Site icon Vistara News

Actor Ashok Kumar: 10ನೇ ತರಗತಿಯಲ್ಲೇ ನಟಿ ರಂಜಿತಾ ಮೇಲೆ ಪ್ರೀತಿ; ನಿತ್ಯಾನಂದ ಮನಸೋತಿದ್ದು ಯಾತಕ್ಕೆ?

swami nithyananda fell in love with ranjitha after watching Her Film

ಬೆಂಗಳೂರು: ನಟ ಅಶೋಕ್‌ ಕುಮಾರ್ (Actor Ashok Kumar) ಸಂದರ್ಶನವೊಂದರಲ್ಲಿ, ತಮ್ಮ ಮಕ್ಕಳಿಬ್ಬರು ನಿತ್ಯಾನಂದ ಸ್ವಾಮಿಜಿ ಬಳಿ ಇದ್ದಾರೆ ಎಂಬ ವಿಚಾರವನ್ನು ಬಹಿರಂಗಪಡಿಸಿದ ಬಳಿಕ ರಂಜಿತಾ ಹಾಗೂ ನಿತ್ಯಾನಂದ ಲವ್‌ ಸ್ಟೋರಿ ಸಖತ್‌ ಚರ್ಚೆಯಾಗುತ್ತಿದೆ. ಈ ಹಿಂದೆ ನಿತ್ಯಾನಂದ ಹಾಗೂ ರಂಜಿತಾ ಸ್ಟೋರಿ ಸುದ್ದಯಲ್ಲಿತ್ತು. ನಿತ್ಯಾನಂದ 10ನೇ ತರಗತಿಯಲ್ಲಿ ಇದ್ದಾಲೇ ರಂಜಿತಾಗೆ ಮನಸೋತಿರುವ ಸುದ್ದಿ ಇದೀಗ ವೈರಲ್‌ ಆಗುತ್ತಿದೆ.

ಅಶೋಕ್‌ ಕುಮಾರ್ ತೆಲುಗಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪೋಷಕ ನಟ, ವಿಲನ್ ಆಗಿ ಅಭಿನಯಿಸಿದ್ದಾರೆ. ಅಷ್ಟಾಗಿ ಅವಕಾಶ ಸಿಗದ ಕಾರಣದಿಂದ ಚಿತ್ರರಂಗದಿಂದ ದೂರ ಸರಿದ್ದರು. ಆದರೆ ಅಶೋಕ್ ಕುಮಾರ್ ಅವರ ಎರಡನೇ ಪುತ್ರಿ ರಂಜಿತಾ ಸಿನಿಮಾಗೆ ಎಂಟ್ರಿ ಕೊಟ್ಟಾಗ ಖುಷಿಪಟ್ಟಿದ್ದರು. ತಮಿಳಿನ ಜನಪ್ರಿಯ ನಿರ್ದೇಶಕ ಭಾರತಿರಾಜನ್ ನಿರ್ದೇಶಿಸಿದ ‘ನಾಡೋಡಿ ತೆಂಡ್ರಲ್’ನಲ್ಲಿ ನಾಯಕಿಯಾಗಿ ನಟಿಸಿದ್ದರು. ಆದರೆ ಈ ಸಿನಿಮಾ ನಿತ್ಯಾನಂದನನ್ನು ಹುಚ್ಚನನ್ನಾಗಿ ಮಾಡಿದ್ದಂತೆ.

10ನೇ ತರಗತಿಯಲ್ಲೇ ರಂಜಿತಾ ಮೇಲೆ ಲವ್

ನಿತ್ಯಾನಂದ 10ನೇ ತರಗತಿಯಲ್ಲೇ ರಂಜಿತಾ ಮೇಲೆ ಲವ್ ಆಗಿದ್ದಂತೆ. ನಿತ್ಯಾನಂದ 10ನೇ ತರಗತಿ ಓದುವಾಗ ‘ನಾಡೋಡಿ ತೆಂಡ್ರಲ್’ (nadodi thendral) ರಿಲೀಸ್ ಆಗಿತ್ತು. ಈ ಸಿನಿಮಾ ನೋಡಿದ್ದಾಗಿನಿಂದ ನಿತ್ಯಾನಂದ ರಂಜಿತಾ ಜಪಾ ಮಾಡಲು ಶುರು ಮಾಡಿದ್ದಲ್ಲದೇ ಬ್ಯಾಗ್‌ನಲ್ಲಿ ರಂಜಿತಾ ಫೋಟೊಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದ ಎಂದು ವರದಿಯಾಗಿದೆ.

