Sudha Murty: ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ನೋಡಿ ಶ್ಲಾಘಿಸಿದ ಸುಧಾ ಮೂರ್ತಿ Vistara News
Connect with us

ಬಾಲಿವುಡ್

Sudha Murty: ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ನೋಡಿ ಶ್ಲಾಘಿಸಿದ ಸುಧಾ ಮೂರ್ತಿ

Sudha Murty: ಸಿನಿಮಾ ಸೆಪ್ಟೆಂಬರ್ 28ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ʼದಿ ವ್ಯಾಕ್ಸಿನ್ ವಾರ್‌ʼ ಪಾತ್ರವರ್ಗದಲ್ಲಿ ಅನುಪಮ್ ಖೇರ್, ವಿವೇಕ್ ಅವರ ಪತ್ನಿ ಪಲ್ಲವಿ ಜೋಶಿ, ನಾನಾ ಪಾಟೇಕರ್, ಸಪ್ತಮಿ ಗೌಡ (Sapthami Gowda) ಮತ್ತು ರೈಮಾ ಸೇನ್ ಇದ್ದಾರೆ.

VISTARANEWS.COM


on

Sudha Murty Vivek Agnihotri
Koo

ಬೆಂಗಳೂರು: ವಿವೇಕ್ ಅಗ್ನಿಹೋತ್ರಿ ಅವರ `ದಿ ವ್ಯಾಕ್ಸಿನ್ ವಾರ್‌‘ (The Vaccine War) ಟ್ರೈಲರ್‌ ಈಗಾಗಲೇ ಬಿಡುಗಡೆಯಾಗಿದೆ. ದಿ ವ್ಯಾಕ್ಸಿನ್ ವಾರ್‌ ವಿಶೇಷ ಪ್ರದರ್ಶನವನ್ನು ಚಿತ್ರತಂಡ ಆಯೋಜಿಸಿತ್ತು. ಸುಧಾ ಮೂರ್ತಿಯವರು ಸಿನಿಮಾ ನೋಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೋವಾಕ್ಸಿನ್‌ ಬೆಳವಣಿಗೆಯ ಕಥೆಯನ್ನು ಹೇಳಿದ್ದಕ್ಕಾಗಿ ಸುಧಾ ಮೂರ್ತಿ(Sudha Murty) ಅವರು ವಿವೇಕ್ ಅಗ್ನಿಹೋತ್ರಿಯನ್ನು ಶ್ಲಾಘಿಸಿದರು.

`ದಿ ವ್ಯಾಕ್ಸಿನ್ ವಾರ್‌’ ಸಿನಿಮಾ ಸೆಪ್ಟೆಂಬರ್ 28ರಂದು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ. ‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲಿ ಮಾತು ಆರಂಭಿಸಿ ಆ ಬಳಿಕ ಇಂಗ್ಲಿಷ್​ನಲ್ಲಿ ತಮ್ಮ ವಿಮರ್ಶೆ ತಿಳಿಸಿದರು. ಚಿತ್ರದ ಕುರಿತು ಮಾತನಾಡಿದ ಸುಧಾ ಮೂರ್ತಿ, “ಈ ಸಿನಿಮಾ ಹೃದಯ ಸ್ಪರ್ಶಿಯಾಗಿದೆ. ಮಹಿಳೆಯ ಪಾತ್ರವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಕುಟುಂಬ ಹಾಗೂ ಕೆಲಸವನ್ನು ಸಮದೂಗಿಸಿಕೊಂಡು ಹೋಗುವುದು ಕಷ್ಟ. ಕೆಲವರು ಈ ವಿಚಾರದಲ್ಲಿ ಅದೃಷ್ಟಶಾಲಿಗಳು. ಮಹಿಳೆ ತನ್ನ ಮಕ್ಕಳೊಂದಿಗೆ ತನ್ನ ವೃತ್ತಿಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಅಷ್ಟು ಸುಲಭದ ಮಾತವಲ್ಲ. ಆಕೆಗೆ ಉತ್ತಮ ಕುಟುಂಬದ ಬೆಂಬಲ ಬೇಕು. ನಾನು ಯಾವಾಗಲೂ ಹೇಳುತ್ತೇನೆ, ಪ್ರತಿಯೊಬ್ಬ ಯಶಸ್ವಿ ಮಹಿಳೆಯ ಹಿಂದೆ, ಒಬ್ಬ ಅರ್ಥಮಾಡಿಕೊಳ್ಳುವ ಪುರುಷನಿರಬೇಕು, ಇಲ್ಲದಿದ್ದರೆ ಅವಳು ಇಂತಹ ಸಾಧನೆ ಮಾಡಲು ಸಾಧ್ಯವಿಲ್ಲʼʼಎಂದರು.

ಮಾತು ಮುಂದುವರಿಸಿ ಮಹಿಳಾ ವಿಜ್ಞಾನಿಗಳು ಕೊವಿಡ್ ಸಂದರ್ಭದಲ್ಲಿ ಲ್ಯಾಬ್​ಗೆ ಬಂದು ಸಂಶೋಧನೆ ಮಾಡಿದ್ದರು. ಇದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಸುಧಾ ಮೂರ್ತಿ, ‘ಮಕ್ಕಳು ಚಿಕ್ಕವರಿರಬಹುದು. ಆದರೆ ಅವರು ತಮ್ಮ ತಾಯಿಯ ಬಗ್ಗೆ ಮತ್ತು ಅವರು ಏನು ಮಾಡಿದ್ದಾರೆಂದು ಹೆಮ್ಮೆಪಡುತ್ತಾರೆ’ ಎಂದಿದ್ದಾರೆ.

