Actor Nagabhushan: ರಕ್ಷಿತ್‌ ಶೆಟ್ಟಿ ಸಿನಿಮಾ ಬಿಡುಗಡೆ ದಿನವೇ ನಾಗಭೂಷಣ್‌ ಅಭಿನಯದ ʻಟಗರು ಪಲ್ಯʼ ರಿಲೀಸ್‌! - Vistara News

South Cinema

Actor Nagabhushan: ರಕ್ಷಿತ್‌ ಶೆಟ್ಟಿ ಸಿನಿಮಾ ಬಿಡುಗಡೆ ದಿನವೇ ನಾಗಭೂಷಣ್‌ ಅಭಿನಯದ ʻಟಗರು ಪಲ್ಯʼ ರಿಲೀಸ್‌!

Actor Nagabhushan ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ಕೂಡ ಅ.27ರಂದೇ ರಿಲೀಸ್‌ ಆಗುತ್ತಿದೆ. ವರದಿಗಳ ಪ್ರಕಾರ ಚಿತ್ರತಂಡ ಸಿನಿಮಾವನ್ನು ಮುಂದೂಡಲಿದೆ ಎನ್ನಲಾಗಿದೆ. ಅಂದುಕೊಂಡಂತೆ ಅದೇ ದಿನ ಸಿನಿಮಾ ರಿಲೀಸ್‌ ಆದರೆ ಇವರೆಡೂ ಸಿನಿಮಾಗಳು ಕ್ಲ್ಯಾಶ್‌ ಆಗಲಿವೆ.

VISTARANEWS.COM


on

tagaru palya kannada movie
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಇಕ್ಕಟ್, ಬಡವ ರಾಸ್ಕಲ್ ಸಿನಿಮಾಗಳ ಖ್ಯಾತಿಯ ನಟ ನಾಗಭೂಷಣ್ (Actor Nagabhushan) ಹಾಗೂ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಟಿಸಿರುವ ʻಟಗರು ಪಲ್ಯʼ ಬಿಡುಗಡೆ ದಿನಾಂಕ ಪ್ರಕಟಗೊಂಡಿದೆ. ಇದೇ ಅಕ್ಟೋಬರ್‌ 27ರಂದು ಸಿನಿಮಾ ತೆರೆ ಕಾಣುತ್ತಿದೆ. ಆಗಸ್ಟ್‌ 17ರಂದು ನಾಗಭೂಷಣ್ ಬರ್ತ್‌ಡೇ ಅಂಗವಾಗಿ ʻಟಗರು ಪಲ್ಯʼ ಸಿನಿಮಾ ಬಳಗ ಟೈಟಲ್ ಟ್ರ್ಯಾಕ್ ಅನಾವರಣ ಮಾಡಿತ್ತು. ಇದರ ಬೆನ್ನಲ್ಲೇ ಹೊಸ ಸುದ್ದಿಯನ್ನು ಹಂಚಿಕೊಂಡಿದೆ. ಆದರೆ ಈ ಸಿನಿಮಾ ಜತೆಗೆ ರಕ್ಷಿತ್‌ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ಕೂಡ ಅಂದೇ ಬಿಡುಗಡೆಯಾಗುತ್ತಿದೆ.

‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ಕೂಡ ಅ.27ರಂದೇ ರಿಲೀಸ್‌ ಆಗುತ್ತಿದೆ. ವರದಿಗಳ ಪ್ರಕಾರ ಚಿತ್ರತಂಡ ಸಿನಿಮಾವನ್ನು ಮುಂದೂಡಲಿದೆ ಎನ್ನಲಾಗಿದೆ. ಅಂದುಕೊಂಡಂತೆ ಅದೇ ದಿನ ಸಿನಿಮಾ ರಿಲೀಸ್‌ ಆದರೆ ಇವರೆಡೂ ಸಿನಿಮಾಗಳು ಕ್ಲ್ಯಾಶ್‌ ಆಗಲಿವೆ.

ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ನಿರ್ಮಿಸುತ್ತಿರುವ ಮೂರನೇ ಚಿತ್ರ ಟಗರು ಪಲ್ಯ. ಯುವ ನಿರ್ದೇಶಕ ಉಮೇಶ್ ಕೆ ಕೃಪಾ ನಿರ್ದೇಶನದ ಚೊಚ್ಚಲ ಚಿತ್ರವಾಗಿರುವ ʼಟಗರು ಪಲ್ಯʼ ಮೂಲಕ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ನಾಗಭೂಷಣ್ ನಾಯಕನಾಗಿ ನಟಿಸಿದ್ದಾರೆ. ಮಂಡ್ಯ ಹಳ್ಳಿಗಳಲ್ಲಿ ನಡೆಯುವ ಆಚರಣೆಯ ಸುತ್ತ ಇಡೀ ಸಿನಿಮಾವನ್ನು ನಿರ್ದೇಶಕ ಉಮೇಶ್ ಕೆ. ಕೃಪಾ ಕಟ್ಟಿಕೊಟ್ಟಿದ್ದಾರೆ. ಹಿರಿಯ ಕಲಾವಿದರಾದ ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾ ಬಳಗವಿರುವ “ಟಗರು ಪಲ್ಯ” ಗಮನ ಸೆಳೆದಿದೆ.

ಇದನ್ನೂ ಓದಿ: Actor Nagabhushan: ನಾಗಭೂಷಣ್ ಜನುಮದಿನದಂದೇ ’ಟಗರು ಪಲ್ಯ’ ಟೈಟಲ್ ಟ್ರ್ಯಾಕ್ ರಿಲೀಸ್!

ಎಸ್ ಕೆ ರಾವ್ ಕ್ಯಾಮೆರಾ ಹಿಡಿದಿದ್ದಾರೆ. ಟಗರು ಪಲ್ಯ’ ಚಿತ್ರದಲ್ಲಿ ಅಮೃತಾ ಪ್ರೇಮ್ ಹಳ್ಳಿ ಹುಡುಗಿ ಪಾತ್ರವನ್ನು ನಿಭಾಯಿಸಿದ್ದಾರೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು, ವರ್ಕ್ ಶಾಪ್ ಮೂಲಕ ಸಾಕಷ್ಟು ಕಲಿತು ಹಳ್ಳಿ ಹುಡುಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಂಡ್ಯ ಭಾಗದ ಕಥೆಯನ್ನೊಳ್ಳಗೊಂಡ ಈ ಚಿತ್ರದಲ್ಲಿ ಅಲ್ಲಿನ ಸೊಗಡಿನ ಭಾಷೆ ಕಲಿತು ಅಷ್ಟೇ ಚೆನ್ನಾಗಿ ಅಭಿನಯಿಸಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Actor Darshan: ದಚ್ಚು ಪರಿಸ್ಥಿತಿಗೆ ಪವಿತ್ರಾ ಕಾರಣ ಅನ್ನೋಕಾಗಲ್ಲ; ದರ್ಶನ್‌ಗೆ ಕೌನ್ಸೆಲಿಂಗ್‌ ಅಗತ್ಯ ಇಲ್ಲ ಎಂದ ಖ್ಯಾತ ಗಾಯಕಿ!

