The audience was Happy For performance of the actress chaya singh Amruthadhare Kannada Serial Amruthadhare Kannada Serial: ಹೆಣ್ಮಕ್ಕಳ ಮೂಕ ವೇದನೆಗೆ ದನಿಯಾದ ಭೂಮಿಕಾ: ನಟಿಯ ಅಭಿನಯಕ್ಕೆ ಮನಸೋತ ಪ್ರೇಕ್ಷಕರು! - Vistara News

ಕಿರುತೆರೆ

Amruthadhare Kannada Serial: ಹೆಣ್ಮಕ್ಕಳ ಮೂಕ ವೇದನೆಗೆ ದನಿಯಾದ ಭೂಮಿಕಾ: ನಟಿಯ ಅಭಿನಯಕ್ಕೆ ಮನಸೋತ ಪ್ರೇಕ್ಷಕರು!

Amruthadhare Kannada Serial: ಮದುವೆ ಆಗದೇ ಇರುವ ಹೆಣ್ಣನ್ನು ಸಮಾಜ ಹೇಗೆ ದೂಷಿಸುತ್ತದೆ ಎಂಬ ಬಗ್ಗೆ ಜೂನ್‌ 23ರಂದು ಧಾರಾವಾಹಿ ಎಪಿಸೋಡ್‌ ಪ್ರಸಾರ ಕಂಡಿತ್ತು.ನಟಿಯ ಅಭಿನಯಕ್ಕೆ ಮನಸೋತ ಪ್ರೇಕ್ಷಕರು ಹೇಳಿದ್ದೇನು?

VISTARANEWS.COM


on

performance of the actress chaya singh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ (Chaya Singh) ನಟನೆಯ ‘ಅಮೃತಧಾರೆ’ ಧಾರಾವಾಹಿ (Amruthadhare Kannada Serial) ಈ ಬಾರಿ ಟಿಆರ್‌ಪಿಯಲ್ಲಿಯೂ ಒಳ್ಳೆಯ ಸ್ಥಾನ ಪಡೆದುಕೊಂಡಿದೆ. ಮದುವೆ ಆಗದೇ ಇರುವ ಹೆಣ್ಣನ್ನು ಸಮಾಜ ಹೇಗೆ ದೂಷಿಸುತ್ತದೆ ಎನ್ನುವ ಬಗ್ಗೆ ಜೂನ್‌ 23ರಂದು ಧಾರಾವಾಹಿ ಎಪಿಸೋಡ್‌ ಪ್ರಸಾರ ಕಂಡಿತ್ತು. ಛಾಯಾ ಸಿಂಗ್‌ ನಟನೆ ಕೂಡ ಅದ್ಭುತವಾಗಿತ್ತು. ಈ ಬಗ್ಗೆ ಪ್ರೇಕ್ಷಕರು ಛಾಯಾ ಸಿಂಗ್‌ ಅವರ ನಟನೆಯನ್ನು ಕೊಂಡಾಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

ಏನದು ಸನ್ನಿವೇಶ?

ಭೂಮಿಕಾಗೆ (ಛಾಯಾ ಸಿಂಗ್) ಈಗ ವಯಸ್ಸು 35 ವರ್ಷ. ಮನೆಯವರು ಎಷ್ಟೇ ಪ್ರಯತ್ನ ಮಾಡಿದರೂ ಆಕೆಗೆ ಮದುವೆ ಆಗಿರುವುದಿಲ್ಲ. ಕೊನೆಗೂ ಒಂದು ಹುಡುಗನನ್ನು ಗೌತಮ್ ದಿವಾನ್​ (ರಾಜೇಶ್ ನಟರಂಗ) ಕರೆದು ತರುತ್ತಾನೆ. ಎಂಗೇಜ್​ಮೆಂಟ್ ದಿನ ಆ ಹುಡುಗ ಫ್ರಾಡ್ ಎನ್ನುವುದು ಗೊತ್ತಾಗುತ್ತದೆ. ಮತ್ತೆ ಮದುವೆ ಮರಿದು ಬೀಳುತ್ತದೆ. ಮದುವೆಯ ಕನಸು ಕಂಡ ಭೂಮಿಕಾಗೆ ಮತ್ತದೇ ನೋವು. ಕುಟುಂಬದ ಒತ್ತಡ. ಆ ನೋವಿನಲ್ಲಿ ಆಕೆ ʼʼಅನೇಕ ಹೆಣ್ಣುಮಕ್ಕಳು ಗಂಡನ ಮನೆಗೆ ತೆರಳಿ ಕಷ್ಟ ಪಟ್ಟವರಿದ್ದಾರೆ. ಅಲ್ಲಿ ಟಾರ್ಚರ್ ಪಡೆದು ವಿಚ್ಛೇದನ ಪಡೆದವರಿದ್ದಾರೆ. ಮದುವೆ ಆಗದೇ ಇದ್ದವರಿಗೆ ಮದುವೆ ಆಗಿಲ್ಲ ಎನ್ನುವ ಚಿಂತೆ. ಮದುವೆ ಆಗಿ ಗಂಡನ ಮನೆಗೆ ತೆರಳಿದವರಿಗೆ ಬೇರೆಯದೇ ಚಿಂತೆ. ಈ ವಿಚಾರಕ್ಕೆ ನನ್ನ ಸ್ವಾಭಿಮಾನ ಕುಗ್ಗಿಲ್ಲʼʼ ಎಂಬ ಈ ಎಲ್ಲಾ ವಿಚಾರಗಳನ್ನು ಕಣ್ಣೀರು ಹಾಕುತ್ತಲೇ ಹೇಳುತ್ತಾರೆ ನಟಿ. ಛಾಯಾ ಸಿಂಗ್‌ ಆಡುವ ಈ ಎಲ್ಲ ಮಾತುಗಳು ನೋಡುಗರ ಗಮನ ಸೆಳೆದಿದೆ.

