Site icon Vistara News

Actor Nagbhushan: 175 ಥಿಯೇಟರ್‌ಗಳಲ್ಲಿ ಟಗರು ಪಲ್ಯ ಮೆರವಣಿಗೆ; ಅಕ್ಟೋಬರ್ 27ಕ್ಕೆ ತೆರೆಗೆ!

Tagaru Palya Team

ಬೆಂಗಳೂರು: ಡಾಲಿ ಧನಂಜಯ್ ನಿರ್ಮಾಣದ ʻಟಗರು ಪಲ್ಯʼ ಚಿತ್ರದ ಪ್ರಚಾರ ಶುರು ಆಗಿದೆ. ಇದೇ ವಾರವೇ ಸಿನಿಮಾ ರಿಲೀಸ್ ಆಗುತ್ತಿದೆ. ನಿರ್ಮಾಪಕ ಧನಂಜಯ್ (Actor Nagbhushan) ಹಾಗೂ ಇಡೀ ಚಿತ್ರತಂಡ ಮಾಧ್ಯಮದವರೊಟ್ಟಿಗೆ ಸಾಕಷ್ಟು ವಿಷಯ ಹಂಚಿಕೊಂಡಿದೆ.

ವಿತರಕ ಕಾರ್ತಿಕ್ ಗೌಡ ಮಾತನಾಡಿ, ʻʻ45 ದಿನ ಮೊದಲೇ ಸಿನಿಮಾ ತೋರಿಸಿದ್ದರು. ಬಡವ ರಾಸ್ಕಲ್ ಕೂಡ‌ ರಿಲೀಸ್‌ಗೂ ಮುನ್ನ ಎರಡು ಮೂರು ತಿಂಗಳು ಮೊದಲೇ ತೋರಿಸಿದ್ದರು. ವಾಸುಕಿ ಆಗ ಒಂದು ಮಾತು ಹೇಳಿದ್ದರು. ಒಟಿಟಿ ನೋಡಿ ನಮ್ಮಲ್ಲೇ ಈ ರೀತಿ ಸಿನಿಮಾ ಬರಲ್ಲ ಅಂತಾರೆ. ಇದು ಎಲ್ಲರ ಮೆಚ್ಚುಗೆಗೆ ಸೇರುವ ಸಿನಿಮಾ. ಸಂಪ್ರದಾಯ, ಕನ್ನಡ ಭಾಷೆ ಎಲ್ಲವೂ ಚಿತ್ರದಲ್ಲಿ ಚೆನ್ನಾಗಿದೆ. ಪ್ರತಿ ಪಾತ್ರವೂ ಅದ್ಭುತವಾಗಿ ನಟಿಸಿದ್ದಾರೆ. ಮನರಂಜನೆ ಜತೆಗೆ ನಮ್ಮ ರಾಜ್ಯದ ಒಂದು ಭಾಗದ ಸಂಪ್ರದಾಯವನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ನಾವು ಈ ವರ್ಷದಲ್ಲಿ ವಿತರಣೆ ಮಾಡ್ತಿರುವ ಬೆಸ್ಟ್ ಸಿನಿಮಾ ಎಂದರು. 175 ಥಿಯೇಟರ್ ನಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಸಿಎಂ ಟಗರು ಪಲ್ಯ ನೋಡಲು ಬರುತ್ತಾರೆʼʼ ಎಂದರು.

