ಸಿನಿಮಾ
Tamannaah Bhatia : ಅಭಿಮಾನಿಯ ಪ್ರೀತಿಯ ಕಂಡು ಭಾವುಕರಾದ ತಮನ್ನಾ ಭಾಟಿಯಾ
ನಟಿ ತಮನ್ನಾ ಭಾಟಿಯಾ ಅವರ ಅಭಿಮಾನಿಯೊಬ್ಬರು ಕೈಯಲ್ಲಿ ಹಾಕಿಸಿಕೊಂಡಿದ್ದ ಹಚ್ಚೆ ಕಂಡು ನಟಿ ಭಾವುಕರಾಗಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಮುಂಬೈ: ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಅವರ ಮೇಲಿನ ಪ್ರೀತಿಯಿಂದ ಏನೇನೋ ಮಾಡುವಂತಹ ಅಭಿಮಾನಿಗಳೂ ಅವರಿಗಿದ್ದಾರೆ. ಅದೇ ರೀತಿಯಲ್ಲಿ ಫ್ಯಾನ್ ಒಬ್ಬರು ತಮ್ಮ ಮೇಲಿಟ್ಟಿರುವ ಪ್ರೀತಿಯನ್ನು ಕಂಡ ತಮನ್ನಾ ಭಾವುಕರಾದ ಘಟನೆ ಇತ್ತೀಚೆಗೆ ನಡೆದಿದೆ.
ತಮನ್ನಾ ಮುಂಬೈನ ವಿಮಾನ ನಿಲ್ದಾಣದಲ್ಲಿ ಸೋಮವಾರ ಕಾಣಿಸಿಕೊಂಡಿದ್ದರು. ಆಗ ಅವರನ್ನು ಕಂಡ ಅಭಿಮಾನಿಯೊಬ್ಬರು ಹೂವಿನ ಬೊಕ್ಕೆಯೊಂದಿಗೆ ಅವರ ಬಳಿ ಓಡಿ ಬಂದಿದ್ದಾರೆ. ಬೊಕ್ಕೆ ಕೊಟ್ಟ ನಂತರ ತಮ್ಮ ಎಡಗೈ ಮೇಲೆ ತಮನ್ನಾ ಅವರ ಮುಖವನ್ನು ಹಚ್ಚೆ ಹಾಕಿಸಿಕೊಂಡಿರುವುದನ್ನು ಅವರಿಗೆ ತೋರಿಸಿದ್ದಾರೆ. ಹಚ್ಚೆಯ ಜತೆ ಐ ಲವ್ ಯು ತಮನ್ನಾ ಎಂದೂ ಬರೆಯಲಾಗಿತ್ತು.
ಇದನ್ನೂ ಓದಿ: Viral Video: ಪ್ರೀತಿಯಲ್ಲಿ ಬಿದ್ದ ಮಗಳಿಗೆ ಬಾಸುಂಡೆ ಬರುವಂತೆ ಬಾರಿಸಿದ ಅಮ್ಮ! ಇದು ಲವ್ ಸೈಡ್ ಎಫೆೆಕ್ಟ್
ಇದನ್ನು ಕಂಡೊಡನೆ ತಮನ್ನಾ ಭಾವುಕರಾಗಿದ್ದಾರೆ. ಕೆಲ ಕಾಲ ಆ ಅಭಿಮಾನಿಯೊಂದಿಗೆ ಮಾತನಾಡಿದ್ದು, ಅವರನ್ನು ತಬ್ಬಿಕೊಂಡಿದ್ದಾರೆ. ಖುಷಿಯಿಂದ ಆ ಅಭಿಮಾನಿ ತಮನ್ನಾ ಅವರ ಕಾಲನ್ನು ಮುಟ್ಟಿ ನಮಸ್ಕಾರ ಮಾಡಿದ್ದಾರೆ ಕೂಡ. ತಮ್ಮ ಕಾರಿನ ಬಳಿ ಹೋಗುವುದಕ್ಕೆ ಮೊದಲು ತಮನ್ನಾ ಆ ಅಭಿಮಾನಿಯೊಂದಿಗೆ ಅಲ್ಲಿದ್ದ ಫೋಟೊಗ್ರಾಫರ್‌ಗಳಿಗೆ ಫೋಸ್ ಕೊಟ್ಟು ನಂತರ ಕಾರಿನೆಡೆಗೆ ನಡೆದಿದ್ದಾರೆ.
ಈ ವಿಡಿಯೊ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದೆ. ತಮನ್ನಾ ಅವರ ಅಭಿಮಾನಿಯ ಬಗ್ಗೆ ಬಹಳಷ್ಟು ಮಂದಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅದಷ್ಟೇ ಅಲ್ಲದೆ ನಟಿ ಅಭಿಮಾನಿಯನ್ನು ಅಪ್ಪಿಕೊಂಡು ಮಾತನಾಡಿದ್ದರ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಇದನ್ನೂ ಓದಿ: Viral Video: ಕಾಟ ಕೊಟ್ಟ ಪುಂಡನನ್ನು ಕೆಡವಿ ಹೊಡೆದು ಹಾಕಿದ್ರು! ಅಕ್ಕ-ತಂಗಿಯ ವಿಡಿಯೊ ಸಕತ್ ವೈರಲ್
ತಮನ್ನಾ ಅವರು ಸದ್ಯ ತಮ್ಮ ಲಸ್ಟ್ ಸ್ಟೋರಿಸ್ 2 ಪ್ರಚಾರ ಕೆಲಸದಲ್ಲಿ ಬಿಜಿಯಾಗಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ ಈ ಸೀರಿಸ್‌ನಲ್ಲಿ ನಟಿ ನಟ ವಿಜಯ್ ವರ್ಮಾ ಅವರ ಜತೆ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ಅಂದ ಹಾಗೆ ನಟಿ ಇತ್ತೀಚೆಗಷ್ಟೇ ತಾವು ವಿಜಯ್ ವರ್ಮಾ ಅವರೊಂದಿಗೆ ಪ್ರೀತಿಯಲ್ಲಿರುವ ವಿಚಾರವನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು.