ಇದನ್ನೂ ಓದಿ: Amruthadhare Kannada Serial : ʻಅಮೃತಧಾರೆʼಗೂ ಮುಂಚೆ ಅಣ್ಣ-ತಂಗಿಯಾಗಿ ನಟಿಸಿದ್ರಂತೆ ರಾಜೇಶ್‌-ಛಾಯಾ!

ನೆಟ್ಟಿಗರು ಹೇಳಿದ್ದೇನು?

ʻʻಏನೋ ಗೊತ್ತಿಲ್ಲ. ಇಷ್ಟು ದಿನ ಈ ಧಾರಾವಾಹಿ ನೋಡಿ ನಗುತ್ತಿದ್ದೆ. ಎಂಥಾ ಸಿರಿಯಸ್ ನಟನೆ ನೋಡಿದ್ದರೂ ಓವರ್ ಡ್ರಾಮ ಎಂದು ನಗು ಬರುತ್ತಿತ್ತು. ಇದೆ ಮೊದಲ ಬಾರಿಗೆ ಕಣ್ಣಲ್ಲಿ ನೀರು ಬಂತು. ಡೈಲಾಗ್ ನಿಜಕ್ಕೂ ಅದ್ಭುತ..! ನಟನೆ ಕೂಡ ಅಷ್ಟೇ ಮನೋಜ್ಞ..! ಅದಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತ..! ನನ್ನ ತಾಯಿ ನೆನಪಾಗಿ ಅಳು ಬಂತು….! ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ.

ʻʻಇದು ಎಷ್ಟೋ ಹೆಣ್ಣುಮಕ್ಕಳ ನಿಜ ಜೀವನದ ಸತ್ಯವಾಗಿದೆ. ಛಾಯಾ ಮೇಡಂ ನಿಮ್ಮ ಈ ಅಭಿನಯ ನಮ್ಮ ಹೃದಯ ಮುಟ್ಟಿದೆʼʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಛಾಯಾ ಸಿಂಗ್ ಹೇಳುವ ‘ನಾವು ಪೂಜೆ ಮಾಡುವ ಯಾವ್ ದೇವರಿಗೂ ಹೆಣ್ಣುಮಕ್ಕಳೇ ಹುಟ್ಟಿಲ್ಲ’ ಎಂಬ ಮಾತು ಎಲ್ಲರ ಗಮನ ಸೆಳೆದಿದೆ ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ.

ಅಮೃತಧಾರೆ ಧಾರಾವಾಹಿ ʻಬಢೇ ಅಚ್ಚೇ ಲಗತೇ ಹೈʼ(Bade Acche Lagte Hain) ಹಿಂದಿ ಧಾರಾವಾಹಿಯ ರಿಮೇಕ್‌ ಆಗಿದೆ. ಈಗಾಗಲೇ ಪ್ರೇಕ್ಷಕರು ಮೊದಲ ಎಪಿಸೋಡ್‌ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಮೃತಧಾರೆ ಧಾರಾವಾಹಿಯಲ್ಲಿ ನಟಿ ಛಾಯಾ ಸಿಂಗ್‌ ಜತೆ ನಟ ರಾಜೇಶ್‌ ಕಾಣಿಸಿಕೊಂಡಿದ್ದಾರೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Amruthadhare Kannada Serial: ಕಿರುತೆರೆಗೆ ರಾಜೇಶ್ ನಟರಂಗ ಗ್ರ್ಯಾಂಡ್‌ ಎಂಟ್ರಿ; ಒಲವಿನ ಅಮೃತಧಾರೆಯ ಹರಿವು ಆರಂಭ!