“ಈ ಚಲನಚಿತ್ರ ನಿಜವಾಗಿಯೂ ತಂಡದ ಶ್ರಮ ಮತ್ತು ನಿಸ್ವಾರ್ಥ ಕೆಲಸವನ್ನು ತೋರಿಸುತ್ತದೆ. ನಾವೆಲ್ಲರೂ ಪ್ರಜಾಪ್ರಭುತ್ವ ಭಾರತದಲ್ಲಿ ಸಂತೋಷದಿಂದ ಮತ್ತು ಆರೋಗ್ಯಕರವಾಗಿ ಬದುಕಲು ಎಲ್ಲಾ ವಿಜ್ಞಾನಿಗಳ ಕೊಡುಗೆ ಇದೆ. ಅಗ್ನಿಹೋತ್ರಿ ಅವರನ್ನು ಶ್ಲಾಘಿಸಿ ‘ನಿಜವಾದ ಸಂಪತ್ತು ನಿಮ್ಮ ವಿಶ್ವಾಸದಲ್ಲಿದೆ” ಎಂದರು.

ಇದನ್ನೂ ಓದಿ: The Vaccine War Movie: ದಿ ವ್ಯಾಕ್ಸಿನ್ ವಾರ್ ಸಿನಿಮಾ ಟ್ರೈಲರ್ ಔಟ್, ಜನರಿಂದ ಸಖತ್ ರೆಸ್ಪಾನ್ಸ್!

ಸಿನಿಮಾ ಸೆಪ್ಟೆಂಬರ್ 28ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ʼದಿ ವ್ಯಾಕ್ಸಿನ್ ವಾರ್‌ʼ ಪಾತ್ರವರ್ಗದಲ್ಲಿ ಅನುಪಮ್ ಖೇರ್, ವಿವೇಕ್ ಅವರ ಪತ್ನಿ ಪಲ್ಲವಿ ಜೋಶಿ, ನಾನಾ ಪಾಟೇಕರ್, ಸಪ್ತಮಿ ಗೌಡ (Sapthami Gowda) ಮತ್ತು ರೈಮಾ ಸೇನ್ ಇದ್ದಾರೆ. ಹಿಂದಿ, ಇಂಗ್ಲಿಷ್, ತೆಲುಗು, ತಮಿಳು, ಮಲಯಾಳಂ, ಕನ್ನಡ, ಭೋಜ್‌ಪುರಿ, ಪಂಜಾಬಿ, ಗುಜರಾತಿ, ಮರಾಠಿ ಮತ್ತು ಬೆಂಗಾಲಿ ಸೇರಿದಂತೆ 10 ಭಾಷೆಗಳಲ್ಲಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.. ʼಕಾಶ್ಮೀರ್​ ಫೈಲ್ಸ್​ʼ ನಿರ್ಮಾಪಕ ಅಭಿಷೇಕ್​ ಅಗರ್ವಾಲ್ ಬಂಡವಾಳ ಹೂಡಿದ್ದು, ಐ ಆ್ಯಮ್ ಬುದ್ಧ ಸಹಯೋಗದಲ್ಲಿ ಪಲ್ಲವಿ ಜೋಶಿ ಕೂಡ ಸಿನಿಮಾಕ್ಕೆ ಹಣ ಹಾಕಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ದೇಶ

Parineeti Chopra; ನಾಳೆ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಅದ್ಧೂರಿ ಮದುವೆ; ಭರ್ಜರಿ ಸಿದ್ಧತೆ!

Parineeti Chopra; ಅದ್ಧೂರಿ ಮದುವೆಗೆ ರಾಜಸ್ಥಾನ ತಲುಪುವ ಮುನ್ನ ಜೋಡಿ ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಸೆಪ್ಟೆಂಬರ್ 23ರಂದು ಅವರ ಹಳದಿ ಸಮಾರಂಭ, ಮೆಹೆಂದಿ ಇತರ ವಿವಾಹ ಪೂರ್ವ ಸಂಭ್ರಮಗಳು ನಡೆಯಲಿದೆ. ಸೆ. 24ರಂದು ಮಾಂಗಲ್ಯ ಧಾರಣೆ ಶಾಸ್ತ್ರ ನಡೆಯಲಿದೆ.

VISTARANEWS.COM


on

Edited by

Parineeti Chopra Raghav
Koo

ಬೆಂಗಳೂರು: ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ರಾಘವ್ ಚಡ್ಡಾ (Raghav Chadha) ಮತ್ತು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಜೋಡಿ (Parineeti Chopra) ಸೆಪ್ಟೆಂಬರ್ 23 ಮತ್ತು 24 ರಂದು ರಾಜಸ್ಥಾನದ ಉದಯಪುರದಲ್ಲಿ ವಿವಾಹವಾಗಲಿದೆ. ಲೀಲಾ ಪ್ಯಾಲೆಸ್ (Leela Palace) ಮತ್ತು ದಿ ಒಬೆರಾಯ್ ಉದಯವಿಲಾಸ್‌ನಲ್ಲಿ (The Oberoi Udaivilas.) ವಿವಾಹದ ವಿಧಿವಿಧಾನಗಳು ನಡೆಯಲಿವೆ ಎಂದು ವರದಿಯಾಗಿದೆ. ಅದ್ಧೂರಿ ಮದುವೆಗೆ ರಾಜಸ್ಥಾನ ತಲುಪುವ ಮುನ್ನ ಜೋಡಿ ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಸೆಪ್ಟೆಂಬರ್ 23ರಂದು ಅವರ ಹಳದಿ ಸಮಾರಂಭ, ಮೆಹೆಂದಿ ಇತರ ವಿವಾಹ ಪೂರ್ವ ಸಂಭ್ರಮಗಳು ನಡೆಯಲಿದೆ. ಸೆ. 24ರಂದು ಮಾಂಗಲ್ಯ ಧಾರಣೆ ಶಾಸ್ತ್ರ ನಡೆಯಲಿದೆ.