ಬಾಲಿವುಡ್
Salman Khan: ಬರ್ತ್ ಡೇ ಪಾರ್ಟಿಯಲ್ಲಿ ಸಲ್ಮಾನ್ ಸಖತ್ ಡ್ಯಾನ್ಸ್! ಅಭಿಮಾನಿಗಳಿಗೆ ನಟನ ಆರೋಗ್ಯದ್ದೇ ಚಿಂತೆ
Salman Khan: ಪಾರ್ಟಿಯೊಂದರಲ್ಲಿ ನಟ ಸಲ್ಮಾನ್ ಖಾನ್ ಡ್ಯಾನ್ಸ್ ಮಾಡುವ ವಿಡಿಯೊ ವೈರಲ್ ಆಗಿದೆ.
ನವ ದೆಹಲಿ: ಇತ್ತೀಚೆಗೆ ಉದ್ಯಮಿಯೊಬ್ಬರ ಮೊಮ್ಮಗುವಿನ ಬರ್ತ್ ಡೇ ಪಾರ್ಟಿಯ ವೇಳೆ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಡ್ಯಾನ್ಸ್ ಮಾಡಿದ್ದಾರೆ. ಈ ಕಾರ್ಯಕ್ರಮ ಫೋಟೊ ಮತ್ತು ವಿಡಿಯೊ ಈಗ ವೈರಲ್ (Viral Video) ಆಗಿದೆ. ಈ ವೇಳೆ ಸಲ್ಮಾನ್ ಖಾನ್ ತಮ್ಮ ಸೂಪರ್ ಹಿಟ್ ಚಿತ್ರಗಳಾದ ‘ದಬಾಂಗ್’ನ ‘ಹಮ್‌ಕ ಪೀನಿ ಹೆ’ ಮತ್ತು ‘ವಾಂಟೆಡ್’ ಚಿತ್ರದ ʼಜಲ್ವʼ ಮುಂತಾದ ಹಾಡುಗಳಿಗೆ ಹೆಜ್ಜೆ ಹಾಕಿದರು.
ಸಲ್ಮಾನ್ ಖಾನ್ ಅಭಿಮಾನಿಗಳು ಈ ವಿಡಿಯೊವನ್ನು ವಿವಿಧ ಸೋಷಿಯಲ್ ಮಿಡಿಯಾಗಳ ಮೂಲಕ ಹಂಚಿಕೊಂಡಿದ್ದಾರೆ. ಈ ವೇಳೆ ಕೆಲವರು ನಟನ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊದಲ್ಲಿ ಅವರು ಸ್ವಲ್ಪ ಅಸ್ವಸ್ಥರಂತೆ ಕಂಡು ಬರುತ್ತಿದ್ದುದೇ ಫ್ಯಾನ್ಸ್ ಆತಂಕಕ್ಕೆ ಕಾರಣ. ಆರಂಭದಲ್ಲಿ ಸಲ್ಮಾನ್ ಖಾನ್ ಅವರ ಈ ಡ್ಯಾನ್ಸ್ ಮದುವೆಯೊಂದರಲ್ಲಿ ನಡೆದಿತ್ತು ಎಂದು ಕೆಲವರು ಭಾವಿಸಿದ್ದರು. ಬಳಿಕ ಇದು ಬರ್ತ್ ಡೇ ಪಾರ್ಟಿ ಎಂದು ಖಚಿತವಾಗಿದೆ.
ಅಭಿಮಾನಿಗಳಿಗೆ ಆತಂಕ
ವೈರಲ್ ಆಗಿರುವ ವಿಡಿಯೊದಲ್ಲಿ ಸಲ್ಮಾನ್ ಖಾನ್ ಕಪ್ಪು ಪ್ಯಾಂಟ್ ಮತ್ತು ಮ್ಯಾಚಿಂಗ್ ಶೂಗಳೊಂದಿಗೆ ಕಪ್ಪು ಟೀ ಶರ್ಟ್ ಧರಿಸಿದ್ದಾರೆ. ಟ್ಯೂಬ್ ಲೈಟ್ ಚಿತ್ರದ ‘ಸಾಜನ್ ರೇಡಿಯೋ’ ಹಾಡಿಗೆ ಹೆಜ್ಜೆ ಹಾಕುತ್ತಿದ್ದಂತೆ ಅವರು ಬೆಳ್ಳಿಯ, ಹೊಳೆಯುವ ಜಾಕೆಟ್‌ನೊಂದಿಗೆ ಪ್ರತ್ಯಕ್ಷರಾದರು. ವಿಡಿಯೊ ನೋಡಿದ ಅನೇಕರು ಸಲ್ಮಾನ್ ಖಾನ್ ಫಿಟ್ ಮತ್ತು ಆರೋಗ್ಯವಂತವಾಗಿ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.