Actor Darshan: ಹಲವು ನಟ ನಟಿಯರು ದರ್ಶನ್‌ ಪರ ಧ್ವನಿ ಎತ್ತುತ್ತಿದ್ದಾರೆ. ಈ ಸಾಲಿಗೆ ಗಾಯಕಿ ಡಾ.ಶಮಿತಾ ಮಲ್ನಾಡ್ (dr shamitha malnad) ಸೇರ್ಪಡೆಯಾಗಿದ್ದರು. ಇದೀಗ ವಿಸ್ತಾರ ಜತೆ ಶಮಿತಾ ಮಾತನಾಡಿ ʻʻವಿಜಯಲಕ್ಷ್ಮಿ ಹಾಗೂ ದರ್ಶನ್‌ ನಡುವೆ ಬೆಟ್ಟದಷ್ಟು ಪ್ರೀತಿ ಇದೆ. ಪ್ರೀತಿಸಿ ಮದುವೆ ಆದ ನಂತರ ವಿಜಯಲಕ್ಷ್ಮಿ ಅವರು ದರ್ಶನ್‌ಗಾಗಿ ತಮ್ಮ ಕರಿಯರ್‌ನೇ ತ್ಯಾಗ ಮಾಡಿದ್ದಾರೆʼʼಎಂದು ಹೇಳಿದ್ದಾರೆ.

VISTARANEWS.COM


on

Actor Darshan does not need counseling says by shamitha malnad
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಪ್ಪನ ಅಗ್ರಹಾರದಲ್ಲಿ ಇದ್ದಾರೆ ದರ್ಶನ್‌. ದರ್ಶನ್ ಪರ ಒಲವು ತೋರಿದವರ (Actor Darshan) ಸಂಖ್ಯೆ ತೀರಾ ಕಡಿಮೆ. ಹಲವು ನಟ ನಟಿಯರು ದರ್ಶನ್‌ ಪರ ಧ್ವನಿ ಎತ್ತುತ್ತಿದ್ದಾರೆ. ಈ ಸಾಲಿಗೆ ಗಾಯಕಿ ಡಾ.ಶಮಿತಾ ಮಲ್ನಾಡ್ (dr shamitha malnad) ಸೇರ್ಪಡೆಯಾಗಿದ್ದರು. ಇದೀಗ ವಿಸ್ತಾರ ಜತೆ ಶಮಿತಾ ಮಾತನಾಡಿ ʻʻವಿಜಯಲಕ್ಷ್ಮಿ ಹಾಗೂ ದರ್ಶನ್‌ ನಡುವೆ ಬೆಟ್ಟದಷ್ಟು ಪ್ರೀತಿ ಇದೆ. ಪ್ರೀತಿಸಿ ಮದುವೆ ಆದ ನಂತರ ವಿಜಯಲಕ್ಷ್ಮಿ ಅವರು ದರ್ಶನ್‌ಗಾಗಿ ತಮ್ಮ ಕರಿಯರ್‌ನೇ ತ್ಯಾಗ ಮಾಡಿದ್ದಾರೆʼʼಎಂದು ಹೇಳಿದ್ದಾರೆ.

ಗಾಯಕಿ ಶಮಿತಾ ಮಲ್ನಾಡ್ ಮಾತನಾಡಿ ʻʻದರ್ಶನ್ ಅರೆಸ್ಟ್ ಆದ ನಂತರ ವಿಜಯಲಕ್ಷ್ಮಿ ಅವರನ್ನು ನಾನು ಭೇಟಿ ಮಾಡಿದ್ದೆ. ವಿಜಯಲಕ್ಷ್ಮಿ ಅವರು ಗಟ್ಟಿಗಿತ್ತಿ, ಇಂತ ಸಂದರ್ಭದಲ್ಲೂ ಮೆಂಟಲಿ ತುಂಬಾ ಸ್ಟ್ರಾಂಗ್ ಆಗಿದ್ದಾರೆ. ಪಕ್ಕಾ ಫ್ಯಾಮಿಲಿ ವಿಮೆನ್ ಅವರು. ವಿಜಯಲಕ್ಷ್ಮಿ ಹಾಗೂ ದರ್ಶನ್‌ ನಡುವೆ ಬೆಟ್ಟದಷ್ಟು ಪ್ರೀತಿ ಇದೆ. ಪ್ರೀತಿಸಿ ಮದುವೆ ಆದ ನಂತರ ವಿಜಯಲಕ್ಷ್ಮಿ ಅವರು ದರ್ಶನ್‌ಗಾಗಿ ತಮ್ಮ ಕರಿಯರ್‌ನೇ ತ್ಯಾಗ ಮಾಡಿದ್ದಾರೆ. ವಿಜಯಲಕ್ಷ್ಮಿ ಸಾಮಾನ್ಯ ಹೆಣ್ಣಲ್ಲ, ಆಕೆಯ ಸ್ಟ್ಯಾಂಡರರ್ಡ್‌ಗೆ ಜಾಬ್ ಆಫರ್ ಬಂದಿದ್ದು ರಿಜೆಕ್ಟ್ ಮಾಡಿದ್ಲು. ಗಂಡ, ಮಗ ಇದೇ ಆಕೆಯ ಪ್ರಪಂಚʼʼಎಂದರು.

