Site icon Vistara News

Tamanna Bhatia | ತಮನ್ನಾ-ವಿಜಯ್ ವರ್ಮಾ ಡೇಟಿಂಗ್‌: ಮುದ್ದಾಟ ಸಖತ್ತಾಗಿತ್ತು ಅಂತ ಕಾಲೆಳೆದ ನೆಟ್ಟಿಗರು!

Tamanna Bhatia

ಬೆಂಗಳೂರು: ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ನಟಿ ತಮನ್ನಾ (Tamanna Bhatia) ಹಾಗೂ ಬಾಲಿವುಡ್‌ ನಟ ವಿಜಯ್ ವರ್ಮಾ ಒಟ್ಟಿಗೆ ಕಾಣಿಸಿಕೊಂಡಿದ್ದು, ಪರಸ್ಪರ ಚುಂಬಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಗೋವಾದಲ್ಲಿ ನಡೆದ ಹೊಸ ವರ್ಷದ ಪಾರ್ಟಿಯಲ್ಲಿ ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯೊ ಮತ್ತು ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಒಂದೆರಡು ವಿಡಿಯೊಗಳಲ್ಲಿ, ಅವರು ಒಟ್ಟಿಗೆ ನೃತ್ಯ ಮಾಡುವುದೂ ಕಾಣಿಸಿಕೊಂಡಿದೆ. ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಅವರು ಗೋವಾದಲ್ಲಿ ಹೊಸ ವರ್ಷವನ್ನು ಆಚರಿಸುತ್ತಿರುವಾಗ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಿರುವುದು ಕಂಡುಬಂದಿದೆ. ನಟಿ ಗುಲಾಬಿ ಬಣ್ಣದ ಉಡುಪಿನಲ್ಲಿ ಸುಂದರವಾಗಿ ಕಾಣಿಸುತ್ತಿದ್ದರೆ, ವಿಜಯ್ ಬಿಳಿ ಶರ್ಟ್‌ನೊಂದಿಗೆ ಹಸಿರು ಶಾರ್ಟ್ಸ್ ಧರಿಸಿದ್ದರು. ವೈರಲ್‌ ಆದ ವಿಡಿಯೊದಲ್ಲಿ ಇಬ್ಬರೂ ತಬ್ಬಿಕೊಂಡು ಚುಂಬಿಸುತ್ತಿರುವಂತೆ ಕಾಣುತ್ತಿದೆ.

ಇದನ್ನೂ ಓದಿ | Tamanna Bhatia | ಹೊಸ ವಿನ್ಯಾಸದ ಲೆಹೆಂಗಾದಲ್ಲಿ ತಮನ್ನಾ ಮಿಂಚು

ʻಲವ್‌ ಸ್ಟೋರಿಸ್‌ 2ʼ ಶೂಟಿಂಗ್‌ ವೇಳೆ ತಮನ್ನಾ ಅವರು ವಿಜಯ್‌ ವರ್ಮಾ ಅವರನ್ನು ಭೇಟಿಯಾಗಿದ್ದರು. ಆಲಿಯಾ ಭಟ್‌ ʻಡಾರ್ಲಿಂಗ್ಸ್‌ʼ ಸಿನಿಮಾದಲ್ಲಿ ವಿಜಯ್‌ ಕಾಣಿಸಿಕೊಂಡಿದ್ದರು. ಈ ವರ್ಷ ನಟಿ ತಮನ್ನಾ ನವಾಜುದ್ದೀನ್ ಸಿದ್ದಿಕಿ ಜತೆ ʻಬೋಲೆ ಚೂಡಿಯನ್ʼ ಚಿತ್ರದಲ್ಲಿ ನಟಿಸಲಿದ್ದಾರೆ.

ಇದನ್ನೂ ಓದಿ | Gurtundha Seetakalam | ಭಾರೀ ಸೋಲುಂಡ ತೆಲುಗು ʻಲವ್‌ ಮಾಕ್ಟೇಲ್‌ʼ: ಒಂದೇ ವಾರಕ್ಕೆ ಸಿನಿಮಾ ಪ್ರದರ್ಶನ ಮುಕ್ತಾಯ!

Exit mobile version