Amrithadhare Serial: ಭೂಮಿಗೆ ಒಲವಿನುಸಿರ ಕೊಟ್ಟು ಮರುಜನ್ಮ ನೀಡಿದ ಗೌತಮ್‌! - Vistara News

ಕಿರುತೆರೆ

Amrithadhare Serial: ಭೂಮಿಗೆ ಒಲವಿನುಸಿರ ಕೊಟ್ಟು ಮರುಜನ್ಮ ನೀಡಿದ ಗೌತಮ್‌!

Amrithadhare Serial: ಈಗ ಭೂಮಿಕಾ ಆಸ್ಪತ್ರೆಯಲ್ಲಿ ಇದ್ದಾಳೆ. ಮರು ಜನ್ಮ ನೀಡಿದ ಗೌತಮ್‌ಗೆ ಥ್ಯಾಂಕ್ಸ್‌ ಹೇಳುತ್ತಾಳೆ. ಈ ಜೋಡಿ ಕಂಡು ಪ್ರೇಕ್ಷಕರು ಕೂಡ ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಬ್ಬರ ಅಭಿನಯಕ್ಕೂ ಮನಸೋತಿದ್ದಾರೆ. ಎಪಿಸೋಡ್‌ ಕಂಡು ತುಂಬಾ ನೋವು ಮತ್ತೆ ಖುಷಿ ಎರಡು ಒಟ್ಟಿಗೆ ಆಯ್ತು ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ.

VISTARANEWS.COM


on

Amrithadhare Serial Fans reaction about goutham Bhoomika
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಧಾರಾವಾಹಿಯಲ್ಲಿ (Amrithadhare Serial) ಪ್ರೇಕ್ಷಕರು ಹೆಚ್ಚಾಗಿ ನಯಸೋದು ನಾಯಕ ನಾಯಕಿ ಒಂದಾಗಬೇಕು ಎಂದು. ಇದೀಗ ಅಮೃತಧಾರೆ ಸೀರಿಯಲ್​ನಲ್ಲಿಯೂ ಅದೇ ರೀತಿ ಆಗಿದ್ದು, ಭೂಮಿಕಾ ಮತ್ತು ಗೌತಮ್​ ಪಾತ್ರಧಾರಿಗಳ ನಟನೆಗೆ ವೀಕ್ಷಕರು ಕಣ್ಣೀರು ಹಾಕಿ, ನೂರುಕಾಲ ಹೀಗೆ ಚೆನ್ನಾಗಿ ಇರಿ ಎಂದು ಹಾರೈಸಿದ್ದಾರೆ.

ಗೌತಮ್‌ನ ಒಲವಿನ ಮಾತು..ಭೂಮಿಕಾಗೆ ಹೊಸ ಉಸಿರು ನೀಡಿದೆ. ಚಿಕ್ಕಮಗಳೂರಿಗೆ ಗೌತಮ್‌ ಮತ್ತು ಭೂಮಿಕಾ ಹೋಗಿದ್ದರು. ಜಮೀನೊಂದರ ವಿವಾದಕ್ಕೆ ಸಂಬಂಧಿಸಿದಂತೆ ಕೆಲವರು ಜಗಳಕ್ಕೆ ಬಂದಿದ್ದರು. ಆದರೆ ಜಮೀನಿನ ವಿಚಾರ ಗೌತಮ್‌ಗೆ ಗೊತ್ತಿಲ್ಲ. ಇದೇ ನೆಪ ಇಟ್ಟುಕೊಂಡು ಶಕುಂತಲಾ ಇಬ್ಬರನ್ನೂ ಹನಿಮೂನ್‌ಗೆ ಕಳುಹಿಸಿರುತ್ತಾಳೆ. ಅಲ್ಲಿ ಹೋದರೆ ಇಬ್ಬರ ಸಾವು ಖಂಡಿತ ಎನ್ನುವುದು ಆಕೆಯ ಪ್ಲ್ಯಾನ್​. ಅದೇ ರೀತಿ ಭೂಮಿಕಾ ಕಿಡ್‌ನ್ಯಾಪ್‌ ಆಗಿದ್ದಳು.

ಇದನ್ನೂ ಓದಿ: Amrithadhare Serial Kannada: `ಅಮೃತಧಾರೆ’ಸೆಟ್‌ನಲ್ಲಿ ʻನಾನು ನಂದಿನಿʼ ಸ್ಟೆಪ್‌; ಎಲ್ಲೆಲ್ಲೂ  ವಿಕ್ಕಿಪೀಡಿಯಾ ಸಾಂಗ್‌ ಗುಂಗು!

