Site icon Vistara News

Tamil actress Sindhu: ದಯಾ ಮರಣ ನೀಡುವಂತೆ ಕೋರಿ, ಚಿಕಿತ್ಸೆಗೆ ಹಣವಿಲ್ಲದೇ ಪ್ರಾಣ ಬಿಟ್ಟ ನಟಿ

Tamil actress Sindhu

ಬೆಂಗಳೂರು: ವಸಂತಬಾಲನ್ ಅವರ ಕಲ್ಟ್ ಕ್ಲಾಸಿಕ್ ಸಿನಿಮಾ ‘ಅಂಗಡಿ ತೇರು’ (Angadi Theru) ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ನಟಿ ಸಿಂಧು (Tamil actress Sindhu) ಅವರು ಚೆನ್ನೈನ ವಲಸರವಕ್ಕಂ ನಿವಾಸದಲ್ಲಿ ಸ್ತನ ಕ್ಯಾನ್ಸರ್ ವಿರುದ್ಧ ಸುದೀರ್ಘ ಹೋರಾಡಿದ ಬಳಿಕ ಆಗಸ್ಟ್‌ 7ರಂದು ನಿಧನರಾದರು. ನಟಿಗೆ 44 ವರ್ಷ ವಯಸ್ಸಾಗಿತ್ತು. ಚಿಕಿತ್ಸೆಗಾಗಿ ಹಣ ಹೊಂದಿಸಲು ಸಾಧ್ಯವಾಗದೇ ಇಹಲೋಕ ತ್ಯಜಿಸಿದ್ದಾರೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಕೂಡ ಅವರು ತಮ್ಮ ಸ್ತನ ಕ್ಯಾನ್ಸರ್ ಬಗ್ಗೆ ಹಂಚಿಕೊಂಡು ಕಣ್ಣೀರು ಹಾಕಿದ್ದರು. ವೈದ್ಯರು ಆಕೆಯ ಒಂದು ಸ್ತನವನ್ನು ಕತ್ತರಿಸಿದ್ದಾರೆ ಎಂದು ಅವರು ಹೇಳಿದ್ದರು. ಅಂತಹ ನೋವು ಮತ್ತು ಸಂಕಟದಿಂದ ಬದುಕಲು ನಾನು ಬಯಸುವುದಿಲ್ಲ ಎಂದೂ ನಟಿ ನೋವಿನಿಂದ ನುಡಿದಿದ್ದರು. ದಯಾ ಮರಣ ನೀಡುವಂತೆಯೂ ವಿನಂತಿಸಿದ್ದರು.

ನಟಿ 2020 ರಲ್ಲಿ ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿದ್ದರು ಮತ್ತು ಹಲವಾರು ಚಿಕಿತ್ಸೆಗಳೊಂದಿಗೆ ಸುದೀರ್ಘ ಹೋರಾಟವನ್ನು ನಡೆಸಿದರು. ಕೊನೆಗೆ ಚಿಕಿತ್ಸೆಗಾಗಿ ಹಣ ಹೊಂದಿಸಲು ಸಾಧ್ಯವಾಗದೇ ಇಹಲೋಕ ತ್ಯಜಿಸಿದ್ದಾರೆ. ಕಿಲ್ಪಾಕ್‌ನ ಖಾಸಗಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಬಡತನದ ಹಿನ್ನೆಲೆಯಿಂದ ಬಂದ ಸಿಂಧು ಅವರು ‘ಅಂಗಡಿ ತೇರು’ ಮತ್ತು ‘ನಾಡೋಡಿಗಳು’ ಮೂಲಕ ಖ್ಯಾತಿ ಗಳಿಸುವ ಮೊದಲು ಕೆಲವು ಚಲನಚಿತ್ರಗಳಲ್ಲಿ ಬಾಲ್ಯ ನಟಿಯಾಗಿ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ: Shruti Shanmuga Priya: ಕೆಟ್ಟ ಚಟಗಳೇ ಅರವಿಂದ್‌ಗೆ ಮುಳುವಾಯ್ತಾ? ಕಿರುಕುಳ ನೀಡಬೇಡಿ ಎಂದ ನಟಿ ಶ್ರುತಿ!

ಮನೆಯಲ್ಲಿ ಬಡತನವಿದ್ದುದರಿಂದ ಚಲನಚಿತ್ರಗಳಲ್ಲಿ ನಟಿಸುವ ಅನಿವಾರ್ಯತೆ ಅವರಿಗೆ ಇತ್ತು. ಸಿಂಧು ಅವರು ತಮ್ಮ 14 ನೇ ವಯಸ್ಸಿನಲ್ಲಿ ಮದುವೆಯಾಗಿದ ಮಗುವಿಗೆ ತಾಯಿಯಾಗಿದ್ದರು. ಅವರ ವೈವಾಹಿಕ ಜೀವನದ ಕೂಡ ನೋವಿನಿಂದಲೇ ಕೂಡಿತ್ತು. ಪತಿ ಹಿಂಸೆ ನೀಡುತ್ತಿದ್ದರು. ಆದ್ದರಿಂದ ಸಿಂಧು ಅವರು ಮಗುವನ್ನು ಬೆಳೆಸಲು ಸಾಕಷ್ಟು ಹೆಣಗಾಡಿದ್ದರು.

Exit mobile version