ಗೌತಮ್ ಹಾಗೂ ಭೂಮಿಕಾ ಬದುಕು ಬೇರೆಬೇರೆ. ಗೌತಮ್​ನದ್ದು ಐಷಾರಾಮಿ ಜೀವನ. ಭೂಮಿಕಾ ಮಧ್ಯಮ ವರ್ಗದ ಹುಡುಗಿ. ಗೌತಮ್ ದೊಡ್ಡ ಉದ್ಯಮಿ. ಭೂಮಿಕಾ ಟ್ಯೂಷನ್​ನಲ್ಲಿ ಪಾಠ ಹೇಳಿಕೊಡುವವಳು. ಇಬ್ಬರ ಮಧ್ಯೆ ಅನೇಕ ಸಾಮ್ಯತೆ ಇದೆ. ಇವರು ಕುಟುಂಬದಲ್ಲಿ ಹಿರಿ ಮಕ್ಕಳು. ಇಬ್ಬರಿಗೂ ಮದುವೆ ಆಗಿಲ್ಲ. ಎಲ್ಲಕಿಂತ ಮುಖ್ಯವಾಗಿ ಇವರು ಕುಟುಂಬಕ್ಕೆ ಎಷ್ಟೇ ಪ್ರೀತಿ ತೋರಿಸಿದರೂ ಕುಟುಂಬ ಇವರಿಗೆ ಪ್ರೀತಿ ತೋರಿಸುತ್ತಿಲ್ಲ. ಇದೀಗ ಇವರಿಬ್ಬರು ಒಂದಾಗುತ್ತಾರಾ ಎಂಬುದೇ ಪ್ರೇಕ್ಷಕರಿಗೆ ಕುತೂಹಲವಾಗಿದೆ. ಈ ಧಾರಾವಾಹಿಗೆ ಉತ್ತಮ್‌ ಮಧು ಅವರ ನಿರ್ದೇಶನವಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕಿರುತೆರೆ

Divya Uruduga: ದಿವ್ಯಾ ಉರುಡುಗ ಹಿಂದೆ ಬಿದ್ದ ಕಿಶನ್ ಬಿಳಗಲಿ!

Divya Uruduga: ಇದಕ್ಕೂ ಮುಂಚೆ ಬಿಗ್‌ಬಾಸ್‌ ಮಾಜಿ ಸ್ಪರ್ಧಿ, ಡ್ಯಾನ್ಸರ್‌ ಕಿಶನ್‌ ಬಿಳಗಲಿ (Kishen Bilagali) ಸ್ಯಾಂಡಲ್‌ವುಡ್ ‘ಟೋಬಿ’ ಸುಂದರಿ ಚೈತ್ರಾ ಆಚಾರ್ (Chaithra J Achar) ಜತೆ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದರು. ಕಿಶನ್‌ ಬಿಳಗಲಿ ಈ ರೀತಿ ರೊಮ್ಯಾಂಟಿಕ್‌ ಹಾಡಿಗೆ ಸ್ಟೆಪ್ಸ್‌ ಹಾಕುವುದು ಹೊಸದೇನಲ್ಲ. ನಟಿ ನಮ್ರತಾ ಗೌಡ ಜತೆ ಈ ಹಿಂದೆ ಕೂಡ ಈ ರೀತಿ ನೃತ್ಯ ಮಾಡಿ ಪೋಸ್ಟ್‌ ಮಾಡಿದ್ದರು. ಇದೀಗ ಧಾರಾವಾಹಿ ನಾಯಕಿ ರಚನಾ ಜತೆ ನಟನೆ ಮಾಡಿದ್ದಾರೆ.

VISTARANEWS.COM


on

Divya Uruduga kishan belgali In ninagagi serial
Koo

ನಟ ರಿತ್ವಿಕ್ ಮಠದ್ (Ritvvikk Mathad ) ಹಾಗೂ ನಟಿ ದಿವ್ಯಾ ಉರುಡುಗ (Actress Divya Uruduga) ಅಭಿನಯದ , ‘ನಿನಗಾಗಿ’ ಧಾರಾವಾಹಿ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಇದೀಗ ‘ಬಿಗ್ ಬಾಸ್ ಕನ್ನಡ 7’ರ (Bigg Boss Kannada 7) ಮೂಲಕ ಗಮನ ಸೆಳೆದ ಕಿಶನ್ ಬಿಳಗಲಿ (Kishen Bilagali ಈ ಸೀರಿಯಲ್‌ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

ಧಾರಾವಾಹಿ ನಾಯಕಿ ರಚನಾ ಜತೆ ನಟನೆ ಮಾಡಿದ್ದಾರೆ. ಅವರದ್ದು ಒಂದು ಸಸ್ಪೆನ್ಸ್​​ ಕ್ಯಾರೆಕ್ಟರ್​ ಆಗಿದೆ.

