Site icon Vistara News

Suriya Sivakumar: ಜನುಮದಿನದಂದೇ ಹುಲಿ ಉಗುರುಗಳ ಹಾರ ಧರಿಸಿ ಉಗ್ರ ರೂಪ ತಾಳಿದ ನಟ ಸೂರ್ಯ!

Suriya Kanguva Look

ಬೆಂಗಳೂರು: ಕಾಲಿವುಡ್‌ ನಟ ಸೂರ್ಯ (Suriya Sivakumar) ಅವರಿಗೆ ಇಂದು (ಜು.23) ಜನುಮದಿನದ ಸಂಭ್ರಮ. ನಟ 48ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸೂರ್ಯ ಇದೀಗ ಈ ದಿನದಂದು ಫ್ಯಾನ್ಸ್‌ಗೆ ಉಡುಗೊರೆ ನೀಡಿದ್ದಾರೆ. ಅವರ ಬಹು ನಿರೀಕ್ಷಿತ ಚಿತ್ರವಾದ ʻಕಂಗುವʼ ಚಿತ್ರದ ಗ್ಲಿಂಪ್ಸ್‌ ಔಟ್‌ ಆಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ. ವಿಡಿಯೊದಲ್ಲಿ ಸೂರ್ಯ ಒಬ್ಬ ಪರಾಕ್ರಮಿ ಯೋಧನಾಗಿ ಕಾಣಿಸಿಕೊಂಡಿದ್ದಾನೆ.

ʻಕಂಗುವ’ ಚಿತ್ರಕ್ಕೆ ಶಿವ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಾಲಿವುಡ್ ನಟಿ ದಿಶಾ ಪಟಾನಿ ನಾಯಕಿಯಾಗಿ ಮಿಂಚಿದ್ದಾರೆ. ಗ್ಲಿಂಪ್ಸ್‌ನಲ್ಲೂ ಸೂರ್ಯ ರಗಡ್‌ ಲುಕ್‌ನಲ್ಲಿ ಮಿಂಚಿದ್ದಾರೆ. ಪ್ರಾಣಿಯ ಮುಖವಾಡವನ್ನು ಧರಿಸಿ ಕುತ್ತಿಗೆಗೆ ಹುಲಿ ಉಗುರುಗಳ ಹಾರ ಧರಿಸಿ,ತನ್ನ ಉಗ್ರ ಮುಖವನ್ನು ಬಹಿರಂಗಪಡಿಸಿದ್ದಾನೆ ಕಂಗುವ. ದೇವಿ ಶ್ರೀ ಪ್ರಸಾದ್ ಅವರ ಹಿನ್ನೆಲೆ ಸಂಗೀತ ಕೂಡ ಭಯ ಹುಟ್ಟಿಸುವಂತಿದೆ. ಛಾಯಾಗ್ರಾಹಕ ವೆಟ್ರಿ ಪಳನಿಸಾನಿ ಅವರ ಕೈ ಚಳಕ ಕೂಡ ಗಮನಾರ್ಹ.

1500 ವರ್ಷಗಳ ಹಿಂದೆ ನಡೆದ ಐತಿಹಾಸಿಕ ಘಟನೆ ಇದು!

ತಮಿಳುನಾಡಿನಲ್ಲಿ 1500 ವರ್ಷಗಳ ಹಿಂದೆ ನಡೆದ ಐತಿಹಾಸಿಕ ಘಟನೆಗಳನ್ನು ಆಧರಿಸಿ ಚಿತ್ರ ನಿರ್ಮಿಸಲಾಗಿದೆ ಎಂದು ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿ ʻʻನಾನು ಯಾವಾಗಲೂ ಕಾಲ್ಪನಿಕ ಜಗತ್ತನ್ನು ಸೃಷ್ಟಿಸಲು ಬಯಸುತ್ತೇನೆ ಮತ್ತು ಕಂಗುವಿನಿಂದ ಆ ಕನಸನ್ನು ನನಸಾಗಿಸುವಲ್ಲಿ ಯಶಸ್ವಿಯಾಗಿದ್ದೇನೆ” ಎಂದು ಸಿರುತೈ ಶಿವ ಹೇಳಿದರು.

ಯೋಗಿ ಬಾಬು, ಕೊವೈ ಸರಳ, ಆನಂದ್‌ರಾಜ್, ಜಗಪತಿ ಬಾಬು, ಕೆ. ಎಸ್ ರವಿಕುಮಾರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ವೆಟ್ರಿ ಪಳನಿಸ್ವಾಮಿ ಸಿನಿಮಾಟೋಗ್ರಫಿ, ದೇವಿ ಶ್ರೀ ಪ್ರಸಾದ್ ಸಂಗೀತ ಚಿತ್ರಕ್ಕಿದೆ. ಸೂರ್ಯ ಹುಟ್ಟುಹಬ್ಬದ ವಿಶೇಷವಾಗಿ ಮಧ್ಯರಾತ್ರಿ 12 ಗಂಟೆಗೆ ‘ಕಂಗುವ’ ಫಸ್ಟ್ ಗ್ಲಿಂಪ್ಸ್ ರಿವೀಲ್ ಆಗಿ ಸದ್ದು ಮಾಡುತ್ತಿದೆ. ಅಭಿಮಾನಿಗಳಂತೂ ಸಣ್ಣ ಝಲಕ್ ನೋಡಿ ಖುಷಿಯಾಗಿದ್ದಾರೆ.

