Site icon Vistara News

Rajinikanth | ʻಜೈಲರ್‌ʼ ಸಿನಿಮಾ ಬಳಿಕ ಖ್ಯಾತ ನಿರ್ದೇಶಕರ ಪ್ರಾಜೆಕ್ಟ್‌ಗೆ ಸಹಿ ಹಾಕಿದ್ದಾರಂತೆ ರಜನಿಕಾಂತ್‌!

Rajinikanth

ಬೆಂಗಳೂರು: ಸೂಪರ್‌ ಸ್ಟಾರ್‌ ರಜನಿಕಾಂತ್‌ (Rajinikanth) ʻಜೈಲರ್‌ʼ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ‘ಜೈ ಭೀಮ್’ ನಿರ್ದೇಶಕ ಟಿ.ಜೆ.ಜ್ಞಾನವೇಲ್ ಅವರ ಕಥೆಯಯನ್ನು ರಜನಿಕಾಂತ್‌ ಕೇಳಿದ್ದಾರೆ ಎಂದು ಎರಡು ವಾರಗಳ ಹಿಂದೆ ಸುದ್ದಿಯಾಗಿತ್ತು. ಇದೀಗ ನಿರ್ದೇಶಕ ಟಿ.ಜೆ.ಜ್ಞಾನವೇಲ್ ಹೇಳಿರುವ ಕಥೆ ನಟ ರಜನಿಕಾಂತ್‌ ಅವರಿಗೆ ಹಿಡಿಸಿದ್ದು, ಸಿನಿಮಾಗೆ ಗ್ನೀನ್‌ ಸಿಗ್ನಲ್‌ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.

ಜೈಲರ್ ನಂತರ ಲೈಕಾ ಪ್ರೊಡಕ್ಷನ್ಸ್‌ನ ಎರಡು ಚಿತ್ರಗಳಿಗೆ ರಜನಿಕಾಂತ್‌ ಸಹಿ ಮಾಡಿದ್ದಾರೆ ಎಂದು ಹೇಳಲಾಗಿದೆ. ʻಲವ್ ಟುಡೇʼ ನಿರ್ದೇಶಕ ಪ್ರದೀಪ್ ರಂಗಂತನ್ ಅವರು ರಜನಿಕಾಂತ್ ಅವರಿಗೆ ಸ್ಕ್ರಿಪ್ಟ್ ವಿವರಿಸಿದ್ದರು. ಇದನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ. ಇದೀಗ ʻಜೈಲರ್‌ʼ ನಂತರ ಯಾವ ಸಿನಿಮಾವನ್ನು ರಜನಿ ಮೊದಲು ಮಾಡಲಿದ್ದಾರೆ ಎಂದು ಸಿನಿರಸಿಕರಿಲ್ಲಿ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ | Actor Rajinikanth | ಪುತ್ರಿ ಐಶ್ವರ್ಯಾ ಜತೆ ತಿರುಪತಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ರಜನಿಕಾಂತ್‌: ವಿಡಿಯೊ ವೈರಲ್‌!

2024ರಲ್ಲಿ ಮತ್ತೊಮ್ಮೆ ಸೂರ್ಯ ಅವರೊಂದಿಗೆ ಕೆಲಸ ಮಾಡಲು ಜ್ಞಾನವೇಲ್ ಬದ್ಧರಾಗಿದ್ದರು. ಸೂರ್ಯ ಅವರ ನಿರ್ಮಾಣ ಕಂಪನಿಯ ಮುಖ್ಯಸ್ಥ ರಾಜಶೇಖರ್ ಪಾಂಡಿಯನ್ ಅವರು ಹಲವು ತಿಂಗಳ ಹಿಂದೆ ಈ ಸುದ್ದಿಯನ್ನು ದೃಢಪಡಿಸಿದ್ದರು. ಆದರೆ ಸೂರ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾದ ಕಾರಣ ಇದರ ಬಗ್ಗೆ ಅಷ್ಟಾಗಿ ಗಮನ ಹರಿಸಲಿಲ್ಲ ಎನ್ನಲಾಗಿದೆ.

ʻಜೈಲರ್‌ʼ ಸಿನಿಮಾದಲ್ಲಿ ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ ಅವರು ಕಾಣಿಸಿಕೊಂಡಿದ್ದು, ಅವರ ಲುಕ್‌ ರಿವೀಲ್‌ ಆಗಿತ್ತು. ಮಾಲಿವುಡ್‌ ನಟ ಮೋಹನ್‌ಲಾಲ್ ಕೂಡ ಚಿತ್ರದಲ್ಲಿ ಇದ್ದಾರೆ ಎಂದು ವರದಿಯಾಗಿದೆ. ಜನವರಿ 8 ಮತ್ತು 9ರಂದು ಜೈಲರ್‌ಗಾಗಿ ಮೋಹನ್‌ಲಾಲ್ ಅವರು ಚಿತ್ರೀಕರಣ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಜೈಲರ್ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ಬೆಂಬಲದೊಂದಿಗೆ ಮೂಡಿ ಬರುತ್ತಿರುವ ಜೈಲರ್ ಸಿನಿಮಾಗೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ. ʻಪೆಟ್ಟಾʼ, ʻದರ್ಬಾರ್ʼ ಬಳಿಕ ಮೂರನೇ ಬಾರಿಗೆ ರಜನಿಕಾಂತ್ ಸಿನಿಮಾಕ್ಕೆ ಸಂಗೀತ ನೀಡುವ ಅವಕಾಶವನ್ನು ಅನಿರುದ್ಧ್‌ ಗಿಟ್ಟಿಸಿಕೊಂಡಿದ್ದಾರೆ. ವಸಂತ ರವಿ, ಯೋಗಿ ಬಾಬು, ರಮ್ಯಾ ಕೃಷ್ಣನ್ ಮತ್ತು ವಿನಾಯಕನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | Rajinikanth | ಜೈಲರ್ ಸಿನಿಮಾದಲ್ಲಿ ರಜನಿಕಾಂತ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ ಮೋಹನ್‌ಲಾಲ್!

Exit mobile version