ದರ್ಶನ್ ಕುರಿತು ಶಮಿತಾ ಮಾತನಾಡಿ ʻʻದರ್ಶನ್ ಅವರನ್ನು ಮೊದಲು ನೋಡಿದ್ದು ಮೆಜೆಸ್ಟಿಕ್ ಸಿನಿಮಾದ ಚಿತ್ರದ ಸೆಟ್‌ನಲ್ಲಿ. ಈ ಹುಡುಗ ಯಾರು, ಇಷ್ಟೊಂದ್ ಹೈಟ್ ಇದಾರೆ ಅನ್ಕೊಂಡಿದೆ. ತುಂಬಾ ಕಷ್ಟ ಪಟ್ಟು ಕಣ್ಣೀರು ಹಾಕಿ ಮೇಲೆ ಬಂದ ವ್ಯಕ್ತಿ. ಸಾರಥಿ ಸಿನಿಮಾದಲ್ಲಿ ನನ್ನ ಕಂಠದ ಎರಡೂ ಟೈಟಲ್ ಟ್ರ್ಯಾಕ್ ಸೆಲೆಕ್ಟ್ ಮಾಡಿದ್ದೆ ದರ್ಶನ್.ಅಂದಿನಿಂದಲೂ ದರ್ಶನ್ ಹಾಗು ನನ್ನ ನಡುವೆ ಅಣ್ಣ ತಂಗಿ ಸಂಬಂಧ ಬೆಳೆದಿದೆ. ವಿಜಯಲಕ್ಷ್ಮಿ ನನ್ನ ಆಪ್ತ ಸ್ನೇಹಿತೆ. ದರ್ಶನ್ ಈ ಪರಿಸ್ಥಿತಿಗೆ ಪವಿತ್ರಾ ಗೌಡ ಕಾರಣ ಅಂತ ದೂಷಿಸೋಕೆ ಆಗಲ್ಲ. ನಾನು ಡಾಕ್ಟರ್ ಆಗಿ ಹೇಳ್ತಿದೀನಿ ದರ್ಶನ್‌ಗೆ ಕೌನ್ಸೆಲಿಂಗ್‌ ಅಗತ್ಯ ಇಲ್ಲ. ಹಾಗೆ ನೋಡುದ್ರೆ ಪ್ರತಿ ವ್ಯಕ್ತಿಗೂ ಕೌನ್ಸೆಲಿಂಗ್‌ ಅಗತ್ಯವಿದೆ. ಕಷ್ಟ ಬಂದಾಗ ರಕ್ತಸಂಬಂಧಿಗಳು ದೂರ ಆಗ್ತಾರೆʼʼಎಂದರು.

ಇದನ್ನೂ ಓದಿ: Actor Darshan: ʻಚಿತ್ರಾಲ್ʼ ಬಿಕಿನಿ ಮಾಡೆಲ್‌, ಕೆಟ್ಟ ಕಮೆಂಟ್‌ ಮಾಡಬೇಡಿ ಎಂದ ವಿನಯ್ ಗೌಡ !

ಇದಕ್ಕೂ ಮುಂಚೆ ಶಮಿತಾ ಅವರು ಪೋಸ್ಟ್‌ನನಲ್ಲಿ ʻʻʻʻಮನಸೇ ಮನಸೇ,,, ಸೋಲೋ ಗೆಲುವೋ, ನೋವೋ ನಲಿವೋ, ಏಳೋ ಬೀಳೋ,,ಕಲ್ಲೋ ಮುಳ್ಳೋ ಜೀವನದ ಹಾದಿ ಸುಲಭವಲ್ಲ.. ಯಶಸ್ಸಿನ ಹಾದಿ ಸುಗಮವಲ್ಲ… ಹಸಿವು, ಅವಮಾನ, ನೋವುಂಡು ಯಶಸ್ಸು ಗಳಿಸಿದ ಹೆಸರು
ದರ್ಶನ್ ತೂಗುದೀಪ.. ಸಹಚರ, ಗೆಳೆಯ, ಸೋದರ, ಎಷ್ಟೋ ಜನರಿಗೆ ಸಹಾಯ ಹಸ್ತ ನೀಡಿ ಜೀವನವಾಗಿದ್ದವರು, ಒಳ್ಳೆ ಕೆಲಸಗಳಿಗೆ ಕೈ ಚಾಚಿದ್ದವರು,, ಜಾರಿ ಬಿದ್ದಾಗ ಆಳಿಗೊಂದು ಕಲ್ಲಾಗೋದು ಬೇಡಾ…. ಅವರ ಅಭಿನಯ, ಭೇದವಿಲ್ಲದ ಪ್ರೀತಿ, ಸರಳತೆ, ಸ್ನೇಹ ಅಭಿಮಾನದ ಸಿಹಿ ಉಂಡವರು ನಾವು, ಅಭಿಮಾನಿಯಾಗಿ ಸಿನಿಮಾ ಅಭಿನಯ ನೋಡಿ ಅತ್ತು, ನಕ್ಕು, ಚಪ್ಪಾಳೆ ಶಿಳ್ಳೆ ಹೊಡೆದು ಸಂಭ್ರಮಿಸಿದವರು ನಾವು,, ಆರಡಿ ದೇಹವ ಮೂರಡಿ ಬಗ್ಗಿಸಿ ತಗ್ಗಿ ನಮ್ಮೊಂದಿಗೆ ವಿನಯದಿ ಮಾತಾಡುವಾಗ ಹೆಮ್ಮೆ ಪಟ್ಟವರು ನಾವು,,, ತಪ್ಪಾಗಿದೆಯೋ ಇಲ್ಲವೋ ಏನಾಗಿದೆ ಎಂದು ಅರಿಯದವರು ನಾವು.. ಹಣಕ್ಕೆ ಬಗ್ಗದೆ ಪ್ರೀತಿಗೆ ಬಗ್ಗಿದವರು ಅವರು,,, ತಪ್ಪಾಗಿದ್ದರೆ ನ್ಯಾಯಾಂಗವಿದೆ, ಕಾನೂನಿದೆ,,,
ಶಿಕ್ಷೆ ಇದೇʼʼಎಂದು ಬರೆದುಕೊಂಡಿದ್ದರು.