ಒಬ್ಬರು ಕಮೆಂಟ್ ಮಾಡಿ, ʼʼಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಸಲ್ಮಾನ್ ಖಾನ್ ಅಮೇರಿಕಾಕ್ಕೆ ಪ್ರಯಾಣಿಸಿದ್ದಾರೆ. ಇದಕ್ಕಾಗಿ ಅವರು ತಮ್ಮ ವ್ಯಾಯಾಮವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದರುʼʼ ಎಂದು ಮತ್ತೊಬ್ಬರು ಹೇಳಿದ್ದಾರೆ. ಜತೆಗೆ ಸಲ್ಮಾನ್ ಖಾನ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಇನ್ನೊಬ್ಬರು ʼʼಇದು ಸಲ್ಮಾನ್ ಖಾನ್ ಅವರ ನಿಜವಾದ ವಯಸ್ಸನ್ನು ತೋರಿಸುತ್ತಿದೆ, ಈ ರೀತಿ ಕಾಣಿಸುವುದು ಅನಾರೋಗ್ಯದಿಂದಲ್ಲʼʼ ಎಂದಿದ್ದಾರೆ. ಸಲ್ಮಾನ್ ಖಾನ್ ಫಿಟ್ನೆಸ್ ಮತ್ತು ನಿಯಮಿತ ವ್ಯಾಯಾಮಗಳಿಗೆ ಪ್ರಾಮುಖ್ಯತೆ ಕೊಡುವುದರಿಂದ ಅಭಿಮಾನಿಗಳಿಗೆ ಈ ರೀತಿಯ ಬದಲಾವಣೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆದಷ್ಟು ಬೇಗ ಮೊದಲಿನಂತಾಗಲಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ: Boney Kapoor: ನಟಿ ಶ್ರೀದೇವಿ ಸಾವಿನ ಹಿಂದಿನ ಸತ್ಯ ಬಿಚ್ಚಿಟ್ಟ ಪತಿ ಬೋನಿ ಕಪೂರ್! ಅಂದು ಆಗಿದ್ದೇನು?
ಸಲ್ಮಾನ್ ಖಾನ್ ಇತ್ತೀಚೆಗೆ ತಮ್ಮ ಬಹು ನಿರೀಕ್ಷಿತ ʼಟೈಗರ್ 3ʼ ಚಿತ್ರದ ಟೀಸರ್ ಅನಾವರಣಗೊಳಿಸಿದ್ದಾರೆ. ಸಲ್ಮಾನ್ ಈ ವರ್ಷದ ಮೇ ತಿಂಗಳಲ್ಲಿ ಅಬುಧಾಬಿಯಲ್ಲಿ ʼಟೈಗರ್ 3ʼ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದರು. ಶೂಟಿಂಗ್ ಪೂರ್ಣಗೊಳಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, “ಕಳೆದ ರಾತ್ರಿ ʼಟೈಗರ್ 3ʼ ಚಿತ್ರವನ್ನು ಪೂರ್ಣಗೊಳಿಸಿದ್ದೇನೆ. ದೀಪಾವಳಿಯಂದು ಚಿತ್ರ ತೆರೆಗೆ ಬರಲಿದೆ. ಈ ಚಿತ್ರಕ್ಕಾಗಿ ಬಿಡುವಿಲ್ಲದೆ ದುಡಿದಿದ್ದೇವೆ. ಇದೊಂದು ಅದ್ಭುತ ಅನುಭವ” ಎಂದು ಅವರು ಹೇಳಿಕೊಂಡಿದ್ದರು.
ʼಟೈಗರ್ 3ʼ ಟೈಗರ್ ಸೀರಿಸ್‌ನ ಮೂರನೇ ಕಂತು. 2012ರಲ್ಲಿ ಬಿಡುಗಡೆಗೊಂಡ ʼಏಕ್ ಥಾ ಟೈಗರ್ʼ, 2017ರಲ್ಲಿ ತೆರೆಕಂಡ ʼಟೈಗರ್ ಜಿಂದಾ ಹೈʼ ಬಳಿಕ ಇದೀಗ ʼಟೈಗರ್ 3ʼ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಬಾಲಿವುಡ್
Gandhi Jayanti: ಗಾಂಧಿ ಪಾತ್ರಕ್ಕಾಗಿ 30 ಕೆಜಿ ತೂಕ ಕಳೆದುಕೊಂಡಿದ್ದೆ; ಬೊಮನ್ ಇರಾನಿ
Gandhi Jayanti: ಬಾಲಿವುಡ್ ನಟ ಬೊಮನ್ ಇರಾನಿ ʼಮಹಾತ್ಮಾ V/s ಗಾಂಧಿʼ ಚಿತ್ರಕ್ಕಾಗಿ ತಾವು 30 ಕೆಜಿ ತೂಕ ಕಳೆದುಕೊಂಡ ವಿಚಾರವನ್ನು ಹಂಚಿಕೊಂಡಿದ್ದಾರೆ.
