Site icon Vistara News

BBK SEASON 10: ಬಿಗ್‌ ಬಾಸ್‌ ಮನೆಯೊಳಗೆ ಹೊಸ ಲೋಕ; ಗಂಧರ್ವರು-ರಕ್ಕಸರು ಎಂಟ್ರಿ!

bigg boss

bigg boss

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK SEASON 10) ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಬಿಗ್‌ ಬಾಸ್‌ ಮನೆಯೊಳಗೆ ವಿಶಿಷ್ಟ ಟಾಸ್ಕ್‌ಗಳು ನಡೆಯುತ್ತಿದ್ದು, ಗಮನ ಸೆಳೆಯುತ್ತಿದೆ. ಕಣ್ಣಿನ ಸುತ್ತ ಕೆಂಪು ಬಣ್ಣ…. ಕಡುಗಪ್ಪು ದಪ್ಪ ಹುಬ್ಬುಗಳು, ಕತ್ತಲೇ ಬಟ್ಟೆಯಾದಂಥ ನಿಲುವಂಗಿ, ಕೆಂಪು ಚೂಪು ಕೋಡುಗಳು.. ಒಂದೆಡೆ ಇಷ್ಟು ಭೀಕರ ರೂಪದ ರಕ್ಕಸರ ಗುಂಪು…. ಇನ್ನೊಂದೆಡೆ ಶಾಂತ ಭಾವವನ್ನು ಸೂಸುವ, ಬಿಳಿಯುಡುಗೆಯಲ್ಲಿ ನಗುನಗುತ್ತ ನಿಂತಿರುವ, ನೆತ್ತಿಯ ಮೇಲೂ ಬಿಳಿಯಾದ ಹೂತೊಟ್ಟ ಗಂಧರ್ವರು…ಯಾವುದಿದು ಗಂಧರ್ವ-ರಕ್ಕಸರ ಮುಖಾಮುಖಿ? ಈ ಪ್ರಶ್ನೆಗೆ ಹೊಸ ಪ್ರೋಮೊದಲ್ಲಿದೆ ಉತ್ತರ.

‘ಬಿಗ್‌ ಬಾಸ್ʼ ಮನೆ ಈ ಕ್ಷಣದಿಂದ ಬಿಗ್‌ ಬಾಸ್ ಲೋಕ ಎಂಬ ಕಾಲ್ಪನಿಕ ಜಗತ್ತಾಗಿ ಬದಲಾಗುತ್ತದೆ. ಈ ಲೋಕದಲ್ಲಿ ಗಂದರ್ವರು ಹಾಗೂ ರಾಕ್ಷಸರು ಎಂಬ ಎರಡು ಗುಂಪುಗಳಿವೆ’ ಎಂದು ಬಿಗ್‌ಬಾಸ್ ಘೋಷಿಸಿದಾಗ ಎಲ್ಲ ಸ್ಪರ್ಧಿಗಳ ಮುಖದಲ್ಲಿ ಅಚ್ಚರಿ.

ಕಾರ್ತಿಕ್‌, ಸಂಗೀತಾ, ತನಿಷಾ, ಅವಿನಾಶ್‌ ಎಲ್ಲರೂ ಮುಖಕ್ಕೆ ಬಣ್ಣ ಬಳಿದುಕೊಂಡು, ಕೋಡುಗಳುಳ್ಳ ಕಡುಗಪ್ಪು-ಕೆಂಪು ಉಡುಪು ತೊಟ್ಟ ರಕ್ಕಸರಾಗಿ ಬದಲಾದರೆ, ವಿನಯ್, ನಮ್ರತಾ, ವರ್ತೂರು, ತುಕಾಲಿ ಸಂತೋಷ್‌ ಎಲ್ಲರೂ ಬಿಳಿಯುಡುಗೆ ತೊಟ್ಟು ಗಂಧರ್ವರಾಗಿದ್ದಾರೆ.

ಕಾರ್ತಿಕ್, ಅಡುಗೆ ಮನೆಯಲ್ಲಿ ನೀರು ಚೆಲ್ಲಿ, ಬೆಡ್‌ರೂಮ್‌ನಲ್ಲಿ ಬಟ್ಟೆಗಳನ್ನೆಲ್ಲ ಚೆಲ್ಲಿ ಕಿರುಚಾಡುತ್ತ ಕುಣಿದಾಡಿದ್ದಾರೆ. ಸಂಗೀತಾ, ವಿನಯ್ ತಮ್ಮ ಹಿಂದೆ ಕುಪ್ಪಳಿಸಿಕೊಂಡು ಬರುತ್ತಿರಬೇಕು ಎಂದು ಅಪ್ಪಣೆ ಹೊರಡಿಸಿದ್ದಾರೆ. ನಮ್ರತಾ ಕಣ್ಣುಗಳಲ್ಲಿ ನೀರು ತುಂಬಿಕೊಂಡಿದೆ. ರಕ್ಕಸ ಗುಂಪು ಎಷ್ಟೇ ಕಿರುಚಾಡಿದರೂ ತಾಳ್ಮೆ ಕಳೆದುಕೊಳ್ಳದೆ ತಣ್ಣಗಿದೆ ಗಂಧರ್ವರ ತಂಡ. ಹಾಗಂತ ಅವರ ಮನಸ್ಸೇನೂ ತಣ್ಣಗಿಲ್ಲ. ಅದರ ಸೂಚಕವಾಗಿ, ‘ನಾನು ನನ್ನ ಪಾತ್ರದಿಂದ ಹೊರಗೆ ಬಂದರೆ ವಿಷಯವೇ ಬೇರೆ. ಪಾಪ ಅವರು, ಬೇಜಾರಗುತ್ತಿದೆ ಅವರನ್ನು ನೆನಪಿಸಿಕೊಂಡರೆ…’ ಎಂದು ವಿನಯ್ ಹೇಳುತ್ತಿದ್ದಾರೆ.