ʻʻ ಅಕಾಲ ನಿಧನರಾದ ಶ್ರೀ ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ,,, ಅವರ ಕುಟುಂಬ ಹಾಗೂ ಹಲವು ನೊಂದ ಕುಟುಂಬಗಳಿಗೆ ನಮ್ಮೆಲ್ಲರ ಸಾಂತ್ವನ ,, ನೆರವು, ಆಸರೆ, ನ್ಯಾಯ ಬೇಕಿದೆ,, ಹಾಗೆ ಸೋಶಿಯಲ್ ಮೀಡಿಯಾವನ್ನು ದಯವಿಟ್ಟು ಒಳಿತಿಗೆ ಉಪಯೋಗಿಸಿ,, ಎಲ್ಲರ ಮೇಲೆ ಗೌರವವಿರಲಿ,, ಕಾಮೆಂಟ್ಸ್, ಪೋಸ್ಟ್, ಮೇಲೆ ಹಿಡಿತವಿರಲಿ,,
ದರ್ಶನ್ ಅಣ್ಣಾ,, ಕನ್ನಡದ ಕುಟುಂಬ,, ಚಲನಚಿತ್ರದ ಕುಟುಂಬ ನಮ್ಮ ಕುಟುಂಬ,, ಕಲಾವಿದರ ಕುಟುಂಬ,, ಏನೇ ಆದರೂ ನಮ್ಮ ಮನೆಯವರ ಜೊತೆ ನಾವು ಯಾವಾಗ್ಲೂ ಜೊತೆ ಇರುತ್ತೇವೆ,, ಅಲ್ಲವೇ??? ಹಾಗೆ ಪ್ರೀತಿ ಅಭಿಮಾನ ಬದಲಾಗದು,, ತಪ್ಪು ಯಾರು ಮಾಡಿದ್ದರೂ ಶಿಕ್ಷೆ ಆಗಬೇಕು .. ನ್ಯಾಯ ಎಲ್ಲರಿಗೂ ಒಂದೇ,,, ದರ್ಶನ್ ಅವರನ್ನು ಪ್ರೀತಿಸುವ ಎಲ್ಲರಿಗೂ ನೋವಾಗಿದೆ,,ಸಂಕಟವಾಗಿದೆ,, ಇದು ಸಂಯಮ, ತಾಳ್ಮೆ, ಪ್ರಾರ್ಥನೆಯ ಸಮಯ,,
ಸಿಟ್ಟು, ಕೋಪ, ಅಸಹನೆ, ಹತಾಶೆ ದರ್ಶನ್ ಹಾಗೂ ಅವರ ಕುಟುಂಬಕ್ಕೆ ಇನ್ನಷ್ಟು ತೊಂದರೆ ಒಡ್ಡಬಹುದು,,
ಚಿನ್ನ ಕುದಿವ ಕುಲುಮೆಯಲ್ಲಿದೆ, ಕಲ್ಮಶ ಕಳೆದು ಅಪರಂಜಿ ಆಗಿ ಶುದ್ಧವಾಗಿ ಬರಲು ಸಮಯ ಬೇಕು,,, ಕಾಯೋಣ ,, ಸಮಾಧಾನದಿಂದ..ದರ್ಶನ್ ಅಣ್ಣಾ ಅವರಿಗಾಗಿ ಪ್ರಾರ್ಥಿಸೋಣ, ಹಾರೈಸೋಣ…ʼʼಎಂದು ಬರೆದುಕೊಂಡಿದ್ದರು.

Continue Reading

ಕಾಲಿವುಡ್

Kanguva vs Alia Bhatt: ಕಂಗುವ- ಮಾರ್ಟಿನ್‌ ಜತೆ ಆಲಿಯಾ ಭಟ್‌ ಸಿನಿಮಾ ಕೂಡ ಕ್ಲ್ಯಾಶ್‌!

Kanguva vs Alia Bhatt: ಶಿವ-ನಿರ್ದೇಶನದ ಈ ಸಿನಿಮಾ ಅಕ್ಟೋಬರ್ 10 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಕಂಗುವಾದಲ್ಲಿ ಬಾಲಿವುಡ್ ನಟಿ ದಿಶಾ ಪಟಾನಿ ನಟಿಸಿದ್ದಾರೆ. ಈ ಸಿನಿಮಾ 38 ಜಾಗತಿಕ ಭಾಷೆಗಳಲ್ಲಿ 3D ನಲ್ಲಿ ಬಿಡುಗಡೆಯಾಗಲಿದೆ.

VISTARANEWS.COM


on

Kanguva vs Alia Bhatt Kanguva finally set a date
Koo

ಬೆಂಗಳೂರು: ಈಗಾಗಲೇ ಸೂರ್ಯ ಅಭಿನಯದ ಕಂಗುವ ಸಿನಿಮಾ (Kanguva vs Alia Bhatt) ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ. ಇದೇ ಸಮಯಕ್ಕೆ ಅಂದರೆ ಆಲಿಯಾ ಭಟ್ ಅವರ ʻಜಿಗ್ರಾʼ ಸಿನಿಮಾ ಕೂಡ ರಿಲೀಸ್‌ ಆಗುತ್ತಿದೆ. ಮಾತ್ರವಲ್ಲ ಕನ್ನಡದ ಧ್ರುವ ಸರ್ಜಾ ಅವರ ಮಾರ್ಟಿನ್‌ ಕೂಡ ಬಿಡುಗಡೆಯಾಗುತ್ತಿದೆ. ಈ ಮೂರು ಸಿನಿಮಾಗಳು ಅಕ್ಟೋಬರ್‌ 10ರಂದು ಕ್ಲ್ಯಾಶ್‌ ಆಗುತ್ತಿವೆ.

ಕಂಗುವ- ಮಾರ್ಟಿನ್‌-ಜಿಗ್ರಾ

ಶಿವ-ನಿರ್ದೇಶನದ ಈ ಸಿನಿಮಾ ಅಕ್ಟೋಬರ್ 10 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಕಂಗುವಾದಲ್ಲಿ ಬಾಲಿವುಡ್ ನಟಿ ದಿಶಾ ಪಟಾನಿ ನಟಿಸಿದ್ದಾರೆ. ಈ ಸಿನಿಮಾ 38 ಜಾಗತಿಕ ಭಾಷೆಗಳಲ್ಲಿ 3D ನಲ್ಲಿ ಬಿಡುಗಡೆಯಾಗಲಿದೆ.