ನವ ದೆಹಲಿ: ನಿನ್ನೆ (ಅಕ್ಟೋಬರ್ 2) ಎಲ್ಲೆಡೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ (Gandhi Jayanti). ಈ ಸಂದರ್ಭದಲ್ಲಿ ಬಾಲಿವುಡ್‌ನ ಹಿರಿಯ ನಟ ಬೋಮನ್ ಇರಾನಿ (Boman Irani)ಫಿರೋಜ್ ಖಾನ್ ಅವರ ʼಮಹಾತ್ಮ V/s ಗಾಂಧಿʼ (Mahatma V/s Gandhi) ಚಿತ್ರದಲ್ಲಿನ ತಮ್ಮ ಪಯಣವನ್ನು ಮೆಲುಕು ಹಾಕಿಕೊಂಡಿದ್ದಾರೆ. ಈ ಚಿತ್ರದಲ್ಲಿ ಗಾಂಧಿ ಪಾತ್ರಕ್ಕಾಗಿ ತಾವು ಬರೋಬ್ಬರಿ 30 ಕೆಜಿ ತೂಕ ಕಳೆದುಕೊಂಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಈ ಬಗ್ಗೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬೊಮನ್ ಇರಾನಿ ಈ ಚಿತ್ರದಲ್ಲಿ ಮಹಾತ್ಮ ಗಾಂಧಿ-ಕಠಿಣ ಪಾತ್ರದ ನಿರ್ವಹಣೆಯ ಜವಾಬ್ದಾರಿ ಹೊತ್ತುಕೊಂಡಿದ್ದರು. ಈ ಸವಾಲಿನ ಪಾತ್ರಕ್ಕಾಗಿ ನಟನಾ ಕೌಶಲ್ಯ ಮತ್ತು ದೈಹಿಕ ರೂಪಾಂತರದ ಅಗತ್ಯವಿತ್ತು. ಅದನ್ನು ಸಮರ್ಥವಾಗಿ ನಿರ್ವಹಿಸಿದ ಅವರು ನೋಡುಗರನ್ನು ಬೆರಗುಗೊಳಿಸಿದರು. “ಇದು ಗಾಂಧಿ ಜಯಂತಿ. ಒಂದು ದಿನಕ್ಕೆ ಸೀಮತ ಮಾಡದೆ ನಾವು ಪ್ರತಿದಿನ ಅವರ ಬಗ್ಗೆ ಮತ್ತು ಅವರ ತತ್ವಗಳ ಬಗ್ಗೆ ಯೋಚಿಸಬೇಕು. ಫಿರೋಜ್ ಖಾನ್ ಅವರ ‘ಮಹಾತ್ಮ V/s ಗಾಂಧಿ’ ಚಿತ್ರದಲ್ಲಿ ಅವರ ಪಾತ್ರವನ್ನು ನಿರ್ವಹಿಸುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಅದೃಷ್ಟ, ಈ ಚಿತ್ರಕ್ಕಾಗಿ 30 ಕೆಜಿ ತೂಕ ಕಳೆದುಕೊಂಡೆ ಮತ್ತು ಜೀವನದಲ್ಲಿ ಬಹು ದೊಡ್ಡ ಪಾಠ ಕಲಿತುಕೊಂಡೆʼʼ ಎಂದು ಬರೆದುಕೊಂಡಿದ್ದಾರೆ.
ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯಂದು ರಾಷ್ಟ್ರವು ಅವರಿಗೆ ಗೌರವ ಸಲ್ಲಿಸುತ್ತಿರುವಾಗ, ಬೊಮನ್ ಇರಾನಿ ಅವರ ‘ಮಹಾತ್ಮಾ V/s ಗಾಂಧಿ’ ಚಿತ್ರದಲ್ಲಿ ಮಹಾತ್ಮನ ಪಾತ್ರವು ರಾಷ್ಟ್ರಪಿತ ಮತ್ತು ಅವರ ಬೋಧನೆಗಳ ಹೃದಯಸ್ಪರ್ಶಿ ಜ್ಞಾಪಕವಾಗಿ ಚಾಲ್ತಿಯಲ್ಲಿದೆ.
ಇದನ್ನೂ ಓದಿ: Dunki Movie: ʻಡಂಕಿʼ ಸಿನಿಮಾ ರಿಲೀಸ್ ಬಗ್ಗೆ ಬಾಯ್ಬಿಟ್ಟ ಶಾರುಖ್; 2023 ಬಾದ್‌ಷಾರ ವರ್ಷ ಅಂದ್ರು ಫ್ಯಾನ್ಸ್!
