Sushmita Sen: ನಟಿ ಸುಶ್ಮಿತಾ ಸೇನ್‌ಗೆ ಹೃದಯಾಘಾತ ; ಈಗ ಹೇಗಿದ್ದಾರೆ ಮಾಜಿ ಭುವನ ಸುಂದರಿ? - Vistara News

ಬಾಲಿವುಡ್

Sushmita Sen: ನಟಿ ಸುಶ್ಮಿತಾ ಸೇನ್‌ಗೆ ಹೃದಯಾಘಾತ ; ಈಗ ಹೇಗಿದ್ದಾರೆ ಮಾಜಿ ಭುವನ ಸುಂದರಿ?

47 ವರ್ಷದ ನಟಿ (Sushmita Sen) ಮಾರ್ಚ್‌ 2ರಂದು ಇನ್‌ಸ್ಟಾ ಮೂಲಕ ತಮ್ಮ ಆರೋಗ್ಯದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ತಂದೆ ಸುಬೀರ್ ಸೇನ್ ಅವರೊಂದಿಗಿನ ಚಿತ್ರವನ್ನು ಪೋಸ್ಟ್ ಮಾಡಿ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡಿದ್ದಾರೆ.

VISTARANEWS.COM


on

Sushmita Sen Reveals She Suffered A Heart Attack
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ (Sushmita Sen) ಕೆಲವು ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿರುವುದಾಗಿ ಇನ್‌ಸ್ಟಾ ಮೂಲಕ ಹೇಳಿಕೊಂಡಿದ್ದಾರೆ. 47 ವರ್ಷದ ನಟಿ ಮಾರ್ಚ್‌ 2ರಂದು ಇನ್‌ಸ್ಟಾ ಮೂಲಕ ತಮ್ಮ ಆರೋಗ್ಯದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ತಂದೆ ಸುಬೀರ್ ಸೇನ್ ಅವರೊಂದಿಗಿನ ಚಿತ್ರವನ್ನು ಪೋಸ್ಟ್ ಮಾಡಿ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡಿದ್ದಾರೆ.

ʻʻನನ್ನ ತಂದೆ ನನಗೆ ಯಾವಾಗಲೂ ನಿನ್ನ ಹೃದಯವನ್ನು ಸಂತೋಷದಿಂದ ಮತ್ತು ಧೈರ್ಯದಿಂದ ಇರಿಸಿಕೋ ಎನ್ನುತ್ತಿದ್ದರು. ನಾನು ಒಂದೆರಡು ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದೆ. ಇದೀಗ ಆಂಜಿಯೋಪ್ಲ್ಯಾಸ್ಟಿ ಮಾಡಲಾಗಿದೆ. ಸ್ಟೆಂಟ್ ಅಳವಡಿಸಿದ್ದಾರೆ. ಮತ್ತು ಮುಖ್ಯವಾಗಿ, ನನ್ನ ಹೃದ್ರೋಗ ತಜ್ಞರು ‘ನನಗೆ ದೊಡ್ಡ ಹೃದಯವಿದೆ’ ಎಂದು ಆಗಾಗ ಹೇಳುತ್ತಿರುತ್ತಾರೆ. ನಿಮ್ಮಲ್ಲರ ಹಾರೈಕೆಗೆ ನನ್ನ ಧನ್ಯವಾದಗಳುʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಲಲಿತ್‌ ಮೋದಿ ಜತೆ ಡೇಟಿಂಗ್‌: ಕೊನೆಗೂ ಮೌನ ಮುರಿದ ಸುಶ್ಮಿತಾ ಸೇನ್‌ ಹೇಳಿದ್ದೇನು?

ಸುಶ್ಮಿತಾ ಸೇನ್ ಪೋಸ್ಟ್‌

ಇನ್ನೊಂದು ಪೋಸ್ಟ್‌ನಲ್ಲಿ ಹಿತೈಷಿಗಳಿಗೆ ಧನ್ಯವಾದ ಅರ್ಪಿಸುತ್ತಾ, “ಈ ಪೋಸ್ಟ್ ನನ್ನ ಹಿತೈಷಿಗಳು ಮತ್ತು ಪ್ರೀತಿಪಾತ್ರರಿಗೆ. ನಾನು ಆರೋಗ್ಯವಾಗಿದ್ದೇನೆʼʼ ಎಂದು ಬರೆದುಕೊಂಡಿದ್ದಾರೆ. 1994 ರಲ್ಲಿ ಭುವನ ಸುಂದರಿ ಕಿರೀಟ ತೊಟ್ಟಿದ್ದ ಸುಶ್ಮಿತಾ ಸೇನ್, ನಂತರ ಬಾಲಿವುಡ್‌ನಲ್ಲಿ ಮಿಂಚಿದ್ದರು. ಹಲವಾರು ಹಿಟ್‌ ಸಿನಿಮಾಗಳನ್ನೂ ನೀಡಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Parineeti Chopra: ವೃತ್ತಿ ಜೀವನದ ಆರಂಭಿಕ ದಿನಗಳನ್ನು ನೆನೆದು ಭಾವುಕರಾದ ಪರಿಣಿತಿ ಚೋಪ್ರಾ!

Parineeti Chopra: ರಾಜ್ ಶಾಮಾನಿ ಅವರೊಂದಿಗಿನ ಪಾಡ್‌ಕಾಸ್ಟ್‌ ಚರ್ಚೆಯಲ್ಲಿ ನಟಿ ತನ್ನ ವೃತ್ತಿಜೀವನದ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ್ದಾರೆ. ಆರಂಭದಲ್ಲಿ ಅಷ್ಟಾಗಿ ಹಣ ಗಳಿಸಿರಲಿಲ್ಲ ಎಂದು ಬಹಿರಂಗಪಡಿಸಿದರು. ರಾಜ್ ಶಾಮಾನಿ ಅವರೊಂದಿಗಿನ ಪಾಡ್‌ಕಾಸ್ಟ್‌ ಚರ್ಚೆಯಲ್ಲಿ ನಟಿ ತನ್ನ ವೃತ್ತಿಜೀವನದ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಐದನೇ ಚಿತ್ರದ ಬಳಿಕ ನಟಿ ವ್ಯಾಪಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ನಟಿ ಪರಿಣಿತಿ ಚೋಪ್ರಾ (parineeti chopra) ಅವರು ಈ ಸಿನಿಮಾದಲ್ಲಿ ಅಮರ್ ಜೋತ್ ಪಾತ್ರ ಮಾಡಿದ್ದಾರೆ. ದಿವಂಗತ ಗಾಯಕ ಅಮರ್ ಸಿಂಗ್ ಚಮ್ಕಿಲಾ ಮತ್ತು ಅವರ ಪತ್ನಿ ಅಮರಜೋತ್ ಕೌರ್ ಅವರ ಜೀವನಾಧಾರಿತ ಬಯೋಪಿಕ್ ಸಿನಿಮಾ ಇದು.

