Site icon Vistara News

Junior Balaiah: ಉಸಿರಾಟದ ಸಮಸ್ಯೆಯಿಂದ ನಟ ಜ್ಯೂನಿಯರ್ ಬಾಲಯ್ಯ ವಿಧಿವಶ

Junior Balaiah

ಬೆಂಗಳೂರು: ತಮಿಳು ನಟ ಜ್ಯೂನಿಯರ್ ಬಾಲಯ್ಯ ಚೆನ್ನೈನ (Tamil actor Junior Balaiah) ತಮ್ಮ ನಿವಾಸದಲ್ಲಿ ನವೆಂಬರ್‌ 2ರಂದು ನಿಧನರಾದರು. ಜ್ಯೂನಿಯರ್ ಬಾಲಯ್ಯ ಎಂದೇ ಖ್ಯಾತರಾಗಿದ್ದ ಹೆಸರಾಂತ ನಟ ರಘು ಬಾಲಯ್ಯ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಜ್ಯೂನಿಯರ್ ಬಾಲಯ್ಯ ಕರಕಾಟಕ್ಕರಣ (Karakatakkara), ಗೋಪುರ ವಾಸಲೀಲೆ, ಸುಂದರಕಾಂಡಂ ಸೇರಿದಂತೆ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. 2010ರ ದಶಕದಲ್ಲಿ, ಬಾಲಯ್ಯ ತಮಿಳು ಚಲನಚಿತ್ರಗಳಲ್ಲಿ ಅಪರೂಪವಾಗಿ ಕಾಣಿಸಿಕೊಂಡರು. ಸಾಟ್ಟೈ (Saattai ) (2012)ಸಿನಿಮಾದಲ್ಲಿಯ ಮುಖ್ಯೋಪಾಧ್ಯಾಯ ಪಾತ್ರಕ್ಕಾಗಿ ಮೆಚ್ಚುಗೆ ಗಳಿಸಿದರು. ವರದಿಗಳ ಪ್ರಕಾರ ಅವರ ಅಂತ್ಯಕ್ರಿಯೆ ಗುರುವಾರ ಸಂಜೆ ನಡೆಯಲಿದೆ ಎನ್ನಲಾಗಿದೆ.

ಜ್ಯೂನಿಯರ್ ಬಾಲಯ್ಯ ಯಾರು?

ಜ್ಯೂನಿಯರ್ ಬಾಲಯ್ಯ ಅವರ ಮೂಲ ಹೆಸರು ರಘು ಬಾಲಯ್ಯ. ತಮಿಳು ಚಿತ್ರರಂಗದ ಪ್ರಮುಖ ನಟ ಟಿ ಎಸ್ ಬಾಲಯ್ಯ ಅವರ ಮಗ. 1953ರ ಜೂನ್ 28ರಂದು ಜನಿಸಿದ ಜ್ಯೂನಿಯರ್ ಬಾಲಯ್ಯ ಅವರು ಚಲನಚಿತ್ರಗಳಿಗಿಂತ ಮೊದಲು ಕೆಲವು ನಾಟಕಗಳಲ್ಲಿ ನಟಿಸಿದ್ದರು. ಶಿವಕುಮಾರ್ ಅಭಿನಯದ ʻಮೇಲ್ನಟ್ಟು ಮರುಮಾಲ್ʼ ( Melnattu Marumaal) ಚಿತ್ರದ ಮೂಲಕ ವೃತ್ತಿಜೀವನವನ್ನು ಪ್ರಾರಂಭಿಸಿದರು. ವಿವಿಧ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸುವುದನ್ನು ಮುಂದುವರಿಸಿದರು.’ತ್ಯಾಗ’ ಸಿನಿಮಾದಲ್ಲಿ ಶಿವಾಜಿಗಣೇಶನ್ ಜತೆಗೆ ಮತ್ತು ಕಮಲ್ ಹಾಸನ್ ಅವರ ಸ್ನೇಹಿತರಲ್ಲಿ ಒಬ್ಬರಾಗಿ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಪರಮ ತಪೋನಿಧಿ ಮಾನವ ಧರ್ಮದ ದೇದೀಪ್ಯ ಶ್ರೀ ಜಗದ್ಗುರು ವೀರಗಂಗಾಧರ ಭಗವತ್ಪಾದರು

ಜ್ಯೂನಿಯರ್ ಬಾಲಯ್ಯ ಅವರು ಗಂಗೈ ಅಮರನ್ ನಿರ್ದೇಶನದ ಕರಕಟ್ಟಕಾರನ್ ಎಂಬ ಹಿಟ್ ಚಿತ್ರದ ಭಾಗವಾಗಿದ್ದರು ಕೂಡ. ಅಮ್ಮ ವಂದಾಚು ಮತ್ತು ರಾಸುಕುಟ್ಟಿ ಸೇರಿದಂತೆ ವಿವಿಧ ಚಿತ್ರಗಳಲ್ಲಿ ನಟಿಸಿದ ನಂತರ, ಸಾಟ್ಟೈನಲ್ಲಿನ ಪಾತ್ರಕ್ಕಾಗಿ ಅವರು ಮೆಚ್ಚುಗೆ ಗಳಿಸಿದರು. ಥನಿ ಒರುವನ್, ಪುಲಿ, ನೇರ್ ಕೊಂಡ ಪರ್ವಿ ಮುಂತಾದ ಸಿನಿಮಾಗಳಲ್ಲೂ ನಟಿಸಿದ್ದರು.

ಚಲನಚಿತ್ರಗಳಲ್ಲದೆ, ಅವರು ಚಿತಿ, ವಜ್ಕೈ ಮತ್ತು ಚಿನ್ನ ಪಾಪ ಪೆರಿಯಾ ಪಾಪಾ ಸೇರಿದಂತೆ ದೂರದರ್ಶನ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಂಡರು. 2019ರಲ್ಲಿ, ಅಜಿತ್ ಕುಮಾರ್ ಅವರ ನೇರ್ಕೊಂಡ ಪಾರ್ವೈ, ಪಿಂಕ್‌ ತಮಿಳು ರಿಮೇಕ್‌ನಲ್ಲಿ ಕಾಣಿಸಿಕೊಂಡರು. ಜ್ಯೂನಿಯರ್ ಬಾಲಯ್ಯ ಅವರ ಕೊನೆಯ ಚಿತ್ರ 2021ರಲ್ಲಿ ಬಿಡುಗಡೆಯಾದ ಯೆನ್ನಂಗ ಸರ್ ಉಂಗಾ ಸತ್ತಂ ಆಗಿತ್ತು.

Exit mobile version