Site icon Vistara News

Tamannaah Bhatia: ಮೊದಲ ಡೇಟಿಂಗ್‌ನಲ್ಲಿ ಸೆಕ್ಸ್ ಮಾಡಿದ್ರಾ? ವಿಜಯ್ ವರ್ಮಾ ಉತ್ತರ ಹೀಗಿತ್ತು!

Vijay Varma EPIC Reply

ಬೆಂಗಳೂರ: ನಟಿ ತಮನ್ನಾ ಭಾಟಿಯಾ (Tamannaah Bhatia) ಅವರು ವಿಜಯ್ ವರ್ಮಾ ಜತೆ ಡೇಟಿಂಗ್ ಮಾಡುತ್ತಿದ್ದಾರೆ. ಲಸ್ಟ್ ಸ್ಟೋರೀಸ್ 2 ಸಿನಿಮಾ ಪ್ರಚಾರ ಕಾರ್ಯದಲ್ಲಿ ಇಬ್ಬರೂ ತೊಡಗಿಸಿಕೊಂಡಿದ್ದಾರೆ. ಡೇಟಿಂಗ್ ವದಂತಿಗಳನ್ನು ಸಾರ್ವಜನಿಕವಾಗಿ ಜೋಡಿ ಬಹುತೇಕ ಒಪ್ಪಿಕೊಂಡಿದೆ. ಇದೀಗ ಸಂದರ್ಶನವೊಂದರಲ್ಲಿ ತಮ್ಮ ಮೊದಲ ಡೇಟಿಂಗ್‌ ಕುರಿತು ವಿಜಯ್‌ ವರ್ಮಾ ಬೋಲ್ಡ್‌ ಆಗಿ ಉತ್ತರ ನೀಡಿದ್ದಾರೆ.

ತಮನ್ನಾ, ವಿಜಯ್ ವರ್ಮಾ, ನಿರ್ದೇಶಕ ಸುಜಯ್ ಘೋಶ್ ಸಂದರ್ಶನದಲ್ಲಿ ಭಾಗಿ ಆಗಿದ್ದರು.ʻ ಮೊದಲ ಡೇಟ್ ಹೇಗಿತ್ತು, ಅದರಲ್ಲಿ ಸೆಕ್ಸ್ ಇತ್ತಾ’ ಎಂದು ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ವಿಜಯ್‌ ವರ್ಮಾ ಉತ್ತರಿಸಿದ್ದು, ʻʻಆಗ ಯಾವುದೇ ಕಾಮ ಇರಲಿಲ್ಲʼʼ ಎಂದಿದ್ದಾರೆ. ಸುಜಯ್ ಘೋಶ್ ಕೂಡ ಈ ಬಗ್ಗೆ ಉತ್ತರ ನೀಡಿದ್ದು ʻʻನಮಗೆ ಆ ಅದೃಷ್ಟವಿಲ್ಲ. ನಾವೆಲ್ಲ ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವುದು. ಪ್ರತಿಯೊಂದಕ್ಕೂ ಹೋರಾಡಬೇಕು. ಸುಲಭವಾಗಿ ಸಿಗುವುದಿಲ್ಲʼʼಎಂದಿದ್ದಾರೆ.

ಈ ಹಿಂದೆ ತಮನ್ನಾ ಅವರು ವಿಜಯ್‌ ವರ್ಮಾ ಕುರಿತಾಗಿ ʻʻಒಟ್ಟಿಗೆ ಕೆಲಸ ಮಾಡಿದ ಮಾತ್ರಕ್ಕೆ ಭಾವನಾತ್ಮಕವಾಗಿ ನಾವು ಕನೆಕ್ಟ್‌ ಆಗಿಬಿಡುವುದಿಲ್ಲ. ಆದರೆ ಕೆಲವರೊಂದಿಗೆ ಅತ್ಯಂತ ಆಳವಾಗಿ ಭಾವನಾತ್ಮಕವಾಗಿ ಬೆಸುಗೆ ಮಾಡಿಕೊಂಡುಬಿಡುತ್ತೇವೆʼʼ ಎಂದು ಹೇಳಿದ್ದರು. ಕೆಲವು ಸಿನಿಮಾಗಳು ಕೂಡ ಅವರ ಕೈಯಲ್ಲಿದೆ. ಹಾಗಾಗಿ ಮದುವೆ ಮಾತು ಸದ್ಯಕ್ಕಿಲ್ಲ” ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Tamannaah Bhatia : ಅಭಿಮಾನಿಯ ಪ್ರೀತಿಯ ಕಂಡು ಭಾವುಕರಾದ ತಮನ್ನಾ ಭಾಟಿಯಾ

ಲಸ್ಟ್ ಸ್ಟೋರೀಸ್ 2 ಸಿನಿಮಾ ಮೂಲಕ, ತಮನ್ನಾ ಮತ್ತು ವಿಜಯ್ ಮೊದಲ ಬಾರಿಗೆ ಒಟ್ಟಿಗೆ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನೀನಾ ಗುಪ್ತಾ, ಅಮೃತ್‌ ಸುಭಾಷ್‌ ಸೇರಿ ಅನೇಕ ಕಲಾವಿದರು ನಟಿಸಿರುವ ಲಸ್ಟ್‌ ಸ್ಟೋರಿಸ್‌ 2 ಇದೇ ಜೂನ್‌ 29ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ. ಇದಲ್ಲದೆ ತಮನ್ನಾ ಅವರು ಸೂಪರ್‌ ಸ್ಟಾರ್‌ ರಜನಿಕಾಂತ್‌ ನಟನೆಯ ಜೈಲರ್‌ ಸಿನಿಮಾದಲ್ಲಿಯೂ ಬಹುಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಆ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ನಡೆಯುತ್ತಿದೆ.

Exit mobile version