Site icon Vistara News

Amruthadhare Kannada Serial: ಮದುವೆ ಆಗೋ ಮುಂಚೆನೇ ಗೌತಮ್-ಭೂಮಿಕಾ ಕೊಟ್ರು ಬ್ರೇಕಿಂಗ್ ನ್ಯೂಸ್!

Amruthadhare Kannada Serial

ಬೆಂಗಳೂರು: ಜೀ ಕನ್ನಡ ಧಾರಾವಾಹಿಯಲ್ಲಿ ಪ್ರಸಾರ ಕಾಣುತ್ತಿರುವ `ಅಮೃತಧಾರೆಧಾರಾವಾಹಿ (Amruthadhare Kannada Serial) ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿದೆ. ಈಗಾಗಲೇ ಟಿಆರ್‌ಪಿಯಲ್ಲಿ ಮೂರನೇ ಸ್ಥಾನದಲ್ಲಿದೆ ಧಾರಾವಾಹಿ. ಇದೀಗ ಧಾರಾವಾಹಿಯ ಪ್ರೋಮೊ ಸಖತ್‌ ಸೌಂಟ್‌ ಮಾಡುತ್ತಿದ್ದು, ಗೌತಮ್ ಹಾಗೂ ಭೂಮಿಕಾ (Bhoomika) ಏನೋ ಮಾಡಲು ಹೋಗಿ ಮತ್ತಿನ್ನೇನೋ ಮಾಡಿದ್ದಾರೆ. ಹೌದು ಇದೀಗ ಧಾರಾವಾಹಿಯ ಎಪಿಸೋಡ್‌ ದಿನಕಳೆದಂತೆ ಕುತೂಹಲಕ್ಕೆ ನೋಡುಗರನ್ನು ಕೊಂಡೊಯ್ಯುತ್ತಿದೆ.

ಇದೀಗ ಭೂಮಿಕಾ ಮತ್ತು ಗೌತಮ್‌ ಒಂದಾಗಬೇಕು ಎಂದು ಗೌತಮ್‌ ಕುಟುಂಬ ಪ್ರಯತ್ನ ಪಡುತ್ತಿದೆ. ಗೌತಮ್ ಹಾಗೂ ಭೂಮಿಕಾ ಅವರ ಮನಸ್ಥಿತಿ ಒಂದೇ ರೀತಿ ಇದೆ. ಆದರೆ, ಅವರಿಬ್ಬರೂ ಒಂದಾಗಿಸಲು ಕುಟುಂಬದವರಿಗೆ ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಇವರು ಮತ್ತೊಮ್ಮೆ ಭೇಟಿ ಆಗಿದ್ದಾರೆ. ಇಬ್ಬರಿಗೂ ಭೇಟಿಯಾಗಲೂ ಇಷ್ಟವಿಲ್ಲದಿದ್ದರೂ ಕುಟುಂಬದ ಒತ್ತಾಯಕ್ಕೆ ಭೇಟಿಯಾಗಿದ್ದಾರೆ.

ಇದೀಗ ಜೀ ವಾಹಿನಿ ಪ್ರೋಮೊ ಹಂಚಿಕೊಂಡಿದ್ದು, ಭೂಮಿಕಾ ಒಂದು ಮಾಸ್ಟರ್‌ ಪ್ಲ್ಯಾನ್‌ ಮಾಡುತ್ತಾಳೆ. ಗೌತಮ್‌ ಅವರಿಗೆ ಭೂಮಿಕಾ ʻʻನಮ್ಮ ಮನೆಯಲ್ಲಿ ನೀವು ಒಪ್ಪಿಗೆ ಸೂಚಿಸಿಲ್ಲ ಎಂದು ಹೇಳುತ್ತೇನೆ. ನಿಮ್ಮ ಮನೆಯಲ್ಲಿ ನಾನು ಬೇಡ ಎಂದೆ ಎಂದು ಹೇಳಿ’ ಎಂದಳು ಭೂಮಿಕಾ. ಇದಕ್ಕೆ ಗೌತಮ್ ಕೂಡ ಒಪ್ಪಿದರು. ಇನ್ನೇನು ಇಬ್ಬರೂ ಹೊರಡುವವರಿದ್ದರು. ಆ ಸಂದರ್ಭಕ್ಕೆ ಸರಿಯಾಗಿ ಭೂಮಿಕಾ ಉಂಗುರ ಬೀಳುತ್ತದೆ. ಇದನ್ನು ಗೌತಮ್ ಹೆಕ್ಕಿ ಕೊಡುತ್ತಾನೆ. ಆಗ ಮಾಧ್ಯಮದವರು ಮುತ್ತಿಕೊಳ್ಳುತ್ತಾರೆ. ಗೌತಮ್‌ ಉಂಗರವನ್ನು ಪ್ರಪೋಸ್‌ ಮಾಡುವ ರೀತಿಯಲ್ಲಿ ಕೊಟ್ಟಿದ್ದನ್ನು ಕಂಡು ಮಾಧ್ಯಮದವರು ಪ್ರಶ್ನಿಸುತ್ತಾರೆ. ಇದು ದೊಡ್ಡ ಸುದ್ದಿ ಆಗಿ ಬಿಡುತ್ತದೆ. ಹೀಗಾಗಿ, ಇವರು ಅಂದುಕೊಂಡಿದ್ದೇ ಒಂದು, ಆಗಿದ್ದೇ ಮತ್ತೊಂದು ಆಗಿದೆ.