VISTARANEWS.COM


on

Parineeti Chopra talks about initial struggles in the Industry
Koo

ಬೆಂಗಳೂರು: ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ (Parineeti Chopra) ಅವರು ತಮ್ಮ ವೃತ್ತೀ ಜೀವನದ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಹೋರಾಟ ಜೀವನ ನಡೆಸಿರುವುದಾಗಿ ಪಾಡ್‌ಕಾಸ್ಟ್‌ನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಐದನೇ ಚಿತ್ರದ ಬಳಿಕ ನಟಿ ವ್ಯಾಪಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ರಾಜ್ ಶಾಮಾನಿ ಅವರೊಂದಿಗಿನ ಪಾಡ್‌ಕಾಸ್ಟ್‌ ಚರ್ಚೆಯಲ್ಲಿ ನಟಿ ತನ್ನ ವೃತ್ತಿಜೀವನದ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ್ದಾರೆ. ಆರಂಭದಲ್ಲಿ ಅಷ್ಟಾಗಿ ಹಣ ಗಳಿಸಿರಲಿಲ್ಲ ಎಂದು ಬಹಿರಂಗಪಡಿಸಿದರು.

ಪರಿಣಿತಿ ಮಾತನಾಡಿ, “ನಾನು ತುಂಬಾ ಶ್ರೀಮಂತ ಹಿನ್ನೆಲೆಯಿಂದ ಬಂದವಳಲ್ಲ. ನಾನು ತುಂಬಾ ಸರಳ, ಮಧ್ಯಮ ವರ್ಗದ ಹುಡುಗಿ. ಆಗ ನನಗೆ ಬಾಲಿವುಡ್ ಹೇಗೆ ಎಂಬುದು ಅರ್ಥವಾಗುತ್ತಿರಲಿಲ್ಲ. ಮುಂಬೈನಲ್ಲಿ ಜನರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದು ನನಗೆ ನಿಜವಾಗಿ ತಿಳಿದಿರಲಿಲ್ಲ. ದೊಡ್ಡ ವರ್ಗದ ಸ್ನೇಹಿತರು ನನಗೆ ಗೊತ್ತಿರಲಿಲ್ಲ. ನನಗೆ ನನ್ನಲ್ಲಿ ತರಬೇತುದಾರರಾಗಲಿ, ಸ್ಟೈಲಿಸ್ಟ್‌ಗಳಾಗಲಿ ಆಗ ಇರಲಿಲ್ಲ. ಆಗ ತಿಂಗಳಿಗೆ ಸುಮಾರು 2 ಲಕ್ಷ ರೂ, ಕೊಟ್ಟು ತರಬೇತುದಾರರನ್ನು ನೇಮಿಸಿಕೊಳ್ಳುವಂತೆ ಯಾರೋ ಒಬ್ಬರು ಶಿಫಾರಸು ಮಾಡಿದ್ದರು. ಆದರೆ ಆಗ ನನ್ನ ಬಳಿ ಅಷ್ಟಾಗಿ ಹಣ ಇರುತ್ತಿರರಿಲ್ಲ. ಮೂರನೇ ಚಿತ್ರ ಮಾಡುವಾಗ ನನ್ನ ಸಂಭಾವನೆ 4 ಲಕ್ಷ ರೂ. ಆಗಿತ್ತು. ಆ ಸಮಯದಲ್ಲಿ ನನಗೆ ಕೆಲವರು ಯಾಕೆ ಫಿಟ್‌ನೆಸ್‌ ಟ್ರೈನರ್‌ಗಳನ್ನು ನೀವು ನೇಮಿಸಿಕೊಳ್ಳುತ್ತಿಲ್ಲ? ಎಂದು ಕೇಳುತ್ತಿದ್ದರು. ಆಗ ನನಗೆ ಕೇವಲ 5 ಲಕ್ಷ ರೂ. ಸಂಭಾವನೆ ಆಗಿತ್ತು ಎಂದು ಹೇಳಿದ್ದೆ. ಆ ಬಳಿಕ ಅವರು ನನ್ನ ಸ್ಥಿತಿ ಗತಿ ತಿಳಿದುಕೊಂಡ ನಂತರ ಇವೆಲ್ಲವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದರೆ ನೀವು ವೃತ್ತಿಯಲ್ಲಿ ಇರಬಾರದು ಎಂದು ಹೇಳಿದರುʼʼಎಂದು ನಟಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Lok Sabha Election 2024: ರಾಮಕೃಷ್ಣ ಹೆಗಡೆಯಂತೆ ಲಿಂಗಾಯತರ ಪರ ಗಟ್ಟಿಯಾಗಿ ನಿಂತ ನಾಯಕ ಪ್ರಲ್ಹಾದ್ ಜೋಶಿ ಎಂದ ಯತ್ನಾಳ್

ಸಿನಿಮಾ ವಿಚಾರಕ್ಕೆ ಬಂದರೆ, ಪರಿಣಿತಿ ಪ್ರಸ್ತುತ ದಿಲ್ಜಿತ್ ದೋಸಾಂಜ್ ಅವರೊಂದಿಗೆ ʻಅಮರ್ ಸಿಂಗ್ ಚಮ್ಕಿಲಾʼ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಸಿನಿಮಾ ಇದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ಗೆ ಆಗುತ್ತಿದೆ. ಸಿನಿಮಾ ಭಾರಿ ಮೆಚ್ಚುಗೆ ಪಡೆದುಕೊಂಡಿದೆ.

ನಟಿ ಪರಿಣಿತಿ ಚೋಪ್ರಾ (parineeti chopra) ಅವರು ಈ ಸಿನಿಮಾದಲ್ಲಿ ಅಮರ್ ಜೋತ್ ಪಾತ್ರ ಮಾಡಿದ್ದಾರೆ. ದಿವಂಗತ ಗಾಯಕ ಅಮರ್ ಸಿಂಗ್ ಚಮ್ಕಿಲಾ ಮತ್ತು ಅವರ ಪತ್ನಿ ಅಮರಜೋತ್ ಕೌರ್ ಅವರ ಜೀವನಾಧಾರಿತ ಬಯೋಪಿಕ್ ಸಿನಿಮಾ ಇದು.

ಏನಿದು ಕಥೆ?