ಮೆಹೆಂದಿ ಕಾರ್ಯಕ್ರಮದಲ್ಲಿ ಅವರ ಆಪ್ತರು ಮತ್ತು ಕುಟುಂಬದವರು ಮಾತ್ರ ಪಾಲ್ಗೊಳ್ಳಲಿದ್ದಾರೆ. ಪರಿಣಿತಿ-ರಾಘವ್ ಅವರ ಮದುವೆಯ ಮೆರವಣಿಗೆ ಸೆಪ್ಟೆಂಬರ್ 24ರಂದು ನಡೆಯಲಿದೆ. ಇದಕ್ಕೂ ಮೊದಲು ರಾಘವ್ ಅವರ ಸೆಹ್ರಾ ಬಂದಿ ಪಿಚೋಲಾ ಸರೋವರದ ಮಧ್ಯದಲ್ಲಿರುವ ಹೋಟೆಲ್ ತಾಜ್‌ನಲ್ಲಿ ನಡೆಯಲಿದೆ. ಶೀಘ್ರದಲ್ಲೇ ತಾಜ್ ಹೋಟೆಲ್‌ನಿಂದ ವಧು ಪರಿಣಿತಿಯನ್ನು ಕರೆದುಕೊಂಡು ಹೋಗಲು ವರನೊಂದಿಗೆ ಮದುವೆ ಮೆರವಣಿಗೆ ಹೊರಡಲಿದೆ. ಇದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ದೋಣಿಗಳ ಅಲಂಕಾರದಲ್ಲೂ ಮೇವಾರ ಸಂಪ್ರದಾಯದ ಝಲಕ್ ಕಾಣಿಸಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Parineeti Chopra: ಪರಿಣಿತಿ ಚೋಪ್ರಾ-ರಾಘವ್ ಛಡ್ಡಾ ಮದುವೆ ಡೇಟ್‌ ಫಿಕ್ಸ್‌! ಎಲ್ಲಿ ಅದ್ಧೂರಿ ವಿವಾಹ?

ಮದುವೆಗೆ 20 ಕ್ಕೂ ಹೆಚ್ಚು ಅತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. 50ಕ್ಕೂ ಹೆಚ್ಚು ವಿವಿಐಪಿಗಳು ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ. ವಿವಾಹದಲ್ಲಿ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಸೇರಿದಂತೆ ಹಲವರು ಇರಲಿದ್ದಾರೆ. ಪರಿಣಿತಿ ಚೋಪ್ರಾ ಅವರ ಸೋದರಸಂಬಂಧಿ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಾಸ್ ಕೂಡ ಭಾಗಿಯಾಗಲಿದ್ದಾರೆ. ಮದುವೆಯ ನಂತರ, ಹರಿಯಾಣದ ಗುರುಗ್ರಾಮದಲ್ಲಿ ಆರತಕ್ಷತೆ ನಡೆಯಲಿದೆ.

ಲೀಲಾ ಪ್ಯಾಲೆಸ್ ಮತ್ತು ಉದಯವಿಲಾಸ್ ಹೊರತುಪಡಿಸಿ ಹತ್ತಿರದ ಮೂರು ಹೋಟೆಲ್‌ಗಳಲ್ಲಿ ಬುಕ್ಕಿಂಗ್ ಮಾಡಲಾಗಿದೆ. ಎರಡು ತಿಂಗಳ ಹಿಂದೆ, ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ, ಹೋಟೆಲ್‌ಗಳ ಸ್ಥಳಗಳನ್ನು ಖುದ್ದಾಗಿ ಪರಿಶೀಲಿಸಲು ಉದಯಪುರಕ್ಕೆ ಭೇಟಿ ನೀಡಿದ್ದರು.

Continue Reading

ಬಾಲಿವುಡ್

Salman Khan: ಈಗೆಲ್ಲ ಸಿನಿಮಾಗಳಿಗೆ 100 ಕೋಟಿ ಯಾವ ಲೆಕ್ಕ? ಬೆಂಚ್​ಮಾರ್ಕ್ ಬಗ್ಗೆ ಸಲ್ಲು ಹೇಳಿದ್ದೇನು?

Salman Khan: ಪಂಜಾಬಿ ಇಂಡಸ್ಟ್ರಿ, ಹಿಂದಿ ಇಂಡಸ್ಟ್ರಿ, ಪ್ರತಿಯೊಂದು ಇಂಡಸ್ಟ್ರಿಯಲ್ಲಿ ಈಗ ಎಲ್ಲ ಸಿನಿಮಾಗಳು 400-500-600 ಕೋಟಿ ರೂ. ಬ್ಯುಸಿನೆಸ್‌ ಮಾಡುತ್ತಿವೆ. ಮರಾಠಿ ಚಿತ್ರಗಳು ಕೂಡ ಈ ಸಾಲಿಗೆ ಸೇರಿವೆ. ಈಗ 100 ಕೋಟಿ ರೂ. ಕ್ಲಬ್ ಸೇರುವುದು ದೊಡ್ಡ ವಿಚಾರ ಅಲ್ಲ ಎಂದು ಸಲ್ಮಾನ್‌ ಖಾನ್‌ ಹೇಳಿದ್ದಾರೆ.

