Site icon Vistara News

Sushmita Sen: ಜಿಮ್‌ ವರ್ಕೌಟ್‌ ಬಗ್ಗೆ ಸುಶ್ಮಿತಾ ಸೇನ್ ಹೇಳಿದ್ದೇನು: ಹೃದಯಾಘಾತ ಬಳಿಕ ವಿಡಿಯೊ ಹಂಚಿಕೊಂಡ ನಟಿ

Sushmita Sen new video

ಮುಂಬೈ: ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ (Sushmita Sen) ಕೆಲವು ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿರುವುದಾಗಿ ಇನ್‌ಸ್ಟಾಗ್ರಾಂ ಮೂಲಕ ಹೇಳಿಕೊಂಡಿದ್ದರು. ಈಗ ಹೊಸ ವಿಡಿಯೊವನ್ನು ಹಂಚಿಕೊಂಡಿರುವ ಅವರು, ಜಿಮ್ ಮತ್ತು ಆರೋಗ್ಯಕರ ಜೀವನಶೈಲಿಯು ಬದುಕುಳಿಯಲು ಸಹಾಯ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.

ನನಗೆ ಮ್ಯಾಸಿವ್ ಹಾರ್ಟ್‌ ಅಟ್ಯಾಕ್ ಆಗಿತ್ತು, ಶೇಕಡಾ 95ರಷ್ಟು ಬ್ಲಾಕೇಜ್ ಇತ್ತು ಎಂದು ಸುಶ್ಮಿತಾ ಸೇನ್ ಹೇಳಿಕೊಂಡಿದ್ದಾರೆ. “ನಿಮ್ಮಲ್ಲಿ ಬಹಳಷ್ಟು ಮಂದಿ ಜಿಮ್‌ಗೆ ಹೋಗುವುದನ್ನು ನಿಲ್ಲಿಸಿರುತ್ತೀರಿ. ‘ಪ್ರತಿದಿನ ವ್ಯಾಯಾಮ ಮಾಡಿದರೂ ಆರೋಗ್ಯ ಹಾಳಾಗುತ್ತದೆ, ವ್ಯಾಯಾಮದಿಂದ ಏನೂ ಪ್ರಯೋಜನವಿಲ್ಲ. ವರ್ಕೌಟ್ ಮಾಡಿದರೂ ಅವಳಿಗೆ ಹಾಗೆ ಆಗಿದೆ. ಅಂದ ಮೇಲೆ ಯಾಕೆ ಮಾಡಬೇಕು ಎಂದು ಜಿಮ್‌ಗೆ ಹೋಗುವುದನ್ನೇ ನಿಲ್ಲಿಸುತ್ತೀರಿ. ಹೀಗೆ ಮಾಡಬೇಡಿ. ಆರೋಗ್ಯದ ದೃಷ್ಟಿಯಿಂದ ವ್ಯಾಯಾಮ ತುಂಬಾ ಸಹಾಯ ಮಾಡುತ್ತದೆ. ನನ್ನ ಕೈಹಿಡಿದಿದ್ದೂ ಇದೇ ಆಗಿದೆ. ನಾನು ಇಂದು ಜಗತ್ತನ್ನು ನೋಡುವ ಭರವಸೆಯು ಇದರಿಂದಲೇ ಮೂಡಿದೆ. ಈ ನಿಟ್ಟಿನಲ್ಲಿ ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆʼ ʼಎಂದು ಹೇಳಿಕೊಂಡಿದ್ದಾರೆ.

ತನಗೆ ಹೃದಯಾಘಾತವಾಗಿರುವ ಕುರಿತು ಹೇಳಿಕೊಂಡಿರುವ ನಟಿ ಸುಶ್ಮಿತಾ, ತನ್ನ ತಂದೆ ಸುಬೀರ್ ಸೇನ್ ಅವರೊಂದಿಗಿನ ಚಿತ್ರವನ್ನು ಪೋಸ್ಟ್ ಮಾಡಿ ಭಾವನಾತ್ಮಕವಾಗಿ ಅನಿಸಿಕೆಯನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: Sushmita Sen: ಸುಶ್ಮಿತಾರನ್ನು ಕಾಡುತ್ತಿರುವ ಅಡಿಸನ್ಸ್‌ ಡಿಸೀಸ್:‌ ಏನಿದು?

ಇದನ್ನೂ ಓದಿ: Sushmita Sen: ನಟಿ ಸುಶ್ಮಿತಾ ಸೇನ್‌ಗೆ ಹೃದಯಾಘಾತ ; ಈಗ ಹೇಗಿದ್ದಾರೆ ಮಾಜಿ ಭುವನ ಸುಂದರಿ?

ʻʻನನ್ನ ತಂದೆ ನನಗೆ ಯಾವಾಗಲೂ ನಿನ್ನ ಹೃದಯವನ್ನು ಸಂತೋಷದಿಂದ ಮತ್ತು ಧೈರ್ಯದಿಂದ ಇರಿಸಿಕೋ ಎನ್ನುತ್ತಿದ್ದರು. ನಾನು ಒಂದೆರಡು ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದೆ. ಇದೀಗ ಆಂಜಿಯೋಪ್ಲ್ಯಾಸ್ಟಿ ಮಾಡಲಾಗಿದೆ. ಸ್ಟೆಂಟ್ ಅಳವಡಿಸಿದ್ದಾರೆ. ಮುಖ್ಯವಾಗಿ, ನನ್ನ ಹೃದ್ರೋಗ ತಜ್ಞರು ‘ನನಗೆ ದೊಡ್ಡ ಹೃದಯವಿದೆ’ ಎಂದು ಆಗಾಗ ಹೇಳುತ್ತಿರುತ್ತಾರೆ. ನಿಮ್ಮಲ್ಲರ ಹಾರೈಕೆಗೆ ನನ್ನ ಧನ್ಯವಾದಗಳುʼʼ ಎಂದು ಬರೆದುಕೊಂಡಿದ್ದಾರೆ.

1994ರಲ್ಲಿ ಭುವನ ಸುಂದರಿ ಕಿರೀಟ ತೊಟ್ಟಿದ್ದ ಸುಶ್ಮಿತಾ ಸೇನ್, ನಂತರ ಬಾಲಿವುಡ್‌ನಲ್ಲಿ ಮಿಂಚಿದ್ದರು. ಹಲವಾರು ಹಿಟ್‌ ಸಿನಿಮಾಗಳನ್ನೂ ನೀಡಿದ್ದರು.

Exit mobile version