ಸದ್ಯ ಬೊಮನ್ ಇರಾನಿ ಶಾರುಖ್ ಖಾನ್ ಜತೆ ʼಡಂಕಿʼ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಇದು ಈ ವರ್ಷದ ಬಹು ನಿರೀಕ್ಷಿತ ಚಿತ್ರವೂ ಹೌದು. ಇತ್ತೀಚೆಗೆ ಪತ್ರಕರ್ತರೊಂದಿಗೆ ಮಾತನಾಡಿದ್ದ ಬೊಮನ್ ಇರಾನಿ, ಸಹ ನಟ ಶಾರುಖ್ ಖಾನ್ ಅವರನ್ನು ಹೊಗಳಿದ್ದರು. ʼʼಶಾರುಖ್ ಖಾನ್ ಅವರಿಗೆ ಯಾವುದೇ ರೀತಿಯ ಅಹಂ ಇಲ್ಲ. ಸ್ಟಾರ್ ಡಮ್ ಅವರ ತಲೆಗೇರಿಲ್ಲ. ಎಲ್ಲರೊಂದಿಗೆ ಸಹಜವಾಗಿ ಬೆರೆಯುತ್ತಾರೆ. ಅವರು ದೊಡ್ಡ ಸ್ಟಾರ್ ಎಂಬ ಭಾವನೆ ನನಗೆ ಬಂದೇ ಇಲ್ಲ. ಶೂಟಿಂಗ್ ಸೆಟ್‌ನಲ್ಲಿ ಸಹೋದರನ ಹಾಗೆ ಬೆರೆಯುತ್ತಿದ್ದರುʼʼ ಎಂದು ಹೇಳಿದ್ದರು. ಈ ಇಬ್ಬರು ಇದೇ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿಲ್ಲ. ಈ ಹಿಂದೆ ʼಮೆ ಹೂ ನಾʼ, ʼಡಾನ್ʼ ಮತ್ತು ʼಹ್ಯಾಪಿ ನ್ಯೂ ಇಯರ್ʼ ಮತ್ತಿತರ ಚಿತ್ರಗಳಲ್ಲಿ ಈ ಇಬ್ಬರು ಜತೆಗೆ ಅಭಿನಯಿಸಿದ್ದರು. ʼಡಂಕಿʼ ಡಿಸೆಂಬರ್ 22ರಂದು ತೆರೆಗೆ ಬರಲಿದೆ. ಈ ಹಿಂದೆ ರಾಜ್‌ಕುಮಾರ್ ಹಿರಾನಿ ನಿರ್ದೇಶನದ ʼಮುನ್ನಾಭಾಯಿ ಎಂ.ಬಿ.ಬಿ.ಎಸ್.ʼ, ʼಲಗೇ ರಹೋ ಮುನ್ನಾ ಭಾಯಿʼ, ʼ3 ಈಡಿಯಟ್ಸ್ʼ, ʼಪಿಕೆʼ, ʼಸಂಜುʼ ಮುಂತಾದ ಚಿತ್ರಗಳಲ್ಲಿ ಬೊಮನ್ ಇರಾನಿ ಮುಖ್ಯ ಪಾತ್ರದ ಮೂಲಕ ಗಮನ ಸೆಳೆದಿದ್ದರು.
South Cinema
Rashmika Mandanna: ಮತ್ತೊಮ್ಮೆ ʼರಂಜಿತಮೆʼ, ʼಸಾಮಿʼ ಹಾಡಿಗೆ ಹೆಜ್ಜೆ ಹಾಕಿದ ರಶ್ಮಿಕಾ!
Rashmika Mandanna: ಕನ್ನಡ ಮೂಲದ ನಟಿ ರಶ್ಮಿಕಾ ಮಂದಣ್ಣ ದುಬೈಯಲ್ಲಿ ಆಭರಣ ಮಳೆಗೆಯೊಂದರ ಉದ್ಘಾಟನೆ ವೇಳೆ ವೇದಿಕೆಯಲ್ಲಿ ಹೆಜ್ಜೆ ಹಾಕಿದ ವಿಡಿಯೊ ವೈರಲ್ ಆಗಿದೆ.
ದುಬೈ: ಸ್ಯಾಂಡಲ್‌ವುಡ್‌ನ ʼಕಿರಿಕ್ ಪಾರ್ಟಿʼ (Kirik Party) ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶಿಸಿ ʼಚಲೋʼ ಚಿತ್ರದ ಮೂಲಕ ತೆಲುಗಿನಲ್ಲಿ ಛಾಪು ಮೂಡಿಸಿ ʼಸುಲ್ತಾನʼನ ಮನದರಸಿಯಾಗಿ ಕಾಲಿವುಡ್‌ಗೆ ಕಾಲಿಟ್ಟು, ʼಗುಡ್ ಬೈʼ ಮೂಲಕ ಬಾಲಿವುಡ್‌ಗೆ ಜಿಗಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಕೈ ತುಂಬಾ ಸಿನಿಮಾ, ಜಾಹೀರಾತು ಹೊಂದಿರುವ ನಟಿ. ಅವರು ದೇಶಾದ್ಯಂತ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚೆಗೆ ರಶ್ಮಿಕಾ ಆಭರಣ ಮಳಿಗೆಯೊಂದರ ಉದ್ಘಾಟನೆಗಾಗಿ ದುಬೈಗೆ ತೆರಳಿದ್ದರು. ಈ ವೇಳೆ ಅವರು ತಾವು ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ಜತೆ ನಟಿಸಿದ ʼವಾರಿಸುʼ (Varisu) ಚಿತ್ರ ʼರಂಜಿತಮೆʼ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಎಸ್. ತಮನ್ ಸಂಗೀತ ನೀಡಿದ ʼರಂಜಿತಮೆʼ ಹಾಡು ಸೂಪರ್ ಹಿಟ್ ಆಗಿತ್ತು. ಡ್ಯಾನ್ಸಿಂಗ್ ನಂಬರ್ ಇದಾಗಿದ್ದು, ವಿಜಯ್-ರಶ್ಮಿಕಾ ಹೆಜ್ಜೆ ಹಾಕಿದ ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಇತ್ತೀಚೆಗೆ ದುಬೈಗೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ರಶ್ಮಿಕಾ ವೇದಿಕೆ ಮೇಲೆ ಬಂದಾಗ ನಿರೂಪಕರು ಒಂದರಡು ಹೆಜ್ಜೆ ಹಾಕಲು ಮನವಿ ಮಾಡಿದರು. ಅದಕ್ಕೆ ತಕ್ಕಂತೆ ಡಿಜೆ ʼರಂಜಿತಮೆʼ ಹಾಡು ಪ್ಲೇ ಮಾಡಿದರು. ಬಳಿಕ ರಶ್ಮಿಕಾ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿ ಗಮನ ಸೆಳೆದರು.