VISTARANEWS.COM


on

Edited by

Salman Khan
Koo

ಬೆಂಗಳೂರು: ಗಿಪ್ಪಿ ಗ್ರೆವಾಲ್ (Gippy Grewal) ಅಭಿನಯದ ಮುಂಬರುವ ಪಂಜಾಬಿ ಚಿತ್ರ ʼಮೌಜಾನ್ ಹಿ ಮೌಜಾನ್‌ʼನ (Maujaan Hi Maujaan) ಟ್ರೈಲರ್‌ ಬಿಡುಗಡೆ ಸಮಾರಂಭದಲ್ಲಿ ಸಲ್ಮಾನ್ ಖಾನ್ (Salman Khan) ಭಾಗಿಯಾಗಿದ್ದರು. ಈ ವೇಳೆ ನಟ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗೆ 100 ಕೋಟಿ ರೂ. ಕ್ಲಬ್ ಎನ್ನುವುದು ಸಣ್ಣ ವಿಚಾರ ಎಂದು ಹೇಳಿದ್ದಾರೆ. ಪಂಜಾಬಿ ಇಂಡಸ್ಟ್ರಿ, ಹಿಂದಿ ಇಂಡಸ್ಟ್ರಿ, ಪ್ರತಿಯೊಂದು ಇಂಡಸ್ಟ್ರಿಯಲ್ಲಿ ಈಗ ಎಲ್ಲ ಸಿನಿಮಾಗಳು 400-500-600 ಕೋಟಿ ರೂ. ಬ್ಯುಸಿನೆಸ್‌ ಮಾಡುತ್ತಿವೆ. ಮರಾಠಿ ಚಿತ್ರಗಳು ಕೂಡ ಈ ಸಾಲಿಗೆ ಸೇರಿವೆ. ಈಗ 100 ಕೋಟಿ ರೂ. ಕ್ಲಬ್ ಸೇರುವುದು ದೊಡ್ಡ ವಿಚಾರ ಅಲ್ಲ. ಹೀಗಾಗಿ, 1000 ಕೋಟಿ ರೂಪಾಯಿ ಎನ್ನುವುದನ್ನು ಬೆಂಚ್​ಮಾರ್ಕ್​ ಮಾಡಬೇಕುʼʼ ಎಂದರು.

ಈ ಇವೆಂಟ್‌ನಲ್ಲಿ, ಗಿಪ್ಪಿ ಗ್ರೆವಾಲ್ ಅವರು ಮಾತನಾಡಿ ʻʻ ನನ್ನ ಮುಂಬರುವ ಸಿನಿಮಾ ʼಮೌಜಾನ್ ಹಿ ಮೌಜಾನ್ʼ ಅಕ್ಟೋಬರ್ 20ರಂದು ಬಿಡುಗಡೆಯಾಗಲಿದೆ. ಅಷ್ಟೇ ಅಲ್ಲದೇ ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಕಾಣಲಿದೆʼʼ ಎಂದರು.

ವರದಿಯ ಪ್ರಕಾರ ಸಲ್ಮಾನ್‌ ಅವರ ಕೊನೆಯ ಚಿತ್ರ ʼಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಭಾರತದಲ್ಲಿ ಸುಮಾರು 132 ಕೋಟಿ ರೂ. ಗಳಿಸಿತ್ತು. ಸಲ್ಮಾನ್ ಖಾನ್ ಅವರ ಈಗಿನ ಹೇಳಿಕೆಯನ್ನು ಅನೇಕರು ಒಪ್ಪಿದ್ದಾರೆ. ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದೆ. ರಜನಿಕಾಂತ್ ನಟನೆಯ ‘ಜೈಲರ್’, ಸನ್ನಿ ಡಿಯೋಲ್ ನಟನೆಯ ‘ಗದರ್ 2’ ಚಿತ್ರಗಳು ಕೂಡ ಗೆದ್ದಿದೆ. ಅನೇಕ ಹಿಂದಿ ಚಲನಚಿತ್ರಗಳು ಈ ವರ್ಷ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿವೆ. 2018ರಲ್ಲಿ ಬಿಡುಗಡೆಯಾದ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ 2.0 ನಂತರ 600 ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸಿದ ಎರಡನೇ ತಮಿಳು ಚಲನಚಿತ್ರ ಜೈಲರ್‌ ಆಗಿದೆ.

ಇದನ್ನೂ ಓದಿ: Salman Khan: ಶಾರುಖ್‌-ನಯನತಾರಾ ಜೋಡಿ ಬಳಿಕ ಸಲ್ಮಾನ್‌ ಜತೆ ಫೇಮಸ್‌ ಸೌತ್‌ ನಟಿ ರೊಮ್ಯಾನ್ಸ್‌!

