ಬೆಂಗಳೂರು: ನೂರಾರು ಕೋಟಿ ರೂ. ಸುಲಿಗೆ ಪ್ರಕರಣ ಆರೋಪದಲ್ಲಿ ಜೈಲುವಾಸ ಅನುಭವಿಸುತ್ತಿರುವ ವಂಚಕ ಸುಕೇಶ್ ಚಂದ್ರಶೇಖರ್ ಬಂಧಿಸಲಾಗಿದ್ದು, ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಅವರಿಗೆ ಸಮನ್ಸ್ ನೀಡಲಾಗಿದೆ. ಗೆಳತಿ ಜಾಕ್ವೆಲಿನ್ ಫರ್ನಾಂಡಿಸ್ ಈಗಾಗಲೇ ಹಲವು ಬಾರಿ ಸುಕೇಶ್ ಚಂದ್ರಶೇಖರ್ (Sukesh Chandrashekhar) ಅವರ ಸಂಬಂಧವನ್ನು ನಿರಾಕರಿಸಿದ್ದರೂ ಆತ ಪದೇ ಪದೇ ಜಾಕ್ವೆಲಿನ್ ಅವರನ್ನು ಕಾಡುತ್ತಿದ್ದಾನೆ. ಆರೋಪಿ ಸುಕೇಶ್ ನಟಿ ಜಾಕ್ವೆಲಿನ್ ಅವರಿಗೆ ಪತ್ರಗಳನ್ನು ಬರೆಯುತ್ತಲೇ ಇರುತ್ತಾನೆ. ಕ್ರಿಸ್ಮಸ್ ಸಂದರ್ಭದಲ್ಲಿ ನಟಿಗೆ ಪ್ರೀತಿಯ ಕರೆಯೋಲೆ ಕಳುಹಿಸಿದ್ದಾನೆ. ಇದರಲ್ಲಿ ಅವರು ‘ಲವ್’, ‘ಬೇಬಿ’ ಎಂದೆಲ್ಲ ಬರೆದುಕೊಂಡಿದ್ದಾನೆ.
ಪತ್ರದಲ್ಲಿ ʻʻಬೇಬಿ ಸೋ ಸೋ ಹ್ಯಾಪಿ ಫಾರ್ ಯೂ. ಚಿತ್ರರಂಗಕ್ಕೆ ನೀಡಿದ ಕೊಡುಗೆ ಆಧರಿಸಿ DIAFA ಅವಾರ್ಡ್ ನೀಡಲಾಗಿದೆ. ಪ್ರಶಸ್ತಿಗಳನ್ನು ಸ್ವೀಕರಿಸಿದ್ದಕ್ಕಾಗಿ ಅಭಿನಂದನೆಗಳು. ನೀವು ನಿಜವಾಗಿಯೂ ಶ್ರೇಷ್ಠ ಪ್ರದರ್ಶನಕಾರರು. ಅವಾರ್ಡ್ಸ್ ಕಾರ್ಯಕ್ರಮದಲ್ಲಿ “ವೈಟ್ ಗೌನ್” ನಲ್ಲಿ ಅದ್ಭುತವಾಗಿ ಕಂಡಿದ್ದೀರಿ. ನನಗೆ ಎಷ್ಟು ಖುಷಿ ಆಗಿದೆ ಎಂದು ಹೇಳಲು ಸಾಧ್ಯವೇ ಇಲ್ಲʼʼಎಂದು ಹೇಳಿದ್ದಾನೆ.
ಜಾಕ್ವೆಲಿನ್ ಅವರ ಇತರ ಕೆಲವು ಫೋಟೊಗಳ ಬಗ್ಗೆ ಸುಕೇಶ್ ಮತ್ತಷ್ಟು ಮಾತನಾಡುತ್ತಾ,ʻʻಬೇಬಿ ರೆಡ್ ಅರೇಬಿಕ್ ಡ್ರೆಸ್ ಹಾಗೂ ಪಿಂಕ್ ಬಣ್ಣದ ಸೀರೆಯಲ್ಲಿ ನೀನು ಸಖತ್ ಆಗಿ ಕಾಣಿಸುತ್ತೀಯ. ಗ್ಲಿಟರಿ ಲೆಹೆಂಗಾದಲ್ಲಿರುವ ಫೋಟೊ ನನ್ನ ಹೃದಯವನ್ನು ಕದ್ದಿದೆ. ಬೇಬಿ ಈ ಗ್ರಹದಲ್ಲಿ ನನಗೆ ನೀವು ಸಿಕ್ಕ ಏಕೈಕ ಜೀವಂತ ದೇವತೆ. ಲೆಹೆಂಗಾದಲ್ಲಿ ನೋಡುವಾಗ ʻಸೋ ಬ್ಯೂಟಿಫುಲ್ ಸೋ ಸ್ಟನ್ನಿಂಗ್. ಜಸ್ಟ್ ಲುಕಿಂಗ್ ಲೈಕ್ ಎ ವಾವ್’ ಎಂದು ಆತ ಬರೆದಿದ್ದಾನೆ.