ಅಂತೂ ಗೌತಮ್‌ ಭೂಮಿಕಾ ಹುಡುಕಿ ತನ್ನ  ಉಸಿರು ತುಂಬಿ ಜೀವ ನೀಡಿದ್ದಾನೆ. ಇದಕ್ಕೂ ಮುಂಚೆ ಜೈದೇವ್‌ನು ಭೂಮಿಕಾ ಮುಗಿಸಿದರೆ ರೌಡಿ ಕೆಂಚನಿಗೆ ಹೆಚ್ಚು ಹಣ ನೀಡುವುದಾಗಿ ಹೇಳಿರುತ್ತಾನೆ. ಆದರೆ ಕೆಂಚ ಇನ್ನಷ್ಟು ಹಣ ಸಿಗಬಹುದು ಎಂದು ನೇರವಾಗಿ ಗೌತಮ್‌ಗೆ ಹಣ ಕೇಳುತ್ತಾನೆ. ಹೀಗಾಗಿ ಭೂಮಿಕಾಳನ್ನು ಅಪಹರಿಸುತ್ತಾನೆ.

ಇದೇ ವೇಳೆ ಭೂಮಿಕಾ ಕಿವಿಯೋಲೆ ಮತ್ತು ಬಳೆಗಳನ್ನು ಎಸೆದು ತನ್ನನ್ನು ಈ ಜಾಗದಿಂದ ಕರೆದುಕೊಂಡು ಹೋಗಿರುವ ಬಗ್ಗೆ ಕುರುಹು ಬಿಟ್ಟಿರುತ್ತಾಳೆ. ಗೌತಮ್​ ಮತ್ತು ಆನಂದ್​ ಅದೇ ದಾರಿಯಲ್ಲಿ ಸಾಗುತ್ತಾರೆ. ಕೆಂಚ ಕೊನೆಗೂ ಸಿಕ್ಕಿ ಬಿದ್ದು ಭೂಮಿಕಾಳನ್ನು ಬಚ್ಚಿಟ್ಟಿರುವ ಬಗ್ಗೆ ಹೇಳುತ್ತಾನೆ. ಗೌತಮ್‌ ನೆಲದ ಒಳಗಿನ ಡ್ರಮ್​ನಿಂದ ಭೂಮಿಕಾಳನ್ನು ಹೊರಕ್ಕೆ ತೆಗೆದು ತನ್ನ ಉಸಿರು ನೀಡುತ್ತಾನೆ.

ಈಗ ಭೂಮಿಕಾ ಆಸ್ಪತ್ರೆಯಲ್ಲಿ ಇದ್ದಾಳೆ. ಮರು ಜನ್ಮ ನೀಡಿದ ಗೌತಮ್‌ಗೆ ಥ್ಯಾಂಕ್ಸ್‌ ಹೇಳುತ್ತಾಳೆ. ಈ ಜೋಡಿ ಕಂಡು ಪ್ರೇಕ್ಷಕರು ಕೂಡ ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಬ್ಬರ ಅಭಿನಯಕ್ಕೂ ಮನಸೋತಿದ್ದಾರೆ. ಎಪಿಸೋಡ್‌ ಕಂಡು ತುಂಬಾ ನೋವು ಮತ್ತೆ ಖುಷಿ ಎರಡು ಒಟ್ಟಿಗೆ ಆಯ್ತು ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

Divya Uruduga: ದಿವ್ಯಾ ಉರುಡುಗ ಹಿಂದೆ ಬಿದ್ದ ಕಿಶನ್ ಬಿಳಗಲಿ!

