ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ (BBK SEASON 10)ಗೆ ಅದ್ಧೂರಿಯಾಗಿ ತೆರೆ ಎಳೆಯಲಾಗಿದೆ. ನಟ ಕಾರ್ತಿಕ್ ಮಹೇಶ್ (Karthik Mahesh) ಬಿಗ್‌ಬಾಸ್ ಟ್ರೋಫಿ ಮುಡಿಗೇರಿಸಿಕೊಂಡಿದ್ದಾರೆ. ಗೆಲುವಿನ ಖುಷಿಯನ್ನು ಅನುಭವಿಸುತ್ತಿರುವ ಅವರು, ವಿವಿಧ ಕಡೆಗೆ ತೆರಳಿ ಗಣ್ಯರನ್ನು ಭೇಟಿಯಾಗುತ್ತಿದ್ದಾರೆ. ಸದ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.
ಈ ವೇಳೆ ಬಿಗ್‌ಬಾಸ್ ಟ್ರೋಫಿಯನ್ನು ಹಿಡಿದುಕೊಂಡು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮೆಚ್ಚುಗೆ ಸೂಚಿಸಿದ್ದಾರ ಮತ್ತು ಕಾರ್ತಿಕ್ ಜತೆಗೆ ಫೋಟೋಗೆ ಫೋಸ್ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ವಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ಕಾರ್ತಿಕ್ ಭೇಟಿಯಾಗಿದ್ದರು.
ಅಳಿಯನನ್ನು ಭೇಟಿಯಾದ ಕಾರ್ತಿಕ್
ಸದ್ಯ ಕಾರ್ತಿಕ್ ವಿವಿಧ ಕಾರ್ಯಕ್ರಮಗಳನ್ನು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ನನ್ನಮ್ಮ ಸೂಪರ್ಸ್ಟಾರ್ ಸೀಸನ್ 3’ ಶೋನಲ್ಲೂ ಅತಿಥಿಯಾಗಿ ತಮ್ಮ ತಾಯಿ ಜತೆಗೆ ಭಾಗಿಯಾಗಿದ್ದರು. ಹಲವು ಸಂದರ್ಶನಗಳಲ್ಲಿ ಹಾಗೂ ಅಭಿಮಾನಿಗಳನ್ನ ಭೇಟಿಯಾಗುವುದರಲ್ಲೇ ಬಿಜಿಯಾಗಿದ್ದ ಕಾರ್ತಿಕ್ ಮಹೇಶ್ ಇದೀಗ ಬಿಡುವು ಮಾಡಿಕೊಂಡು ತಮ್ಮ ಸಹೋದರಿಯ ಮಗನೊಂದಿಗೆ ಸಮಯ ಕಳೆದಿದ್ದಾರೆ. ಸದ್ಯ ಈ ಫೋಟೊ ವೈರಲ್ ಆಗಿದೆ.
ಕಾರ್ತಿಕ್ ಅವರ ತಾಯಿ ಮೀನಾಕ್ಷಿ ತವರೂರು ಚಾಮರಾಜನಗರ. ಕಾರ್ತಿಕ್ ಮತ್ತು ಸಹೋದರಿ ಹುಟ್ಟಿ, ಬೆಳೆದಿದ್ದು ಅಲ್ಲೇ. ಇದೀಗ ಕಾರ್ತಿಕ್ ತಂಗಿಯ ಬಾಣಂತನ ಕೂಡ ಚಾಮರಾಜನಗರದಲ್ಲೇ ಆಗುತ್ತಿದೆ. ಹೀಗಾಗಿ ತಂಗಿ ಹಾಗೂ ಅಳಿಯನನ್ನು ಭೇಟಿಯಾಗಲು ಕಾರ್ತಿಕ್ ಚಾಮರಾಜನಗರಕ್ಕೆ ತೆರಳಿದ್ದರು. ಈ ವೇಳೆ ಮುಗುವನ್ನು ತೋಳಿನಲ್ಲಿ ಎತ್ತಿಕೊಂಡು ಮುದ್ದಾಡಿದ್ದರು. ಬಿಗ್‌ಬಾಸ್ ಮನೆಯೊಳಗೆ ಇದ್ದಾಗಲೂ ಕಾರ್ತಿಕ್ ತಮ್ಮ ತಂಗಿಯ ಬಗ್ಗೆ ಹೇಳಿದ್ದರು. ಅವರು ಮನೆಯೊಳಗೆ ಇದ್ದಾಗಲೇ ತಂಗಿಗೆ ಹೆರಿಗೆಯಾಗಿತ್ತು. ಮಗು ಹುಟ್ಟಿದ ಸಿಹಿ ಸುದ್ದಿಯನ್ನ ಕಾರ್ತಿಕ್‌ಗೆ ‘ಬಿಗ್ ಬಾಸ್’ ತಿಳಿಸಿದ್ದರು.
