Site icon Vistara News

Amrithadhare Serial Kannada: `ಅಮೃತಧಾರೆ’ಸೆಟ್‌ನಲ್ಲಿ ʻನಾನು ನಂದಿನಿʼ ಸ್ಟೆಪ್‌; ಎಲ್ಲೆಲ್ಲೂ  ವಿಕ್ಕಿಪೀಡಿಯಾ ಸಾಂಗ್‌ ಗುಂಗು!

Sara annaiah nanu nandini reels Viral

ತಮ್ಮ ವಿಭಿನ್ನ ಕಾಮಿಡಿ ವಿಡಿಯೊಗಳಿಂದ ವಿಡಿಯೊ ಕ್ರಿಯೇಟರ್ ವಿಕಾಸ್ ( ವಿಕ್ಕಿ ಪೀಡಿಯಾ) (Vicky Pedia) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚಿನ ʻನಾನು ನಂದಿನಿʼ ಹಾಡಿಗೆ ರೀಲ್ಸ್‌ ಮಾಡುವರ ಸಂಖ್ಯೆ ಹೆಚ್ಚಾಗಿದೆ. ಇದೀಗ ʻಅಮೃತಧಾರೆʼ ಧಾರಾವಾಹಿ (Amrithadhare Serial Kannada) ಖ್ಯಾತಿಯ ಸಾರಾ ಅಣ್ಣಯ್ಯ ಈ ಹಾಡಿಗೆ ರೀಲ್ಸ್‌ ಮಾಡಿದ್ದಾರೆ. ಸಾರಾ (sara annaiah) ಅವರಿಗೆ ಸಹ ನಟ ಶಶಿಧರ್ ಹೆಗ್ಡೆ ಸಾಥ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ವಿಕ್ಕಿ ಪೀಡಿಯಾ ಅವರ ಈ ರೀಲ್ಸ್‌ 15 ಮಿಲಿಯನ್‌ಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.

“ನಾನು ನಂದಿನಿ ಬೆಂಗಳೂರಿಗ್ ಬಂದಿನಿ” ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಲಕ್ಷ ಲಕ್ಷ ವ್ಯೂಸ್ ಸಾಧಿಸಿ ದಾಖಲೆ ಬರೆದಿದೆ. ಇದೀಗ ಅಮೃತಧಾರೆ ಧಾರಾವಾಹಿಯ ಕಲಾವಿದರು ಈ ಹಾಡಿಗೆ ರೀಲ್ಸ್‌ ಮಾಡಿದ್ದು, ಸಖತ್‌ ಫೇಮಸ್‌ ಆಗಿದೆ. ಬಿಗ್ ಬಾಸ್ ಖ್ಯಾತಿಯ ವೈನ್‌ ಸ್ಟೋರ್ ರಘು, ದಿವ್ಯಾ ಉರುಡುಗ, ನಿರೂಪಕಿ ಅನುಪಮಾ ಗೌಡ, ನಟಿ ಚೈತ್ರಾ ಆಚಾರ್, ಚಂದನಾ ಅನಂತಕೃಷ್ಣ ಸೇರಿದಂತೆ ಹಲವರು ಈ ವಿಡಿಯೊ ನೋಡಿ ಮೆಚ್ಚಿಕೊಂಡಿದ್ದಾರೆ. ಇನ್ನ ಮೀಮ್ಸ್‌ ಪೇಜ್‌ಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ.

ವಿಕ್ಕಿಪೀಡಿಯಾ ಖ್ಯಾತಿಯ (Vicky Pedia) ವಿಕಾಸ್‌ (vickypedia) ಕಂಟೆಂಟ್ ಕ್ರಿಯೇಟರ್. ಭಾಷಣ ಟ್ರಾನ್ಸ್‌ಲೇಟ್‌ ವಿಡಿಯೊ ಅಣಕ ಮಾಡಿ ಇವರು ಸಾಕಷ್ಟು ಫೇಮಸ್ ಆಗಿದ್ದರು. ಚುನಾವಣಾ ಸಮಯದಲ್ಲಿ ರಾಷ್ಟ್ರಮಟ್ಟದ ನಾಯಕರ ಹಿಂದಿ ಭಾಷೆಯ ಭಾಷಣವನ್ನು ಸಖತ್‌ ಆಗಿ ಕಾಮಿಡಿಯಾಗಿ ಅಣುಕಿಸಿದ್ದರು. ಆದರೀಗ ಹೆಣ್ಣು ಮಕ್ಕಳು ಉದ್ಯೋಗಕ್ಕೆಂದು ನಗರಕ್ಕೆ ಬಂದು, ಪಿಜಿಯಲ್ಲಿ ಯಾವ ರೀತಿ ಸಮಸ್ಯೆಗೆ ಗುರಿಯಾಗುತ್ತಾರೆ, ಅಷ್ಟೇ ಅಲ್ಲದೇ ಕನ್ನಡ ಮೀಡಿಯಂನಲ್ಲಿ ಓದಿದ ಕಾರಣಕ್ಕೆ ಇಂಗ್ಲಿಷ್ ಬಾರದೇ ಏನೆಲ್ಲಾ ಸಮಸ್ಯೆಗೆ ಗುರಿಯಾಗುತ್ತಾರೆ ಎಂಬುದನ್ನು ವಿಡಿಯೊ ಮೂಲಕ ಹಾಡಿದ್ದಾರೆ.