ಸುಕೇಶ್ ಮತ್ತು ಜಾಕ್ವೆಲಿನ್ ಡೇಟಿಂಗ್ ಮಾಡುತ್ತಿದ್ದರು ಎನ್ನುವ ವಿಚಾರವೇನೂ ಗುಟ್ಟಾಗಿ ಉಳಿದಿರಲಿಲ್ಲ. ಆದರೆ, ಜಾರಿ ನಿರ್ದೇಶನಾಲಯ ಸುಕೇಶ್ ಮೇಲೆ ಪ್ರಕರಣ ದಾಖಲಿಸುತ್ತಿದ್ದಂತೆ ಜಾಕ್ವೆಲಿನ್ ಅಂತರ ಕಾಪಾಡಿಕೊಂಡಿದ್ದರು. ವಂಚಕ ಸುಕೇಶ್ ಚಂದ್ರಶೇಖರ್, ನಟಿ ಜಾಕ್ವೆಲಿನ್ ಜತೆ ಅದ್ಧೂರಿ, ಐಷಾರಾಮಿ ಸಮಯವನ್ನು ಕಳೆದಿದ್ದ. ಲಿಮಿಟಿಡ್ ಎಡಿಷನ್ ಪರ್ಫ್ಯೂಮ್ಸ್, ಡಿಸೈನರ್ ಬ್ಯಾಗ್ಸ್, ಬಟ್ಟೆಗಳು, ಪ್ರೈವೆಟ್ ಜೆಟ್ಸ್ ಇತ್ಯಾದಿ ಅದ್ದೂರಿ ಜೀವನಕ್ಕೆ ಏನೂ ಭರವಿರಲಿಲ್ಲ. ಹಾಗಾಗಿ, ಜಾಕ್ವೆಲಿನ್ ಸಂಪೂರ್ಣವಾಗಿ ಸುಕೇಶ್ ಹಿಡಿತದಲ್ಲಿದ್ದಳು. ಅಲ್ಲದೇ, ತನ್ನ ಕನಸಿನ ಗಂಡು ಸಿಕ್ಕಿದ್ದಾನೆ, ನಾನು ಮದುವೆಯಾಗಲಿದ್ದೇನೆ ಎಂದು ಜಾಕ್ವೆಲಿನ್ ತನ್ನ ಸ್ನೇಹಿತೆಯರ ಮುಂದೆ ಹೇಳಿಕೊಂಡಿದ್ದಳು.
ಸುಕೇಶ್ ಚಂದ್ರಶೇಖರ್ ವಿರುದ್ಧ ಕೇಳಿಬಂದಿರುವ ವಂಚನೆ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದ್ದಲ್ಲದೆ, ಬಾಲಿವುಡ್ ನಂಟೂ ಬಿಚ್ಚಿಟ್ಟಿದೆ. ಸುಕೇಶ್ ಚಂದ್ರಶೇಖರ್‌ನಿಂದ ಕೋಟ್ಯಂತರ ರೂ. ಬೆಲೆಬಾಳುವ ಉಡುಗೊರೆ ಪಡೆದ ಆರೋಪದಲ್ಲಿ ಈಗಾಗಲೇ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ತನಿಖಾ ಸಂಸ್ಥೆಯು ವಿಚಾರಣೆ ನಡೆಸಿದೆ. ಆದಾಗ್ಯೂ, ನೋರಾ ಫತೇಹಿ ಅವರ ಹೆಸರೂ ಪ್ರಕರಣದಲ್ಲಿ ಕೇಳಿಬಂದಿದೆ. ಪ್ರಕರಣದಲ್ಲಿ ಎಳೆದುತಂದ ಕಾರಣ ಜಾಕ್ವೆಲಿನ್ ವಿರುದ್ಧ ನೋರಾ ಫತೇಹಿ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.