ಸಲ್ಮಾನ್ ಖಾನ್ ಅವರ ‘ಟೈಗರ್ 3’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರಕ್ಕೆ ಕತ್ರಿನಾ ಕೈಫ್ ನಾಯಕಿ. ಯಶ್ ರಾಜ್ ಫಿಲ್ಮ್ಸ್ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ದೀಪಾವಳಿ ಸಂದರ್ಭದಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸುವ ಮುಂಬರುವ ಚಿತ್ರದಲ್ಲಿ ಸಮಂತಾ ರುತ್ ಪ್ರಭು ಮತ್ತು ಸಲ್ಮಾನ್ ಖಾನ್ ರೊಮ್ಯಾನ್ಸ್ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Continue Reading

ಬಾಲಿವುಡ್

Oscars 2024: ಮುಂದಿನ ʻಆಸ್ಕರ್‌ʼ ರೇಸ್‌ನಲ್ಲಿ ಯಾವೆಲ್ಲ ಸಿನಿಮಾಗಳು ಇರಲಿವೆ?

Oscars 2024: ಸನ್ನಿ ಡಿಯೋಲ್ ಅವರ ಇತ್ತೀಚಿನ ಬ್ಲಾಕ್‌ಬಸ್ಟರ್ ಸಿನಿಮಾ ಗದರ್ 2 ಸೇರಿದಂತೆ ಇನ್ನೂ ಹಲವು ಚಲನಚಿತ್ರಗಳು ಮುಂಬರುವ ಆಸ್ಕರ್‌ ರೇಸ್‌ನಲ್ಲಿ ಇರಲಿದೆ ಎಂದು ವರದಿಯಾಗಿದೆ.

VISTARANEWS.COM


on

Edited by

Oscars 2024 Film list
Koo

ಬೆಂಗಳೂರು: ಭಾರತೀಯ ಚಿತ್ರರಂಗಕ್ಕೆ 2023 ಅತ್ಯುತ್ತಮ ವರ್ಷವಾಗಿದೆ. 2024ರ ಆಸ್ಕರ್‌ (Oscars 2024) ರೇಸ್‌ನಲ್ಲಿ ಹಲವು ಭಾರತೀಯ ಸಿನಿಮಾಗಳು ಇರಲಿವೆ. ಕೆಲವು ಮೆಗಾ ಬ್ಲಾಕ್‌ಬಸ್ಟರ್‌ ಸಿನಿಮಾಗಳ ಬಗ್ಗೆ ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗುತ್ತಿವೆ. ಇತ್ತೀಚಿನ ವರದಿಗಳ ಪ್ರಕಾರ, ಮುಂದಿನ ವರ್ಷ ಆಸ್ಕರ್‌ ರೇಸ್‌ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸುವ ಸಿನಿಮಾಗಳ ಹಸೆರುಗಳು ವೈರಲ್‌ ಆಗುತ್ತಿವೆ. ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ (Rocky Aur Rani Kii Prem Kahaani), ʻಜ್ವಿಗಾಟೊʼ (Zwigato), ʻದಿ ಕೇರಳ ಸ್ಟೋರಿʼ (The Kerala Story) ಆಸ್ಕರ್ 2024ರ ರೇಸ್‌ನಲ್ಲಿ ಆಯ್ಕೆಯಾಗಲಿವೆ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ವರದಿಗಳ ಪ್ರಕಾರ, ಇತ್ತೀಚೆಗೆ ಬಿಡುಗಡೆಯಾದ ಕರಣ್ ಜೋಹರ್ ನಿರ್ದೇಶನದ ʼರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ, ಕಪಿಲ್ ಶರ್ಮಾ ಅಭಿನಯದ ಜ್ವಿಗಾಟೊ, ದಿ ಕೇರಳ ಸ್ಟೋರಿ, ರಾಣಿ ಮುಖರ್ಜಿ ಅಭಿನಯದ ಮಿಸೆಸ್ ಚಟರ್ಜಿ ವರ್ಸೆಸ್‌ ನಾರ್ವೆ, ಅಭಿಷೇಕ್ ಬಚ್ಚನ್ ಅಭಿನಯದ ʼಘೂಮರ್ʼ ಮತ್ತು ʼ12th ಫೇಲ್ʼ ಸಿನಿಮಾಗಳ ಹೆಸರು ಸೇರಿವೆ. ಸನ್ನಿ ಡಿಯೋಲ್ ಅವರ ಇತ್ತೀಚಿನ ಬ್ಲಾಕ್‌ಬಸ್ಟರ್ ಸಿನಿಮಾ ʼಗದರ್ 2ʼ ಸೇರಿದಂತೆ ಇನ್ನೂ ಕೆಲವು ಚಲನಚಿತ್ರಗಳು ಮುಂಬರುವ ಆಸ್ಕರ್‌ ರೇಸ್‌ನಲ್ಲಿ ಇರಲಿದೆ ಎಂದು ವರದಿಯಾಗಿದೆ.

ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ನೇತೃತ್ವದಲ್ಲಿ 17 ಸದಸ್ಯರ ಆಯ್ಕೆ ತೀರ್ಪುಗಾರರು ಈಗಾಗಲೇ ಎಲ್ಲೆಡೆಯಿಂದ ಪ್ರಾದೇಶಿಕ ಮತ್ತು ಉತ್ತಮ ಸಿನಿಮಾಗಳ ಆಯ್ಕೆಯನ್ನು ಮಾಡುವ ಅನ್ವೇಷಣೆಯಲ್ಲಿದೆ ಎಂದು ವರದಿಯಾಗಿದೆ. ಆಸ್ಕರ್ ಆಯ್ಕೆಗಾಗಿ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾಕ್ಕೆ ಕಳುಹಿಸಲಾದ ಕೆಲವು ಚಲನಚಿತ್ರಗಳಲ್ಲಿ ಅನಂತ್ ಮಹದೇವನ್ ಅವರ ದಿ ಸ್ಟೋರಿಟೆಲರ್, ಮ್ಯೂಸಿಕ್ ಸ್ಕೂಲ್, ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ, 12th ಫೇಲ್, ವರ್ತಿಮಾರನ್ ಅವರ ವಿದುತಲೈ ಭಾಗ 1, ಮತ್ತು ನಾನಿ ಅಭಿನಯದ ದಸರಾ ಮುಂತಾದ ಸಿನಿಮಾಗಳು ಇವೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Actress Nayanthara: ದೀಪಿಕಾ ಹೈಲೈಟ್‌ ಆಗಿದ್ದಕ್ಕೆ ಬಾಲಿವುಡ್‌ ಸಿನಿಮಾ ಮಾಡದಿರಲು ನಯನತಾರಾ ನಿರ್ಧಾರ?