ಮೂಲಗಳ ಪ್ರಕಾರ ಅಮೆಜಾನ್‌ ಪ್ರೈಂ ಸಂಸ್ಥೆ ಬರೋಬ್ಬರಿ 80 ಕೋಟಿ ರೂ. ಖರೀದಿ ಮಾಡಿದೆಯಂತೆ. ಇದು ಎಲ್ಲ ಭಾಷೆಯ ಹಕ್ಕುಗಳನ್ನೂ ಒಳಗೊಂಡಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ನಟ ಐದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೆಂಕಟೇರ್, ಅರತಾರ್, ಮಂದಾಂಕರ್, ಮುಕಾತಾರ್ ಮತ್ತು ಪೆರುಮಾನಾಥರ್ ಎಂಬ ಐದು ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ದಿಶಾ ಪಟಾನಿ ಈ ಚಿತ್ರದ ಮೂಲಕ ತಮಿಳಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದರಲ್ಲಿ ಕೋವೈ ಸರಳಾ, ಯೋಗಿ ಬಾಬು, ಆನಂದ್ ರಾಜ್, ರೆಡಿನ್ ಕಿಂಗ್ಸ್ಲಿ, ರವಿ ರಾಘವೇಂದ್ರ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Kalki 2898 AD: ʻಕಲ್ಕಿʼ ಸಿನಿಮಾ ಹಾಡಿ ಹೊಗಳಿದ ರಾಕಿಂಗ್‌ ಸ್ಟಾರ್‌ ಯಶ್‌!

ಅಕ್ಟೋಬರ್‌ 11 ಕ್ಕೆ ಮಾರ್ಟಿನ್‌ ಸಿನಿಮಾ ಬಿಡುಗಡೆ ಆಗಲಿದೆ . ಧ್ರುವ ಸರ್ಜಾ ಅಭಿನಯದ 5ನೇ ಚಿತ್ರ ಮಾರ್ಟಿನ್. ಎ.ಪಿ.ಅರ್ಜುನ್ ನಿರ್ದೇಶನದ ಮಾರ್ಟಿನ್ 5 ಭಾಷೆಯಲ್ಲಿ ರಿಲೀಸ್ ಆಗಲಿದೆ. ಆ ಮೂಲಕ 2024 ರ ಹೈವೋಲ್ಟೇಜ್ ಸಿನಿಮಾ ಇದಾಗಲಿದೆ. ಪೊಗರು ಸಿನಿಮಾ ಬಳಿಕ 3 ವರ್ಷಗಳ ನಂತರ ಬೆಳ್ಳಿತೆರೆ ಮೇಲೆ ಧ್ರುವ ಸರ್ಜಾ ಅವರ ಮತ್ತೊಂದು ಸಿನಿಮಾ ಬಿಡುಗಡೆಯಾಗಲಿದೆ. ಮಾರ್ಟಿನ್ ಚಿತ್ರಕ್ಕೆ ಖ್ಯಾತ ಬಹುಭಾಷಾ ನಟ ಅರ್ಜುನ್‌ ಸರ್ಜಾ ಕಥೆ ಬರೆದಿದ್ದು, ವಾಸವಿ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಉದಯ್ ಕೆ. ಮೆಹ್ತಾ ಈ ಚಿತ್ರ ನಿರ್ಮಿಸಿದ್ದಾರೆ.

ಸತ್ಯ ಹೆಗಡೆ ಛಾಯಾಚಿತ್ರಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ, ರಾಮ್ ಲಕ್ಷ್ಮಣ್ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಚಿತ್ರದ ತಾರಾಬಳಗದಲ್ಲಿ ಅನ್ವೇಶಿ ಜೈನ್, ಜಾರ್ಜಿಯ ಆಂಡ್ರಿಯಾನಿ, ಚಿಕ್ಕಣ್ಣ, ಮಾಳವಿಕ ಅವಿನಾಶ್, ನಿಕ್ತಿನ್ ಧೀರ್, ನವಾಬ್ ಶಾ, ರೋಹಿತ್ ಪಾಠಕ್ ಮುಂತಾದವರಿದ್ದಾರೆ.

ಹಿಂದಿಯಲ್ಲಿ ಆಲಿಯಾ ಭಟ್ ನಟನೆಯ ‘ಜಿಗ್ರಾ’ ಸಿನಿಮಾ ಕೂಡ ಅಕ್ಟೋಬರ್​ನಲ್ಲಿ ಬಿಡುಗಡೆ ಆಗಲಿದೆ. ಇದಲ್ಲದೆ ರಾಜ್​ಕುಮಾರ್ ರಾವ್ ಹಾಗೂ ತೃಪ್ತಿ ದಮ್ರಿ ನಟನೆಯ ‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಹಾಗೂ ಶಾಹಿದ್ ಕಪೂರ್-ಪೂಜಾ ಹೆಗ್ಡೆ ನಟನೆಯ ‘ದೇವ’ ಕೂಡ ಇದೇ ಸಂದರ್ಭದಲ್ಲಿ ಬಿಡುಗಡೆ ಆಗಲಿದೆ.

Continue Reading

ಸಿನಿಮಾ

Varalaxmi Sarathkumar: ಪ್ರಧಾನಿ ಮೋದಿಗೆ ಮದುವೆ ಆಮಂತ್ರಣ ನೀಡಿದ ನಟಿ ವರಲಕ್ಷ್ಮಿ

Varalaxmi Sarathkumar: ವರಲಕ್ಷ್ಮಿ ಅವರು ಇತ್ತೀಚೆಗೆ ಪ್ರಶಾಂತ್ ವರ್ಮಾ ಅವರ ತೇಜ ಸಜ್ಜಾ ಅಭಿನಯದ ತೆಲುಗು ಚಿತ್ರ ʻಹನುಮಾನ್ ಚಿತ್ರದಲ್ಲಿʼ ಕಾಣಿಸಿಕೊಂಡಿದ್ದರು. ಧನುಷ್ ಅವರ ಮುಂಬರುವ ತಮಿಳು ಚಿತ್ರ ʻರಾಯನ್‌ʼನಲ್ಲಿ ನಟಿಸಲು ರೆಡಿಯಾಗಿದ್ದಾರೆ. ʻಶಬರಿʼ ಎಂಬ ತೆಲುಗು ಚಿತ್ರದ ಹೊರತಾಗಿ ಮಲಯಾಳಂ ಚಿತ್ರ ʻಕಲರ್ಸ್ʼನಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ.

