Site icon Vistara News

Actor Suriya: ಸೆಟ್‌ನಲ್ಲಿ ಅವಘಡ; ಆರೋಗ್ಯದ ಬಗ್ಗೆ ಅಪ್​ಡೇಟ್ ಕೊಟ್ಟ ನಟ ಸೂರ್ಯ

Suriya gets injured on Kanguva sets, shares health update

ಬೆಂಗಳೂರು: ತಮಿಳು ನಟ ಸೂರ್ಯ (Actor Suriya) ತಮ್ಮ ಮುಂಬರುವ ಚಿತ್ರ ‘ಕಂಗುವ’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಶೂಟಿಂಗ್ ವೇಳೆ ನಟ ಸೂರ್ಯ ಅವರಿಗೆ ಗಾಯಗಳಾಗಿವೆ. ಈ ಕಾರಣದಿಂದ ಶೂಟಿಂಗ್​ನ ಅರ್ಧಕ್ಕೆ ನಿಲ್ಲಿಸಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಫೈಟಿಂಗ್‌ ದೃಶ್ಯದ ಚಿತ್ರೀಕರಣದ ವೇಳೆ, ರೋಪ್ ಕ್ಯಾಮೆರಾ ನಿಯಂತ್ರಣ ಕಳೆದುಕೊಂಡು ನಟನ ಮೇಲೆ ಬಿದ್ದಿದೆ. ಮಾಧ್ಯಮ ವರದಿಗಳ ಪ್ರಕಾರ, ಕ್ಯಾಮೆರಾ ಸೂರ್ಯ ಅವರ ಭುಜಕ್ಕೆ ತಗುಲಿತು ನಟನಿಗೆ ಗಾಯಗಳಾಗಿವೆ. ಇದೀಗ ಸೂರ್ಯ ಅವರು ಈ ಬಗ್ಗೆ ಟ್ವೀಟ್‌ನಲ್ಲಿ ಅಪ್‌ಡೇಟ್‌ ಹಂಚಿಕೊಂಡಿದ್ದಾರೆ.

ನಟನ ಮುಂಬರುವ ಚಿತ್ರ ‘ಕಂಗುವ’ ಗಾಗಿ ಸೂರ್ಯ ಅಭಿಮಾನಿಗಳು ಉತ್ಸುಕತೆಯಿಂದ ಕಾಯುತ್ತಿದ್ದಾರೆ,. ಸೂರ್ಯ ಅವರು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕ್ಯಾಮೆರಾ ಬಿದ್ದಿದ್ದರಿಂದ ನಟನಿಗೆ ಸ್ವಲ್ಪ ಗಾಯವಾದರೂ, ಸದ್ಯಕ್ಕೆ ಚಿತ್ರದ ಚಿತ್ರೀಕರಣವನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ಸೂರ್ಯ ಅವರು ಟ್ವೀಟ್‌ನಲ್ಲಿ ಹಂಚಿಕೊಂಡು ʻ ಆತ್ಮೀಯ ಸ್ನೇಹಿತರೇ ನನ್ನ ಅಭಿಮಾನಿಗಳೇ, ಬೇಗ ಗುಣಮುಖರಾಗಿ ಎಂಬ ನಿಮ್ಮ ಸಂದೇಶಗಳಿಗೆ ಧನ್ಯವಾದ. ಈಗ ಸ್ವಲ್ಪ ಚೇತರಿಸಿಕೊಂಡಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ಸದಾ ಕೃತಜ್ಞ’ ಎಂದು ಸೂರ್ಯ ಅವರು ಬರೆದುಕೊಂಡಿದ್ದಾರೆ. ಮೂಲಗಳ ಪ್ರಕಾರ, ಇವಿಪಿ ಫಿಲ್ಮ್ ಸಿಟಿಯಲ್ಲಿ ಮಧ್ಯರಾತ್ರಿ 1.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಚಿತ್ರೀಕರಣವನ್ನು ಮುಂದೂಡಲಾಗಿದೆ. ನಸರತ್‌ಪೇಟೆ ಪೊಲೀಸರು ಈ ಬಗ್ಗೆ ಪರಿಶೀಲಿಸುತ್ತಿದ್ದಾರೆ.