ಇದನ್ನೂ ಓದಿ: Amruthadhare Kannada Serial: ಹೆಣ್ಮಕ್ಕಳ ಮೂಕ ವೇದನೆಗೆ ದನಿಯಾದ ಭೂಮಿಕಾ: ನಟಿಯ ಅಭಿನಯಕ್ಕೆ ಮನಸೋತ ಪ್ರೇಕ್ಷಕರು!

ಅಮೃತಧಾರೆ ಧಾರಾವಾಹಿ ʻಬಢೇ ಅಚ್ಚೇ ಲಗತೇ ಹೈʼ(Bade Acche Lagte Hain) ಹಿಂದಿ ಧಾರಾವಾಹಿಯ ರಿಮೇಕ್‌ ಆಗಿದೆ. ಈಗಾಗಲೇ ಪ್ರೇಕ್ಷಕರು ಮೊದಲ ಎಪಿಸೋಡ್‌ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಮೃತಧಾರೆ ಧಾರಾವಾಹಿಯಲ್ಲಿ ನಟಿ ಛಾಯಾ ಸಿಂಗ್‌ ಜತೆ ನಟ ರಾಜೇಶ್‌ ಕಾಣಿಸಿಕೊಂಡಿದ್ದಾರೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಗೌತಮ್ ಹಾಗೂ ಭೂಮಿಕಾ ಬದುಕು ಬೇರೆಬೇರೆ. ಗೌತಮ್​ನದ್ದು ಐಷಾರಾಮಿ ಜೀವನ. ಭೂಮಿಕಾ ಮಧ್ಯಮ ವರ್ಗದ ಹುಡುಗಿ. ಗೌತಮ್ ದೊಡ್ಡ ಉದ್ಯಮಿ. ಭೂಮಿಕಾ ಟ್ಯೂಷನ್​ನಲ್ಲಿ ಪಾಠ ಹೇಳಿಕೊಡುವವಳು. ಇಬ್ಬರ ಮಧ್ಯೆ ಅನೇಕ ಸಾಮ್ಯತೆ ಇದೆ. ಇವರು ಕುಟುಂಬದಲ್ಲಿ ಹಿರಿ ಮಕ್ಕಳು. ಇಬ್ಬರಿಗೂ ಮದುವೆ ಆಗಿಲ್ಲ. ಎಲ್ಲಕಿಂತ ಮುಖ್ಯವಾಗಿ ಇವರು ಕುಟುಂಬಕ್ಕೆ ಎಷ್ಟೇ ಪ್ರೀತಿ ತೋರಿಸಿದರೂ ಕುಟುಂಬ ಇವರಿಗೆ ಪ್ರೀತಿ ತೋರಿಸುತ್ತಿಲ್ಲ. ಇದೀಗ ಇವರಿಬ್ಬರು ಒಂದಾಗುತ್ತಾರಾ ಎಂಬುದೇ ಪ್ರೇಕ್ಷಕರಿಗೆ ಕುತೂಹಲವಾಗಿದೆ. ಈ ಧಾರಾವಾಹಿಗೆ ಉತ್ತಮ್‌ ಮಧು ಅವರ ನಿರ್ದೇಶನವಿದೆ.

Exit mobile version