ತನ್ನ ಹಾಡುಗಳಿಂದಲೇ ಜನಪ್ರಿಯರಾದ ಗಾಯಕ, ಸಂಗೀತಗಾರ ಅಮರ್‌ ಸಿಂಗ್‌ ಚಮ್ಕಿಲಾ ಅವರ ಜೀವನಗಾಥೆಯನ್ನು ಆಧರಿಸಿ ಈ ಸಿನಿಮಾ ನಿರ್ಮಿಸಲಾಗಿದೆ. 1980 ರ ದಶಕದಲ್ಲಿ ಜನಪ್ರಿಯತೆ ಪಡೆದ ʻಪಂಜಾಬ್‌ ಎಲ್ವಿಸ್‌ʼ ಎಂದೇ ಖ್ಯಾತಿ ಪಡೆದ ಚಮ್ಕಿಲಾರ ಬದುಕಿನ ಕಥೆಯಿದು . ಈ ಗಾಯಕ ತನ್ನ 27ನೇ ವಯಸ್ಸಿನಲ್ಲಿಯೇ ಕೊಲೆಯಾದರು. ಕಾಂಟ್ರವರ್ಸಿಯಲ್‌ ಹಾಡುಗಳು ಅಮರ್‌ ಸಿಂಗ್‌ ಚಮ್ಕಿಲಾ ಸಾವಿಗೆ ಕಾರಣವಾಗಿರಬಹುದು ಎಂದು ವರದಿಯಾಗಿದೆ.

Continue Reading

ಸಿನಿಮಾ

Ramayana Movie: ರಾಮಾಯಣ’ ಸಿನಿಮಾದ ರಣ್‌ಬೀರ್, ಸಾಯಿ ಪಲ್ಲವಿ ಲುಕ್ ಲೀಕ್

Ramayana Movie: ರಣಬೀರ್ ಕಪೂರ್ (Ranbir Kapoor) ಮುಂಬರುವ ಸಿನಿಮಾ ‘ರಾಮಾಯಣ’ (Ramayana Movie) ಚಿತ್ರದ ರಾಮನ ಪಾತ್ರಕ್ಕಾಗಿ ಕಠಿಣ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಮುಂಚೆ ʻಅನಿಮಲ್‌ʼ ಸಿನಿಮಾಗಾಗಿ ತೂಕ ಹೆಚ್ಚಿಸಿಕೊಂಡಿದ್ದರು. ಇದೀಗ ರಾಮಾಯಣ ಸಿನಿಮಾಗಾಗಿ ಸಖತ್‌ ಫಿಟ್‌ ಫೈನ್‌ ಆಗಿದ್ದಾರೆ.ಚಿತ್ರದಲ್ಲಿ ರಾವಣನಾಗಿ ಯಶ್ ನಟಿಸುತ್ತಾರೆ ಎನ್ನುವ ಮಾತುಗಳು ಬಹಳ ಹಿಂದೆಯೇ ಕೇಳಿಬಂದಿತ್ತು. ಆದರೆ ಈ ಬಗ್ಗೆ ಖಚಿತ ಮಾಹಿತಿ ಇನ್ನು ಲಭ್ಯವಾಗಿಲ್ಲ. ಆದರೆ ಯಶ್ ಚಿತ್ರ ನಿರ್ಮಾಣಕ್ಕೆ ನಮಿತ್ ಮಲ್ಹೋತ್ರಾ ಜೊತೆ ಕೈ ಜೋಡಿಸಿರುವುದು ವರದಿಯಾಗಿದೆ.

VISTARANEWS.COM


on

Ramayana Movie Ranbir Kapoor, Sai Pallavi's first look leaked
Koo

ಬೆಂಗಳೂರು: ನಿತೇಶ್ ತಿವಾರಿ (Nitesh Tiwari) ನಿರ್ದೇಶನದ ‘ರಾಮಾಯಣ’ ಸಿನಿಮಾ (Ramayana Set Pic leaked) ಸೆಟ್ಟೇರಿದೆ. ಮುಂಬೈ ಸ್ಟುಡಿಯೊವೊಂದರಲ್ಲಿ ಗುರುಕುಲದ ಸೆಟ್ ನಿರ್ಮಿಸಿ ʻರಾಮಾಯಣʼ ಸಿನಿಮಾ ಚಿತ್ರೀಕರಣ ಆರಂಭಿಸಿದ್ದಾರೆ. ಈಗಾಗಲೇ ಹಲವು ಬಾರಿ ಸಿನಿಮಾದ ಫೋಟೊಗಳು ಲೀಕ್‌ ಆಗಿವೆ. ಇದೀಗ ಮತ್ತೆ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅವರ ಲುಕ್‌ ವೈರಲ್‌ ಆಗಿದೆ.

ರಾಮಾಯಣ ಸೆಟ್‌ನಲ್ಲಿ ರಣಬೀರ್ ಸಾಂಪ್ರದಾಯಿಕ ಉಡುಗೆಯಲ್ಲಿ ಭಗವಾನ್ ರಾಮನಂತೆ ಮತ್ತು ಸೀತೆಯಂತೆ ರಾಜಕುಮಾರಿ ಲುಕ್‌ನಲ್ಲಿರುವ ಸಾಯಿ ಪಲ್ಲವಿ ಫೋಟೊ ಸೋರಿಕೆಯಾಗಿದೆ. ಸಾಕಷ್ಟು ಭದ್ರತೆ ನಡುವೆ ಮುಂಬೈನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಸೆಟ್‌ನಲ್ಲಿ ಮೊಬೈಲ್ ಫೋನ್‌ಗಳನ್ನು ಕೊಂಡೊಯ್ಯದಂತೆ ಚಿತ್ರತಂಡ ಆದೇಶಿಸಿದೆ. ಆದರೂ ಚಿತ್ರದ ಫೋಟೊಗಳು ಲೀಕ್ ಆಗಿರುವುದು ಚಿತ್ರತಂಡಕ್ಕೆ ಬೇಸರ ತಂದಿದೆ.ಚಿತ್ರದಲ್ಲಿ ರಾವಣನಾಗಿ ಯಶ್ ನಟಿಸುತ್ತಾರೆ ಎನ್ನುವ ಮಾತುಗಳು ಬಹಳ ಹಿಂದೆಯೇ ಕೇಳಿಬಂದಿತ್ತು. ಆದರೆ ಈ ಬಗ್ಗೆ ಖಚಿತ ಮಾಹಿತಿ ಇನ್ನು ಲಭ್ಯವಾಗಿಲ್ಲ. ಆದರೆ ಯಶ್ ಚಿತ್ರ ನಿರ್ಮಾಣಕ್ಕೆ ನಮಿತ್ ಮಲ್ಹೋತ್ರಾ ಜೊತೆ ಕೈ ಜೋಡಿಸಿರುವುದು ವರದಿಯಾಗಿದೆ.