ಸದಾ ಒಂದಲ್ಲಾ ಒಂದು ವಿಭಿನ್ನವಾಗಿ ರೀಲ್ಸ್ ಮಾಡುವ ಮೂಲಕ ಗಮನ ಸೆಳೆದಿರುವ ಕಿಶನ್ ಈಗ ಕಿರುತೆರೆ ಎಂಟ್ರಿ ಕೊಟ್ಟಿರುವುದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. 

ಇದನ್ನೂ ಓದಿ: Sonakshi Sinha: ಮುಸ್ಲಿಂ ಯುವಕನ ಜತೆ ಸೋನಾಕ್ಷಿ ಸಿನ್ಹಾ ವಿವಾಹ; ತಾಯಿ, ಸಹೋದರನೂ ಮದುವೆಗೆ ಹೋಗಲ್ಲ?

ನಿನಗಾಗಿ’ ಧಾರಾವಾಹಿಯಲ್ಲಿ ಕಥಾನಾಯಕನಾಗಿ ರಿತ್ವಿಕ್ ಮಠದ್ ಅಭಿನಯಿಸುತ್ತಿದ್ದಾರೆ. ಪ್ರಿಯಾಂಕಾ ಕಾಮತ್, ಲೋಕೇಶ್, ವಿಜಯ್ ಕೌಂಡಿನ್ಯ, ಸಾನಿಯಾ ಪೊಣ್ಣಮ್ಮ ದೇವಿ, ಸಿರಿ ಸಿಂಚನ ಮುಂತಾದವರಿದ್ದಾರೆ.

Continue Reading

ಕಿರುತೆರೆ

Vaishnavi Gowda: ಸೀತಮ್ಮಗೆ ಕಿಡಿಗೇಡಿಗಳ ಕಾಟ; ವೈರಲ್ ಆಗ್ತಿದೆ ಡೀಪ್ ಫೇಕ್ ಫೋಟೊ!

Vaishnavi Gowda: ವೈಷ್ಣವಿ ಗೌಡ ಈ ಹಿಂದೆ ಧರಿಸಿದ್ದ ಕೆಂಪು ಬಣ್ಣದ ಗೌನ್ ಬಟ್ಟೆಯ ಫೋಟೋವನ್ನು ಎಡಿಟ್‌ ಮಾಡಿರುವ ಕಿಡಿಗೇಡಿಗಳು ಫೋಟೋವನ್ನು ಹರಿಬಿಟ್ಟಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ.

VISTARANEWS.COM


on

Vaishnavi Gowda deep fake Photo viral
Koo

ಇತ್ತೀಚೆಗೆ, ರಶ್ಮಿಕಾ ಮಂದಣ್ಣ, ಕಾಜೋಲ್ ಮತ್ತು ಕತ್ರಿನಾ ಕೈಫ್ ಸೇರಿದಂತೆ ಹಲವಾರು ನಟರು ಡೀಪ್‌ಫೇಕ್‌ಗೆ ಬಲಿಯಾಗಿದ್ದಾರೆ. ಡೀಪ್‌ಫೇಕ್ ವಂಚನೆಗೆ ಒಳಗಾದವರಲ್ಲಿ 57 ಪ್ರತಿಶತದಷ್ಟು (Vaishnavi Gowda) ಸೆಲೆಬ್ರಿಟಿಗಳಾಗಿದ್ದಾರೆ. 

ಈಗ ಅಗ್ನಿಸಾಕ್ಷಿ, ಸೀತಾರಾಮ ಸೀರಿಯಲ್‌ ಖ್ಯಾತಿಯ ನಟಿ ವೈಷ್ಣವಿ ಗೌಡಗೆ (Vaishnavi Gowda) ಕಿಡಿಗೇಡಿಗಳಿಂದ ಡೀಪ್ ಫೇಕ್ ಕಾಟ ಎದುರಾಗಿದೆ.

ಇದನ್ನೂ ಓದಿ: Vaishnavi Gowda: ನಟಿ ವೈಷ್ಣವಿ ಗೌಡಗೆ ನೋಟಿಸ್‌ ಕೊಟ್ಟ ಟ್ರಾಫಿಕ್‌ ಪೊಲೀಸರು; ಸೀತಮ್ಮ ಮಾಡಿದ ತಪ್ಪೇನು?

ವೈಷ್ಣವಿ ಅವರು ರೆಡ್‌ ಕಲರ್‌ ಡ್ರೆಸ್‌ನಲ್ಲಿರುವ ಫೋಟೊವನ್ನು ಪೋಸ್ಟ್‌ ಮಾಡಿದ್ದರು. ಕೆಲ ಕಿಡಿಗೇಡಿಗಳು ಈ ಫೋಟೊಗೆ ಬೋಲ್ಡ್ ಆಗಿ ಎಡಿಟ್ ಮಾಡಿ ಇಂಟರ್‌ನೆಟ್‌ನಲ್ಲಿ ವೈರಲ್ ಆಗುವಂತೆ ಮಾಡಿದ್ದಾರೆ.