ನಿರ್ಮಾಪಕ ಧನಂಜಯ್ ಮಾತನಾಡಿ, “ಕೆಲವೊಂದು ಯಾಕೆ ಘಟಿಸುತ್ತದೆ. ಹೇಗೆ ಘಟಿಸುತ್ತದೆ ಗೊತ್ತಿಲ್ಲ. ಬಡವ ರಾಸ್ಕಲ್ ಪ್ರೊಡಕ್ಷನ್ ಮಾಡಿದ್ವಿ. ಹೆಡ್ ಬುಷ್ ಪ್ರೊಡಕ್ಷನ್ ಮಾಡಿದ್ವಿ. ಕಳೆದ ವರ್ಷ ನನ್ನ ಬರ್ತ್ ಡೇಯಲ್ಲಿ ಕಾರ್ತಿಕ್ ಜತೆ ಚರ್ಚೆ ಮಾಡುವಾಗ ಪ್ರೊಡಕ್ಷನ್ ಕಂಟಿನ್ಯೂ ಮಾಡಬೇಕು.‌ ಒಳ್ಳೆ ಕಥೆ ನಿರ್ಮಾಣ ಮಾಡಬೇಕು ಎಂದಾಗ. ಆಗ ಆಡಿಯನ್ಸ್‌ಗೆ ಪ್ರಾಮಿಸ್ ಮಾಡಿ. ಹೊಸಬರಿಗೆ ವರ್ಷಕ್ಕೆ ಒಂದು ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು. ಅವತ್ತು ಅವರು ಹೇಳಿದಾಗ ನಿಜ ಅನಿಸಿತು. ಅದನ್ನು ನನ್ನ ಹುಟ್ಟುಹಬ್ಬದಲ್ಲಿ ಅನೌನ್ಸ್ ಮಾಡಿದೆ. ಸಿನಿಮಾಗೆ ಒಂದೊಳ್ಳೆ ಕಥೆಗೆ ಏನ್ ಬೇಕು ಅದೆಲ್ಲವನ್ನೂ ಟಗರು ಪಲ್ಯಗೆ ಒದಗಿಸಿದ್ದೇವೆ. ನಮ್ಮ ಸಂಸ್ಥೆ ಕಡೆಯಿಂದ ನಾವೆಲ್ಲರೂ ಸೇರಿ ಒಂದೊಳ್ಳೆ ಪ್ರಾಡಕ್ಟ್ ಹೆಮ್ಮೆಯಿಂದ ಅರ್ಪಿಸುತ್ತಿದ್ದೇವೆ. ನಮ್ಮಗೆ ತುಂಬಾ ಕನೆಕ್ಟ್ ಆಗುವ ಸಬ್ಜೆಕ್ಟ್. ಬೇರೆ ಭಾಷೆ ಸಿನಿಮಾ ನೋಡಿದಾಗ ನಮ್ಮಲ್ಲಿ ಬರಬೇಕು ಅಂತೀವಲ್ಲ‌. ಆ ರೀತಿ ಕಥೆ ಇದು. ಬಡವರ ಮನೆ ಮಕ್ಕಳು ಬೆಳೆಯಬೇಕು ಎಂದು ನಾನು ಯಾವತ್ತೂ ನನಗೋಸ್ಕರ ಹೇಳಿಕೊಂಡಿಲ್ಲ. ಅದು ಬೇರೆಯವರಿಗೆ ಸ್ಫೂರ್ತಿ ಆಗಲಿ ಎಂದು. ಯಾವುದೇ ಬ್ಯಾಗ್ ಗ್ರೌಂಡ್ ಇಲ್ಲದೇ ಬಂದವರು ನಮ್ಮ ಪ್ರೊಡಕ್ಷನ್ ನಿಂದ ಮೂವರು ಜನ ನಿರ್ದೇಶಕರು ಬಂದಿದ್ದಾರೆ ಅನ್ನೋದು ನಮ್ಮ ಹೆಮ್ಮೆ ಎಂದರು.

ಇದನ್ನೂ ಓದಿ: Actor Nagabhushan: ರಕ್ಷಿತ್‌ ಶೆಟ್ಟಿ ಸಿನಿಮಾ ಬಿಡುಗಡೆ ದಿನವೇ ನಾಗಭೂಷಣ್‌ ಅಭಿನಯದ ʻಟಗರು ಪಲ್ಯʼ ರಿಲೀಸ್‌!