ಈ ವಿಚಿತ್ರ ಪ್ರಪಂಚವನ್ನು ಕ್ಯಾಪ್ಟನ್ ಸ್ನೇಹಿತ್‌ ಉಸ್ತುವಾರಿ ಮಾಡುತ್ತಿದ್ದಾರೆ. ರಕ್ಕಸರ ತೆಕ್ಕೆಗೆ ಸಿಕ್ಕ ಗಂಧರ್ವರ ಪಾಡೇನು? ಅವರು ಹೇಗೆ ಪಾರಾಗುತ್ತಾರೆ? ಈ ಆಟಕ್ಕೆ ಇನ್ನೊಂದು ಆಯಾಮವೂ ಇದೆಯಾ? ಇದ್ದರೆ ಅದು ಹೇಗಿರುತ್ತದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲು ಬಿಗ್‌ಬಾಸ್ ನೋಡಬೇಕು.

ಮತ್ತೆ ಕಿತ್ತಾಡಿಕೊಂಡ ವಿನಯ್‌-ಸಂಗೀತಾ

ಬಿಗ್‌ ಬಾಸ್‌ ಮನೆಯ ಪ್ರಬಲ ಸ್ಪರ್ಧಿಗಳೆಂದು ಪರಿಗಣಿಸಲ್ಪಟ್ಟ ವಿನಯ್‌ ಗೌಡ ಮತ್ತು ಸಂಗೀತಾ ಶೃಂಗೇರಿ ನಡುವೆ ಮತ್ತೆ ಜಗಳ ಆರಂಭವಾಗಿದೆ. ಕೆಲವು ದಿನಗಳಿಂದ ಹಿಂದೆ ಅವರು ಸ್ನೇಹಿತರಾಗಿದ್ದರು. ಅವರ ಸ್ನೇಹ ಎಲ್ಲರಿಗೂ ಅಚ್ಚರಿ ತಂದಿತ್ತು. ಆದರೆ ಈ ಸ್ನೇಹ ಹೆಚ್ಚು ದಿನ ಉಳಿಯಲಿಲ್ಲ. ಇದೀಗ ಹಿಂದಿನಂತೆ ಮತ್ತೆ ಕಿತ್ತಾಡಲು ಆರಂಭಿಸಿದ್ದಾರೆ.

ಇದನ್ನೂ ಓದಿ: BBK SEASON 10: ಯಾರ ಕಣ್ಣು ಬಿತ್ತಮ್ಮ ತನಿಷಾ-ವರ್ತೂರ್ ಸ್ನೇಹದ ಮ್ಯಾಲೆ?

ಬಿಗ್‌ ಬಾಸ್‌ನ ಹೊಸ ಪ್ರೋಮೊ ಬಿಡುಗಡೆಯಾಗಿದ್ದು, ಅದರಲ್ಲಿ ವಿನಯ್‌ ಮತ್ತು ಸಂಗೀತಾ ನಡುವೆ ವಾಗ್ವಾದ ನಡೆಯುತ್ತಿರುವುದು ಕಂಡು ಬಂದಿದೆ. ಯಾರಲ್ಲಿ ಕೆಟ್ಟತನ ಹಾಗೂ ಯಾರಲ್ಲಿ ಒಳ್ಳೆಯತನ ಇದೆ ಎಂಬುದನ್ನು ಹೇಳಲು ಸ್ಪರ್ಧಿಗಳಿಗೆ ಬಿಗ್‌ ಬಾಸ್‌ ಆದೇಶಿಸಿದ್ದರು. ಈ ವೇಳೆ ವಿನಯ್‌-ಸಂಗೀತಾ ನಡುವೆ ಕಿಡಿ ಹೊತ್ತಿಕೊಂಡಿದೆ. ʼʼವಿನಯ್ ಕೆಟ್ಟ ಗುಣಗಳ ಬೇರುʼʼ ಎಂದು ಸಂಗೀತಾ ಹೇಳಿದ್ದಾರೆ. ಸಂಗೀತಾ ಬಗ್ಗೆ ಇದೇ ಆರೋಪವನ್ನು ವಿನಯ್ ಕೂಡ ಮಾಡಿದ್ದಾರೆ. ಕೊನೆಗೆ ಸಂಗೀತಾಗೆ ʼʼಶಟ್​ ಅಪ್ʼʼ​ ಎಂದು ವಿನಯ್‌ ಬೈದಿದ್ದಾರೆ. ಸಂಗೀತಾ ಕೂಡ ಸುಮ್ಮನಿರದೆ, ʼʼಮೈಂಡ್ ಯುವರ್ ಲ್ಯಾಂಗ್ವೇಜ್ʼʼ ಎಂದು ಮಾರುತ್ತರ ಕೊಟ್ಟಿರುವುದು ಪ್ರೋಮೊದಲ್ಲಿ ಕಂಡು ಬಂದಿದೆ. ಒಟ್ಟಿನಲ್ಲಿ ಬಿಗ್‌ ಬಾಸ್‌ ಮನೆ ಮತ್ತೆ ಬಿಸಿಯೇರಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version