ಸದ್ಯ ಈ ಡೀಪ್ ಫೇಕ್ ಬಗ್ಗೆ ‘ಸೀತಾರಾಮ’ (Seetharama) ನಟಿ ವೈಷ್ಣವಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ

ಈ ವರ್ಷದ ಆರಂಭದಲ್ಲಿ, ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ ಅವರ ಡೀಪ್‌ಫೇಕ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದಕ್ಕೂ ಮೊದಲು, ರಣವೀರ್ ಸಿಂಗ್ ಅವರ ಡೀಪ್‌ಫೇಕ್ ವೀಡಿಯೊ ಕೂಡ ವೈರಲ್ ಆಗಿದ್ದು, ಇದರಲ್ಲಿ ನಟ ಸರ್ಕಾರವನ್ನು ಟೀಕಿಸಿರುವಂತೆ ವೈರಲ್‌ ಆಗಿತ್ತು.

Continue Reading

ಕಿರುತೆರೆ

Nayana Nagaraj: 10 ವರ್ಷದ ಪ್ರೀತಿ! ಮನಮೆಚ್ಚಿದ ಹುಡುಗನ ಜತೆ ಸಪ್ತಪದಿ ತುಳಿದ ʻಗಿಣಿರಾಮʼ ನಟಿ

Nayana Nagaraj: ಪಾಪಾ ಪಾಂಡು’ ಹಾಗೂ ‘ಗಿಣಿರಾಮ’ ಧಾರಾವಾಹಿಗಳಲ್ಲಿ ಕಥಾನಾಯಕಿಯಾಗಿ ಮಿಂಚಿದ ಪ್ರತಿಭಾವಂತ ನಟಿ ನಯನ ನಾಗರಾಜ್. ಗಾಯಕಿ ಹಾಗೂ ನೃತ್ಯಗಾರ್ತಿಯೂ ಆಗಿದ್ದಾರೆ. ಈ ಹಿಂದೆ ನಯನ ನಾಗರಾಜ್ ಅವರ ಬ್ಯಾಚುಲರೇಟ್ ಪಾರ್ಟಿಯಲ್ಲಿ ‘ಲಕ್ಷ್ಮೀ ನಿವಾಸ’ ಸೀರಿಯಲ್ ಖ್ಯಾತಿಯ ಚಂದನಾ ಅನಂತಕೃಷ್ಣ ಭಾಗವಹಿಸಿದ್ದರು.

VISTARANEWS.COM


on

Nayana Nagaraj ginirama serial fame got married with suhas
Koo

ಪಾಪ ಪಾಂಡು’ ಹಾಗೂ ‘ಗಿಣಿರಾಮ’ ಧಾರಾವಾಹಿಗಳಲ್ಲಿ ನಾಯಕಿಯಾಗಿ ಮಿಂಚಿದ ನಯನ ನಾಗರಾಜ್ (Nayana Nagaraj) ದಾಂಪತ್ಯ ಜೀವನಕ್ಕೆ ಜೂ.16ರಂದು ಕಾಲಿಟ್ಟಿದ್ದಾರೆ.

ದೀರ್ಘಕಾಲದ ಗೆಳೆಯ ಸುಹಾಸ್ ಶಿವಣ್ಣ ಅವರೊಂದಿಗೆ ನಯನ ನಾಗರಾಜ್ ಸಪ್ತಪದಿ ತುಳಿದಿದ್ದಾರೆ

ಕುಟುಂಬಸ್ಥರ ಸಮ್ಮುಖದಲ್ಲಿ ನಯನ ನಾಗರಾಜ್ ಹಾಗೂ ಸುಹಾಸ್ ಶಿವಣ್ಣ ಮದುವೆಯಾದರು.

ಇದನ್ನೂ ಓದಿ: Nayana Nagaraj: ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ ‘ಗಿಣಿರಾಮ’ ಖ್ಯಾತಿಯ ನಟಿ ನಯನ ನಾಗರಾಜ್

ಈ ಮುಂಚೆ ಜೋಡಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.

ಹತ್ತು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ನಯನ ನಾಗರಾಜ್ ಹಾಗೂ ಸುಹಾಸ್ ಶಿವಣ್ಣ . ಇದೀಗ ಜೋಡಿಗೆ ಹಲವು ನಟ ನಟಿಯರು ಶುಭ ಹಾರೈಸಿದ್ದಾರೆ.
Continue Reading

ಬಿಗ್ ಬಾಸ್

Actress Siri: ಬಿಗ್​ಬಾಸ್​ನಲ್ಲಿ ಚಿಗುರಿತಾ ಪ್ರೇಮ? ‘ರಂಗೋಲಿ’ ಖ್ಯಾತಿಯ ಸಿರಿಯ ವರನ್ಯಾರು?