Divya Uruduga: ಇದಕ್ಕೂ ಮುಂಚೆ ಬಿಗ್‌ಬಾಸ್‌ ಮಾಜಿ ಸ್ಪರ್ಧಿ, ಡ್ಯಾನ್ಸರ್‌ ಕಿಶನ್‌ ಬಿಳಗಲಿ (Kishen Bilagali) ಸ್ಯಾಂಡಲ್‌ವುಡ್ ‘ಟೋಬಿ’ ಸುಂದರಿ ಚೈತ್ರಾ ಆಚಾರ್ (Chaithra J Achar) ಜತೆ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದರು. ಕಿಶನ್‌ ಬಿಳಗಲಿ ಈ ರೀತಿ ರೊಮ್ಯಾಂಟಿಕ್‌ ಹಾಡಿಗೆ ಸ್ಟೆಪ್ಸ್‌ ಹಾಕುವುದು ಹೊಸದೇನಲ್ಲ. ನಟಿ ನಮ್ರತಾ ಗೌಡ ಜತೆ ಈ ಹಿಂದೆ ಕೂಡ ಈ ರೀತಿ ನೃತ್ಯ ಮಾಡಿ ಪೋಸ್ಟ್‌ ಮಾಡಿದ್ದರು. ಇದೀಗ ಧಾರಾವಾಹಿ ನಾಯಕಿ ರಚನಾ ಜತೆ ನಟನೆ ಮಾಡಿದ್ದಾರೆ.

VISTARANEWS.COM


on

Divya Uruduga kishan belgali In ninagagi serial
Koo

ನಟ ರಿತ್ವಿಕ್ ಮಠದ್ (Ritvvikk Mathad ) ಹಾಗೂ ನಟಿ ದಿವ್ಯಾ ಉರುಡುಗ (Actress Divya Uruduga) ಅಭಿನಯದ , ‘ನಿನಗಾಗಿ’ ಧಾರಾವಾಹಿ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಇದೀಗ ‘ಬಿಗ್ ಬಾಸ್ ಕನ್ನಡ 7’ರ (Bigg Boss Kannada 7) ಮೂಲಕ ಗಮನ ಸೆಳೆದ ಕಿಶನ್ ಬಿಳಗಲಿ (Kishen Bilagali ಈ ಸೀರಿಯಲ್‌ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

ಧಾರಾವಾಹಿ ನಾಯಕಿ ರಚನಾ ಜತೆ ನಟನೆ ಮಾಡಿದ್ದಾರೆ. ಅವರದ್ದು ಒಂದು ಸಸ್ಪೆನ್ಸ್​​ ಕ್ಯಾರೆಕ್ಟರ್​ ಆಗಿದೆ.

ಸದಾ ಒಂದಲ್ಲಾ ಒಂದು ವಿಭಿನ್ನವಾಗಿ ರೀಲ್ಸ್ ಮಾಡುವ ಮೂಲಕ ಗಮನ ಸೆಳೆದಿರುವ ಕಿಶನ್ ಈಗ ಕಿರುತೆರೆ ಎಂಟ್ರಿ ಕೊಟ್ಟಿರುವುದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. 

ಇದನ್ನೂ ಓದಿ: Sonakshi Sinha: ಮುಸ್ಲಿಂ ಯುವಕನ ಜತೆ ಸೋನಾಕ್ಷಿ ಸಿನ್ಹಾ ವಿವಾಹ; ತಾಯಿ, ಸಹೋದರನೂ ಮದುವೆಗೆ ಹೋಗಲ್ಲ?

ನಿನಗಾಗಿ’ ಧಾರಾವಾಹಿಯಲ್ಲಿ ಕಥಾನಾಯಕನಾಗಿ ರಿತ್ವಿಕ್ ಮಠದ್ ಅಭಿನಯಿಸುತ್ತಿದ್ದಾರೆ. ಪ್ರಿಯಾಂಕಾ ಕಾಮತ್, ಲೋಕೇಶ್, ವಿಜಯ್ ಕೌಂಡಿನ್ಯ, ಸಾನಿಯಾ ಪೊಣ್ಣಮ್ಮ ದೇವಿ, ಸಿರಿ ಸಿಂಚನ ಮುಂತಾದವರಿದ್ದಾರೆ.

Continue Reading

ಕಿರುತೆರೆ

Vaishnavi Gowda: ಸೀತಮ್ಮಗೆ ಕಿಡಿಗೇಡಿಗಳ ಕಾಟ; ವೈರಲ್ ಆಗ್ತಿದೆ ಡೀಪ್ ಫೇಕ್ ಫೋಟೊ!

Vaishnavi Gowda: ವೈಷ್ಣವಿ ಗೌಡ ಈ ಹಿಂದೆ ಧರಿಸಿದ್ದ ಕೆಂಪು ಬಣ್ಣದ ಗೌನ್ ಬಟ್ಟೆಯ ಫೋಟೋವನ್ನು ಎಡಿಟ್‌ ಮಾಡಿರುವ ಕಿಡಿಗೇಡಿಗಳು ಫೋಟೋವನ್ನು ಹರಿಬಿಟ್ಟಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ.