ಇದನ್ನೂ ಓದಿ: Actor Suriya: `ಕಂಗುವ’ ಸಿನಿಮಾದಿಂದ ಹೊಸ ಅಪ್‌ಡೇಟ್‌: ಭಾರಿ ಮೊತ್ತಕ್ಕೆ ಒಟಿಟಿಗೆ ಸೇಲ್‌?

ಗ್ಲಿಂಪ್ಸ್‌ನಲ್ಲಿ ಏನಿದೆ?

ದಟ್ಟವಾದ ಕಾಡಿನಲ್ಲಿ ಎದುರಾಳಿಗಳೆಲ್ಲ ಯುದ್ಧದಲ್ಲಿ ಸತ್ತಿದ್ದಾರೆ. ಅವರ ಹೆಣಗಳು ನೀರಿನಲ್ಲಿ ತೇಲುತ್ತಿರುತ್ತದೆ. ಒಬ್ಬ ಮಾತ್ರ ದಂಗೆ ಏಳಲು ಪ್ರಯತ್ನಿಸುತ್ತಾನೆ. ಆಗ ‘ಕಂಗುವ’ ಬೆಂಕಿ ಉಗುಳುವ ಬಾಣವನ್ನು ಅವನ ಎದೆಗೆ ನುಗ್ಗಿಸುತ್ತಾನೆ. ಹಿಡಿಯುವ ಬಾಣಗಳನ್ನು ಬಿಡುತ್ತಾನೆ. ಅಲ್ಲಿಗೆ ವಿರೋಧಿ ಬಣ ಸಂಪೂರ್ಣವಾಗಿ ನಾಶವಾಗುತ್ತದೆ.

ತಾತ್ಕಾಲಿಕವಾಗಿ ʻಸೂರ್ಯ 42ʼ ಎಂದು ಹೆಸರಿಸಲಾದ ಸೂರ್ಯ ಅವರ ಮುಂಬರುವ ಬಹು ನಿರೀಕ್ಷಿತ ಈ ಚಿತ್ರವು ʻಕಂಗುವʼ ಎಂಬ ಹೆಸರನ್ನು ಪಡೆದುಕೊಂಡಿತು. 2024ರ ಆರಂಭದಲ್ಲಿ 10 ಭಾಷೆಗಳಲ್ಲಿ ಚಿತ್ರಮಂದರಿಗಳಲ್ಲಿ ಬಿಡುಗಡೆʼʼಎಂದು ಚಿತ್ರತಂಡ ಬರೆದುಕೊಂಡಿತ್ತು.

ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ನಟ ಐದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೆಂಕಟೇರ್, ಅರತಾರ್, ಮಂದಾಂಕರ್, ಮುಕಾತಾರ್ ಮತ್ತು ಪೆರುಮಾನಾಥರ್ ಎಂಬ ಐದು ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ದಿಶಾ ಪಟಾನಿ ಈ ಚಿತ್ರದ ಮೂಲಕ ತಮಿಳಿಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಈ ಚಿತ್ರವನ್ನು ಸಿರುತೈ ಶಿವ ನಿರ್ದೇಶಿಸಿದ್ದಾರೆ. ರಜನಿಕಾಂತ್ ನಾಯಕತ್ವದ ಆ್ಯಕ್ಷನ್ ಡ್ರಾಮಾ ʻಅಣ್ಣಾತ್ತೆʼ ಸಿನಿಮಾ ಬಳಿಕ ಈ ಸಿನಿಮಾ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸಿನಿಮಾವನ್ನು 2ಡಿ ಮತ್ತು 3ಡಿಯಲ್ಲಿ ಚಿತ್ರೀಕರಿಸಲಾಗುತ್ತಿದೆ. ಈ ಚಿತ್ರವನ್ನು ಕೆ.ಇ.ಜ್ಞಾನವೇಲ್ ರಾಜಾ ಅವರ ಸ್ಟುಡಿಯೋ ಗ್ರೀನ್, ಯುವಿ ಕ್ರಿಯೇಷನ್ಸ್ ಸಹಯೋಗದಲ್ಲಿ ನಿರ್ಮಿಸಲಾಗಿದೆ.

Exit mobile version