Ranjithame dance by @iamRashmika in dubai 😍❤️#RashmikaMandanna #Leo pic.twitter.com/mmw9y9UJ0Q
— ROHIT|| (@Redrayer45) October 1, 2023
ಕಲ್ಯಾಣ್ ಜ್ಯುವೆಲ್ಲರ್ಸ್‌ನ ಬ್ರ್ಯಾಂಡ್ ರಾಯಭಾರಿಯಾಗಿರುವ ರಶ್ಮಿಕಾ ದುಬೈನ ಅಲ್ ಬರ್ಶಾದಲ್ಲಿನ ಹೊಸ ಶೋರೂಂ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಹೆಜ್ಜೆ ಹಾಕಿದ್ದಾರೆ. ʼರಂಜಿತಮೆʼ ಮಾತ್ರವಲ್ಲ ತಮ್ಮ ಸೂಪರ್ ಹಿಟ್ ತೆಲುಗು ಚಿತ್ರ ʼಪುಷ್ಪʼದ ʼಸಾಮಿ ಸಾಮಿʼ ಹಾಡಿಗೂ ಕುಣಿದಿದ್ದಾರೆ. ಅಲ್ಲು ಅರ್ಜುನ್ ಜತೆ ರಶ್ಮಿಕಾ ಅಭಿನಯಿಸಿದ್ದ ʼಪುಷ್ಪʼ ಚಿತ್ರ 2021ರಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡಿತ್ತು. ಸುಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ದೇವಿ ಪ್ರಸಾದ್ ಸಂಗೀತ ನೀಡಿದ್ದರು. ಈ ಚಿತ್ರದ ಹಾಡುಗಳೆಲ್ಲ ಸೂಪರ್ ಹಿಟ್ ಆಗಿದ್ದವು. ಆಭರಣ ಮಳಿಗೆ ಉದ್ಘಾಟನೆ ವೇಳೆ ಸೀರೆ ಸುತ್ತಿ ಅಭಿಮಾನಿಗಳ ಮನ ಕದ್ದಿದ್ದ ರಶ್ಮಿಕಾ ಬಳಿ ಸ್ಪೆಪ್ ಮೂಲಕವೂ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದ್ದಾರೆ. ʼರಂಜಿತಮೆʼ ಹಾಡಿನ ವಿಡಿಯೊವನ್ನು ಎಕ್ಸ್‌ನಲ್ಲಿ ಈಗಾಗಲೇ ಸುಮಾರು 20 ಸಾವಿರ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ʼಸಾಮಿ ಸಾಮಿʼ ಹಾಡಿನ ವಿಡಿಯೊವನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ.
ಇದನ್ನೂ ಓದಿ: Rashmika Mandanna: ಧನುಷ್ ಜತೆ ರಶ್ಮಿಕಾ ರೊಮ್ಯಾನ್ಸ್!
Our Saami Girl 😍💖@iamRashmika #RashmikaMandanna pic.twitter.com/9KGIOslNpk
— Rashmika_Tamil_FC (@RM_Tamil_FC) October 1, 2023
ಸದ್ಯ ರಶ್ಮಿಕಾ ವಿವಿಧ ಭಾಷೆಗಳ ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ರಣಬೀರ್ ಕಪೂರ್ ಜತೆ ನಟಿಸುತ್ತಿರುವ ಬಾಲಿವುಡ್ ಚಿತ್ರ ʼಅನಿಮಲ್ʼನ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಭಾರೀ ಸದ್ದು ಮಾಡುತ್ತಿದೆ. ಇನ್ನು ಬಹು ನಿರೀಕ್ಷಿತ ತೆಲುಗು ಚಿತ್ರ ʼಪುಷ್ಪ 2′ ಚಿತ್ರೀಕರಣ ನಡೆಯುತ್ತಿದೆ. ಮಾತ್ರವಲ್ಲ ‘ರೈನ್ ಬೋ’, ಧನುಷ್ ಜತೆ ‘ಡಿ 51ʼ, ವಿಜಯ್ ದೇವರಕೊಂಡ, ರವಿತೇಜ ಅಭಿನಯದ ಚಿತ್ರಗಳಿಗೂ ರಶ್ಮಿಕಾ ನಾಯಕಿ ಆಯ್ಕೆಯಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬಾಲಿವುಡ್
Boney Kapoor: ನಟಿ ಶ್ರೀದೇವಿ ಸಾವಿನ ಹಿಂದಿನ ಸತ್ಯ ಬಿಚ್ಚಿಟ್ಟ ಪತಿ ಬೋನಿ ಕಪೂರ್! ಅಂದು ಆಗಿದ್ದೇನು?
Boney Kapoor: ಬಾಲಿವುಡ್ ಸ್ಟಾರ್, ಬಹುಭಾಷಾ ನಾಯಕಿ ಶ್ರೀದೇವಿ ಸಾವಿನ ಕುರಿತು ಪತಿ, ನಿರ್ಮಾಪಕ ಬೋನಿ ಕಪೂರ್ ಮುಕ್ತವಾಗಿ ಮಾತನಾಡಿದ್ದಾರೆ. ಶ್ರೀದೇವಿ ಸಾವು ಸಹಜವಲ್ಲ ಆದರೆ ಆಕಸ್ಮಿಕ ಎಂದಿದ್ದಾರೆ.