ಇದನ್ನೂ ಓದಿ: Actor Ashok Kumar: ನನ್ನ ಮಕ್ಕಳಿಬ್ಬರೂ ನಿತ್ಯಾನಂದ ಸ್ವಾಮಿಜಿ ಬಳಿ ಇದ್ದಾರೆ; ನಟ ಅಶೋಕ್‌ ಕುಮಾರ್ ಭಾವುಕ!

ಆಧ್ಯಾತ್ಮದ ಬಗ್ಗೆ ನಂಬಿಕೆನೇ ಇರದ ರಂಜಿತಾಗೆ ಒಲವು ಮೂಡಿತ್ತಂತೆ

ನಿತ್ಯಾನಂದ 6ನೇ ತರಗತಿಯಲ್ಲಿರುವಾಗಲೇ ಸನ್ಯಾಸಿ ಆಗಬೇಕೆಂದು ನಿರ್ಧಾರ ಮಾಡಿದ್ದ. ಇತ್ತ ರಂಜಿತಾ ಮಿಲಿಟಿರಿ ಆಫೀಸರ್ ಪ್ರೀತಿಸಿ ಮದುವೆ ಆಗಿದ್ದರು. ರಂಜಿತಾ ಅಕ್ಕ ಮದುವೆ ಬಳಿಕ ಅಮೆರಿಕಾದಲ್ಲಿ ಇದ್ದರು. ಅಕ್ಕ ನಿತ್ಯಾನಂದನ ಭಕ್ತೆಯಾಗಿದ್ದರು. ಅಕ್ಕನೊಂದಿಗೆ ನಿತ್ಯಾನಂದನ ಆಶ್ರಮಕ್ಕೆ ಹೋಗಿದ್ದರು. ಅಲ್ಲಿವರೆಗೂ ಆಧ್ಯಾತ್ಮದ ಬಗ್ಗೆ ನಂಬಿಕೆನೇ ಇರದ ರಂಜಿತಾಗೆ ಒಲವು ಮೂಡುವುದಕ್ಕೆ ಶುರುವಾಗಿತ್ತು. ರಂಜಿತಾ ಹಾಗೂ ಅವರ ಅಕ್ಕ ನಿರ್ಮಲಾ ಇಬ್ಬರೂ ವಿಚ್ಛೇದನ ಪಡೆದು ನಿತ್ಯಾನಂದನ ಭಕ್ತೆಯಾದರು. ಇದನ್ನು ಸ್ವತಃ ಅಶೋಕ್ ಕುಮಾರ್ ಯೂಟ್ಯೂಬ್ ಚಾನೆಲ್‌ಗೆ ಮಾಹಿತಿ ನೀಡಿದ್ದಾರೆ.

ಅಶೋಕ್‌ ಕುಮಾರ್‌ ಹೇಳಿದ್ದೇನು?

