Site icon Vistara News

Tamannaah Bhatia: ಹಿಂದಿ ವರ್ಷನ್‌ ʻಕಾವಾಲಾʼ ಸಾಂಗ್‌ಗೆ ಸ್ಟೆಪ್ಸ್‌ ಹಾಕಿದ ಮಿಲ್ಕಿ ಬ್ಯೂಟಿ ತಮನ್ನಾ!

Tamannaah Bhatia

ಬೆಂಗಳೂರು: ರಜನಿಕಾಂತ್ ಮುಂಬರುವ ಚಿತ್ರ ಜೈಲರ್‌ ಸಿನಿಮಾ ಬಿಡುಗಡೆಗೆ ಫ್ಯಾನ್ಸ್‌ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ತಮನ್ನಾ ಭಾಟಿಯಾ (Tamannaah Bhatia) ಅವರ ʻಕಾವಾಲಾʼ ಹಾಡಿನ ಹುಕ್‌ ಸ್ಟೆಪ್ಸ್‌ ಈಗಾಗಲೇ ಇಂಟರ್‌ನೆಟ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ʻಕಾವಾಲಾʼ ಹಾಡಿನ ರೀಲ್ಸ್‌ಗಳು ವೈರಲ್‌ ಆಗುತ್ತಿವೆ. ಮುಂಬೈನಲ್ಲಿ ಚಿತ್ರತಂಡ ʻಕಾವಾಲಾʼ ಹಾಡಿನ ಹಿಂದಿ ಆವೃತ್ತಿಯ ಬಿಡುಗಡೆ ಕಾರ್ಯಮವನ್ನು ಹಮ್ಮಿಕೊಂಡಿತ್ತು. ʻತು ಆ ದಿಲ್ಬರಾʼ ಹಾಡಿನ ಹಿಂದಿ ಆವೃತ್ತಿಯ ಬಿಡುಗಡೆ ಕಾರ್ಯಕ್ರಮ ವೇಳೆ ತಮನ್ನಾ ಕಾವಾಲಾ ಹಾಡಿಗೆ ವೇದಿಕೆ ಮೆಲೆ ಸ್ಟೆಪ್ಸ್‌ ಹಾಕಿದ್ದಾರೆ. ಇದೀಗ ಈ ವಿಡಿಯೊ ವೈರಲ್‌ ಆಗುತ್ತಿದೆ.

ಕಾವಾಲಾ ಹಾಡು ವೈರಲ್‌ ಆಗುತ್ತಿದ್ದಂತೆ ತಮನ್ನಾ ಸ್ಟೆಪ್ಸ್‌ ಖ್ಯಾತ ಪಾಪ್ ಗಾಯಕಿ ಶಕೀರಾ ಅವರ ‘ವಾಕಾ ವಾಕಾ’ ಹಾಡಿಗೆ ನೆಟ್ಟಿಗರು ಹೋಲಿಸಲು ಶುರು ಮಾಡಿದ್ದರು. ತಮಿಳು ಆವೃತ್ತಿಯನ್ನು ಶಿಲ್ಪಾ ರಾವ್ ಹಾಡಿದ್ದರೆ, ಹಿಂದಿ ಆವೃತ್ತಿಯನ್ನು ಸಿಂಧೂಜಾ ಶ್ರೀನಿವಾಸನ್ ಹಾಡಿದ್ದಾರೆ.

ಇದೀಗ ಈ ಕಾರ್ಯಕ್ರಮದ ವಿಡಿಯೊ ವೈರಲ್‌ ಆಗುತ್ತಿದ್ದಂತೆʻʻ ಅದ್ಭುತವಾದ ನೃತ್ಯ” ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ. ತಮನ್ನಾ ಭಾಟಿಯಾ ತು ಆ ದಿಲ್ಬರಾ ಪತ್ರಿಕಾಗೋಷ್ಠಿಯಲ್ಲಿ, ಕಾವಾಲಾ ಮೂಲ ಗೀತೆಗೆ ತಾನು ಸ್ವೀಕರಿಸುತ್ತಿರುವ ಅಗಾಧ ಪ್ರತಿಕ್ರಿಯೆಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಪ್ರೇಕ್ಷಕರ ಪ್ರೀತಿ ಮತ್ತು ಬೆಂಬಲವೇ ಕಾವಾಲಾವನ್ನು ಇಷ್ಟು ದೊಡ್ಡ ಹಿಟ್ ಮಾಡಲು ಕಾರಣವಾಗಿದೆ ಎಂದು ಹೇಳಿದರು. ಇದೀಗ ಹಿಂದಿ ಆವೃತ್ತಿಯು ಪ್ರೇಕ್ಷಕರಿಗೆ ಅಷ್ಟೇ ಇಷ್ಟವಾಗಲಿದೆ ಎಂದು ಹೇಳಿದರು.

ಇದನ್ನೂ ಓದಿ: Kaavaalaa Song: ಪಾಪ್ ಗಾಯಕಿ ʻಶಕೀರಾʼ ಜತೆ ಹೋಲಿಸಿದ್ರು ನೆಟ್ಟಿಗರು; ತಮನ್ನಾ ‘ಕಾವಾಲಾ’ ಸಾಂಗ್ ಸೆನ್ಸೇಷನ್‌!

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್, ರಜನಿಕಾಂತ್ ಅಭಿಮಾನಿಗಳಿಗೆ ಆಕ್ಷನ್-ಪ್ಯಾಕ್ಡ್ ಟ್ರೀಟ್ ಆಗಲಿದೆ. ಸೂಪರ್‌ಸ್ಟಾರ್ ಜೊತೆಗೆ, ಚಿತ್ರದಲ್ಲಿ ಜಾಕಿ ಶ್ರಾಫ್, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್ ಮತ್ತು ಮೋಹನ್‌ಲಾಲ್ ಅವರ ವಿಶೇಷ ಅತಿಥಿ ಪಾತ್ರವನ್ನು ಒಳಗೊಂಡಂತೆ ತಾರಾ ಬಳಗವಿದೆ. ಚಿತ್ರವು ಆಗಸ್ಟ್ 10 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ.

ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ಜಾನಿ ಮಾಸ್ಟರ್ ಈ ಮ್ಯೂಸಿಕ್ ವಿಡಿಯೊಗೆ ಕೊರಿಯೋಗ್ರಫಿ ಮಾಡಿದ್ದಾರೆ. ನೆಲ್ಸನ್ ದಿಲೀಪ್‌ಕುಮಾರ್ ಬರೆದು ನಿರ್ದೇಶಿಸಿದ ‘ಜೈಲರ್’ ಸಿನಿಮಾ ಇದೇ ಆಗಸ್ಟ್ 10ರಂದು ಬಿಡುಗಡೆಯಾಗಲಿದೆ. ʻಜೈಲರ್ ಮುತ್ತುವೇಲ್ ಪಾಂಡಿಯನ್ʼ ಪಾತ್ರದಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. ತಮನ್ನಾ ಭಾಟಿಯಾ ಪ್ರಮುಖ ಪಾತ್ರದಲ್ಲಿದ್ದಾರೆ.

ಜಾಕಿ ಶ್ರಾಫ್, ಶಿವರಾಜ್‌ಕುಮಾರ್, ರಮ್ಯಾ ಕೃಷ್ಣನ್, ಯೋಗಿ ಬಾಬು, ವಸಂತ ರವಿ ಮತ್ತು ವಿನಾಯಕನ್ ಕೂಡ ‘ಜೈಲರ್‌’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಜೈಲರ್ ಚಿತ್ರದಲ್ಲಿ ಜಾಫರ್ ಸಾದಿಕ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

Exit mobile version