ಆಲಿಯಾ ಭಟ್ ಹಾಗೂ ರಣ್‌ವೀರ್ ಸಿಂಗ್ ಜೋಡಿಯ ಸಿನಿಮಾ ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’. ಬಹಳ ದಿನಗಳ ಬಳಿಕ ಕರಣ್‌ ಜೋಹರ್ ನಿರ್ದೇಶಿಸಿದ ಈ ಸಿನಿಮಾ ಜುಲೈ 28ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಹೀಗಿದ್ದರೂ, ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ಸುಮಾರು 340 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿತ್ತು.’ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಸಿನಿಮಾ ಇದೀಗ ಅಮೆಜಾನ್ ಪ್ರೈಂನಲ್ಲಿ ಲಭ್ಯವಿದೆ. ಈ ಸಿನಿಮಾದಲ್ಲಿ ರಣ್‌ವೀರ್ ಸಿಂಗ್ ರಾಕಿ ರಾಂಧವನಾಗಿ ಹಾಗೂ ಆಲಿಯಾ ಭಟ್ ರಾಣಿ ಚಟರ್ಜಿಯಾಗಿ ಕಾಣಿಸಿಕೊಂಡಿದ್ದಾರೆ.

Continue Reading

ಬಾಲಿವುಡ್

Actress Nayanthara: ದೀಪಿಕಾ ಹೈಲೈಟ್‌ ಆಗಿದ್ದಕ್ಕೆ ಬಾಲಿವುಡ್‌ ಸಿನಿಮಾ ಮಾಡದಿರಲು ನಯನತಾರಾ ನಿರ್ಧಾರ?

Actress Nayanthara: ಅಟ್ಲಿಯೊಂದಿಗೆ ನಯನತಾರಾ ತುಂಬಾ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ದೀಪಿಕಾ ಅವರ ಪಾತ್ರವನ್ನು ಹೆಚ್ಚು ಹೈಲೈಟ್‌ ಮಾಡಿರುವ ಬಗ್ಗೆ ನಟಿ ಬೇಸರ ವ್ಯಕ್ತಪಡಿಸಿದ್ದಾರೆ ಎಂತಲೂ ವರದಿಯಾಗಿದೆ.

VISTARANEWS.COM


on

Edited by

Nayanthara sharukh Deepika
Koo

ಬೆಂಗಳೂರು: ಶಾರುಖ್ ಖಾನ್ (Shah Rukh Khan) ಅವರ ಬ್ಲಾಕ್‌ಬಸ್ಟರ್ ಸಿನಿಮಾ ʻಜವಾನ್‌ʼನಲ್ಲಿ ನಟಿ ನಯನತಾರಾ(Nayanthara) ಏಜೆಂಟ್ ನರ್ಮದಾ ರೈ ಪಾತ್ರವನ್ನು ನಿರ್ವಹಿಸಿದ್ದಾರೆ. ಶಾರುಖ್‌-ನಯನತಾರಾ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿಯನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಆದರೆ, ನಯನತಾರಾ ಅವರಿಗೆ ಅಟ್ಲಿ ಕುರಿತು ಅಸಮಾಧಾನ ಇದೆ ಎಂದು ವರದಿಯಾಗಿದೆ. ಚಿತ್ರದಲ್ಲಿ ತನ್ನ ಪಾತ್ರವನ್ನು ಹಲವು ಕಡೆ ಕತ್ತರಿಸಿದ್ದರಿಂದ ಅಟ್ಲಿಯೊಂದಿಗೆ ನಯನತಾರಾ ತುಂಬಾ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ದೀಪಿಕಾ ಅವರ ಪಾತ್ರವನ್ನು ಹೆಚ್ಚು ಹೈಲೈಟ್‌ ಮಾಡಿರುವ ಬಗ್ಗೆ ನಟಿ ಬೇಸರ ವ್ಯಕ್ತಪಡಿಸಿದ್ದಾರೆ ಎಂತಲೂ ವರದಿಯಾಗಿದೆ.