ರಣಬೀರ್ ಕಪೂರ್ (Ranbir Kapoor) ಮುಂಬರುವ ಸಿನಿಮಾ ‘ರಾಮಾಯಣ’ (Ramayana Movie) ಚಿತ್ರದ ರಾಮನ ಪಾತ್ರಕ್ಕಾಗಿ ಕಠಿಣ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಮುಂಚೆ ʻಅನಿಮಲ್‌ʼ ಸಿನಿಮಾಗಾಗಿ ತೂಕ ಹೆಚ್ಚಿಸಿಕೊಂಡಿದ್ದರು. ಇದೀಗ ರಾಮಾಯಣ ಸಿನಿಮಾಗಾಗಿ ಸಖತ್‌ ಫಿಟ್‌ ಫೈನ್‌ ಆಗಿದ್ದಾರೆ.

ಇದನ್ನೂ ಓದಿ: Ramayana Movie: ರಾಮನಿಗೆ 75 ಕೋಟಿ ರೂ, ರಾವಣನಿಗೆ 50 ಕೋಟಿ ರೂ, ಸೀತೆಗೆ ಸಂಭಾವನೆ ಎಷ್ಟು?

ಈ ಮುಂಚೆ ನಟರ ವೇಷಭೂಷಣದಲ್ಲಿರುವ ಚಿತ್ರಗಳು ಸೋರಿಕೆಯಾದ ಬಳಿಕ ಚಿತ್ರೀಕರಣದ ಮೊದಲ ಎರಡು ದಿನಗಳು ಕಾಲ ನಿರ್ದೇಶಕರು ಒತ್ತಡವನ್ನುಂಟುಮಾಡಿಕೊಂಡಿದ್ದರು ಎಂದು ವರದಿಯಾಗಿತ್ತು. ಈ ಫೋಟೊಗಳಿಂದ ನಿರ್ದೇಶಕ ನಿತೇಶ್ ತಿವಾರಿ ತುಂಬ ಬೇಸರಿಸಿಗೊಂಡಿದ್ದರು ಎಂದು ವರದಿಯಾಗಿತ್ತು. ಈಗಾಗಲೇ ಸೆಟ್‌ನಲ್ಲಿ ಕಟ್ಟುನಿಟ್ಟಾದ ಕ್ರಮ ಕೈಗೊಂಡಿದ್ದು ಫೋನ್‌ಕೂಡ ನಿಷೇಧಿಸಲಾಗಿದೆ ಎನ್ನಲಾಗಿತ್ತು.

ದೃಶ್ಯಕ್ಕೆ ಅಗತ್ಯವಿರುವ ನಟರು ಮತ್ತು ತಂತ್ರಜ್ಞರನ್ನು ಮಾತ್ರ ಸೆಟ್‌ನಲ್ಲಿ ಇರುವಂತೆ ಆದೇಶ ನೀಡಿದ್ದು, ಉಳಿದವರಿಗೆ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ವರದಿಯಾಗಿತ್ತು. ಇನ್ನು ದಶರಥನಾಗಿ ಅರುಣ್‌ ಗೋವಿಲ್, ಹನುಮಂತನಾಗಿ ಸನ್ನಿ ಡಿಯೋಲ್ ನಟಿಸುತ್ತಾರೆ ಎನ್ನಲಾಗುತ್ತಿದೆ. ರಾವಣನ ಸಹೋದರಿ ಶೂರ್ಪನಖಿಯಾಗಿ ರಕುಲ್‌ಪ್ರೀತ್ ಸಿಂಗ್ ಹಾಗೂ ಮಡದಿ ಮಂಡೋದರಿಯಾಗಿ ಸಾಕ್ಷಿ ತನ್ವರ್ ನಟಿಸುತ್ತಾರೆ ಎಂದು ವರದಿಯಾಗಿದೆ.

ಸದ್ಯ ಯಶ್ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ‘ರಾಮಾಯಣ’ ಚಿತ್ರದಲ್ಲಿ ಸದ್ಯ ಬೇರೆ ಕಲಾವಿದರ ದೃಶ್ಯಗಳನ್ನು ಸೆರೆಹಿಡಿಯಲಿದ್ದು ನಿಧಾನವಾಗಿ ಯಶ್ ತಂಡ ಸೇರಿಕೊಳ್ಳುತ್ತಾರೆ ಎನ್ನಲಾಗುತ್ತಿದೆ.

Continue Reading

ಸಿನಿಮಾ

Shilpa Shetty: ಪೂಜಾ ಕಾರ್ಯಕ್ಕೆ ಕುಟುಂಬ ಸಮೇತರಾಗಿ ಮಂಗಳೂರಿಗೆ ಬಂದ ಶಿಲ್ಪಾ ಶೆಟ್ಟಿ

Shilpa Shetty: ಕಳೆದ 2023ರ ಏಪ್ರಿಲ್‌ನಲ್ಲಿ ಪತಿ ರಾಜ್‌ ಕುಂದ್ರ, ಮಕ್ಕಳಾ ವಿಯಾನ್ ಮತ್ತು ಸಮಿಷಾ, ಸಹೋದರಿ ನಟಿ ಶಮಿತಾ ಶೆಟ್ಟಿ, ತಾಯಿ ಸುನಂದಾ ಶೆಟ್ಟಿ ಹಾಗೂ ಕುಟುಂಬದ ಸದಸ್ಯರ ಜೊತೆಗೆ ದೇವರ ದರ್ಶನ ಪಡೆದಿದ್ದರು.ತಮಗೆ ಹೆಣ್ಣು ಮಗು ಬೇಕು. ಹೆಣ್ಣು ಮಗು ಜನಿಸಿದರೆ ಕಟೀಲು ದುರ್ಗಾ ಪರಮೇಶ್ವರಿಗೆ ಸೀರೆಯನ್ನು ಕಾಣಿಕೆ ರೂಪದಲ್ಲಿ ನೀಡುವುದಾಗಿ ಶಿಲ್ಪಾ ಶೆಟ್ಟಿ ಹರಕೆ ಹೊತ್ತಿದ್ದರಂತೆ. ಅದೇ ರೀತಿ ಅಂದು ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ, ತಮ್ಮ ಹರಕೆಯನ್ನು ತೀರಿಸಿದ್ದರು.