VISTARANEWS.COM


on

Vaishnavi Gowda deep fake Photo viral
Koo

ಇತ್ತೀಚೆಗೆ, ರಶ್ಮಿಕಾ ಮಂದಣ್ಣ, ಕಾಜೋಲ್ ಮತ್ತು ಕತ್ರಿನಾ ಕೈಫ್ ಸೇರಿದಂತೆ ಹಲವಾರು ನಟರು ಡೀಪ್‌ಫೇಕ್‌ಗೆ ಬಲಿಯಾಗಿದ್ದಾರೆ. ಡೀಪ್‌ಫೇಕ್ ವಂಚನೆಗೆ ಒಳಗಾದವರಲ್ಲಿ 57 ಪ್ರತಿಶತದಷ್ಟು (Vaishnavi Gowda) ಸೆಲೆಬ್ರಿಟಿಗಳಾಗಿದ್ದಾರೆ. 

ಈಗ ಅಗ್ನಿಸಾಕ್ಷಿ, ಸೀತಾರಾಮ ಸೀರಿಯಲ್‌ ಖ್ಯಾತಿಯ ನಟಿ ವೈಷ್ಣವಿ ಗೌಡಗೆ (Vaishnavi Gowda) ಕಿಡಿಗೇಡಿಗಳಿಂದ ಡೀಪ್ ಫೇಕ್ ಕಾಟ ಎದುರಾಗಿದೆ.

ಇದನ್ನೂ ಓದಿ: Vaishnavi Gowda: ನಟಿ ವೈಷ್ಣವಿ ಗೌಡಗೆ ನೋಟಿಸ್‌ ಕೊಟ್ಟ ಟ್ರಾಫಿಕ್‌ ಪೊಲೀಸರು; ಸೀತಮ್ಮ ಮಾಡಿದ ತಪ್ಪೇನು?

ವೈಷ್ಣವಿ ಅವರು ರೆಡ್‌ ಕಲರ್‌ ಡ್ರೆಸ್‌ನಲ್ಲಿರುವ ಫೋಟೊವನ್ನು ಪೋಸ್ಟ್‌ ಮಾಡಿದ್ದರು. ಕೆಲ ಕಿಡಿಗೇಡಿಗಳು ಈ ಫೋಟೊಗೆ ಬೋಲ್ಡ್ ಆಗಿ ಎಡಿಟ್ ಮಾಡಿ ಇಂಟರ್‌ನೆಟ್‌ನಲ್ಲಿ ವೈರಲ್ ಆಗುವಂತೆ ಮಾಡಿದ್ದಾರೆ.

ಸದ್ಯ ಈ ಡೀಪ್ ಫೇಕ್ ಬಗ್ಗೆ ‘ಸೀತಾರಾಮ’ (Seetharama) ನಟಿ ವೈಷ್ಣವಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ

ಈ ವರ್ಷದ ಆರಂಭದಲ್ಲಿ, ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ ಅವರ ಡೀಪ್‌ಫೇಕ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದಕ್ಕೂ ಮೊದಲು, ರಣವೀರ್ ಸಿಂಗ್ ಅವರ ಡೀಪ್‌ಫೇಕ್ ವೀಡಿಯೊ ಕೂಡ ವೈರಲ್ ಆಗಿದ್ದು, ಇದರಲ್ಲಿ ನಟ ಸರ್ಕಾರವನ್ನು ಟೀಕಿಸಿರುವಂತೆ ವೈರಲ್‌ ಆಗಿತ್ತು.

Continue Reading

ಕಿರುತೆರೆ

Nayana Nagaraj: 10 ವರ್ಷದ ಪ್ರೀತಿ! ಮನಮೆಚ್ಚಿದ ಹುಡುಗನ ಜತೆ ಸಪ್ತಪದಿ ತುಳಿದ ʻಗಿಣಿರಾಮʼ ನಟಿ

Nayana Nagaraj: ಪಾಪಾ ಪಾಂಡು’ ಹಾಗೂ ‘ಗಿಣಿರಾಮ’ ಧಾರಾವಾಹಿಗಳಲ್ಲಿ ಕಥಾನಾಯಕಿಯಾಗಿ ಮಿಂಚಿದ ಪ್ರತಿಭಾವಂತ ನಟಿ ನಯನ ನಾಗರಾಜ್. ಗಾಯಕಿ ಹಾಗೂ ನೃತ್ಯಗಾರ್ತಿಯೂ ಆಗಿದ್ದಾರೆ. ಈ ಹಿಂದೆ ನಯನ ನಾಗರಾಜ್ ಅವರ ಬ್ಯಾಚುಲರೇಟ್ ಪಾರ್ಟಿಯಲ್ಲಿ ‘ಲಕ್ಷ್ಮೀ ನಿವಾಸ’ ಸೀರಿಯಲ್ ಖ್ಯಾತಿಯ ಚಂದನಾ ಅನಂತಕೃಷ್ಣ ಭಾಗವಹಿಸಿದ್ದರು.