ಚಿತ್ರದಲ್ಲಿ ವಿಕ್ರಮ್ ರಾಥೋಡ್ (ಶಾರುಖ್‌) ಪತ್ನಿಯಾಗಿ ದೀಪಿಕಾ ಪಡುಕೋಣೆ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಮೂಲ ಪ್ರಕಾರ ದೀಪಿಕಾ ಅವರದ್ದು ಅತಿಥಿ ಪಾತ್ರವಲ್ಲ. ಬದಲಿಗೆ ಜವಾನ್ ಅನ್ನು “ಶಾರುಖ್‌-ದೀಪಿಕಾ” ಚಿತ್ರದಂತೆ ಕಾಣುವಂತೆ ಮಾಡಲಾಗಿದೆ ಎಂದು ಹೇಳಿದೆ. ಇದು ಅತಿಥಿ ಪಾತ್ರವಾಗಿರಲಿಲ್ಲ. ಜವಾನ್ ಅನ್ನು ಬಹುತೇಕ ಶಾರುಖ್‌-ದೀಪಿಕಾ ಚಿತ್ರದಂತೆ ಕಾಣುವಂತೆ ಮಾಡಲಾಗಿದೆ. ನಯನತಾರಾ ದಕ್ಷಿಣದ ಪ್ರಮುಖ ನಟಿ, ಆದ್ದರಿಂದ ಅವರು ಜವಾನ್ ಸಿನಿಮಾ ಬಗ್ಗೆ ಸಂತೋಷವಾಗಿರಲಿಲ್ಲ. ಇನ್ನು ಮುಂದೆ ಯಾವುದೇ ಬಾಲಿವುಡ್‌ ಸಿನಿಮಾಗಳಲ್ಲಿ ಕಾಣಿಸುವುದಿಲ್ಲ ಎಂದು ನಯನತಾರಾ ಅಸಮಾಧಾನ ಹೊರ ಹಾಕಿದ್ದಾರೆ ಎಂದು ವರದಿಯಾಗಿದೆ.

ನಯನತಾರಾ ಕೂಡ ತಮ್ಮ ಯಾವುದೇ ಸಿನಿಮಾ ಪ್ರಚಾರ ಕಾರ್ಯಕ್ರಗಳಲ್ಲಿ ಭಾಗಿಯಾಗುವುದಿಲ್ಲ. ಈ ಹಿಂದೆ ಶಾರುಖ್‌ ಅವರು ನಯನತಾರಾ ಬಗ್ಗೆ ಆಸ್ಕ್ SRK ಸೆಷನ್‌ನಲ್ಲಿ ಅನುಭವ ಕಂಚಿಕೊಂಡಿದ್ದರು. ʻʻನಯನತಾರಾ ತುಂಬಾ ಸುಂದರ ಮತ್ತುಅದ್ಭುತ ನಟಿ. ತಮಿಳುನಾಡಿನಲ್ಲಿರುವ ಅವರ ಅಭಿಮಾನಿಗಳು ಆಕೆಯನ್ನು ಪ್ರೀತಿಸುತ್ತಾರೆ ಮತ್ತು ಹಿಂದಿ ಪ್ರೇಕ್ಷಕರು ಅವರ ಶ್ರಮವನ್ನು ಮೆಚ್ಚುತ್ತಾರೆʼʼಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: Actress Nayanthara: ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ಕೊಟ್ಟ ನಯನತಾರಾ; ಇನ್‌ಸ್ಟಾದಲ್ಲಿ ಫಾಲೋ ಮಾಡುತ್ತಿರುವ ಏಕೈಕ ನಟ ಯಾರು?

ಇತ್ತೀಚೆಗೆ ಮುಂಬೈನಲ್ಲಿ ‘ಜವಾನ್’ ಸಿನಿಮಾದ ಸಕ್ಸಸ್ ಮೀಟ್ ಆಯೋಜನೆ ಮಾಡಲಾಗಿತ್ತು. ಆದರೆ, ಇದರಲ್ಲಿ ನಯನತಾರಾ ಅವರು ಭಾಗಿ ಆಗಿರಲಿಲ್ಲ. ಶಾರುಖ್ ಖಾನ್, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ, ಅನಿರುದ್ಧ್ ರವಿಚಂದರ್, ಅಟ್ಲಿ, ಸಾನ್ಯಾ ಮಲ್ಹೋತ್ರಾ ಹಾಗೂ ರಿಧಿ ದೋಗ್ರಾ ಭಾಗವಹಿಸಿದ್ದರು.

ನಯನತಾರಾ ಕಾರ್ಯಕ್ರಮಕ್ಕೆ ಬಾರದೇ ಇದ್ದುದ್ದಕ್ಕೆ ಕಾರಣ ತಿಳಿಸಿದ ಶಾರುಖ್ ಖಾನ್, ನಯನತಾರಾ ತಾಯಿಯ ಹುಟ್ಟುಹಬ್ಬ ಇರುವ ಕಾರಣ ಅವರು ಬರಲಾಗಲಿಲ್ಲ, ಅವರ ತಾಯಿಗೆ ನನ್ನ ಪ್ರೀತಿಪೂರ್ವಕ ಅಪ್ಪುಗೆಗಳು ಎಂದರು. ಚೆನ್ನೈನಲ್ಲಿ ನಡೆದಿದ್ದ ಪ್ರೀ ರಿಲೀಸ್ ಇವೆಂಟ್​ಗೂ ಸಹ ನಯನತಾರಾ ಗೈರಾಗಿದ್ದರು.

Continue Reading
Advertisement
MLA Gopalakrishna Belur surprise visit to Ripponpet Primary Health Centre
ಶಿವಮೊಗ್ಗ47 mins ago

Shivamogga News: ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಮಾನತಿಗೆ ಶಾಸಕ ಗೋಪಾಲಕೃಷ್ಣ ಸೂಚನೆ

Vehicle Scrapping
ಕರ್ನಾಟಕ49 mins ago

Cabinet Meeting: ವಾಹನಗಳ ಗುಜರಿ ನೀತಿ-2022 ಜಾರಿ ಮಾಡಲು ಸಚಿವ ಸಂಪುಟ ಒಪ್ಪಿಗೆ

Danish Ali and Rahul Gandhi
ದೇಶ52 mins ago

‘ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ’! ಡ್ಯಾನಿಶ್ ಅಲಿಯನ್ನು ಭೇಟಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

Vistara Top 10 News 22
ಕರ್ನಾಟಕ1 hour ago

VISTARA TOP 10 NEWS: ಬಿಜೆಪಿ-ಜೆಡಿಎಸ್ ಮೈತ್ರಿ ಸೆಟ್ಟಾಯ್ತು, ಸೆ. 26ರವರೆಗೆ ನೀರು ಬಿಡೋದೂ ಫಿಕ್ಸಾಯ್ತು!