VISTARANEWS.COM


on

shilpa shetty visits shibaruru sri kodamanittaya
Koo

ಬೆಂಗಳೂರು: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರು ಮಂಗಳೂರಿಗೆ ಆಗಮಿಸಿ ಸುರತ್ಕಲ್‌ ತಾಲೂಕಿನ ದೇಲಂತಬೆಟ್ಟು ಶಿಬರೂರು (Delantha Bettu) ಕೊಡಮಣಿತ್ತಾಯ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕುಂಭಾಭಿಷೇಕ, ಅಷ್ಠಪವಿತ್ರ ನಾಗಮಂಡಲ ಸೇವೆ, ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು. ಆಗಾಗ ನಟಿ ಕಟೀಲು ದುರ್ಗಾ ಪರಮೇಶ್ವರಿ ದೇಔಸ್ಥಾನಕ್ಕೆ ಭೇಟಿ ಕೊಡುವುದು ಗೊತ್ತೇ ಇದೆ.

ನಟಿ ಶಿಲ್ಪಾ ಶೆಟ್ಟಿ, ಅವರ ಮಕ್ಕಳಾದ ವಿಯಾನ್ ಕುಂದ್ರಾ ಮತ್ತು ಸಮಿಷಾ ಕುಂದ್ರಾ ಮತ್ತು ತಾಯಿ ಸುನಂದಾ ಶೆಟ್ಟಿ ಮತ್ತು ಕುಟುಂಬದವರು ಜತೆಯಲ್ಲಿದ್ದರು. ಮೂಲತಃ ಮಂಗಳೂರಿನವರಾಗಿರುವುದರಿಂದ ನಟಿ ಶಿಲ್ಪಾ ಕುಟುಂಬದ ಕಾರ್ಯಕ್ರಮಗಳು, ಭೂತಾರಾದನೆ, ದೈವ ದೇವರ ಆರಾಧನೆಗೆ, ಆಗಾಗ ಬರುತ್ತಿರುತ್ತಾರೆ.

ಕಳೆದ 2023ರ ಏಪ್ರಿಲ್‌ನಲ್ಲಿ ಪತಿ ರಾಜ್‌ ಕುಂದ್ರ, ಮಕ್ಕಳಾ ವಿಯಾನ್ ಮತ್ತು ಸಮಿಷಾ, ಸಹೋದರಿ ನಟಿ ಶಮಿತಾ ಶೆಟ್ಟಿ, ತಾಯಿ ಸುನಂದಾ ಶೆಟ್ಟಿ ಹಾಗೂ ಕುಟುಂಬದ ಸದಸ್ಯರ ಜೊತೆಗೆ ದೇವರ ದರ್ಶನ ಪಡೆದಿದ್ದರು. ತಮಗೆ ಹೆಣ್ಣು ಮಗು ಬೇಕು. ಹೆಣ್ಣು ಮಗು ಜನಿಸಿದರೆ ಕಟೀಲು ದುರ್ಗಾ ಪರಮೇಶ್ವರಿಗೆ ಸೀರೆಯನ್ನು ಕಾಣಿಕೆ ರೂಪದಲ್ಲಿ ನೀಡುವುದಾಗಿ ಶಿಲ್ಪಾ ಶೆಟ್ಟಿ ಹರಕೆ ಹೊತ್ತಿದ್ದರಂತೆ. ಅದೇ ರೀತಿ ಅಂದು ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ, ತಮ್ಮ ಹರಕೆಯನ್ನು ತೀರಿಸಿದ್ದರು.

ಇದನ್ನೂ ಓದಿ: Shilpa Shetty: ರಾಜ್ ಕುಂದ್ರಾ ಜೈಲು ಪಾಲಾದಾಗ ದೇಶ ತೊರೆಯಬೇಕು ಎಂದು ಸಲಹೆ ನೀಡಿದ್ರಂತೆ ಶಿಲ್ಪಾ ಶೆಟ್ಟಿ!

ಶಿಲ್ಪಾ ಶೆಟ್ಟಿ ಭೂತಾರಾದನೆಯಲ್ಲಿ ಪಾಲ್ಗೊಂಡು ಕಾರಣಿಕ ದೈವದ ಆಶೀರ್ವಾದ ಪಡೆದಿದ್ದಾರೆ. ಈ ಬಾರಿ ಪತಿ ರಾಜ್ ಕುಂದ್ರಾ ಬಂದಿರಲಿಲ್ಲ. ಸುರತ್ಕಲ್ ಸಮೀಪದ ಅತ್ಯಂತ ಪ್ರಸಿದ್ಧ ಶಿಬರೂರು ಕೊಡಮಣಿತ್ತಾಯ ದೈವಸ್ಥಾನ ಅತ್ಯಂತ ಕಾರಣಿಕ ಕ್ಷೇತ್ರ.

ಶ್ರೀಕ್ಷೇತ್ರ ಕಟೀಲಿಗೂ ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೂ ಸಂಬಂಧವಿದೆ. ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭ ಶ್ರೀ ಕೊಡಮಣಿತ್ತಾಯ ದೈವವು ಶ್ರೀ ಕಟೀಲಿಗೆ ಭೇಟಿ ನೀಡುವ ಕ್ರಮ ಈಗಲೂ ಮುಂದುವರಿದಿದೆ.

ಶಿಲ್ಪಾ ಶೆಟ್ಟಿ ಮತ್ತು ರಾಜ್‌ ಕುಂದ್ರಾ ದಂಪತಿ ತಮ್ಮ ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ನೊಡಿಕೊಳ್ಳುತ್ತಿದ್ದಾರೆ. ಅವರ ಬೇಕು ಬೇಡಗಳನ್ನು ತೀರಿಸುವುದು ಮಾತ್ರವಲ್ಲ ವಿಭಿನ್ನ ಕಲ್ಪನೆಗಳೊಂದಿಗೆ ಬೆಳೆಸುತ್ತಿದ್ದಾರೆ. ಈ ಮಕ್ಕಳು ಮಲಗುವ ಕೋಣೆಗಳನ್ನು ಅವರಿಗೆ ಇಷ್ಟವಾದ ಬಣ್ಣಗಳಿಂದ ಅಲಂಕರಿಸಲಾಗಿದೆ. ಗೋಡೆಗಳ ಒಂದು ಬದಿಯಲ್ಲಿ ಆನೆ ಮತ್ತು ಜಿರಾಫೆ ಮತ್ತು ಚಿಟ್ಟೆಗಳು ಸೇರಿದಂತೆ ಹಲವಾರು ಪ್ರಾಣಿಗಳನ್ನು ಚಿತ್ರಿಸಲಾಗಿದೆ.

Continue Reading

ಬಾಲಿವುಡ್

Sushant Singh Rajput: ಸುಶಾಂತ್‌ ಸಿಂಗ್‌ ಸಾವಿಗೆ ನ್ಯಾಯಕ್ಕಾಗಿ ಆನ್‌ಲೈನ್ ಅಭಿಯಾನ ಶುರು ಮಾಡಿದ ಸಹೋದರಿ!