ಪಾಂಡಿರಾಜ್ ನಿರ್ದೇಶನದ ‘ಎತರ್ಕ್ಕುಂ ತೂನಿಂಧವನ್’ ಚಿತ್ರದಲ್ಲಿ ಸೂರ್ಯ ಕೊನೆಯದಾಗಿ ಕಾಣಿಸಿಕೊಂಡಿದ್ದರು. ‘ಸೂರ್ಯ 43’ ಚಿತ್ರದಲ್ಲಿ ದುಲ್ಕರ್ ಸಲ್ಮಾನ್, ವಿಜಯ್ ವರ್ಮಾ ಮತ್ತು ನಜ್ರಿಯಾ ಫಹಾದ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ಯುವಿ ಕ್ರಿಯೇಷನ್ಸ್ ಸಹಯೋಗದಲ್ಲಿ ಸ್ಟುಡಿಯೋ ಗ್ರೀನ್ ನಿರ್ಮಾಣ ಸಂಸ್ಥೆಯು ಸೂರ್ಯ ಮತ್ತು ದಿಶಾ ಪಟಾನಿ ಅಭಿನಯದ ‘ಕಂಗುವ’ ಚಿತ್ರವನ್ನು ನಿರ್ಮಿಸುತ್ತಿದೆ. ಇದು ಸಾಹಸಮಯ ಚಿತ್ರವಾಗಿದ್ದು, 2024ರ ಆರಂಭದಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ. ‘ಮಲಂಗ್’ ನಟಿ ದಿಶಾ ಪಟಾನಿ ಕೂಡ ನಟಿಸಿರುವ ಚಿತ್ರಕ್ಕೆ ಕಂಗುವ ಎಂದು ನಾಮಕರಣ ಮಾಡಲಾಗಿದೆ.

ಇದನ್ನೂ ಓದಿ: Actor Surya: ‘ಕಂಗುವ’ ಚಿತ್ರದ ಶೂಟಿಂಗ್ ವೇಳೆ ನಟ ಸೂರ್ಯಗೆ ಗಾಯ!

38 ಭಾಷೆಗಳಲ್ಲಿ ಕಂಗುವ ಬಿಡುಗಡೆಗೆ ಪ್ಲ್ಯಾನ್

ಖ್ಯಾತ ಕಾಲಿವುಡ್ ನಟ ಸೂರ್ಯ (Actor Suriya) ಅವರು ಸಿರುತೈ ಶಿವ ನಿರ್ದೇಶನದ ಬಹು ನಿರೀಕ್ಷಿತ ಪ್ರಾಜೆಕ್ಟ್ ʻಕಂಗುವʼ ಚಿತ್ರವನ್ನು 38 ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ಇತ್ತೀಚಿನ ಸಂದರ್ಶನವೊಂದರಲ್ಲಿ ಚಿತ್ರದ ನಿರ್ಮಾಪಕ ಕೆ.ಇ.ಜ್ಞಾನವೇಲ್ ರಾಜಾ ಅವರು ಹೇಳಿದ್ದಾರೆ. ‘ಕಂಗುವ’ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆ ಮಾಡುವ ಆಲೊಚನೆಯನ್ನು ನಿರ್ಮಾಪಕರು ಹಾಕಿಕೊಂಡಿದ್ದಾರೆ.

ಕೆ.ಇ.ಜ್ಞಾನವೇಲ್ ರಾಜಾ ಮಾತನಾಡಿ ʻʻ38 ಭಾಷೆಗಳಲ್ಲಿ ʼಕಂಗುವʼ ಸಿನಿಮಾ ಬಿಡುಗಡೆ ಮಾಡುತ್ತೇವೆ. ಈ ಪ್ರಯತ್ನವು ಯಶಸ್ವಿಯಾದರೆ, ತಮಿಳು ಚಿತ್ರರಂಗದಲ್ಲಿ ಒಂದು ಅದ್ಭುತ ಬೆಳವಣಿಗೆಯಾಗಲಿದೆ. ‘ಕಂಗುವ’ ಸಿನಿಮಾವನ್ನು 3ಡಿ ಹಾಗೂ ಐಮ್ಯಾಕ್ಸ್ ಮಾದರಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ನಾವು ಭಿನ್ನ ಮಾದರಿಯ ಮಾರುಕಟ್ಟೆ ಸ್ಟ್ರಾಟೆಜಿಗಳನ್ನು ಬಳಸಲಿದ್ದೇವೆ’ ಎಂದಿದ್ದಾರೆ.

ತಾತ್ಕಾಲಿಕವಾಗಿ ʻಸೂರ್ಯ 42ʼ ಎಂದು ಹೆಸರಿಸಲಾದ ಸೂರ್ಯ ಅವರ ಮುಂಬರುವ ಬಹು ನಿರೀಕ್ಷಿತ ಈ ಚಿತ್ರವು ಇದೀಗ ʻಕಂಗುವʼ ಎಂಬ ಹೆಸರನ್ನು ಪಡೆದುಕೊಂಡಿದೆ. ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ನಟ ಐದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೆಂಕಟೇರ್, ಅರತಾರ್, ಮಂದಾಂಕರ್, ಮುಕಾತಾರ್ ಮತ್ತು ಪೆರುಮಾನಾಥರ್ ಎಂಬ ಐದು ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ದಿಶಾ ಪಟಾನಿ ಈ ಚಿತ್ರದ ಮೂಲಕ ತಮಿಳಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದರಲ್ಲಿ ಕೋವೈ ಸರಳಾ, ಯೋಗಿ ಬಾಬು, ಆನಂದ್ ರಾಜ್, ರೆಡಿನ್ ಕಿಂಗ್ಸ್ಲಿ, ರವಿ ರಾಘವೇಂದ್ರ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

Exit mobile version