VISTARANEWS.COM


on

Nayana Nagaraj ginirama serial fame got married with suhas
Koo

ಪಾಪ ಪಾಂಡು’ ಹಾಗೂ ‘ಗಿಣಿರಾಮ’ ಧಾರಾವಾಹಿಗಳಲ್ಲಿ ನಾಯಕಿಯಾಗಿ ಮಿಂಚಿದ ನಯನ ನಾಗರಾಜ್ (Nayana Nagaraj) ದಾಂಪತ್ಯ ಜೀವನಕ್ಕೆ ಜೂ.16ರಂದು ಕಾಲಿಟ್ಟಿದ್ದಾರೆ.

ದೀರ್ಘಕಾಲದ ಗೆಳೆಯ ಸುಹಾಸ್ ಶಿವಣ್ಣ ಅವರೊಂದಿಗೆ ನಯನ ನಾಗರಾಜ್ ಸಪ್ತಪದಿ ತುಳಿದಿದ್ದಾರೆ

ಕುಟುಂಬಸ್ಥರ ಸಮ್ಮುಖದಲ್ಲಿ ನಯನ ನಾಗರಾಜ್ ಹಾಗೂ ಸುಹಾಸ್ ಶಿವಣ್ಣ ಮದುವೆಯಾದರು.

ಇದನ್ನೂ ಓದಿ: Nayana Nagaraj: ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ ‘ಗಿಣಿರಾಮ’ ಖ್ಯಾತಿಯ ನಟಿ ನಯನ ನಾಗರಾಜ್

ಈ ಮುಂಚೆ ಜೋಡಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.

ಹತ್ತು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ನಯನ ನಾಗರಾಜ್ ಹಾಗೂ ಸುಹಾಸ್ ಶಿವಣ್ಣ . ಇದೀಗ ಜೋಡಿಗೆ ಹಲವು ನಟ ನಟಿಯರು ಶುಭ ಹಾರೈಸಿದ್ದಾರೆ.
Continue Reading

ಬಿಗ್ ಬಾಸ್

Actress Siri: ಬಿಗ್​ಬಾಸ್​ನಲ್ಲಿ ಚಿಗುರಿತಾ ಪ್ರೇಮ? ‘ರಂಗೋಲಿ’ ಖ್ಯಾತಿಯ ಸಿರಿಯ ವರನ್ಯಾರು?

Actress Siri: ಬಿಗ್ ಬಾಸ್ ಸಿರಿ ಮದುವೆಯಾಗಿರುವ ಹುಡುಗ ಮೂಲತಃ ಮಂಡ್ಯದವರು ಸದ್ಯ ಬೆಂಗಳೂರಿನಲ್ಲಿ ನಲೆಸಿದ್ದಾರೆ. ಅವರ ಹೆಸರು ಪ್ರಭಾಕರ್ ಬೋರೇಗೌಡ. ಪ್ರಭಾಕರ್‌ ಬೋರೇಗೌಡ ಮತ್ತು ಸಿರಿ ಒಟ್ಟಿಗೆ ನಟಿಸಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್‌ ಮನೆಯಿಂದ ಸಿರಿ ಎಲಿಮಿನೇಟ್‌ ಆದ ಬಳಿಕ ಸಿರಿ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ.