Actress Siri: ಬಿಗ್ ಬಾಸ್ ಸಿರಿ ಮದುವೆಯಾಗಿರುವ ಹುಡುಗ ಮೂಲತಃ ಮಂಡ್ಯದವರು ಸದ್ಯ ಬೆಂಗಳೂರಿನಲ್ಲಿ ನಲೆಸಿದ್ದಾರೆ. ಅವರ ಹೆಸರು ಪ್ರಭಾಕರ್ ಬೋರೇಗೌಡ. ಪ್ರಭಾಕರ್‌ ಬೋರೇಗೌಡ ಮತ್ತು ಸಿರಿ ಒಟ್ಟಿಗೆ ನಟಿಸಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್‌ ಮನೆಯಿಂದ ಸಿರಿ ಎಲಿಮಿನೇಟ್‌ ಆದ ಬಳಿಕ ಸಿರಿ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ.

VISTARANEWS.COM


on

Actress Siri marriage to actor prabhakar
Koo

ಬೆಂಗಳೂರು: ‘ರಂಗೋಲಿ’, ‘ಮನೆಯೊಂದು ಮೂರು ಬಾಗಿಲು’, ‘ಬದುಕು’ ಮುಂತಾದ ಧಾರಾವಾಹಿಗಳನ್ನು ಪ್ರೇಕ್ಷಕರು ಮನಗೆದ್ದ ಸಿರಿ ಬಿಗ್ ಬಾಸ್ (BBK Season 10) ಈಗ ಮದುವೆಯಾಗಿದ್ದಾರೆ. ಇನ್ನೂ (Actress Siri) ಯಾಕೆ ಮದುವೆ ಆಗಿಲ್ಲ? ಎಂಬ ಪ್ರಶ್ನೆಗಳನ ನಡುವೆ ಅವರು ಸದ್ದಿಲ್ಲದೇ, ಸಿಂಪಲ್‌ ಆಗಿ ಹಸೆ ಮಣೆ ಏರಿದ್ದಾರೆ. ಮೂಲಗಳ ಪ್ರಕಾರ ಸಿರಿ ಮದುವೆಯಾದ ಹುಡುಗನ ಹೆಸರು ಪ್ರಭಾಕರ್. ಮಂಡ್ಯ ಮೂಲದವರಾದ ಇವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಇವರಿಬ್ಬರೂ ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿ ಮದುವೆ ಮಾಡಿಕೊಂಡಿದ್ದಾರೆ.

ಬಿಗ್ ಬಾಸ್ ಸಿರಿ ಮದುವೆಯಾಗಿರುವ ಹುಡುಗ ಮೂಲತಃ ಮಂಡ್ಯದವರು ಸದ್ಯ ಬೆಂಗಳೂರಿನಲ್ಲಿ ನಲೆಸಿದ್ದಾರೆ. ಅವರ ಹೆಸರು ಪ್ರಭಾಕರ್ ಬೋರೇಗೌಡ. ಪ್ರಭಾಕರ್‌ ಬೋರೇಗೌಡ ಮತ್ತು ಸಿರಿ ಒಟ್ಟಿಗೆ ನಟಿಸಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್‌ ಮನೆಯಿಂದ ಸಿರಿ ಎಲಿಮಿನೇಟ್‌ ಆದ ಬಳಿಕ ಸಿರಿ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ. ‘ನಿಮ್ಮಲ್ಲರ ಸಪೋರ್ಟ್‌ಗೆ ವಂದನೆಗಳು’ ಎಂದು ಪ್ರಭಾಕರ್ ಬರೆದುಕೊಂಡಿದ್ದರು.

ಇವರಿಬ್ಬರ ಪರಿಚಯ ಆಗಿದ್ದು ಹೇಗೆ? ಲವ್ ಮ್ಯಾರೇಜ್ ಆಗಿರಬಹುದಾ? ಬಿಗ್ ಬಾಸ್‌ ನಂತರ ಅರಳಿದ ಪ್ರೀತಿನಾ ಎಂದು ಜನರು ಕಮೆಂಟ್‌ ಮೂಲಕ ಪ್ರಶ್ನೆ ಇಡುತ್ತಿದ್ದಾರೆ.

ಇದನ್ನೂ ಓದಿ: Actress Siri: ಸಿಂಪಲ್‌ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ `ಬಿಗ್‌ ಬಾಸ್‌ ಕನ್ನಡ 10′ ಸ್ಪರ್ಧಿ, ನಟಿ ಸಿರಿ!