Zameer Pinjara
ಕರ್ನಾಟಕ2 hours ago

Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!

3 Indian companies among America's happiest employees top 20 company list
ಪ್ರಮುಖ ಸುದ್ದಿ2 hours ago

Happiest Employees: ಅಮೆರಿಕದ ಹ್ಯಾಪಿಯೆಸ್ಟ್ ಕಂಪನಿಗಳ ಟಾಪ್‍ 20 ಪಟ್ಟಿಯಲ್ಲಿ ಭಾರತದ 3 ಕಂಪನಿ!

Team india
ಕ್ರಿಕೆಟ್2 hours ago

Team India : ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿ 3 ಮಾದರಿಯ ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಮಾಡಿದ ಟೀಮ್ ಇಂಡಿಯಾ

Cauvery Dispute cabinet meeting
ಕರ್ನಾಟಕ2 hours ago

Cabinet Meeting: ಸೆ.26ರವರೆಗೆ ನೀರು ಬಿಡುಗಡೆ ಫಿಕ್ಸ್‌; ಬಳಿಕ ಬಿಡುವುದಿಲ್ಲ ಎಂದು ಅಧಿವೇಶನ ಕರೆದು ನಿರ್ಣಯ?

Ruturaj Gaikwad
ಕ್ರಿಕೆಟ್3 hours ago

ind vs aus : ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ ಜಯ, ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ 1-0 ಮುನ್ನಡೆ

Cat eyed snake
ಕರ್ನಾಟಕ3 hours ago

Cat Eyed Snake : ಬೆಕ್ಕಿನ ಕಣ್ಣಿನ ಸುಂದರಿಯರನ್ನು ನೋಡೇ ಇರ್ತೀರಿ, ಬೆಕ್ಕಿನ ಕಣ್ಣಿನ ಹಾವು ನೋಡಿದ್ದೀರಾ?

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ3 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ7 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ2 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ7 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Dina Bhavishya
ಪ್ರಮುಖ ಸುದ್ದಿ20 hours ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ನಂಬಿದ ವ್ಯಕ್ತಿಗಳು ಮೋಸ ಮಾಡ್ತಾರೆ ಹುಷಾರ್‌!

dina bhavishya
ಪ್ರಮುಖ ಸುದ್ದಿ5 days ago

Dina Bhavishya : ಆಪ್ತರೊಂದಿಗೆ ಜಗಳವಾದೀತು ಹುಷಾರ್‌!

Dina Bhavishya
ಪ್ರಮುಖ ಸುದ್ದಿ6 days ago

Dina Bhavishya : ಈ ರಾಶಿಯವರು ಇಂದು ಮುಟ್ಟಿದ್ದೆಲ್ಲಾ ಚಿನ್ನ!

Ramalinga Reddy
ಕರ್ನಾಟಕ6 days ago

ಇನ್ಮುಂದೆ ಹೇಗಂದ್ರೆ ಹಾಗೆ ದೇವಸ್ಥಾನ ಕಟ್ಟೋ ಹಾಗಿಲ್ಲ! ರಾಮಲಿಂಗಾ ರೆಡ್ಡಿ ಮಾಸ್ಟರ್ ಪ್ಲಾನ್

Bannerghatta Park
ಆರೋಗ್ಯ6 days ago

Nipah Virus : ನಿಫಾ ವೈರಸ್‌ ಭೀತಿ; ಬನ್ನೇರುಘಟ್ಟ ಪಾರ್ಕ್‌ನಲ್ಲಿ ಹೈ ಅಲರ್ಟ್

Villagers exclude menstruating women
ಕರ್ನಾಟಕ7 days ago

Tumkur News : ಮುಟ್ಟಾದ ಮಹಿಳೆಯರನ್ನು ಗ್ರಾಮದಿಂದ ಹೊರಗಿಟ್ಟು ಮೌಡ್ಯಾಚರಣೆ!

dina bhavishya
ಪ್ರಮುಖ ಸುದ್ದಿ7 days ago

Dina Bhavishya : ಈ ದಿನ ಭೂಮಿ, ಆಸ್ತಿ ಖರೀದಿಸುವ ಮುನ್ನ ಎಚ್ಚರ!

Kadri temple is the target for Shariq NIA reveals
ಕರ್ನಾಟಕ1 week ago

ಮಂಗಳೂರು ಸ್ಫೋಟ : ಶಾರಿಕ್‌ಗೆ ಕದ್ರಿ ದೇವಸ್ಥಾನವೇ ಟಾರ್ಗೆಟ್; ರಿವೀಲ್ ಮಾಡಿದ ಎನ್ಐಎ

Dina bhavishya
ಪ್ರಮುಖ ಸುದ್ದಿ1 week ago

Dina Bhavishya : ಈ ರಾಶಿಯವರು ಹೂಡಿಕೆ ಮಾಡಿದರೆ ನಷ್ಟ ಗ್ಯಾರಂಟಿ!

ಟ್ರೆಂಡಿಂಗ್‌