VISTARANEWS.COM


on

Actress Siri marriage to actor prabhakar
Koo

ಬೆಂಗಳೂರು: ‘ರಂಗೋಲಿ’, ‘ಮನೆಯೊಂದು ಮೂರು ಬಾಗಿಲು’, ‘ಬದುಕು’ ಮುಂತಾದ ಧಾರಾವಾಹಿಗಳನ್ನು ಪ್ರೇಕ್ಷಕರು ಮನಗೆದ್ದ ಸಿರಿ ಬಿಗ್ ಬಾಸ್ (BBK Season 10) ಈಗ ಮದುವೆಯಾಗಿದ್ದಾರೆ. ಇನ್ನೂ (Actress Siri) ಯಾಕೆ ಮದುವೆ ಆಗಿಲ್ಲ? ಎಂಬ ಪ್ರಶ್ನೆಗಳನ ನಡುವೆ ಅವರು ಸದ್ದಿಲ್ಲದೇ, ಸಿಂಪಲ್‌ ಆಗಿ ಹಸೆ ಮಣೆ ಏರಿದ್ದಾರೆ. ಮೂಲಗಳ ಪ್ರಕಾರ ಸಿರಿ ಮದುವೆಯಾದ ಹುಡುಗನ ಹೆಸರು ಪ್ರಭಾಕರ್. ಮಂಡ್ಯ ಮೂಲದವರಾದ ಇವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಇವರಿಬ್ಬರೂ ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿ ಮದುವೆ ಮಾಡಿಕೊಂಡಿದ್ದಾರೆ.

ಬಿಗ್ ಬಾಸ್ ಸಿರಿ ಮದುವೆಯಾಗಿರುವ ಹುಡುಗ ಮೂಲತಃ ಮಂಡ್ಯದವರು ಸದ್ಯ ಬೆಂಗಳೂರಿನಲ್ಲಿ ನಲೆಸಿದ್ದಾರೆ. ಅವರ ಹೆಸರು ಪ್ರಭಾಕರ್ ಬೋರೇಗೌಡ. ಪ್ರಭಾಕರ್‌ ಬೋರೇಗೌಡ ಮತ್ತು ಸಿರಿ ಒಟ್ಟಿಗೆ ನಟಿಸಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್‌ ಮನೆಯಿಂದ ಸಿರಿ ಎಲಿಮಿನೇಟ್‌ ಆದ ಬಳಿಕ ಸಿರಿ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ. ‘ನಿಮ್ಮಲ್ಲರ ಸಪೋರ್ಟ್‌ಗೆ ವಂದನೆಗಳು’ ಎಂದು ಪ್ರಭಾಕರ್ ಬರೆದುಕೊಂಡಿದ್ದರು.

ಇವರಿಬ್ಬರ ಪರಿಚಯ ಆಗಿದ್ದು ಹೇಗೆ? ಲವ್ ಮ್ಯಾರೇಜ್ ಆಗಿರಬಹುದಾ? ಬಿಗ್ ಬಾಸ್‌ ನಂತರ ಅರಳಿದ ಪ್ರೀತಿನಾ ಎಂದು ಜನರು ಕಮೆಂಟ್‌ ಮೂಲಕ ಪ್ರಶ್ನೆ ಇಡುತ್ತಿದ್ದಾರೆ.

ಇದನ್ನೂ ಓದಿ: Actress Siri: ಸಿಂಪಲ್‌ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ `ಬಿಗ್‌ ಬಾಸ್‌ ಕನ್ನಡ 10′ ಸ್ಪರ್ಧಿ, ನಟಿ ಸಿರಿ!

ಸಿರಿ ಅವರಿಗೆ ಮೈತುಂಬ ಅರಿಷಿಣ ಹಚ್ಚಿರುವ ವಿಡಿಯೊ ವೈರಲ್ ಆಗಿದೆ. ಇದು ಸಿನಿಮಾ ಅಥವಾ ಧಾರಾವಾಹಿ ಶೂಟಿಂಗ್ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಸಿರಿ ಅವರು ರಿಯಲ್ ಲೈಫ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಹುಡುಗ ಯಾರು ಎಂಬುದು ಇನ್ನೂ ರಿವೀಲ್‌ ಆಗಿಲ್ಲ. ಹಾಗೇ ಸಿರಿ ಕೂಡ ಎಲ್ಲಿಯೂ ಪೋಸ್ಟ್‌ ಶೇರ್‌ ಮಾಡಿಕೊಂಡಿಲ್ಲ. ಸಿರಿ ಅವರಿಗೆ ಈಗ 40 ವರ್ಷ ವಯಸ್ಸು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಕಲರ್ಸ್‌ ಕನ್ನಡದ ʻರಾಮಾಚಾರಿʼ ಧಾರಾವಾಹಿಯಲ್ಲಿ ನಟಿ ಬಣ್ಣ ಹಚ್ಚಿದ್ದರು. ಈಗ ಪರಭಾಷೆಯ ಕಿರುತೆರೆಯಲ್ಲಿಯೂ ಮಿಂಚುತ್ತಿದ್ದಾರೆ. ಕೆಲ ಸಿನಿಮಾಗಳಲ್ಲಿ ಕೂಡ ಸಿರಿ ಅವರು ನಟಿಸಿದ್ದಾರೆ. 30 ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ ಸಿರಿವಂತೆಯಾಗಿ ಮೆರೆದ ಸಿರಿ ಯಾಕೆ ಮದುವೆಯಾಗಲಿಲ್ಲ ಎಂದು ನೆಟ್ಟಿಗರು ನಟಿಗೆ ಹಲವು ಬಾರಿ ಪ್ರಶ್ನೆ ಮಾಡಿದ್ದೂ ಇದೆ.