ಮುಂಬೈ: ಬಾಲಿವುಡ್ ನಟಿ, ಪತ್ನಿ ಶ್ರೀದೇವಿ ಸಾವಿನ ಕುರಿತು ಇದೇ ಮೊದಲ ಬಾರಿ ನಿರ್ಮಾಪಕ ಬೋನಿ ಕಪೂರ್ ಮಾತನಾಡಿದ್ದಾರೆ. 2018ರಲ್ಲಿ ಮೃತಪಟ್ಟ ನಟಿಯ ಸಾವಿನ ಹಿಂದೆ ತಮ್ಮ ಪಾತ್ರ ಇರುವ ಬಗ್ಗೆ ವದಂತಿ ಕೇಳಿ ಬಂದಿರುವ ಹಿನ್ನಲೆಯಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ. ಶ್ರೀದೇವಿ ಅವರ ಸಾವು ಸಹಜವಲ್ಲ. ಆದರೆ ಆಕಸ್ಮಿಕ ಎಂದಿದ್ದಾರೆ. ಈ ಬಗ್ಗೆ ಅವರು ದುಬೈ ಪೊಲೀಸರಿಂದ ಎಲ್ಲಾ ರೀತಿಯ ಪರೀಕ್ಷೆಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ. ಆ ಸಮಯದಲ್ಲಿ ಭಾರತೀಯ ಮಾಧ್ಯಮಗಳಿಂದ ಸಾಕಷ್ಟು ಒತ್ತಡ ಇತ್ತು ಎನ್ನುವುದನ್ನೂ ತಿಳಿಸಿದ್ದಾರೆ.
”ಆ ಬಗ್ಗೆ ನಾನು ಮಾತನಾಡದಿರಲು ನಿರ್ಧರಿಸಿದ್ದೆ. ತನಿಖೆ ವೇಳೆ ನಾನು ಈ ಬಗ್ಗೆಯೇ ಸುಮಾರು 24ರಿಂದ 48 ಗಂಟೆಗಳ ಕಾಲ ಮಾತನಾಡಿದ್ದೆ. ಹೀಗಾಗಿ ನಾನು ದುಬೈ ಪೊಲೀಸ್‌ನಿಂದ ಕ್ಲೀನ್ ಚಿಟ್ ಪಡೆದುಕೊಂಡಿದ್ದೆ. ಮಾತ್ರವಲ್ಲ ನಾನು ತನಿಖೆಗೆ ಪೊಲೀಸರ ಜತೆ ಎಲ್ಲಾ ರೀತಿಯಲ್ಲೂ ಸಹಕರಿಸಿದ್ದೆ. ಸುಳ್ಳು ಪತ್ತೆ ಹಚ್ಚುವ ಪರೀಕ್ಷೆ ಸಹಿತ ಎಲ್ಲಾ ಪರೀಕ್ಷೆಗಳಿಗೆ ಒಳಗಾಗಿದ್ದೆ. ಕೊನೆಗೆ ಇದು ನೀರಿನಲ್ಲಿ ಮುಳುಗಿ ಸಂಭವಿಸಿದ ಆಕಸ್ಮಿಕ ಸಾವು ಎನ್ನುವ ವರದಿ ಬಂತುʼʼ ಎಂದು ಬೋನಿ ಕಪೂರ್ ಹೇಳಿದ್ದಾರೆ.
ಡಯಟ್ ಮಾಡುತ್ತಿದ ಶ್ರೀದೇವಿ
ಶ್ರೀದೇವಿ ಕೈಗೊಳ್ಳುತ್ತಿದ್ದ ಡಯಟ್ ಬಗ್ಗೆಯೂ ಬೋನಿ ಕಪೂರ್ ಮಾತನಾಡಿದ್ದಾರೆ. ʼʼಅವರು ಆಹಾರ ವಿಚಾರದಲ್ಲಿ ಬಹಳ ಕಟ್ಟುನಿಟ್ಟಾಗಿದ್ದರು. ಕುಟುಂಬ ವೈದ್ಯರು ಪಥ್ಯ ಅಳವಡಿಸಿಕೊಳ್ಳಲು ಸಲಹೆ ನೀಡಿದ್ದರು. ಅದರಂತೆ ಶ್ರೀದೇವಿ ಹಸಿವಿನಿಂದ ಬಳಲುತ್ತಿದ್ದರೂ ಚೆನ್ನಾಗಿ ಕಾಣಬೇಕು ಎಂದು ಬಯಸಿದ್ದರುʼʼ ಎಂದು ಬೋನಿ ಕಪೂರ್ ಹೇಳಿದ್ದಾರೆ.
ʼʼಶ್ರೀದೇವಿ ತಮ್ಮ ದೇಹದ ಆಕಾರ ಉತ್ತಮವಾಗಿ ಇರಿಸಿಕೊಳ್ಳಲು ಸದಾ ಗಮನ ಹರಿಸುತ್ತಿದ್ದರು. ಹಿಂದೊಮ್ಮೆ ಅವರು ʼಇಂಗ್ಲಿಷ್ ವಿಂಗ್ಲಿಷ್ʼ ಚಿತ್ರಕ್ಕಾಗಿ ದೇಹವನ್ನು 46-47 ಕೆಜಿಗೆ ಇಳಿಸಿಕೊಂಡಿದ್ದರು. ಮಾತ್ರವಲ್ಲ ಅವರು ಉಪ್ಪನ್ನು ಸೇವಿಸುತ್ತಿರಲಿಲ್ಲʼʼ ಎಂದು ವಿವರಿಸಿದ್ದಾರೆ.