ʻʻನನ್ನ ಮಕ್ಕಳಿಬ್ಬರು ಇವತ್ತಿಗೂ ನಿತ್ಯಾನಂದ ಸ್ವಾಮಿಜಿ ಅವರ ಬಳಿ ಇದ್ದಾರೆ. ಹುಡುಗಿ ಹೇಗಿದ್ದಾಳೆ ಎಂದು ನೋಡದೇ ನಾನು ಮದುವೆ ಆಗಿದ್ದೆ. ಮದುವೆ ಮಂಟಪದಲ್ಲಿ ಆಕೆಯನ್ನು ನೋಡಿದಾಗ ನನಗೆ ಇಷ್ಟವಾಗಲಿಲ್ಲ. ಆದರೆ ಬೇರೆ ವಿಧಿಯಿಲ್ಲದೇ ಮದುವೆ ಆಗುವಂತಾಯಿತು. ಇಷ್ಟವಿಲ್ಲದ ಮದುವೆ ಗೊಂದಲದ ನಡುವೆ ಪೊಲೀಸ್ ಕೆಲಸ ಬಿಟ್ಟೆ. ನಂತರ ನನ್ನ ತಪ್ಪಿನ ಅರಿವಾಗಿ ಆಕೆಯನ್ನು ಮದ್ರಾಸ್‌ಗೆ ಕರೆದುಕೊಂಡು ಹೋದೆ. ನಮಗೆ ಮೂರು ಜನ ಹೆಣ್ಣು ಮಕ್ಕಳು. ಅವರನ್ನು ಚೆನ್ನಾಗಿ ಓದಿಸಿದೆ. ಇಷ್ಟಪಟ್ಟವರ ಜೊತೆ ಮದುವೆ ಮಾಡಿಕೊಟ್ಟೆ. ಮೊದಲನೇ ಮಗಳು ಮದುವೆ ಆಗಿ ಅಮೆರಿಕಾದಲ್ಲಿ ಇದ್ದಳು. 2ನೇ ಮಗಳು ರಂಜಿತಾ, ನಿತ್ಯಾನಂದ ಸ್ವಾಮಿ ಜತೆ ಇದ್ದಾಳೆ. ರಂಜಿತಾ ಹಾಗೂ ನಿತ್ಯಾನಂದ ಸ್ವಾಮಿ ನಡುವಿನ ರಿಲೇಷನ್‌ಶಿಪ್ ಏನು ಎನ್ನುವುದು ಗೊತ್ತಿಲ್ಲ. ಆದರೆ ಆ ಫೋಟೊಗಳನ್ನು ನೋಡಿದರೆ ಏನು ಹೇಳಬೇಕು ಎನ್ನುವುದು ಅರ್ಥವಾಗುತ್ತಿಲ್ಲ” ಎಂದಿದ್ದರು.

ಮಕ್ಕಳ ನೆನಪಿನಲ್ಲೇ ನನ್ನ ಪತ್ನಿ ಪ್ರಾಣ ಬಿಟ್ಟರು

“ಮೊದಲ ಮಗಳನ್ನು ಮದುವೆ ಮಾಡಿಕೊಟ್ಟ ಬಳಿಕ ಆಕೆ ಅಮೆರಿಕಾದಲ್ಲಿ ಇದ್ದಳು. ಆಗಲೇ ಆಕೆ ಅಲ್ಲಿ ನಿತ್ಯಾನಂದ ಸ್ವಾಮೀಜಿ ಪ್ರವಚನ ಕೇಳಲು ಹೋಗುತ್ತಿದ್ದಳು. ಅಕ್ಕನನ್ನು ನೋಡಲು ಹೋಗುತ್ತಿದ್ದ ರಂಜಿತಾ ಕೂಡ ಆಕೆಯ ಜತೆ ಆಶ್ರಮಕ್ಕೆ ಹೋಗಲು ಆರಂಭಿದಳು. ಮುಂದೆ ಅವರಿಬ್ಬರೂ ಗಂಡಂದಿರಿಗೆ ಡಿವೋರ್ಸ್ ಕೊಟ್ಟು ಆಶ್ರಮ ಸೇರಿದರು. ಇವತ್ತಿಗೂ ನನ್ನ ಮಕ್ಕಳು ಆಶ್ರಮದಲ್ಲಿಯೇ ಇದ್ದಾರೆ. ಇಂದಿಗೂ ನನ್ನ ಇಬ್ಬರೂ ಮಕ್ಕಳು ನನಗೆ ಕರೆ ಮಾಡುವುದಿಲ್ಲ. ನಮ್ಮ 3ನೇ ಮಗಳು ನನ್ನನ್ನು ನೋಡಿಕೊಳ್ಳುತ್ತಿದ್ದಾಳೆ. ಇಬ್ಬರು ಮಕ್ಕಳ ನೆನಪಿನಲ್ಲೇ ನನ್ನ ಪತ್ನಿ ಪ್ರಾಣ ಬಿಟ್ಟರುʼʼ ಎಂದು ಅಶೋಕ್‌ ಕುಮಾರ್‌ ಭಾವುಕರಾಗಿದ್ದರು.

Exit mobile version