ನಟಿ ತಾರಾ ಅನುರಾಧಾ ಮಾತನಾಡಿ,ʻʻ ದಸರಾ ಹಬ್ಬ ಆದ ತಕ್ಷಣ ಸಖತ್ ಊಟ ಅಂದರೆ ಅದು ಟಗರು ಪಲ್ಯ. ನಿರ್ಮಾಪಕನಿಗೆ ವಯಸ್ಸು ಮುಖ್ಯ ಅಲ್ಲ. ಅವನ ಕೆಲಸ ಮುಖ್ಯ. ಡಾಲಿಗೆ ಇಡೀ ತಂಡದ ಪರವಾಗಿ ಧನ್ಯವಾದ. ಉಮೇಶ್ ಎಲ್ಲಿಯೂ ತಾನೊಬ್ಬ ಹೊಸ ನಿರ್ದೇಶಕ ಅನಿಸದೇ ಇರುವಷ್ಟರ ಮಟ್ಟಿಗೆ ಕೆಲಸ ಮಾಡಿದ್ದಾರೆ. ಅಮೃತಾ ಹೊಸ ಹುಡುಗಿ ಅನಿಸುವುದಿಲ್ಲ. ತುಂಬಾ ಚೆನ್ನಾಗಿ ನಟಿಸಿದ್ದಾಳೆ. ನಾಗು ಒಳ್ಳೆ ಆಕ್ಟರ್. ನಮ್ಮ ಅದೃಷ್ಟ ಏನೂ ನಾನು ರಘು ಮಾಡಿದ ಎಲ್ಲ ಚಿತ್ರಗಳು ಚೆನ್ನಾಗಿ ಆಗುತ್ತಿವೆʼʼ ಎಂದರು.

ಉಮೇಶ್‌ ಕೃಪ ಆಕ್ಷನ್‌ ಕಟ್‌ ಹೇಳಿರೋ ‘ಟಗರು ಪಲ್ಯ’ ಇದೇ ಶುಕ್ರವಾರ ತೆರೆ ಮೇಲೆ ಮೂಡಿ ಬರಲಿದೆ. ಹೀಗಾಗಿ ಟಗರು ಪಲ್ಯ ಪ್ರಮೋಷನ್‌ಗಾಗಿ ಗಾಡಿ ಹತ್ತಿ ಹೊರಟಿದ್ದಾರೆ ಡಾಲಿ. ಕ್ಯಾಂಟರ್ ಓಡಿಸಿರೋ ಡಾಲಿ ಊರೂರು ಸುತ್ತಿದ್ದಾರೆ. ಆ ವೀಡಿಯೊ ವೈರಲ್ ಆಗಿದೆ.

ಟಗರು ಪಲ್ಯ ಚಿತ್ರವನ್ನು ಡಾಲಿ ಪಿಕ್ಚರ್ಸ್‌ ಬ್ಯಾನರ್‌ನಡಿ ನಟ ಧನಂಜಯ್‌ ನಿರ್ಮಿಸಿದ್ದಾರೆ. ಉಮೇಶ್‌ ಕೃಪ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಈ ಚಿತ್ರದ ಮೂಲಕ ನೆನಪಿರಲಿ ಪ್ರೇಮ್‌ ಪುತ್ರಿ ಅಮೃತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಅಮೃತಾ ತಂದೆ ಪಾತ್ರದಲ್ಲಿ ರಂಗಾಯಣ ರಘು ಹಾಗೂ ತಾಯಿ ಪಾತ್ರದಲ್ಲಿ ತಾರಾ ಅನುರಾಧಾ ನಟಿಸಿದ್ದಾರೆ. ಟ್ರೇಲರ್‌ ನೋಡಿ ಸಿನಿಪ್ರಿಯರು ಕೂಡ ಮೆಚ್ಚಿದ್ದಾರೆ. ಅಕ್ಟೋಬರ್‌ 27 ರಂದು ಸಿನಿಮಾ ತೆರೆ ಕಾಣುತ್ತಿದೆ. ಚಿತ್ರದಲ್ಲಿ ಇಕ್ಕಟ್‌ ಖ್ಯಾತಿಯ ನಾಗಭೂಷಣ್‌, ಮೈಸೂರು ಆರ್ಕೆಸ್ಟ್ರಾ ಖ್ಯಾತಿಯ ಪೂರ್ಣಚಂದ್ರ, ವೈಜನಾಥ್‌ ಬಿರಾದಾರ್‌, ಚಿತ್ರಾ ಶೆಣೈ, ಶ್ರೀನಾಥ್‌ ವಸಿಷ್ಠ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ವಾಸುಕಿ ವೈಭವ್‌ ಸಂಗೀತ ನೀಡಿದ್ದು ಅವರೂ ಕೂಡ ಒಂದು ಪಾತ್ರದಲ್ಲಿ ನಟಿಸಿದ್ದಾರೆ

Exit mobile version