ಬಿಗ್‌ ಬಾಸ್‌ ವೇದಿಕೆಯಲ್ಲಿ ಈ ಬಗ್ಗೆ ಸಿರಿ ಮಾತನಾಡಿದ್ದು ಇದೆ. ಮದುವೆ ಬಗ್ಗೆ ಸಿರಿ ಮಾತನಾಡಿ ʻʻನಟನೆಯಲ್ಲಿ ಇರುವುದರಿಂದ ನನ್ನನ್ನು ಅರ್ಥ ಮಾಡಿಕೊಳ್ಳುವ ಹುಡುಗ ಬೇಕು. ಈಗ ನನ್ನ ಮನೆಗೆ ಅಳಿಯ ಎನ್ನುವುದಕ್ಕಿಂತ ಮಗನಾಗಿ ಬರಬೇಕು. ತಂದೆ ಹೋದ ಮೇಲೆ ನಾವು ಹೆಣ್ಣು ಮಕ್ಕಳೇ ಇರುವುದು. ಮದುವೆ ನನಗೆ ನಿಜವಾಗಲೂ ಬೇಕಾ ಎಂದು ಕೆಲವೊಮ್ಮೆ ಅನ್ನಿಸಿದಾಗ ನನಗೇನು ಮದುವೆ ಅವಶ್ಯ ಇದೆ ಎಂದು ಎನಿಸಲಿಲ್ಲʼʼ ಎಂದಿದ್ದರು. ಮದುವೆ ಬಗ್ಗೆ ಸಿರಿ ಮಾತನಾಡಿ ʻʻನಟನೆಯಲ್ಲಿ ಇರುವುದರಿಂದ ನನ್ನನ್ನು ಅರ್ಥ ಮಾಡಿಕೊಳ್ಳುವ ಹುಡುಗ ಬೇಕು. ಈಗ ನನ್ನ ಮನೆಗೆ ಅಳಿಯ ಎನ್ನುವುದಕ್ಕಿಂತ ಮಗನಾಗಿ ಬರಬೇಕು. ತಂದೆ ಹೋದ ಮೇಲೆ ನಾವು ಹೆಣ್ಣು ಮಕ್ಕಳೇ ಇರುವುದು. ಮದುವೆ ನನಗೆ ನಿಜವಾಗಲೂ ಬೇಕಾ ಎಂದು ಕೆಲವೊಮ್ಮೆ ಅನ್ನಿಸಿದಾಗ ನನಗೇನು ಮದುವೆ ಅವಶ್ಯ ಇದೆ ಎಂದು ಎನಿಸಲಿಲ್ಲʼʼ ಎಂದಿದ್ದರು.

ಬಿಗ್‌ಬಾಸ್‌ ಮನೆಗೆ ಇವರ ವ್ಯಕ್ತಿತ್ವ ಹೊಂದುವುದಿಲ್ಲ’, ‘ಯಾವುದರಲ್ಲಿಯೂ ಅಷ್ಟಾಗಿ ತೊಡಗಿಕೊಳ್ಳುವುದಿಲ್ಲ’ ‘ಟಾಸ್ಕ್‌ಗಳಲ್ಲಿ ಪರ್ಫಾರ್ಮ್‌ ಮಾಡಿಲ್ಲ’ ಇಂಥ ಮಾತುಗಳನ್ನೆಲ್ಲ ಮನೆಯ ಸದಸ್ಯರಿಂದ ಕೇಳುತ್ತಲೇ ಬಿಗ್‌ಬಾಸ್‌ ಸೀಸನ್‌ನ ಮುಕ್ಕಾಲು ದಾರಿಯನ್ನು ಕ್ರಮಿಸಿ ಸೈ ಎನಿಸಿಕೊಂಡಿದ್ದರು ಸಿರಿ.