Sushant Singh Rajput: ಸುಶಾಂತ್ ಸಿಂಗ್ ರಜಪೂತ್ ಅವರ ಕುರಿತಾಗಿ ಅವರ ಸಹೋದರಿಯರು ಯಾವಾಗಲೂ ಮಾಧ್ಯಮಗಳ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಸುಶಾಂತ್‌ ಸಿಂಗ್‌ ಅವರ ಪರವಾಗಿ ನಿಲ್ಲುತ್ತಾರೆ. ಇದೀಗ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಸಹೋದರನ ಸಾವಿಗೆ ನ್ಯಾಯಕ್ಕಾಗಿ ಆನ್‌ಲೈನ್ ಅಭಿಯಾನವನ್ನು (online campaig) ಪ್ರಾರಂಭಿಸಿದ್ದಾರೆ. ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಅವರು ತಮ್ಮ ಹೊಸ ಪುಸ್ತಕ “ಪೇನ್: ಎ ಪೋರ್ಟಲ್ ಟು ಎನ್‌ಲೈಟ್‌ಮೆಂಟ್” (Pain: A Portal to Enlightenment) ನಲ್ಲಿ ಸುಶಾಂತ್ ಅವರ ಬಗ್ಗೆ ಬರೆದಿದ್ದಾರೆ. ಪುಸ್ತಕ ಬಿಡುಗಡೆ ಕೂಡ ಆಗಿದೆ.

VISTARANEWS.COM


on

Sushant Singh Rajput
Koo

ಬೆಂಗಳೂರು: ನಟ ಸುಶಾಂತ್‌ ಸಿಂಗ್‌ (Sushant Singh Rajput) ಅವರು 2020ರ ಜೂನ್‌ 14ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಸುಶಾಂತ್ ಸಿಂಗ್ ರಜಪೂತ್ ಅವರ ಕುರಿತಾಗಿ ಅವರ ಸಹೋದರಿಯರು ಯಾವಾಗಲೂ ಮಾಧ್ಯಮಗಳ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಸುಶಾಂತ್‌ ಸಿಂಗ್‌ ಅವರ ಪರವಾಗಿ ನಿಲ್ಲುತ್ತಾರೆ. ಇದೀಗ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ( Shweta Singh Kirti ) ಸಹೋದರನ ಸಾವಿಗೆ ನ್ಯಾಯಕ್ಕಾಗಿ ಆನ್‌ಲೈನ್ ಅಭಿಯಾನವನ್ನು (online campaig) ಪ್ರಾರಂಭಿಸಿದ್ದಾರೆ. ಇದಕ್ಕೂ ಮುಂಚೆ ಶ್ವೇತಾ ಸಿಂಗ್ ಕೀರ್ತಿ ಅವರು ಹಲವು ಅಧಿಕಾರಿಗಳಲ್ಲಿ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದರು.

ಇದೀಗ ಶ್ವೇತಾ ಸಿಂಗ್ ಕೀರ್ತಿ ಹೊಸ ಅಭಿಯಾನ ಶುರು ಮಾಡಿದ್ದಾರೆ. ಈ ಬಗ್ಗೆ ಇನ್‌ಸ್ಟಾದಲ್ಲಿ ‘ನ್ಯಾನಿ 4 ಎಸ್‌ಎಸ್‌ಆರ್ ಜಾನ್ ಆಂದೋಲನ್’ (Nany 4 SSR Jan Andolan) ಎಂದು ಘೋಷಿಸಿದರು. ಈ ಅಭಿಯಾನದ ಭಾಗವಾಗಿ, ಪ್ರತಿಯೊಬ್ಬರೂ ತಮ್ಮ ಮಣಿಕಟ್ಟಿಗೆ ಅಥವಾ ಹಣೆಯ ಮೇಲೆ ಕೆಂಪು ಬಟ್ಟೆಯನ್ನು ಕಟ್ಟಿಕೊಳ್ಳಬೇಕೆಂದು ಶ್ವೇತಾ ಒತ್ತಾಯಿಸಿದ್ದಾರೆ. ಜತೆಗೆ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ನಟನಿಗೆ ನ್ಯಾಯ ನೀಡುವಂತೆ ವಿನಂತಿಸಿದ್ದಾರೆ, ಪೋಸ್ಟ್‌ನ ಶೀರ್ಷಿಕೆಯಲ್ಲಿ ʻʻಸಿಬಿಐ ತನಿಖೆಯನ್ನು ಇನ್ನಷ್ಟು ಕಠಿಣಗೊಳಿಸಬೇಕು. ಮತ್ತು ಸತ್ಯವನ್ನು ಬಯಲಿಗೆ ತರಬೇಕುʼʼʼಎಂದು ಆಗ್ರಹಿಸಿದ್ದಾರೆ.

ಏನಿದು ಅಭಿಯಾನ?

ಪೋಸ್ಟ್‌ ಜತೆಗೆ ಶ್ವೇತಾ ಸಿಂಗ್ ಕೀರ್ತಿ ಈ ರೀತಿ ಬರೆದುಕೊಂಡಿದ್ದಾರೆ. ʻಸುಶಾಂತ್‌ ಮರಣವಾಗಿ 4 ವರ್ಷಗಳು ಕಳೆದಿವೆ. ವಿಚಾರಣೆಯನ್ನು ತ್ವರಿತಗೊಳಿಸುವಂತೆ ಮತ್ತು ಸತ್ಯವನ್ನು ಬಯಲಿಗೆ ತರುವಂತೆ ನಾನು ಸಿಬಿಐಗೆ ಮನವಿ ಮಾಡುತ್ತೇನೆ. ನಾವು ಒಗ್ಗಟ್ಟಿನಿಂದ ಒಟ್ಟಿಗೆ ನಿಲ್ಲೋಣ. ನಿಮ್ಮ ಮಣಿಕಟ್ಟಿಗೆ ಅಥವಾ ಹಣೆಯ ಮೇಲೆ ಕೆಂಪು ಬಟ್ಟೆಯನ್ನು ಕಟ್ಟಿಕೊಳ್ಳಿ, ಆ ಕ್ಷಣಗಳನ್ನು ಸೆರೆಹಿಡಿಯಿರಿ ಮತ್ತು #Nyay4SSRJanAndolan ಹ್ಯಾಷ್‌ ಟ್ಯಾಗ್‌ ಬಳಿಸಿ ವಿಡಿಯೊ ಶೇರ್‌ ಮಾಡಿʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Sushant Singh Rajput: ಪುಸ್ತಕದ ಮೂಲಕ ಸುಶಾಂತ್‌ ನೆನಪುಗಳನ್ನು ತೆರೆದಿಟ್ಟ ಸಹೋದರಿ!

