Site icon Vistara News

Suriya Sivakumar: ಸೂರ್ಯ ಬರ್ತ್​ಡೇಗೆ ಫ್ಲೆಕ್ಸ್​ ಹಾಕುತ್ತಿದ್ದ ವೇಳೆ ಕರೆಂಟ್ ಶಾಕ್​; ಅಭಿಮಾನಿಗಳಿಬ್ಬರ ದುರ್ಮರಣ

Suriya

ಬೆಂಗಳೂರು: ತಮಿಳು ನಟ ಸೂರ್ಯ (Suriya Sivakumar) ಅವರಿಗೆ ಜು.23 ಜನುಮದಿನದ ಸಂಭ್ರಮ. ಈಗಾಗಲೇ ʻಕಂಗುವʼ ಚಿತ್ರದ ಗ್ಲಿಂಪ್ಸ್‌ ಬಿಡುಗಡೆಯಾಗಿ ಸಖತ್‌ ಸೌಂಡ್‌ ಮಾಡುತ್ತಿದೆ. ಇದರ ಬೆನ್ನಲ್ಲೇ ಒಂದು ದುರಂತ ಸಂಭವಿಸಿದೆ. ತಮ್ಮ ನೆಚ್ಚಿನ ಹುಟ್ಟುಹಬ್ಬದ ಸಂಭ್ರಮಕ್ಕೆ ಫ್ಲೆಕ್ಸ್ ಕಟ್ಟುವ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರು ಅಭಿಮಾನಿಗಳು ಆಂಧ್ರಪ್ರದೇಶದಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಸೂರ್ಯ ಅವರಿಗೆ ದೇಶ ವಿದೇಶಗಳಲ್ಲಿ ಅಭಿಮಾನಿಗಳಿದ್ದಾರೆ. ಆಂಧ್ರ, ತೆಲಂಗಾಣದಲ್ಲೂ ನಡಿಪಿನ್ ನಾಯಗನ್ ಸಿನಿಮಾಗಳು ಡಬ್ ಆಗಿ ರಿಲೀಸ್ ಆಗುತ್ತವೆ. ಅಲ್ಲೂ ಸೂರ್ಯಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಸೂರ್ಯ ಹುಟ್ಟುಹಬ್ಬದ ನಿಮಿತ್ತ ನಕ್ಕಾ ವೆಂಕಟೇಶ್ ಮತ್ತು ಪೋಲೂರಿ ಸಾಯಿ ಎಂಬ ಇಬ್ಬರು ಅಭಿಮಾನಿಗಳು ಫ್ಲೆಕ್ಸ್ ಹಾಕಲು ಮುಂದಾಗಿದ್ದರು . ವೇಳೆ ಏಕಾಏಕಿ ವಿದ್ಯುತ್ ಸ್ಪರ್ಶಿಸಿ ಇಬ್ಬರೂ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತಪಟ್ಟವರು ಪದವಿ ವಿದ್ಯಾರ್ಥಿಗಳಾಗಿದ್ದರು ಎಂದ ಪೊಲೀಸರು ತಿಳಿಸಿದ್ದಾರೆ.

ಹೇಗಿದೆ ʻಕಂಗುವ’ ಗ್ಲಿಂಪ್ಸ್‌?

ಕಂಗುವ’ ಚಿತ್ರಕ್ಕೆ ಶಿವ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಾಲಿವುಡ್ ನಟಿ ದಿಶಾ ಪಟಾನಿ ನಾಯಕಿಯಾಗಿ ಮಿಂಚಿದ್ದಾರೆ. ಗ್ಲಿಂಪ್ಸ್‌ನಲ್ಲೂ ಸೂರ್ಯ ರಗಡ್‌ ಲುಕ್‌ನಲ್ಲಿ ಮಿಂಚಿದ್ದಾರೆ. ಪ್ರಾಣಿಯ ಮುಖವಾಡವನ್ನು ಧರಿಸಿ ಕುತ್ತಿಗೆಗೆ ಹುಲಿ ಉಗುರುಗಳ ಹಾರ ಧರಿಸಿ,ತನ್ನ ಉಗ್ರ ಮುಖವನ್ನು ಬಹಿರಂಗಪಡಿಸಿದ್ದಾನೆ ಕಂಗುವ. ದೇವಿ ಶ್ರೀ ಪ್ರಸಾದ್ ಅವರ ಹಿನ್ನೆಲೆ ಸಂಗೀತ ಕೂಡ ಭಯ ಹುಟ್ಟಿಸುವಂತಿದೆ. ಛಾಯಾಗ್ರಾಹಕ ವೆಟ್ರಿ ಪಳನಿಸಾನಿ ಅವರ ಕೈ ಚಳಕ ಕೂಡ ಗಮನಾರ್ಹ.

ಯೋಗಿ ಬಾಬು, ಕೊವೈ ಸರಳ, ಆನಂದ್‌ರಾಜ್, ಜಗಪತಿ ಬಾಬು, ಕೆ. ಎಸ್ ರವಿಕುಮಾರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ವೆಟ್ರಿ ಪಳನಿಸ್ವಾಮಿ ಸಿನಿಮಾಟೋಗ್ರಫಿ, ದೇವಿ ಶ್ರೀ ಪ್ರಸಾದ್ ಸಂಗೀತ ಚಿತ್ರಕ್ಕಿದೆ. ಸೂರ್ಯ ಹುಟ್ಟುಹಬ್ಬದ ವಿಶೇಷವಾಗಿ ಮಧ್ಯರಾತ್ರಿ 12 ಗಂಟೆಗೆ ‘ಕಂಗುವ’ ಫಸ್ಟ್ ಗ್ಲಿಂಪ್ಸ್ ರಿವೀಲ್ ಆಗಿ ಸದ್ದು ಮಾಡುತ್ತಿದೆ. ಅಭಿಮಾನಿಗಳಂತೂ ಸಣ್ಣ ಝಲಕ್ ನೋಡಿ ಖುಷಿಯಾಗಿದ್ದಾರೆ.

ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ನಟ ಐದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೆಂಕಟೇರ್, ಅರತಾರ್, ಮಂದಾಂಕರ್, ಮುಕಾತಾರ್ ಮತ್ತು ಪೆರುಮಾನಾಥರ್ ಎಂಬ ಐದು ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ದಿಶಾ ಪಟಾನಿ ಈ ಚಿತ್ರದ ಮೂಲಕ ತಮಿಳಿಗೆ ಪದಾರ್ಪಣೆ ಮಾಡುತ್ತಿದ್ದಾರೆ.

Exit mobile version