Site icon Vistara News

Actress Jyotika: ಪತ್ನಿ ಜ್ಯೋತಿಕಾ ಫಿಟ್ನೆಸ್ ವಿಡಿಯೊಗೆ “ಮೈ ವಂಡರ್ ವುಮನ್” ಎಂದ ಸೂರ್ಯ!

Jyotika Fitness

ಬೆಂಗಳೂರು: ಖ್ಯಾತ ನಟಿ, ತಮಿಳಿನ ಸ್ಟಾರ್ ನಟ ಸೂರ್ಯ ಪತ್ನಿ ಜ್ಯೋತಿಕಾ (Actress Jyotika) ಫಿಟ್‌ನೆಸ್‌ ಗುಟ್ಟು ರಿವೀಲ್‌ ಆಗಿದೆ. ಇದೀಗ ಜ್ಯೋತಿಕಾ ಹೊಸ ರೀಲ್ಸ್‌ ಶೇರ್‌ ಮಾಡಿಕೊಂಡಿದ್ದಾರೆ. ಜಿಮ್‌ನಲ್ಲಿ ನಟಿ ವರ್ಕೌಟ್‌ ಮಾಡುತ್ತಿರುವುದನ್ನು ಕಾಣಬಹುದು.

ಈ ನಡುವೆಯೇ ಜ್ಯೋತಿಕಾ ಅವರ ವಿಡಿಯೊ ಸಕತ್​ ವೈರಲ್​ ಆಗಿದೆ. ಸೂರ್ಯ ಮತ್ತು ಜ್ಯೋತಿಕಾ ದಂಪತಿಗೆ ಇಬ್ಬರು ಮಕ್ಕಳು. ಮಗಳು ದಿಯಾ (15 ವರ್ಷ) ಮಗ ದೇವ್ (12 ವರ್ಷ). ಜ್ಯೋತಿಕಾ ಅವರಿಗೆ 44 ವರ್ಷ ವಯಸ್ಸು. ಈ ವಯಸ್ಸಿನಲ್ಲಿಯೂ, ಇಬ್ಬರು ದೊಡ್ಡ ಮಕ್ಕಳ ಅಮ್ಮನಾದ ಮೇಲೂ ಜ್ಯೋತಿಕಾ ಫಿಟ್​ ಆಗಿದ್ದಾರೆ. ಜ್ಯೋತಿಕಾ ಅವರ ಫಿಟ್‌ನೆಸ್‌ ವಿಡಿಯೊಗೆ ನೆಟ್ಟಿಗರು ಸಂತಸ ಹೊರಹಾಕಿದ್ದಾರೆ. ನಟ ಮಾಧವನ್, “ತುಂಬಾ ಅದ್ಭುತವಾಗಿದೆ ಜೋʼʼಎಂದು ಕಮೆಂಟ್‌ ಮಾಡಿದ್ದಾರೆ. ಪತಿ ಸೂರ್ಯ ʻʻಮೈ ವಂಡರ್‌ ವುಮೆನ್‌ʼʼಎಂದು ಇನ್‌ಸ್ಟಾ ಸ್ಟೋರಿಯಲ್ಲಿ ರಿ ಪೋಸ್ಟ್‌ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಸುಮಾರು 16 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಇದನ್ನು ನೋಡಿಯೇ ಫ್ಯಾನ್ಸ್​ ಅಚ್ಚರಿ ವ್ಯಕ್ತಪಡಿಸಿದ್ದರು. ಈಗ ಮತ್ತೊಂದು ಬಾರಿ ನಟಿ ತಮ್ಮ ವಿಡಿಯೊ ಶೇರ್​ ಮಾಡಿಕೊಳ್ಳುವ ಮೂಲಕ ತಮ್ಮ ಫಿಟ್​ನೆಸ್​ ಕುರಿತು ಮಾತನಾಡಿದ್ದಾರೆ.

ಜ್ಯೋತಿಕಾ ತಮ್ಮ ಮುಂದಿನ ಬಾಲಿವುಡ್ ಚಿತ್ರ ʻಶ್ರೀʼಗಾಗಿ ತಯಾರಿ ನಡೆಸುತ್ತಿದ್ದಾರೆ. ಜ್ಯೋತಿಕಾ ಅವರು ಸೀತಾ ಕಲ್ಯಾಣಂ, 36 ವಯಧಿನಿಲೆ, ಮೋಜಿ, ಕಾಕ ಕಾಕ, ಸಿಲ್ಲುನು ಒರು ಕಾದಲ್ ಮತ್ತು ಪಚ್ಚಕಿಲಿ ಮುತ್ತುಚರಂದ್ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಪತಿ ಸೂರ್ಯ ಅವರೊಂದಿಗೆ ಸ್ಟುಡಿಯೋ 2D ಎಂಟರ್‌ಟೇನ್‌ಮೆಂಟ್ ನಡೆಸುತ್ತಿದ್ದಾರೆ.

ಇದನ್ನೂ ಓದಿ: Suriya | ಸೂರರೈ ಪೊಟ್ರುಗೆ ರಾಷ್ಟ್ರೀಯ ಪ್ರಶಸ್ತಿ; ಸಂತಸ ಹಂಚಿಕೊಂಡ ಸೂರ್ಯ-ಜ್ಯೋತಿಕಾ

ಬಾಲಿವುಡ್ ಖ್ಯಾತ ನಿರ್ದೇಶಕ ವಿಕಾಶ್ ಬಾಹ್ಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾದಲ್ಲಿ ಜ್ಯೋತಿಕಾ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ (Ajay Devagan) ಮತ್ತು ಆರ್ ಮಾಧವನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜ್ಯೋತಿಕಾ ಅವರು ಅಜಯ್ ದೇವಗನ್ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಜ್ಯೋತಿಕಾ ಕೊನೆಯದಾಗಿ ಹಿಂದಿಯಲ್ಲಿ ಲಿಟಲ್ ಜಾನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಮತ್ತೆ ಹಿಂದಿ ಸಿನಿಮಾಗಳಲ್ಲಿ ನಟಿಸಿಲ್ಲ.

Exit mobile version