ಪೋಸ್ಟ್ ಹಂಚಿಕೊಂಡ ನಂತರ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. “ಸುಶಾಂತ್ ಸಿಂಗ್ ರಜಪೂತ್ ಅವರಿಗೆ ನ್ಯಾಯ ಸಿಗಬೇಕು. ನಾವು ನಿಮ್ಮೊಂದಿಗಿದ್ದೇವೆʼʼಎಂದು ಒಬ್ಬರು ಬರೆದಿದ್ದಾರೆ. “ಹಣಕ್ಕಿಂತ ಮಾನವೀಯತೆ ದೊಡ್ಡದುʼʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. “4 ವರ್ಷಗಳು ಕಳೆದೇ ಹೋಯ್ತು. ಈ ಪ್ರಕರಣ ನಿನ್ನೆ ಮೊನ್ನೆ ಆದಂತೆ ಭಾಸವಾಗುತ್ತಿದೆ” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಈ ಮಾರ್ಚ್‌ನಲ್ಲಿಯೂ ಶ್ವೇತಾ ಅವರು ವಿಡಿಯೊ ಮೂಲಕ ಹೇಳಿಕೆಯನ್ನು ನೀಡಿದ್ದರು. ಸಹೋದರನ ಸಾವಿನ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿಯೂ ವಿನಂತಿಸಿದ್ದರು. ʻʻಸಹೋದರ ನಿಧನರಾಗಿ 45 ತಿಂಗಳುಗಳು ಕಳೆದಿವೆ. ಆದರೆ ತನಿಖಾ ಸಂಸ್ಥೆಯಿಂದ ಇನ್ನೂ ಯಾವುದೇ ಅಪ್‌ಡೇಟ್‌ಗಳು ಬಂದಿಲ್ಲ. ಪ್ರಧಾನಿ ಮೋದಿಯವರ ಸಹಾಯ ಬೇಕಿದೆʼʼಎಂದು ಹೇಳಿದ್ದರು.

ಸುಶಾಂತ್ ಬಗ್ಗೆ ಪುಸ್ತಕ ಬರೆದ ಶ್ವೇತಾ ಸಿಂಗ್ ಕೀರ್ತಿ

ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಅವರು ತಮ್ಮ ಹೊಸ ಪುಸ್ತಕ “ಪೇನ್: ಎ ಪೋರ್ಟಲ್ ಟು ಎನ್‌ಲೈಟ್‌ಮೆಂಟ್” (Pain: A Portal to Enlightenment) ನಲ್ಲಿ ಸುಶಾಂತ್ ಅವರ ಬಗ್ಗೆ ಬರೆದಿದ್ದಾರೆ. ಪುಸ್ತಕ ಬಿಡುಗಡೆ ಕೂಡ ಆಗಿದೆ.

ಶ್ವೇತಾ ಸಿಂಗ್ ಕೀರ್ತಿ ಅವರು ತಮ್ಮ ಪುಸ್ತಕಲ್ಲಿ ಸುಶಾಂತ್‌ ಅವರ ವೃತ್ತಿ ಜೀವನ, ವೈಯಕ್ತಿಕ ಜೀವನ ಬಗ್ಗೆ ಬರೆದುಕೊಂಡಿದ್ದಾರೆ. ʻಸುಶಾಂತ್ ಬಾಲಿವುಡ್‌ನಲ್ಲಿ ಬ್ಯುಸಿಯಾಗಿಬಿಟ್ಟಿದ್ದ. ನನಗೆ ಅವನನ್ನು ಭೇಟಿ ಮಾಡಲು ಸಾಧ್ಯವಾಗುತ್ತಿರಲ್ಲಿಲ್ಲ. 2014 ರಿಂದ 2017 ರವರೆಗೆ ನಾನು ಪ್ರತಿ ವರ್ಷ ಭಾರತಕ್ಕೆ ತೆರಳಿ ಅವನನ್ನು ಭೇಟಿಯಾಗುತ್ತಿದ್ದೆ. ದುರದೃಷ್ಟವಶಾತ್, 2018 ಮತ್ತು 2019ರಲ್ಲಿ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಜನವರಿ 2020ರಲ್ಲಿ ಪ್ಲ್ಯಾನ್‌ ಕೂಡ ಮಾಡಿಕೊಂಡಿದ್ದೆ. ಕೊನೆಗೂ ಅವನನ್ನು ಮೀಟ್‌ ಆಗಲು ಆಗಲೇ ಇಲ್ಲ. 2020 ರ ಜೂನ್‌ 14ರಂದು ಅವನು ಬಾರದ ಲೋಕಕ್ಕೆ ಹೋಗೆ ಬಿಟ್ಟಿದ್ದ. ಸಾವಿಗೂ ಮುಂಚೆ ನಾಲ್ಕು ದಿನಗಳ ಮೊದಲು ನಾನು ಕಾಲ್‌ ಮಾಡಿದ್ದೆ, ಅಮೆರಿಕಾಗೆ ಬರುವಂತೆ ಹೇಳಿದ್ದೆ. ಜೂನ್‌ 13ರ ರಾತ್ರಿ ನನಗೆ ಸುಶಾಂತ್‌ ಮೃತಪಟ್ಟ ಸುದ್ದಿ ತಿಳಿಯಿತು. ನಾನು ಕೂಗಾಡಲಿಲ್ಲ. ಅಳಲಿಲ್ಲ. ಅಲ್ಲಿಯೇ ಆಘಾತದಲ್ಲಿ ಕುಸಿದು ಬಿದ್ದೆʼʼಎಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Sushant Singh Rajput case: ನಟಿ ರಿಯಾ ಚಕ್ರವರ್ತಿಗೆ ಬಿಗ್ ರಿಲೀಫ್! ಬೇಲ್ ಪ್ರಶ್ನಿಸಲ್ಲ ಎಂದ ಕೇಂದ್ರ ಸರ್ಕಾರ

ದೇಶಾದ್ಯಂತ ಭಾರಿ ಆಘಾತ

ಸುಶಾಂತ್‌ ಸಿಂಗ್‌ ಅವರು ʻಕಾಯ್‌ ಪೋ ಚೆʼ, ʻಎಂಎಸ್ ಧೋನಿʼ, ʻದಿ ಅನ್‌ ಟೋಲ್ಡ್ ಟೇಲ್ʼ, ʻಕೇದಾರನಾಥ್ʼ ಮತ್ತು ʻಚಿಚೋರೆʼಯಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಸುಶಾಂತ್ ಅವರ ವೈವಿಧ್ಯಮಯ ಸಿನಿಮಾ ಜೀವನ 2020 ರಲ್ಲಿ ಕೊನೆಗೊಂಡಿತು. 2020ರ ಜೂನ್ 14ರಂದು ಬಾಂದ್ರಾದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಾಗ ಅವರ ವಯಸ್ಸು 34 ಅಷ್ಟೇ. ಈ ಸಾವು ದೇಶಾದ್ಯಂತ ಭಾರಿ ಆಘಾತವನ್ನುಂಟು ಮಾಡಿತ್ತು.

ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಬಗ್ಗೆ ಹಲವಾರು ಅನುಮಾನಗಳು ಇದ್ದವು. ಚಿತ್ರರಂಗದಲ್ಲಿ ನಡೆಯುತ್ತಿರುವ ಸ್ವಜನ ಪಕ್ಷಪಾತದಿಂದ ಅವರಿಗೆ ಅನ್ಯಾಯವಾಗುತ್ತಿದೆ. ಆ ಕಾರಣಕ್ಕೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಎನ್ನುವುದು ಒಂದು ಅನುಮಾನವಾದರೆ, ಯಾರೋ ಆತ್ಮೀಯರೇ ಕೊಲೆ ಮಾಡಿದ್ದಾರೆ ಎಂಬ ವಾದವೂ ಇತ್ತು. ಸಾವಿನ ಸುತ್ತ ಮಾದಕ ವ್ಯಸನ, ಡ್ರಗ್ಸ್‌ ಜಾಲ ಮತ್ತು ಅಕ್ರಮ ಹಣ ವರ್ಗಾವಣೆ ಹೀಗೆ ಹಲವು ಸಂಶಯದ ಹುತ್ತಗಳು ಬೆಳೆದಿದ್ದವು. ಸಿಬಿಐ, ಇ.ಡಿ, ಎನ್‌ಸಿಬಿ ಸೇರಿದಂತೆ ಹಲವು ತನಿಖಾ ತಂಡಗಳು ನಾನಾ ಆಯಾಮಗಳಲ್ಲಿ ತನಿಖೆಯನ್ನು ನಡೆಸುತ್ತಿವೆ. ಪೋಸ್ಟ್‌ ಮಾರ್ಟಂ ವರದಿಗಳ ಪ್ರಕಾರ ಸುಶಾಂತ್‌ ಆತ್ಮಹತ್ಯೆಯೇ ಹೌದಾಗಿದ್ದರೂ ಅದರ ಹಿಂದಿನ ಶಕ್ತಿಗಳು, ಸಿನಿಮಾ ರಾಜಕಾರಣ ಹೊರಬರಬೇಕು ಎನ್ನುವುದು ಅಭಿಮಾನಿಗಳ ಆಗ್ರಹವಾಗಿತ್ತು.

Continue Reading
Advertisement
Swiggy fined
ಬೆಂಗಳೂರು2 hours ago

Swiggy fined: ಐಸ್‌ ಕ್ರೀಂ ಡೆಲಿವರಿ ಮಾಡಲು ವಿಫಲ; ಸ್ವಿಗ್ಗಿಗೆ 5000 ರೂ. ದಂಡ ವಿಧಿಸಿದ ಕೋರ್ಟ್!

Vistara Editorial
ಪ್ರಮುಖ ಸುದ್ದಿ2 hours ago

ವಿಸ್ತಾರ ಸಂಪಾದಕೀಯ: ಭಾರತದ ಉತ್ಪನ್ನಗಳ ರಫ್ತಿಗೆ ಕುಖ್ಯಾತಿ ಅಂಟದಿರಲಿ

ಕರ್ನಾಟಕ3 hours ago

Modi in Karnataka: ಬೆಳಗಾವಿ ಹೋಟೆಲ್‌ನಲ್ಲಿ 36 ಬಗೆಯ ಭಕ್ಷ್ಯ ಭೋಜನ ಇದ್ರೂ ಎಳನೀರು ಮಾತ್ರ ಸೇವಿಸಿದ ಮೋದಿ!

IPL 2024
ಪ್ರಮುಖ ಸುದ್ದಿ3 hours ago

IPL 2024 : ಲಕ್ನೊ ವಿರುದ್ಧ ರಾಜಸ್ಥಾನ್​ಗೆ 7 ವಿಕೆಟ್​ ಭರ್ಜರಿ ಜಯ, ಪ್ಲೇಆಫ್​ ಹೊಸ್ತಿಲಲ್ಲಿ ಸಂಜು ಬಳಗ

CBI Raid
ದೇಶ3 hours ago

CBI Raid: ಸಂದೇಶ್‌ಖಾಲಿ ಟಿಎಂಸಿ ನಾಯಕನ ಆಪ್ತನ ಮನೆಯಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರದ ಮೂಲ ಪತ್ತೆ

Hassan Pen Drive Case
ಪ್ರಮುಖ ಸುದ್ದಿ3 hours ago

Hassan Pen Drive Case: ಎಸ್‌ಐಟಿ ತನಿಖೆ ಆದೇಶಕ್ಕೂ ಮುನ್ನವೇ ವಿದೇಶಕ್ಕೆ ತೆರಳಿದ ಪ್ರಜ್ವಲ್ ರೇವಣ್ಣ!

KL Rahul
ಕ್ರಿಕೆಟ್3 hours ago

KL Rahul : ಐಪಿಎಲ್​ನಲ್ಲಿ ಆರಂಭಿಕನಾಗಿ 4000 ರನ್ ಪೂರೈಸಿದ ಕೆಎಲ್ ರಾಹುಲ್; ಈ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?

Modi in Karnataka
ಪ್ರಮುಖ ಸುದ್ದಿ4 hours ago

Modi in Karnataka: ಬೆಳಗಾವಿಗೆ ಆಗಮಿಸಿದ ಪ್ರಧಾನಿ‌ ಮೋದಿ; ಐಟಿಸಿ ವೆಲ್‌ಕಮ್‌ ಹೋಟೆಲ್‌ನಲ್ಲಿ ವಾಸ್ತವ್ಯ

Hasan pen drive case
ಹಾಸನ4 hours ago

Hassan Pen Drive Case: ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ ಆರೋಪ​; ಎಸ್​​ಐಟಿ ತನಿಖೆಗೆ ಸಿದ್ದರಾಮಯ್ಯ ಆದೇಶ

Air Force Chopper
ದೇಶ4 hours ago

Air Force Chopper: ಉತ್ತರಾಖಂಡದಲ್ಲಿ ಕಾಡಿನ ಬೆಂಕಿ ನಂದಿಸಲು ವಾಯು ಪಡೆಯ ಹೆಲಿಕಾಪ್ಟರ್‌ ಬಳಕೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok sabha election 2024
Lok Sabha Election 202410 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ14 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ21 hours ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ2 days ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20242 days ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20242 days ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ2 days ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ2 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ3 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

ಟ್ರೆಂಡಿಂಗ್‌