Continue Reading
Advertisement
Tumkur DC Shubha Kalyan inaugurated the Janaspandana programme in Koratagere
ತುಮಕೂರು5 mins ago

Koratagere News: ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರಕ್ಕೆ ಜನಸ್ಪಂದನ ಕಾರ್ಯಕ್ರಮ; ಡಿಸಿ ಶುಭ‌ ಕಲ್ಯಾಣ್

Power cut There will be power outage in various parts of Bengaluru on June 22
ಕರ್ನಾಟಕ6 mins ago

Power Cut: ಬೆಂಗಳೂರಿನ ವಿವಿಧ ಕಡೆ ಜೂ. 22ರಂದು ವಿದ್ಯುತ್‌ ವ್ಯತ್ಯಯ

Arvind Kejriwal
ದೇಶ7 mins ago

Arvind Kejriwal: ಅರವಿಂದ್‌ ಕೇಜ್ರಿವಾಲ್‌ಗೆ ಬಿಗ್‌ ರಿಲೀಫ್;‌ ಕೊನೆಗೂ ಸಿಕ್ಕಿತು ಜಾಮೀನು

Vijayanagara DC MS Diwakar meeting with officials of various departments
ವಿಜಯನಗರ9 mins ago

Vijayanagara News: ಜೂ. 21ರಂದು ಮುಖ್ಯಮಂತ್ರಿಗಳಿಂದ ಕೆಡಿಪಿ ಸಭೆ; ಡಿಸಿ ಎಂ.ಎಸ್.ದಿವಾಕರ್‌

Action will be taken to ensure that the Anganwadi workers do not suffer in any way says Minister Lakshmi Hebbalkar
ಬೆಂಗಳೂರು14 mins ago

Lakshmi Hebbalkar: ಲಕ್ಷ್ಮೀ ಹೆಬ್ಬಾಳಕರ್ ಭರವಸೆ; ಅಂಗನವಾಡಿ ನೌಕರರ ಮುಷ್ಕರ ವಾಪಸ್‌

Mecca Heatwave Death
ಪ್ರಮುಖ ಸುದ್ದಿ39 mins ago

Mecca Heatwave Death : ಮೆಕ್ಕಾದಲ್ಲಿ ನಿಧನ ಹೊಂದಿದ ಹಜ್​ ಯಾತ್ರಿಗಳಿಗೆ ಅಲ್ಲೇ ಸಂಸ್ಕಾರ; ಹಜ್​ ಕಮಿಟಿ ಮಾಹಿತಿ

CM Siddaramaiah
ಕರ್ನಾಟಕ60 mins ago

CM Siddaramaiah: ಪೆಟ್ರೋಲ್‌ ಬೆಲೆ ಏರಿಸಿದ್ದು ಗ್ಯಾರಂಟಿಗೋ? ಅಭಿವೃದ್ಧಿಗೋ? ಸಿದ್ದರಾಮಯ್ಯ ಹೀಗಂತಾರೆ!

Virat kohli
ಪ್ರಮುಖ ಸುದ್ದಿ1 hour ago

Virat kohli : ಕೊಹ್ಲಿಯನ್ನು ಮತ್ತೆ ಸ್ವಾರ್ಥಿ ಎಂದು ದೂರಿದ ಪಾಕಿಸ್ತಾನದ ಮೊಹಮ್ಮದ್ ಹಫೀಜ್​

Darshan Arrested
ಕರ್ನಾಟಕ2 hours ago

Darshan Arrested: ದರ್ಶನ್‌ ಸೇರಿ ನಾಲ್ವರನ್ನೇ ಪೊಲೀಸರು ಕಸ್ಟಡಿಗೆ ಪಡೆದಿದ್ದೇಕೆ? ಯಾವೆಲ್ಲ ತನಿಖೆ ಬಾಕಿ ಇದೆ?

Floral Jumpsuit fashion
ಲೈಫ್‌ಸ್ಟೈಲ್2 hours ago

Floral Jumpsuit fashion: ಔಟಿಂಗ್‌ಗೆ ಪರ್ಫೆಕ್ಟ್ ಔಟ್‌ ಫಿಟ್‌ ಈ ಫ್ಲೋರಲ್‌ ಜಂಪ್‌ ಸೂಟ್‌!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ2 hours ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು3 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು3 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ4 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ4 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ4 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ5 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ6 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು6 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು6 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

ಟ್ರೆಂಡಿಂಗ್‌