Site icon Vistara News

Michael Trailer: ವಿಜಯ್ ಸೇತುಪತಿ- ಸಂದೀಪ್ ಕಿಶನ್ ಅಭಿನಯದ ʻಮೈಕೆಲ್ʼ ಟ್ರೈಲರ್‌ ಔಟ್‌

Sundeep Kishan and Vijay Sethipathi, Michael Trailer Out

ಬೆಂಗಳೂರು : ನಟ ಸಂದೀಪ್ ಕಿಶನ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾ ಮೈಕೆಲ್‌ನಲ್ಲಿ (Michael Trailer) ಕಾಣಿಸಿಕೊಳ್ಳಲಿದ್ದಾರೆ. ಇದೀಗ ಚಿತ್ರದ ಟ್ರೈಲರ್‌ ಬಿಡುಗಡೆಗೊಂಡಿದೆ. ರಂಜಿತ್ ಜಯಕೋಡಿ ನಿರ್ದೇಶನದ ಆಕ್ಷನ್ ಡ್ರಾಮಾ ಸಿನಿಮಾ ಇದಾಗಿದೆ.

ತಮಿಳು ಮತ್ತು ತೆಲುಗು ಸ್ಟಾರ್ ಸಂದೀಪ್ ಕಿಶನ್ (michael trailer Tamil) ಅವರ ಮೊದಲ ಪ್ಯಾನ್-ಇಂಡಿಯಾ ಚಿತ್ರ ಇದಾಗಿದೆ. ಲೋಕೇಶ್ ಕನಕರಾಜ್ ಮೈಕೆಲ್ ಪ್ರಸ್ತುತ ಪಡಿಸಲಿದ್ದಾರೆ. ಚಿತ್ರದಲ್ಲಿ ವಿಜಯ್ ಸೇತುಪತಿ, ಗೌತಮ್ ಮೆನನ್, ದಿವ್ಯಾಂಶ ಕೌಶಿಕ್, ಅನಸೂಯಾ ಭಾರದ್ವಾಜ್ ಮತ್ತು ವರುಣ್ ಸಂದೇಶ್ ಸೇರಿದಂತೆ ಇತರರು ಇದ್ದಾರೆ. ಮೈಕೆಲ್ ಫೆಬ್ರವರಿ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ. ನಿರ್ದೇಶಕ-ನಟ ಗೌತಮ್ ವಾಸುದೇವ್ ಮೆನನ್ ಸಹ ಪಾತ್ರವರ್ಗದ ಭಾಗವಾಗಿದ್ದಾರೆ. ಚಿತ್ರದಲ್ಲಿ ಸಂದೀಪ್ ಮತ್ತು ವಿಜಯ್ ಸೇತುಪತಿಯನ್ನು ಎದುರಿಸುತ್ತಿರುವ ಪ್ರತಿಸ್ಪರ್ಧಿಯಾಗಿ ನಟಿಸಿದ್ದಾರೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಚಿತ್ರ ತೆರೆಗೆ ಬರಲಿದೆ.

ಕರಣ್ ಸಿ ಪ್ರೊಡಕ್ಷನ್ಸ್ ಎಲ್ ಎಲ್ ಪಿ ಮತ್ತು ಮೋಸ್ಟ್ ಹ್ಯಾಪನಿಂಗ್ ಪ್ರೊಡಕ್ಷನ್ ಹೌಸ್ ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್ ಎಲ್ ಪಿ ಒಟ್ಟಾಗಿ ದೊಡ್ಡ ಮಟ್ಟದಲ್ಲಿ ಸಿನಿಮಾವನ್ನು ನಿರ್ಮಿಸುತ್ತಿವೆ. ಕಿರಣ್ ಕೌಶಿಕ್ ಕ್ಯಾಮೆರಾ, ತ್ರಿಪುರನೇನಿ ಕಲ್ಯಾಣ ಚಕ್ರವರ್ತಿ ಸಂಭಾಷಣೆ, ಸ್ಯಾಮ್ ಸಿಎಸ್ ಅವರ ಸಂಗೀತ ಚಿತ್ರಕ್ಕಿದೆ.

ಇದನ್ನೂ ಓದಿ: Vijay Sethupathi | ವಿಜಯ್ ಸೇತುಪತಿ- ಸಂದೀಪ್ ಕಿಶನ್ ಅಭಿನಯದ ʻಮೈಕೆಲ್’ ರಿಲೀಸ್‌ ಡೇಟ್‌ ಅನೌನ್ಸ್‌!

ಇದನ್ನೂ ಓದಿ: Actor Dhanush | ಕಾಲಿವುಡ್‌ ಸೂಪರ್‌ ಸ್ಟಾರ್‌ ನಟ ಧನುಷ್‌ 50ನೇ ಚಿತ್ರ ಘೋಷಣೆ

ಸಂದೀಪ್ ಕಿಶನ್‌ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ನಟ ಧನುಷ್ ಅಭಿನಯದ ʻಕ್ಯಾಪ್ಟನ್ ಮಿಲ್ಲರ್ʼ ಚಿತ್ರದಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದಾರೆ. ಸಂದೀಪ್ ಕಿಶನ್ ಕೂಡ ʻದಿ ಫ್ಯಾಮಿಲಿ ಮ್ಯಾನ್ʼ 3ರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾಗವಾಗಿದ್ದಾರೆ. ಇದು ಮೊದಲ ಎರಡು ಕಂತುಗಳಿಗಿಂತ ಸುದೀರ್ಘವಿರಲಿದೆ ಎಂದು ನಟ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.

Exit mobile version