ಬೆಂಗಳೂರು: ʻಬೆಳ್ಳುಳಿ ಕಬಾಬ್ʼ ಡೈಲಾಗ್ ಮೂಲಕ ಚಂದ್ರು (Bellulli Kabab Chandru) ಮತ್ತು ಅವರ ಜೊತೆ ಇರುವ ಹುಡುಗ ರಾವುಲ್ಲಾ ಫೇಮಸ್ ಆಗಿದ್ದಾರೆ. ಆದರೀಗ ʻಹುಡುಗಿಯರು ಬಂದು ʻರಾವುಲ್ಲ ಅಲ್ಲಾಡ್ಸಪ್ಪʼ ಅಂತಾರೆ. ಇವೆಲ್ಲ ಹೆಣ್ಮಕ್ಕಳು ಮಾತಾಡುವ ಮಾತಲ್ಲʼ ಎಂದು ಚಂದ್ರು ಅವರು ಬೇಸರ ಹೊರ ಹಾಕಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಈ ಬಗ್ಗೆ ಚಂದ್ರು ಮಾತನಾಡಿ ʻʻನನಗೆ ಈ ಬಗ್ಗೆ ಹೇಳೋಕೆ ಅಸಹ್ಯವಾಗುತ್ತಿದೆ. ಏನಾಗುತ್ತೆ ಅಂದರೆ ರಾವುಲ್ಲಾ ನನಗೆ ಒಳ್ಳೆ ಸಮಯಕ್ಕೆ ಸಿಕ್ಕಿದ, ಸಹಾಯ ಮಾಡಿದ. ಅದನ್ನು ಪ್ರತಿ ಸಲ ನಾನು ಅವನ ಮುಂದೆ ಹೇಳಿದ್ದೀನಿ. ಅವನು ಇನ್ನೂ ಬದಕಬೇಕು ಬಾಳಬೇಕು. ಅವನಿಗೆ ಬೇಕಾದರೆ ಹೋಟೆಲ್ ಮಾಡಿಕೊಡ್ತೀನಿ. ಇಗ ನಡೀತಾ ಇರೋದು ನೋಡಿದರೆ, ಚಿಂತೆ ಆಗ್ತಾ ಇದೆ. ಈಗ ಎಲ್ಲಿ ನೋಡಿದರೂ ರಾವುಲ್ಲ ಅಂತಾರೆ. ಹುಡುಗಿಯರು ಬಂದು ರಾವುಲ್ಲ ಅಲ್ಲಾಡ್ಸಪ್ಪ ಅಂತಾರೆ. ಇವೆಲ್ಲ ಹೆಣ್ಮಕ್ಕಳು ಮಾತಾಡುವ ಮಾತಲ್ಲ. ಅದೆಲ್ಲ ನೋಡಿದರೆ ನಮಗೆ ಬೇಜಾರಾಗುತ್ತದೆ’ ಎಂದು ಚಂದ್ರು ಹೇಳಿದ್ದಾರೆ.
ʻʻಈಗ ಅವನು ಕತ್ತಿಗೆ ಒಂದು ಚೈನ್ ಹಾಕಿಕೊಂಡು ಎರಡು ಬಟನ್ ಬಿಚ್ಚಿಕೊಂಡಿದ್ದಾನೆ. ನೋಡಿದವರಿಗೆ ನಾಳೆ ಇವನು ಎಲ್ಲಾದರೂ ಕೆಟ್ಟು ಹೋಗುತ್ತಾನಾ ಎಂದು ಅನಿಸುತ್ತದೆ. ಸಾವಿರಾರು ಕಿಲೋಮೀಟರ್ಯಿಂದ ಬಂದ. ಎರಡೂವರೆ ವರ್ಷ ಆಯಿತು. ನಾನು ಅವನಿಗೆ ಒಂದು ಒಳ್ಳೆಯ ದಾರಿ ತೋರಿಸಬೇಕು. ಕಸ್ಟಮರ್ ಬರ್ತಾ ಇರ್ತಾರೆ. ಆಗ ಕೂಡ ಜನ ಬಂದು ಸೆಲ್ಫಿ ಅಂತಾರೆ. ಆ ಸಮಯದಲ್ಲಿ ಸೆಲ್ಫಿ ಕೊಡೋಕೆ ಆಗಲ್ಲ. ನಮಗೂ ಟೈಮ್ ಇರಬೇಕು. ಬಂದವರಿಗೆ ಉಪಚರಿಸಬೇಕು. ತುಂಬಾ ತೊಂದರೆ ಆಗಿದೆ, ಆದರೆ ನಿಮ್ಮ ಖುಷಿಗೆ ಧಕ್ಕೆ ಕೊಡಲ್ಲ. ನಾವು ಬೆಳ್ಳುಳ್ಳಿ ಕಬಾಬ್ ಅಂತ ಮಾಡಿದ್ದು ತಮಾಷೆಗೆ. ಅದು ಇವತ್ತು ನನ್ನನ್ನು ಬಾಳಿ ಬದುಕಿಸುತ್ತಿದೆ. ಟೇಬಲ್ನಲ್ಲಿ ಬಂದು ಕುಳಿತುಕೊಂಡವರು ಮೊದಲು ಬೆಳುಳ್ಳಿ ಕಬಾಬ್ ಕೇಳ್ತಾರೆ. ತುಂಬ ಜನ ಬರುತ್ತಿದ್ದಾರೆ. ಹಳೇ ಕಸ್ಟಮರ್ಗಳಿಗೆ ಸೇವೆ ಮಾಡಲು ಸಾಧ್ಯವಾಗುತ್ತಿಲ್ಲ. ಯಾರಿಗೂ ಬೇಸರ ಆಗಬಾರದುʼʼಎಂದು ಹೇಳಿಕೊಂಡರು.
ಇದನ್ನೂ ಓದಿ: Bellulli Kabab Chandru: ನಟಿ ಮಾಲಾಶ್ರೀ ಮೇಕಪ್ ಮ್ಯಾನ್ ಆಗಿದ್ರಂತೆ `ಬೆಳ್ಳುಳ್ಳಿ ಕಬಾಬ್ ಚಂದ್ರು’!
ಚಂದ್ರು ಅವರು ತಮ್ಮ ಹೋಟೆಲ್‌ನಲ್ಲಿ ಅಡುಗೆ ಮಾಡಿ ಕೆಲ ಯುಟ್ಯೂಬ್ ಚಾನೆಲ್‌ಗಳಿಗೆ ವಿಡಿಯೋ ಶೂಟ್ ಮಾಡಿಕೊಡುತ್ತಾರೆ. ಚಂದ್ರು ಅವರು ಮಾತನಾಡುವ ಶೈಲಿ ವಿಶಿಷ್ಟ. ಇದಕ್ಕೆ ಅದೆಷ್ಟೋ ಫ್ಯಾನ್ಸ್ ಚಂದ್ರುಗೆ ಫಿದಾ ಆಗಿದ್ದಾರೆ. ಪ್ರತಿ ವಿಡಿಯೊ ಕೊನೆಯಲ್ಲಿ ಚಂದ್ರು ಅವರು ಹೇಳುವ ʻಬರ್ತಾ ಇರೋದ್, ತಿಂತಾ ಇರೋದೇʼಎನ್ನುವ ಮಾತು ಬಹಳ ಫೆಮಸ್ ಎಂದರೆ ತಪ್ಪಿಲ್ಲ.