ʼʼಮದುವೆಯಾದಾಗಿನಿಂದ ಗಮನಿಸುತ್ತಿದ್ದೆ. ಆಕೆ ಕಟ್ಟುನಿಟ್ಟಿನ ಜೀವನ ಕ್ರಮ ಅನುಸರಿಸುತ್ತಿದ್ದರು. ಕಠಿಣ ಡಯಟ್ ಫಾಲೋ ಮಾಡುತ್ತಿದ್ದರು. ಲೋ ಬಿಪಿಯ ಅಪಾಯದ ಬಗ್ಗೆ ಆಗಾಗ ವೈದ್ಯರು ಸೂಚಿಸುತ್ತಿದ್ದರು. ಉಪ್ಪು ತಿನ್ನದಿರುವ ಆಹಾರ ಕ್ರಮ ಅನುಸರಿಸಬೇಡಿ ಎಂದು ಎಚ್ಚರಿಸುತ್ತಿದ್ದರು. ಆದರೆ ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಶ್ರೀದೇವಿ ಮೃತಪಟ್ಟಾಗ ನಟ ನಾಗಾರ್ಜುನ ಸಾಂತ್ವನ ಹೇಳಲು ಬಂದಿದ್ದರು. ಆಗ ಅವರು ಒಂದು ಸಿನಿಮಾಕ್ಕಾಗಿ ಕಠಿಣ ಡಯಟ್ ಮಾಡಿ ಬಾತ್‌ರೂಮ್‌ನಲ್ಲಿ ತಲೆ ತಿರುಗಿ ಬಿದ್ದು ಹಲ್ಲು ಮುರಿದುಕೊಂಡ ಘಟನೆಯನ್ನು ವಿವರಿಸಿದ್ದರುʼʼ ಎಂದು ಬೋನಿ ಕಪೂರ್ ತಿಳಿಸಿದ್ದಾರೆ.
ಇದನ್ನೂ ಓದಿ: Actress Sridevi: ಮದುವೆಯಾಗುವಾಗ ಶ್ರೀದೇವಿ ಗರ್ಭಿಣಿಯಾಗಿದ್ದರೆ? ಬೋನಿ ಕಪೂರ್ ಹೇಳಿದ್ದೇನು?
2018ರಲ್ಲಿ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಶ್ರೀದೇವಿ ಕುಟುಂಬ ಸಮೇತ ದುಬೈಗೆ ತೆರಳಿದ್ದರು. ಈ ವೇಳೆ ಹೋಟೆಲ್‌ನ ಬಾತ್‌ಟಬ್‌ನಲ್ಲಿ ಮುಳುಗಿ ಶ್ರೀದೇವಿ ಮೃತಪಟ್ಟಿದ್ದರು. ಇದು ಅನುಮಾನಗಳನ್ನನು ಹುಟ್ಟು ಹಾಕಿತ್ತು. ಹೀಗಾಗಿ ಬೋನಿ ಕಪೂರ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್ ಶ್ರೀದೇವಿ-ಬೋನಿ ಕಪೂರ್ ದಂಪತಿಯ ಮಕ್ಕಳು. ಸದ್ಯ ಜಾಹ್ನವಿ ಚಿತ್ರಗಳಲ್ಲಿ ನಟಿಸುತ್ತಿದ್ದು, ಖುಷಿ ಶೀಘ್ರದಲ್ಲಿಯೇ ಪಾದಾರ್ಪಣೆ ಮಾಡುವ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
ಪ್ರಮುಖ ಸುದ್ದಿ24 hours ago
Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!
-
ಕಿರುತೆರೆ14 hours ago
BBK Season 10 : ಅಕ್ಟೋಬರ್ 8 ರಿಂದ ಬಿಗ್ ಬಾಸ್ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?
-
ದೇಶ19 hours ago
Raid On NewsClick: ನ್ಯೂಸ್ಕ್ಲಿಕ್ನ 30 ಪತ್ರಕರ್ತರ ಮನೆಗಳ ಮೇಲೆ ಪೊಲೀಸರ ದಾಳಿ, ಏನಿದು ಕೇಸ್?
-
ಕರ್ನಾಟಕ15 hours ago
Namma Metro: ಮೆಟ್ರೋ ಟ್ರ್ಯಾಕ್ನಲ್ಲಿ ಲಾಕ್ ಆದ ಮೆಂಟೈನ್ಸ್ ವೆಹಿಕಲ್! ಮೇಲೆತ್ತಲು ಕ್ರೇನ್ ಬಳಕೆ
-
ಕ್ರೈಂ20 hours ago
4 ವರ್ಷದಿಂದ ಇಬ್ಬರು ಪುತ್ರಿಯರ ಮೇಲೆಯೇ ಅತ್ಯಾಚಾರ ಎಸಗಿದ ಪಾಪಿಯ ಬಂಧನ; ಇವನೆಂಥಾ ತಂದೆ?
-
ಕರ್ನಾಟಕ13 hours ago
Namma Metro : ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್ ವೆಹಿಕಲ್; ಎಂದಿನಂತೆ ಮೆಟ್ರೋ ಓಡಾಟ
-
ಉತ್ತರ ಕನ್ನಡ15 hours ago
Karwar Tunnel Route : ಕಾರವಾರ ರಾಷ್ಟ್ರೀಯ ಹೆದ್ದಾರಿ 66ರ ಸುರಂಗ ಮಾರ್ಗ ಕೊನೆಗೂ ಸಂಚಾರ ಮುಕ್ತ!
-
ಕರ್ನಾಟಕ11 hours ago
Lecturer Death : ಬಿಜಿಎಸ್ ಕಾಲೇಜಿನ ಉಪನ್ಯಾಸಕ ನೇಣಿಗೆ ಶರಣು; ಸಾವಿನ ಸುತ್ತ ಅನುಮಾನದ ಹುತ್ತ