ಸಿರಿ ಅವರಿಗೆ ಮೈತುಂಬ ಅರಿಷಿಣ ಹಚ್ಚಿರುವ ವಿಡಿಯೊ ವೈರಲ್ ಆಗಿದೆ. ಇದು ಸಿನಿಮಾ ಅಥವಾ ಧಾರಾವಾಹಿ ಶೂಟಿಂಗ್ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಸಿರಿ ಅವರು ರಿಯಲ್ ಲೈಫ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಹುಡುಗ ಯಾರು ಎಂಬುದು ಇನ್ನೂ ರಿವೀಲ್‌ ಆಗಿಲ್ಲ. ಹಾಗೇ ಸಿರಿ ಕೂಡ ಎಲ್ಲಿಯೂ ಪೋಸ್ಟ್‌ ಶೇರ್‌ ಮಾಡಿಕೊಂಡಿಲ್ಲ. ಸಿರಿ ಅವರಿಗೆ ಈಗ 40 ವರ್ಷ ವಯಸ್ಸು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಕಲರ್ಸ್‌ ಕನ್ನಡದ ʻರಾಮಾಚಾರಿʼ ಧಾರಾವಾಹಿಯಲ್ಲಿ ನಟಿ ಬಣ್ಣ ಹಚ್ಚಿದ್ದರು. ಈಗ ಪರಭಾಷೆಯ ಕಿರುತೆರೆಯಲ್ಲಿಯೂ ಮಿಂಚುತ್ತಿದ್ದಾರೆ. ಕೆಲ ಸಿನಿಮಾಗಳಲ್ಲಿ ಕೂಡ ಸಿರಿ ಅವರು ನಟಿಸಿದ್ದಾರೆ. 30 ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ ಸಿರಿವಂತೆಯಾಗಿ ಮೆರೆದ ಸಿರಿ ಯಾಕೆ ಮದುವೆಯಾಗಲಿಲ್ಲ ಎಂದು ನೆಟ್ಟಿಗರು ನಟಿಗೆ ಹಲವು ಬಾರಿ ಪ್ರಶ್ನೆ ಮಾಡಿದ್ದೂ ಇದೆ.

ಬಿಗ್‌ ಬಾಸ್‌ ವೇದಿಕೆಯಲ್ಲಿ ಈ ಬಗ್ಗೆ ಸಿರಿ ಮಾತನಾಡಿದ್ದು ಇದೆ. ಮದುವೆ ಬಗ್ಗೆ ಸಿರಿ ಮಾತನಾಡಿ ʻʻನಟನೆಯಲ್ಲಿ ಇರುವುದರಿಂದ ನನ್ನನ್ನು ಅರ್ಥ ಮಾಡಿಕೊಳ್ಳುವ ಹುಡುಗ ಬೇಕು. ಈಗ ನನ್ನ ಮನೆಗೆ ಅಳಿಯ ಎನ್ನುವುದಕ್ಕಿಂತ ಮಗನಾಗಿ ಬರಬೇಕು. ತಂದೆ ಹೋದ ಮೇಲೆ ನಾವು ಹೆಣ್ಣು ಮಕ್ಕಳೇ ಇರುವುದು. ಮದುವೆ ನನಗೆ ನಿಜವಾಗಲೂ ಬೇಕಾ ಎಂದು ಕೆಲವೊಮ್ಮೆ ಅನ್ನಿಸಿದಾಗ ನನಗೇನು ಮದುವೆ ಅವಶ್ಯ ಇದೆ ಎಂದು ಎನಿಸಲಿಲ್ಲʼʼ ಎಂದಿದ್ದರು. ಮದುವೆ ಬಗ್ಗೆ ಸಿರಿ ಮಾತನಾಡಿ ʻʻನಟನೆಯಲ್ಲಿ ಇರುವುದರಿಂದ ನನ್ನನ್ನು ಅರ್ಥ ಮಾಡಿಕೊಳ್ಳುವ ಹುಡುಗ ಬೇಕು. ಈಗ ನನ್ನ ಮನೆಗೆ ಅಳಿಯ ಎನ್ನುವುದಕ್ಕಿಂತ ಮಗನಾಗಿ ಬರಬೇಕು. ತಂದೆ ಹೋದ ಮೇಲೆ ನಾವು ಹೆಣ್ಣು ಮಕ್ಕಳೇ ಇರುವುದು. ಮದುವೆ ನನಗೆ ನಿಜವಾಗಲೂ ಬೇಕಾ ಎಂದು ಕೆಲವೊಮ್ಮೆ ಅನ್ನಿಸಿದಾಗ ನನಗೇನು ಮದುವೆ ಅವಶ್ಯ ಇದೆ ಎಂದು ಎನಿಸಲಿಲ್ಲʼʼ ಎಂದಿದ್ದರು.