VISTARANEWS.COM


on

Varalaxmi Sarathkumar invite PM Narendra Modi for wedding
Koo

ಬೆಂಗಳೂರು: ತಮಿಳು-ತೆಲುಗು ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar) ಅವರು ತಮ್ಮ ಮದುವೆಯ ಆಮಂತ್ರಣವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದರು. ಭಾವಿ ಪತಿ ನಿಕೋಲಾಯ್ ಜತೆ ವರಲಕ್ಷ್ಮಿ ಅವರು ಪ್ರಧಾನಿ ಮೋದಿ ಅವರೊಂದಿಗೆ ಫೋಟೊಗೆ ಪೋಸ್‌ ಕೊಟ್ಟಿದ್ದಾರೆ. ವರಲಕ್ಷ್ಮಿ ಅವರು ಪ್ರಧಾನಿ ಮೋದಿಯವರೊಂದಿಗಿನ ಭೇಟಿಯ ಸೆಲ್ಫಿ ಸೇರಿದಂತೆ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ʻʻನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ ಅವರನ್ನು ಭೇಟಿ ಮಾಡಿ ಮದುವೆಗೆ ಆಮಂತ್ರಿಸಿದೆವು. ಅವರನ್ನು ಆಹ್ವಾನಿಸಿದ್ದು ನಮ್ಮ ಭಾಗ್ಯ. ನಿಮ್ಮ ಬ್ಯುಸಿ ಶೆಡ್ಯೂಲ್‌ನ ಹೊರತಾಗಿಯೂ ನಮ್ಮೊಂದಿಗೆ ಸಮಯ ಕಳೆದಿದ್ದೀರಿ. ನಿಜವಾಗಿಯೂ ಗೌರವ ಇದುʼʼಎಂದು ಬರೆದುಕೊಂಡಿದ್ದಾರೆ. ಈ ಮೊದಲು ರಜನಿಕಾಂತ್, ಅವರ ಪತ್ನಿ ಲತಾ ಮತ್ತು ಮಗಳು ಐಶ್ವರ್ಯಾ ರಜನಿಕಾಂತ್ ಅವರನ್ನು ಭೇಟಿಯಾಗಿ ಕರೆಯೋಲೆ ನೀಡಿದ್ದರು.

ವರಲಕ್ಷ್ಮಿ ಶರತ್‌ಕುಮಾರ್ ಜತೆ ತಂದೆ ಶರತ್‌ಕುಮಾರ್, ತಾಯಿ ಮತ್ತು ಸಹೋದರಿ ಸೇರಿ ಇಡೀ ಕುಟುಂಬವೇ ಜತೆಗೆ ಇತ್ತು. ಬಹುಭಾಷಾ ನಟ ಶರತ್‌ಕುಮಾರ್ (Varalaxmi Sarathkumar) ಅವರ ಪುತ್ರಿ ಮತ್ತು ಕನ್ನಡದ ʻಮಾಣಿಕ್ಯʼ ಸಿನಿಮಾದಲ್ಲಿ ಸುದೀಪ್‌ಗೆ ಜೋಡಿಯಾಗಿದ್ದ ನಟಿ ವರಲಕ್ಷ್ಮಿ ಶರತ್‌ಕುಮಾರ್ ಮುಂಬೈ ಮೂಲದ ಉದ್ಯಮಿ ಜತೆಗೆ 38ನೇ ವಯಸ್ಸಿನಲ್ಲಿ ಎಂಗೇಜ್‌ ಆಗಿದ್ದರು. ಮಾರ್ಚ್ 1ರಂದು ಮುಂಬೈನಲ್ಲಿ ತಮ್ಮ ಪ್ರೀತಿಪಾತ್ರರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜುಲೈ 2ರಂದು ಜೋಡಿ ವಿವಾಹವಾಗಲಿದೆ.

ಇದನ್ನೂ ಓದಿ: Varalaxmi Sarathkumar: ರಜನಿಕಾಂತ್‌ಗೆ ಮದುವೆ ಆಮಂತ್ರಣ ನೀಡಿದ ನಟಿ ವರಲಕ್ಷ್ಮಿ

ವರಲಕ್ಷ್ಮಿ ಮತ್ತು ನಿಕೋಲಾಯ್ ಅವರ ಪ್ರೇಮಕಥೆ!

ನಟ ರಮೇಶ್ ಅವರು ಜೋಡಿಯ ಪ್ರೇಮಕಥೆಯನ್ನು ಬಹಿರಂಗಪಡಿಸಿದ್ದರು. “ನಟಿ ವರಲಕ್ಷ್ಮಿ ಶರತ್‌ಕುಮಾರ್ ಮತ್ತು ಗ್ಯಾಲರಿಸ್ಟ್ ನಿಕೋಲಾಯ್ ಸಚ್‌ದೇವ್ ಅವರು ಮಾರ್ಚ್ 1ರಂದು ಮುಂಬೈನಲ್ಲಿ ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಕಳೆದ 14 ವರ್ಷಗಳಿಂದ ಪರಸ್ಪರ ಪರಿಚಿತರಾದ ವರಲಕ್ಷ್ಮಿ ಮತ್ತು ನಿಕೋಲಾಯ್ ತಮ್ಮ ಪೋಷಕರ ಆಶೀರ್ವಾದದೊಂದಿಗೆ ಉಂಗುರಗಳನ್ನು ಬದಲಾಯಿಸಿಕೊಂಡರು. ಈ ವರ್ಷದ ಕೊನೆಯಲ್ಲಿ ಜೋಡಿ ವಿವಾಹವಾಗಲಿದೆʼʼಎಂದು ಬರೆದುಕೊಂಡಿದ್ದರು.

ನಿಶ್ಚಿತಾರ್ಥ ಸಮಾರಂಭದಲ್ಲಿ, ವರಲಕ್ಷ್ಮಿ ರೇಷ್ಮೆ ಸೀರೆಯಲ್ಲಿ ಮಿಂಚುತ್ತಿದ್ದರು. 2020 ರಲ್ಲಿ ವರಲಕ್ಷ್ಮಿ ಅವರು ಸಿನಿಮಾಗಳನ್ನು ತೊರೆದು ಉದ್ಯಮಿಯೊಬ್ಬರನ್ನು ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿತ್ತು. ಇದಾದ ಬಳಿಕ ನಟಿ ವದಂತಿಗಳನ್ನು ತಳ್ಳಿ ಹಾಕಿದ್ದರು.

ಇನ್ನೇನು ಶೀಘ್ರದಲ್ಲಿಯೇ ಈ ಜೋಡಿಯ ಮದುವೆಯ ದಿನಾಂಕವೂ ಘೋಷಣೆ ಆಗಲಿದೆ. ಈ ಮೊದಲು ವರಲಕ್ಷ್ಮಿ ಶರತ್‌ಕುಮಾರ್, ತಮಿಳು ನಟ ವಿಶಾಲ್ ಅವರನ್ನು ಪ್ರೀತಿಸುತ್ತಿದ್ದಾರೆ ಮತ್ತು ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಕಾಲಿವುಡ್‌ನಲ್ಲಿ ಹರಿದಾಡಿದ್ದವು.

