ ಇದೆ. ಅಗ್ನಿಹೋತ್ರಿ ಅವರನ್ನು ಶ್ಲಾಘಿಸಿ ‘ನಿಜವಾದ ಸಂಪತ್ತು ನಿಮ್ಮ ವಿಶ್ವಾಸದಲ್ಲಿದೆ” ಎಂದರು.

ಇದನ್ನೂ ಓದಿ: The Vaccine War Movie: ದಿ ವ್ಯಾಕ್ಸಿನ್ ವಾರ್ ಸಿನಿಮಾ ಟ್ರೈಲರ್ ಔಟ್, ಜನರಿಂದ ಸಖತ್ ರೆಸ್ಪಾನ್ಸ್!

ಸಿನಿಮಾ ಸೆಪ್ಟೆಂಬರ್ 28ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ʼದಿ ವ್ಯಾಕ್ಸಿನ್ ವಾರ್‌ʼ ಪಾತ್ರವರ್ಗದಲ್ಲಿ ಅನುಪಮ್ ಖೇರ್, ವಿವೇಕ್ ಅವರ ಪತ್ನಿ ಪಲ್ಲವಿ ಜೋಶಿ, ನಾನಾ ಪಾಟೇಕರ್, ಸಪ್ತಮಿ ಗೌಡ (Sapthami Gowda) ಮತ್ತು ರೈಮಾ ಸೇನ್ ಇದ್ದಾರೆ. ಹಿಂದಿ, ಇಂಗ್ಲಿಷ್, ತೆಲುಗು, ತಮಿಳು, ಮಲಯಾಳಂ, ಕನ್ನಡ, ಭೋಜ್‌ಪುರಿ, ಪಂಜಾಬಿ, ಗುಜರಾತಿ, ಮರಾಠಿ ಮತ್ತು ಬೆಂಗಾಲಿ ಸೇರಿದಂತೆ 10 ಭಾಷೆಗಳಲ್ಲಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.. ʼಕಾಶ್ಮೀರ್​ ಫೈಲ್ಸ್​ʼ ನಿರ್ಮಾಪಕ ಅಭಿಷೇಕ್​ ಅಗರ್ವಾಲ್ ಬಂಡವಾಳ ಹೂಡಿದ್ದು, ಐ ಆ್ಯಮ್ ಬುದ್ಧ ಸಹಯೋಗದಲ್ಲಿ ಪಲ್ಲವಿ ಜೋಶಿ ಕೂಡ ಸಿನಿಮಾಕ್ಕೆ ಹಣ ಹಾಕಿದ್ದಾರೆ.

Exit mobile version