ಇದನ್ನೂ ಓದಿ: Viral Video: ನಾನು ನಂದಿನಿ ಬೆಂಗಳೂರು ಬಂದಿನಿ; ಭಾರಿ ವೀಕ್ಷಣೆ ಕಂಡ ವಿಕ್ಕಿಪೀಡಿಯಾ ಹಾಡು!

ಸಾರಾ ಅಣ್ಣಯ್ಯ ಪೋಸ್ಟ್‌

ವಿಡಿಯೊದಲ್ಲಿ ವಿಕ್ಕಿಪೀಡಿಯಾ ವಿಕ್ಕಿ ಪಿಂಕ್‌ ವಿಗ್‌ ಧರಿಸಿ, ಬಾರ್ಬಿ ಹಾಡಿನ ಟ್ಯೂನ್‌ ಬಳಸಿಕೊಂಡು ಈ ಹಾಡು ಹಾಡಿದ್ದಾರೆ. ‘ನಾನು ನಂದಿನಿ ಬೆಂಗಳೂರು ಬಂದಿನಿ, ಪಿಜಿಲಿ ಇದ್ದೀನಿ, ಐಟಿ ಕೆಲಸ ಮಾಡ್ತೀನಿ, ಊಟ ಸರಿ ಇಲ್ಲ ಅಂದ್ರೂನು ತಿಂತಿನಿ, ಬಂದ ದುಡ್ಡೆಲ್ಲಾ ಮನೆಗೆ ಕಳಿಸ್ತೀನಿ, ಬಾರೆ ನಂದಿನಿ ಗೋಬಿ ತಿನಿಸ್ತೀನಿ ಬೇ ಬೇ ಬೇಡ, ಬಾರೆ ನಂದಿನಿ ಬೆಂಗಳೂರು ತೋರಿಸ್ತೀನಿ, ಓಹ್ ಬೇಡ ಓಹ್ ಬೇಡ, ಬಾರೆ ನಂದಿನಿ ಪೇಡ ತಿನ್ನಿಸ್ತೀನಿ, ಬೆ ಬೆ ಬೇಡ, ಬಾರೆ ನಂದಿನಿ ಪಿಕ್ಚರ್ ತೋರಿಸ್ತೀನಿ, ಬೇಡ ಬೇಡ, ನೋಡಮ್ಮ ಇಂಗ್ಲೀಷ್ ನೀನು ಕಲಿಬೇಕು, ಇಲ್ಲ ಅಂದ್ರೆ ಐಟಿಲಿ ಕಷ್ಟ ಆಗುತ್ತೆ ಸರ್ ನಾನು ಕನ್ನಡ ಮೀಡಿಯಾಂನಲ್ಲಿ ಓದಿದ್ದೆ. ಅದಕ್ಕೆ ನನ್ನ ಇಂಗ್ಲೀಷ್ ಅಷ್ಟಕಷ್ಟೆ, ಐ ಕ್ಯಾನ್ ಟ್ರೈ ಐ ಕ್ಯಾನ್ ಟಾಕ್, ಬಟ್ ವಾಟ್ ಐ ಸ್ಪೀಕ್ ಇಟ್ಸ್ ಬಟ್ಲರ್ ಇಂಗ್ಲೀಷ್’ ಇದು ಈ ಹಾಡಿನ ಲಿರೀಕ್ಸ್‌ ಆಗಿದೆ. ಪೋಷಕರು ಕೂಡ ಮಕ್ಕಳೊಂದಿಗೆ ರೀಲ್ಸ್‌ ಮಾಡಿದ್ದಾರೆ.

Exit mobile version