ವರಲಕ್ಷ್ಮಿ ಅವರು ಇತ್ತೀಚೆಗೆ ಪ್ರಶಾಂತ್ ವರ್ಮಾ ಅವರ ತೇಜ ಸಜ್ಜಾ ಅಭಿನಯದ ತೆಲುಗು ಚಿತ್ರ ʻಹನುಮಾನ್ ಚಿತ್ರದಲ್ಲಿʼ ಕಾಣಿಸಿಕೊಂಡಿದ್ದರು. ಧನುಷ್ ಅವರ ಮುಂಬರುವ ತಮಿಳು ಚಿತ್ರ ʻರಾಯನ್‌ʼನಲ್ಲಿ ನಟಿಸಲು ರೆಡಿಯಾಗಿದ್ದಾರೆ. ʻಶಬರಿʼ ಎಂಬ ತೆಲುಗು ಚಿತ್ರದ ಹೊರತಾಗಿ ಮಲಯಾಳಂ ಚಿತ್ರ ʻಕಲರ್ಸ್ʼನಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ.

Continue Reading

ಮಾಲಿವುಡ್

Fahadh Faasil: ಮಲಯಾಳಂ ಸ್ಟಾರ್ ಫಹಾದ್ ಫಾಸಿಲ್ ವಿರುದ್ಧ ದೂರು ದಾಖಲು

Fahadh Faasil: ಎರ್ನಾಕುಲಂನ ಅಂಗಮಾಲಿ ತಾಲೂಕು ಆಸ್ಪತ್ರೆಯ ತುರ್ತು ವಿಭಾಗದಲ್ಲಿ ಪೇಯ್ನ್‌ಕಿಲಿ’ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಆಗ ರೋಗಿಗಳಿಗೆ ತೊಂದರೆಯಾಗಿದೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗ ಶುಕ್ರವಾರ ಕ್ರಮ ಕೈಗೊಂಡಿದೆ.

VISTARANEWS.COM


on

Fahadh Faasil in trouble faces Human Rights Commission action
Koo

ಕೇರಳ: ಮಲಯಾಳಂ ಸ್ಟಾರ್ ಫಹಾದ್ ಫಾಸಿಲ್ (Fahadh Faasil: ಮಲಯಾಳಂ ಸ್ಟಾರ್ ಫಹಾದ್ ಫಾಸಿಲ್ ವಿರುದ್ಧ ದೂರು ದಾಖಲು) ತಮ್ಮ ಸಿನಿಮಾಗಳ ಮೂಲಕ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ಅವರು ನಟ ಮತ್ತು ನಿರ್ಮಾಪಕರಾಗಿ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಫಹಾದ್ ನಿರ್ಮಾಣದ ‘ಪೇಯ್ನ್‌ಕಿಲಿ’ ( movie Painkili) ಚಿತ್ರದ ಚಿತ್ರೀಕರಣ ಕೇರಳದ ಆಸ್ಪತ್ರೆಯಲ್ಲಿ ನಡೆದಿತ್ತು. ಆದರೆ ಚಿತ್ರತಂಡ ಅಲ್ಲಿದ್ದವರಿಗೆ ತೊಂದರೆ ಕೊಟ್ಟ ಕಾರಣ ಮಾನವ ಹಕ್ಕುಗಳ ಆಯೋಗ ( Human Rights Commission) ಫಹಾದ್ ವಿರುದ್ಧ ದೂರು ದಾಖಲಿಸಿಕೊಂಡಿದೆ.

ಎರ್ನಾಕುಲಂನ ಅಂಗಮಾಲಿ ತಾಲೂಕು ಆಸ್ಪತ್ರೆಯ ತುರ್ತು ವಿಭಾಗದಲ್ಲಿ ಪೇಯ್ನ್‌ಕಿಲಿ’ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಆಗ ರೋಗಿಗಳಿಗೆ ತೊಂದರೆಯಾಗಿದೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗ ಶುಕ್ರವಾರ ಕ್ರಮ ಕೈಗೊಂಡಿದೆ.

ವರದಿಗಳ ಆಧಾರದ ಮೇಲೆ ಸ್ವಯಂ ಪ್ರಕರಣವನ್ನು ದಾಖಲಿಸಿಕೊಂಡ ಆಯೋಗದ ಸದಸ್ಯೆ ವಿ ಕೆ ಬೀನಾಕುಮಾರಿ, ಏಳು ದಿನಗಳಲ್ಲಿ ವಿವರಣೆ ವರದಿಯನ್ನು ಸಲ್ಲಿಸುವಂತೆ ಎರ್ನಾಕುಲಂ ಜಿಲ್ಲಾ ವೈದ್ಯಾಧಿಕಾರಿ ಮತ್ತು ಅಂಗಮಾಲಿ ತಾಲೂಕು ಆಸ್ಪತ್ರೆ ಅಧೀಕ್ಷಕರಿಗೆ ಸೂಚಿಸಿದರು.

ಇದನ್ನೂ ಓದಿ: Kalki 2898 AD: ಎರಡನೇ ದಿನವೂ ಒಳ್ಳೆಯ ಗಳಿಕೆ ಕಂಡ  ‘ಕಲ್ಕಿ 2898 ಎಡಿ’ ಸಿನಿಮಾ!

ಎರ್ನಾಕುಲಂ ಸ್ಥಳೀಯ ಮಾಧ್ಯಮ ವರದಿಗಳ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಚಿತ್ರೀಕರಣದ ವೇಳೆ ನಟರು ಸೇರಿದಂತೆ ಸುಮಾರು 50 ಮಂದಿ ಹಾಜರಿದ್ದು, ತುರ್ತು ಚಿಕಿತ್ಸಾ ಕೊಠಡಿಯನ್ನೂ ನಿರ್ಲಕ್ಷಿಸಿ ಶೂಟಿಂಗ್ ಹೆಸರಲ್ಲಿ ಚಿತ್ರತಂಡ ಗಲಾಟೆ ಮಾಡಿದೆ, ದೊಡ್ಡ ದೊಡ್ಡ ಲೈಟ್‌ಗಳನ್ನು ಹಾಕಿದ್ದಾರೆ. ತುರ್ತು ಚಿಕಿತ್ಸಾ ಕೊಠಡಿಯಲ್ಲಿ ಕೆಲವು ನಿರ್ಬಂಧಗಳನ್ನು ಹಾಕಿ ಅಲ್ಲಿನ ಸಿಬ್ಬಂದಿ ಹಾಗೂ ರೋಗಿಗಳಿಗೆ ತೊಂದರೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ವೈದ್ಯರು ಚಿಕಿತ್ಸೆ ಮುಂದುವರಿಸಿರುವಾಗಲೇ ಚಿತ್ರದ ಶೂಟಿಂಗ್ ನಡೆದಿದೆ ಎಂದು ತಿಳಿದುಬಂದಿದೆ.

