Site icon Vistara News

ರಜಾ ಮೂಡ್‌ನಲ್ಲಿ ಸೂರ್ಯ-ಜ್ಯೋತಿಕಾ ದಂಪತಿ: ವಿಡಿಯೊ ವೈರಲ್‌

ಸೂರ್ಯ-ಜ್ಯೋತಿಕಾ ದಂಪತಿ

ಬೆಂಗಳೂರು : ತಮಿಳಿನ ಖ್ಯಾತ ನಟ ಸೂರ್ಯ ಸಿನಿಮಾ ನಡುವೆ ಬ್ಯುಸಿಯಾಗಿದ್ದರು. ಇದೀಗ ಕುಟುಂಬದವರ ಜತೆ ರಜಾ ಮೂಡ್‌ನಲ್ಲಿದ್ದಾರೆ. ಸೂರ್ಯ- ಜ್ಯೋತಿಕಾ ಇದೀಗ ಕುಟುಂಬದವರ ಜತೆ ಇರುವ ವಿಡಿಯೊವನ್ನು ಇನ್ಸ್ಟಾ ಮೂಲಕ ಶೇರ್‌ ಮಾಡಿ ಸಂತಸವನ್ನು ಹಂಚಿಕೊಂಡಿದ್ದಾರೆ.

ಕೋಸ್ಟರಿಕಾಗೆ ತೆರಳಿರುವ ಸೂರ್ಯ ಕುಟುಂಬ, ಪತ್ನಿ ಜ್ಯೋತಿಕಾ ಸುಂದರ ಕ್ಷಣದ ವಿಡಿಯೊ ಶೇರ್‌ ಮಾಡಿದ್ದಾರೆ. ʼಪುರ ವಿದಾʼ ಎಂದು ಕ್ಯಾಪ್ಷನ್‌ ನೀಡಿ, ವಿಡಿಯೊ ಎಡಿಟ್‌ ಅನ್ನು ಮಗಳು ದಿಯಾ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Vikram | ನಟ ಸೂರ್ಯ ಅವರ ರೋಲೆಕ್ಸ್‌ ಪಾತ್ರದ ಮೇಕಪ್‌ ಮಾಡಿದವರು ಇವರೆ!

ʼಓ ಬೇಬಿ ಒಂದು ದಿನ ನಮಗೆ ವಯಸ್ಸಾಗುತ್ತದೆ. ಆಗ ನಾವು ಹೇಳಬಹುದಾದ ಎಲ್ಲಾ ಕಥೆಗಳ ಬಗ್ಗೆ ಯೋಚಿಸೋಣʼ ಎಂದು ಬರೆದುಕೊಂಡಿದ್ದಾರೆ.

ಸೂರ್ಯ ಮತ್ತು ಜ್ಯೋತಿಕಾ, ಪೂವೆಲ್ಲಂ ಕೆಟ್ಟುಪ್ಪರ್, ಉಯಿರಿಲೆ ಕಲಂತತು, ಕಾಖ ಕಾಖ, ಪೆರಳಗನ್, ಮಾಯಾವಿ, ಜೂನ್ ಆರ್ ಮತ್ತು ಸಿಲ್ಲುನು ಒರು ಕಾದಲ್ ಮುಂತಾದ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. 2006ರಲ್ಲಿ ಪ್ರೀತಿಸಿ ಮದುವೆಯಾದ ಈ ಜೋಡಿಗೆ ದಿಯಾ ಎಂಬ ಮಗಳು ಇದ್ದಾಳೆ.

ಸೂರ್ಯ ಅವರು ಈ ಹಿಂದೆ ಕಮಲ್‌ ಹಾಸನ್‌ ಅವರ ವಿಕ್ರಮ್‌ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಸಿಕೊಂಡಿದ್ದರು. ಕಳೆದ ವರ್ಷ ಅವರ ನಟನೆಯ ಜೈ ಭೀಮ್‌ ಚಿತ್ರ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ನವರಸ ಹಾಗೂ ಸೂರಾರೈ ಪೊಟ್ರು ರಿಮೇಕ್‌ನಲ್ಲಿ ಅತಿಥಿ ಪಾತ್ರವನ್ನು ಮಾಡಿದ್ದರು.

ಆರ್ ಮಾಧವನ್ ಅವರ ಚೊಚ್ಚಲ ನಿರ್ದೇಶನದ ರಾಕೆಟ್ರಿಯಲ್ಲಿ ಮತ್ತೊಂದು ಅತಿಥಿ ಪಾತ್ರದ ಮೂಲಕ ಬಣ್ಣ ಹಚ್ಚಲಿದ್ದಾರೆ.

1997ರಲ್ಲಿ ನೆರುಕ್ಕು ನೇರ್‌ ಚಿತ್ರದ ಮೂಲಕ ಸಿನಿಮಾಗೆ ಪಾದಾರ್ಪಣೆ ಮಾಡಿದವರು ಸೂರ್ಯ. ಕಾಖ ಕಾಖ ವಾರನಂ ಆಯಿರಂ, ನಂದ, ಘಜಿನಿ ಮುಂತಾದ ಅನೇಕ ಚಿತ್ರಗಳಲ್ಲಿ ಖ್ಯಾತಿ ಪಡೆದರು. ಜ್ಯೋತಿಕಾ ಕೂಡ ಮೋಜಿ, ಕಾಖ ಕಾಖಾ, ಸಿಲ್ಲುನು ಒರು ಕಾದಲ್ ಮತ್ತು ಪಚ್ಚಕಿಲಿ ಮುತ್ತುಚರಂ, ಸೀತಾ ಕಲ್ಯಾಣಂ,ಪೊನ್ಮಗಲ್ ವಂಧಲ್‌ನಂತಹ ಹಿಟ್‌ ಸಿನಿಮಾ ನೀಡಿದ್ದಾರೆ.

ದನ್ನೂ ಓದಿ | Nayanathara marriage | ನೀರಿನಲ್ಲಿ ನಡೆದ ಜೋಡಿ, ಚಂದದ ಡ್ರೆಸ್‌ಗೆ ಫ್ಯಾನ್ಸ್‌ ಖುಷ್‌

Exit mobile version