ಧಾರಾವಾಹಿಯಲ್ಲಿ (Amrithadhare Serial) ಪ್ರೇಕ್ಷಕರು ಹೆಚ್ಚಾಗಿ ನಯಸೋದು ನಾಯಕ ನಾಯಕಿ ಒಂದಾಗಬೇಕು ಎಂದು. ಇದೀಗ ಅಮೃತಧಾರೆ ಸೀರಿಯಲ್ನಲ್ಲಿಯೂ ಅದೇ ರೀತಿ ಆಗಿದ್ದು, ಭೂಮಿಕಾ ಮತ್ತು ಗೌತಮ್ ಪಾತ್ರಧಾರಿಗಳ ನಟನೆಗೆ ವೀಕ್ಷಕರು ಕಣ್ಣೀರು ಹಾಕಿ, ನೂರುಕಾಲ ಹೀಗೆ ಚೆನ್ನಾಗಿ ಇರಿ ಎಂದು ಹಾರೈಸಿದ್ದಾರೆ.
ಗೌತಮ್‌ನ ಒಲವಿನ ಮಾತು..ಭೂಮಿಕಾಗೆ ಹೊಸ ಉಸಿರು ನೀಡಿದೆ. ಚಿಕ್ಕಮಗಳೂರಿಗೆ ಗೌತಮ್ ಮತ್ತು ಭೂಮಿಕಾ ಹೋಗಿದ್ದರು. ಜಮೀನೊಂದರ ವಿವಾದಕ್ಕೆ ಸಂಬಂಧಿಸಿದಂತೆ ಕೆಲವರು ಜಗಳಕ್ಕೆ ಬಂದಿದ್ದರು. ಆದರೆ ಜಮೀನಿನ ವಿಚಾರ ಗೌತಮ್‌ಗೆ ಗೊತ್ತಿಲ್ಲ. ಇದೇ ನೆಪ ಇಟ್ಟುಕೊಂಡು ಶಕುಂತಲಾ ಇಬ್ಬರನ್ನೂ ಹನಿಮೂನ್‌ಗೆ ಕಳುಹಿಸಿರುತ್ತಾಳೆ. ಅಲ್ಲಿ ಹೋದರೆ ಇಬ್ಬರ ಸಾವು ಖಂಡಿತ ಎನ್ನುವುದು ಆಕೆಯ ಪ್ಲ್ಯಾನ್. ಅದೇ ರೀತಿ ಭೂಮಿಕಾ ಕಿಡ್‌ನ್ಯಾಪ್ ಆಗಿದ್ದಳು.
ಅಂತೂ ಗೌತಮ್ ಭೂಮಿಕಾ ಹುಡುಕಿ ತನ್ನ ಉಸಿರು ತುಂಬಿ ಜೀವ ನೀಡಿದ್ದಾನೆ. ಇದಕ್ಕೂ ಮುಂಚೆ ಜೈದೇವ್‌ನು ಭೂಮಿಕಾ ಮುಗಿಸಿದರೆ ರೌಡಿ ಕೆಂಚನಿಗೆ ಹೆಚ್ಚು ಹಣ ನೀಡುವುದಾಗಿ ಹೇಳಿರುತ್ತಾನೆ. ಆದರೆ ಕೆಂಚ ಇನ್ನಷ್ಟು ಹಣ ಸಿಗಬಹುದು ಎಂದು ನೇರವಾಗಿ ಗೌತಮ್‌ಗೆ ಹಣ ಕೇಳುತ್ತಾನೆ. ಹೀಗಾಗಿ ಭೂಮಿಕಾಳನ್ನು ಅಪಹರಿಸುತ್ತಾನೆ.
ಇದೇ ವೇಳೆ ಭೂಮಿಕಾ ಕಿವಿಯೋಲೆ ಮತ್ತು ಬಳೆಗಳನ್ನು ಎಸೆದು ತನ್ನನ್ನು ಈ ಜಾಗದಿಂದ ಕರೆದುಕೊಂಡು ಹೋಗಿರುವ ಬಗ್ಗೆ ಕುರುಹು ಬಿಟ್ಟಿರುತ್ತಾಳೆ. ಗೌತಮ್ ಮತ್ತು ಆನಂದ್ ಅದೇ ದಾರಿಯಲ್ಲಿ ಸಾಗುತ್ತಾರೆ. ಕೆಂಚ ಕೊನೆಗೂ ಸಿಕ್ಕಿ ಬಿದ್ದು ಭೂಮಿಕಾಳನ್ನು ಬಚ್ಚಿಟ್ಟಿರುವ ಬಗ್ಗೆ ಹೇಳುತ್ತಾನೆ. ಗೌತಮ್ ನೆಲದ ಒಳಗಿನ ಡ್ರಮ್ನಿಂದ ಭೂಮಿಕಾಳನ್ನು ಹೊರಕ್ಕೆ ತೆಗೆದು ತನ್ನ ಉಸಿರು ನೀಡುತ್ತಾನೆ.
ಈಗ ಭೂಮಿಕಾ ಆಸ್ಪತ್ರೆಯಲ್ಲಿ ಇದ್ದಾಳೆ. ಮರು ಜನ್ಮ ನೀಡಿದ ಗೌತಮ್‌ಗೆ ಥ್ಯಾಂಕ್ಸ್ ಹೇಳುತ್ತಾಳೆ. ಈ ಜೋಡಿ ಕಂಡು ಪ್ರೇಕ್ಷಕರು ಕೂಡ ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಬ್ಬರ ಅಭಿನಯಕ್ಕೂ ಮನಸೋತಿದ್ದಾರೆ. ಎಪಿಸೋಡ್ ಕಂಡು ತುಂಬಾ ನೋವು ಮತ್ತೆ ಖುಷಿ ಎರಡು ಒಟ್ಟಿಗೆ ಆಯ್ತು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.