ಗಂಭೀರ ಸ್ಥಿತಿಯಲ್ಲಿ ಬಂದ ರೋಗಿಗಳಿಗೆ ತುರ್ತು ಚಿಕಿತ್ಸಾ ವಿಭಾಗಕ್ಕೂ ಬರಲು ಸಾಧ್ಯವಾಗಲಿಲ್ಲ. ಮುಖ್ಯ ಗೇಟ್‌ನಿಂದ ಯಾರನ್ನೂ ಬಿಡಲಿಲ್ಲ. ಚಿತ್ರೀಕರಣದ ಸಮಯದಲ್ಲಿ ಮೌನವಾಗಿರಲು ಸಿಬ್ಬಂದಿಗಳು ರೋಗಿಗಳಿಗೆ ಮತ್ತು ಪಕ್ಕದಲ್ಲಿದ್ದವರಿಗೆ ಚಿತ್ರತಂಡ ಸೂಚಿಸುತ್ತಿದ್ದರು ಎಂದು ವರದಿಯಾಗಿದೆ.

‘ಪೇಯ್ನ್‌ಕಿಲಿ’ ಚಿತ್ರಕ್ಕೆ ಫಹಾದ್ ಫಾಸಿಲ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹಾಗಾಗಿ ಅವರ ವಿರುದ್ಧವೇ ದೂರು ದಾಖಲಾಗಿದೆ. ಪ್ರಕರಣದ ಬಗ್ಗೆ ಫಹಾದ್ ಫಾಸಿಲ್ ಇನ್ನು ಪ್ರತಿಕ್ರಿಯಿಸಿಲ್ಲ. ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟನಾಗಿ ಅವರು ಗುರುತಿಸಿಕೊಂಡಿದ್ದಾರೆ.

Continue Reading
Advertisement
T20 World Cup 2024
ಪ್ರಮುಖ ಸುದ್ದಿ17 mins ago

T20 World Cup 2024 : ಫೈನಲ್ ಪಂದ್ಯ ಆರಂಭಕ್ಕೆ ಮೊದಲೇ ವಿಜೇತರನ್ನು ಘೋಷಿಸಿದ ಟಾಮ್ ಮೂಡಿ

Actor Darshan
ಬೆಂಗಳೂರು20 mins ago

Actor Darshan: ಜೈಲಲ್ಲಿ ದರ್ಶನ್‌ ಭೇಟಿಯಾದ ನಟಿ ರಕ್ಷಿತಾ, ಪ್ರೇಮ್ ದಂಪತಿ

Special Status
ದೇಶ25 mins ago

Special Status: ಎನ್‌ಡಿಎಗೆ ಮೈತ್ರಿಗೆ ಮೊದಲ ಅಗ್ನಿ ಪರೀಕ್ಷೆ; ವಿಶೇಷ ಸ್ಥಾನಮಾನಕ್ಕೆ ಜೆಡಿಯು ನಿರ್ಣಯ

Jain Shantamani Kala Kendra Stone Carving and Painting Camp in Bengaluru
ಬೆಂಗಳೂರು40 mins ago

Bengaluru News: ಜೈನ್‌ ಶಾಂತಮಣಿ ಕಲಾ ಕೇಂದ್ರದ ಕಲ್ಲಿನ ಕೆತ್ತನೆ ಮತ್ತು ಚಿತ್ರಕಲಾ ಶಿಬಿರ “ಪಾರ್ಶ್ವ ಪಡಾಪ್” ಗೆ ಸಂಭ್ರಮದ ತೆರೆ

Virat Kohli
ಪ್ರಮುಖ ಸುದ್ದಿ57 mins ago

Virat kohli : ವಿರಾಟ್ ಕೊಹ್ಲಿಗೆ ಫಾರ್ಮ್​ಗೆ ಮರಳಲು ಸಲಹೆಗಳನ್ನು ನೀಡಿದ ಮಾಜಿ ನಾಯಕ ಸುನೀಲ್ ಗವಾಸ್ಕರ್​

WhatsApp color
ತಂತ್ರಜ್ಞಾನ1 hour ago

WhatsApp: ಇನ್ನು ಮುಂದೆ ಈ ಫೋನ್‌ಗಳಲ್ಲಿ ವಾಟ್ಸ್ಯಾಪ್‌ ಸಿಗೋಲ್ಲ! ನಿಮ್ಮ ಫೋನೂ ಇದೆಯಾ ನೋಡಿ

Self Harming
ಕ್ರೈಂ1 hour ago

Self Harming: ಕೆರೆಗೆ ಹಾರಿ ಆತ್ಮಹತ್ಯೆ ಯತ್ನ; ಇಬ್ಬರು ಮಕ್ಕಳ ಸಾವು, ತಾಯಿ ಪಾರು

Rohit Sharma
ಪ್ರಮುಖ ಸುದ್ದಿ1 hour ago

Rohit Sharma : ಒಂದು ಸಿಕ್ಸರ್ ಬಾರಿಸಿದರೆ ಕೊಹ್ಲಿಯ ದಾಖಲೆ ಮುರಿಯುತ್ತಾರೆ ರೋಹಿತ್​ ಶರ್ಮಾ

Shirt Dress Fashion
ಫ್ಯಾಷನ್2 hours ago

Shirt Dress Fashion: ಶರ್ಟ್ ಡ್ರೆಸ್‌ ನ್ಯೂ ಲುಕ್‌ಗೆ 3 ಸಿಂಪಲ್‌ ಐಡಿಯಾ

assault case bjp worker
ಕ್ರೈಂ2 hours ago

Assault Case: ಸಾಲ ವಾಪಸ್‌ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ ಬಿಜೆಪಿ ಕಾರ್ಯಕರ್ತ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 hours ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ9 hours ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ1 day ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

ಟ್ರೆಂಡಿಂಗ್‌