ಇಂದು ಮಾನ್ಯ ಮುಖ್ಯಮಂತ್ರಿಗಳ ಮನೆಗೆ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಅವರು ಭೇಟಿ ನೀಡಿದ್ದಾರೆ.
— Saraswathi Jagirdar 🇮🇳 (@saraswathi1717) February 14, 2024
" ಒಳ್ಳೆದಾಗಲಿ ಕಣಯ್ಯ , ಸಿನಿಮಾ ರಂಗದಲ್ಲಿ ಒಳ್ಳೆ ಹೆಸರು ಮಾಡು " ಎಂದು ಹಾರೈಸಿದರು .
ಈ ಸಂದರ್ಭದಲ್ಲಿ, ಭಾ.ಮ ಹರೀಶ್ ಮತ್ತು ಉಲ್ಲಾಸ್ ಗೌಡ ಉಪಸ್ಥಿತರಿದ್ದರು.#Siddaramaiah #karthikmahesh #bbk10 #Winner pic.twitter.com/9LrOTfSjya
ಟಿಆರ್‌ಪಿಯಲ್ಲಿ ದಾಖಲೆ ಬರೆದಿದ್ದ ಫಿನಾಲೆ
ಜನವರಿ 27ರ ಅಂದರೆ ಬಿಗ್‌ಬಾಸ್ ಸೀಸನ್ 10ರ ಫಿನಾಲೆ ಭರ್ಜರಿ ಟಿಆರ್‌ಪಿ ಕಂಡಿತ್ತು. ಶನಿವಾರದ ಎಪಿಸೋಡ್ಗೆ 10.3 ಟಿವಿಆರ್ ಮತ್ತು ಭಾನುವಾರ 12.6 ಟಿವಿಆರ್ ಸಿಕ್ಕಿದೆ. ಎರಡೂ ದಿನಗಳ ಟಿಆರ್‌ಪಿ ಸರಾಸರಿ ತೆಗೆದಾಗ 11.4 ಟಿವಿಆರ್ ಆಗಿತ್ತು. ಅಲ್ಲದೆ ಈ ಸೀಸನ್‌ನ ಉದ್ದಕ್ಕೂ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿತ್ತು. ಆ ಮೂಲಕ ಸೀಸನ್ 10 ಭರ್ಜರಿ ಯಶಸ್ಸು ಕಂಡಿತ್ತು. ‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದಲ್ಲಿ ಡ್ರೋನ್ ಪ್ರತಾಪ್, ರಕ್ಷಕ್ ಬುಲೆಟ್ ಸ್ಪರ್ಧಿಸಿದ್ದು ಆರಂಭದಲ್ಲಿ ಹೆಚ್ಚು ಸದ್ದು ಮಾಡಿತ್ತು. ವಿನಯ್ ಅಗ್ರೆಸ್ಸಿವ್‌ನೆಸ್, ಕಾರ್ತಿಕ್ – ಸಂಗೀತಾ ಫ್ರೆಂಡ್‌ಶಿಪ್/ ಕಿತ್ತಾಟ, ತನಿಷಾ – ಕಾರ್ತಿಕ್ ಫ್ರೆಂಡ್‌ಶಿಪ್, ವಿನಯ್ ಗ್ರೂಪಿಸಂ, ವರ್ತೂರು ಸಂತೋಷ್ – ತುಕಾಲಿ ಸಂತು ಬೀನ್ ಬ್ಯಾಗ್ ಟಾಕ್ಸ್ ಮುಂತಾದ ಅಂಶ ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಸೀಸನ್‌ನ ರನ್ನರ್ ಅಪ್ ಆಗಿ ಡ್ರೋನ್ ಪ್ರತಾಪ್ ಆಯ್ಕೆಯಾಗಿದ್ದರೆ, ಸಂಗೀತಾ ಶೃಂಗೇರಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಇದನ್ನೂ ಓದಿ: BBK SEASON 10: 3 ತಿಂಗಳಿನಿಂದ ಮನೆ ಬಾಡಿಗೆ ಕಟ್ಟಿಲ್ಲ; ಕಾರ್ತಿಕ್ ಮಹೇಶ್