ಬಿಗ್‌ಬಾಸ್‌ ಮನೆಗೆ ಇವರ ವ್ಯಕ್ತಿತ್ವ ಹೊಂದುವುದಿಲ್ಲ’, ‘ಯಾವುದರಲ್ಲಿಯೂ ಅಷ್ಟಾಗಿ ತೊಡಗಿಕೊಳ್ಳುವುದಿಲ್ಲ’ ‘ಟಾಸ್ಕ್‌ಗಳಲ್ಲಿ ಪರ್ಫಾರ್ಮ್‌ ಮಾಡಿಲ್ಲ’ ಇಂಥ ಮಾತುಗಳನ್ನೆಲ್ಲ ಮನೆಯ ಸದಸ್ಯರಿಂದ ಕೇಳುತ್ತಲೇ ಬಿಗ್‌ಬಾಸ್‌ ಸೀಸನ್‌ನ ಮುಕ್ಕಾಲು ದಾರಿಯನ್ನು ಕ್ರಮಿಸಿ ಸೈ ಎನಿಸಿಕೊಂಡಿದ್ದರು ಸಿರಿ.

Continue Reading
Advertisement
Ban on Muslim organizations
ದೇಶ5 mins ago

Ban on Muslim organizations: ಕಣಿವೆನಾಡಿನ ಎರಡು ಮುಸ್ಲಿಂ ಸಂಘಟನೆಗಳು ಬ್ಯಾನ್‌!

Actor Darshan Judicial Custody Jailer Gave UTP Number
ಸ್ಯಾಂಡಲ್ ವುಡ್14 mins ago

Actor Darshan: ಪರಪ್ಪನ ಅಗ್ರಹಾರದಲ್ಲಿ ʻದಾಸʼ; ʻಡಿʼಬಾಸ್‌ ಕೈದಿ ನಂಬರ್‌ 6106!

viral video
Latest15 mins ago

Viral Video: ತಲೆ ಮೇಲೆ ಎರಡು ಗ್ಯಾಸ್ ಸಿಲಿಂಡರ್, ಅದರ ಮೇಲೆ ಬಿಂದಿಗೆ! ಅಬ್ಬಾ ಎಂಥ ಅದ್ಭುತ!

Gully cricket vibes
ಕ್ರೀಡೆ19 mins ago

Gully Cricket Vibes: ಗಲ್ಲಿ ಕ್ರಿಕೆಟ್​ನಂತೆ ಚೆಂಡು ಹುಡುಕಾಡಿದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

Share Market Scam
ಕ್ರೈಂ30 mins ago

Share Market Scam: ಮುಖೇಶ್ ಅಂಬಾನಿ ಡೀಪ್ ಫೇಕ್‌! 7 ಲಕ್ಷ ರೂ. ಕಳೆದುಕೊಂಡ ವೈದ್ಯೆ

Tharun Sudhir sonal monteiro will get marriage
ಸಿನಿಮಾ31 mins ago

Tharun Sudhir: ಸೋನಲ್ ಜತೆ `ತರುಣ್ ಸುಧೀರ್‌’ಗೆ ಕೂಡಿಬಂತು ಕಂಕಣಭಾಗ್ಯ?

Rushikonda Palace Issue
ದೇಶ45 mins ago

Rushikonda Palace: 500 ಕೋಟಿಯ ಋಷಿಕೊಂಡ ಅರಮನೆ; 12 ಬೆಡ್‌ರೂಮ್‌, ವಾಶ್‌ರೂಮ್‌ ಒಂದು ಮನೆಯಷ್ಟು!

Sumit Nagal
ಕ್ರೀಡೆ51 mins ago

Paris Olympics 2024: ಅಧಿಕೃತವಾಗಿ ಪ್ಯಾರಿಸ್​ ಒಲಿಂಪಿಕ್ಸ್ ಟಿಕೆಟ್​ ಪಡೆದ ಸುಮಿತ್‌ ನಗಾಲ್‌

Suraj Revanna Case
ಕರ್ನಾಟಕ1 hour ago

Suraj Revanna Case: ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌; ಎಂಎಲ್‌ಸಿ ಸೂರಜ್‌ ರೇವಣ್ಣ ಅರೆಸ್ಟ್‌

Doodle V3 E-Cycle
ಆಟೋಮೊಬೈಲ್1 hour ago

Doodle V3 E-Cycle: ‘ಕಲ್ಕಿ 2898 ಎಡಿ’ನಿಂದ ಪ್ರೇರಿತವಾದ ಇ-ಸೈಕಲ್ ಮಾರುಕಟ್ಟೆಗೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ2 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ3 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು6 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು6 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ7 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ7 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ7 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