ಬೆಂಗಳೂರು: ಈಗಾಗಲೇ ಜೀ ವಾಹಿನಿ ಹಲವು ಹೊಸ ಧಾರಾವಾಹಿಗಳನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ. ‘ವೀಕೆಂಡ್ ವಿತ್ ರಮೇಶ್’, ‘ಡಿಕೆಡಿ’ ಅಂತಹ ಕಾರ್ಯಕ್ರಮಗಳು ಜನರನ್ನು ರಂಜಿಸುತ್ತಿವೆ. ಇದರ ಜತೆಗೆ ಹೊಸ ಈಗ ಹೊಸದಾಗಿ ಸೇರ್ಪಡೆಯಾಗುತ್ತಿದೆ ಭರ್ಜರಿ ಬ್ಯಾಚುಲರ್ಸ್ ಶೋ. ಮದುವೆ ವಯಸ್ಸಿಗೆ ಬಂದಿರುವ ಹದಿಹರೆಯದ ಹುಡುಗರಿಗೆ ಸಮಾಜದಲ್ಲಿ ಎದುರಾಗುತ್ತಿರುವ ತೊಂದರೆಗಳನ್ನು ಆಧಾರವಾಗಿಟ್ಟುಕೊಂಡು ಹಣೆದಿರುವ ಈ ಕಾರ್ಯಕ್ರಮ ಬ್ಯಾಚುಲರ್ ಲೈಫಿನಿಂದ ಮದುವೆಗೆ ಎಲಿಜಿಬಲ್ ಮಾಡುವ ಪ್ರಯತ್ನದ ಈ ಹೊಸ ರಿಯಾಲಿಟಿ ಶೋನೆ `ಭರ್ಜರಿ ಬ್ಯಾಚುಲರ್ಸ್’ (Bharjari Bachelors) ಕಾರ್ಯಕ್ರಮ.
ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿ ಅಕುಲ್ ಬಾಲಾಜಿ ಅವರದ್ದು. ಅಷ್ಟೇ ಅಲ್ಲದೇ ಗಾಯಕ ಹನುಮಂತ ಕೂಡ ಹೊಸ ಅವತಾರದಲ್ಲಿ ಎಂಟ್ರಿ ಕೊಡುತ್ತಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಈ ಶೋನಲ್ಲಿ ಲವ್ ಗುರು ಆಗಿ ಪಡ್ಡೆ ಹುಡುಗರನ್ನು ತಿದ್ದಿತೀಡುವ ಕೆಲಸ ಮಾಡಿದರೆ, ಡಿಂಪಲ್ ಕ್ವೀನ್ ರಚಿತಾರಾಮ್ (Rachitha Ram) ಬ್ಯಾಚುಲರ್ಸ್ ಪಾಲಿನ ಡ್ರೀಮ್ ಗರ್ಲ್ ಆಗಿ ಕಾಣಿಸಿಕೊಳ್ಳುವ ಮುಖಾಂತರ ತೀರ್ಪುಗಾರರಾಗಿದ್ದಾರೆ. ಈ ರಿಯಾಲಿಟಿ ಶೋದ ರಾಗ ಸಂಯೋಜನೆ ಮಾಡಿರುವುದು ಚಂದನ್ ಶೆಟ್ಟಿ. ಇದೇ ಜೂನ್ 24 ಶನಿವಾರ ರಾತ್ರಿ 9.00ಕ್ಕೆ ಜೀ ವಾಹಿನಿಯಲ್ಲಿ ಈ ಶೋ ಪ್ರಸಾರ ಕಾಣಲಿದೆ.
ಇದನ್ನೂ ಓದಿ: Bharjari Bachelors: ವಧುವಿಗಾಗಿ ಹೊಸ ಅವತಾರ ತಾಳ್ತಾನಾ ಹನುಮಂತ? ಶುರುವಾಗಲಿದೆ ʻಭರ್ಜರಿ ಬ್ಯಾಚುಲರ್ಸ್ʼ!
ಭರ್ಜರಿ ಬ್ಯಾಚುಲರ್ಸ್’ ಪ್ರೋಮೊಗೆ ವ್ಯಾಪಕ ಮೆಚ್ಚುಗೆಯು ವ್ಯಕ್ತವಾಗುತ್ತಿದೆ. ಸುಂದರವಾದ ಹುಡುಗಿಯರನ್ನು ರ‍್ಯಾಂಪ್ ಮೇಲೆ ವಾಕ್ ಮಾಡಿಸಿ ಶೋಗೆ ಗ್ಲಾಮರ್ ಸೇರಿಸಿದೆ ‘ಭರ್ಜರಿ ಬ್ಯಾಚುಲರ್ಸ್ʼ (Bharjari Bachelors) ತಂಡ. ಮದುವೆ ಆಗುವ ಹುಡುಗ ಹೇಗಿರಬೇಕು ಎನ್ನುವ ಪ್ರಶ್ನೆ ಮೂಲಕ ಹುಡುಗಿಯರ ಅಂತರಾಳವನ್ನ ಪ್ರೋಮೊ ಅನಾವರಣ ಮಾಡಲಾಗಿದೆ. ಇದೀಗ ಗಾಯಕ ಹನುಮಂತನದ್ದೇ ಎಲ್ಲೆಲ್ಲಿಯೂ ಜಪ. ತನ್ನ ಕಂಠಸಿರಿಯಿಂದ, ಮುಗ್ಧ ಮಾತುಗಳಿಂದ ಅದೆಷ್ಟೋ ಹೃದಯ ಗೆದ್ದ ಹನುಮಂತನಿಗೆ ಒಳ್ಳೆ ಹುಡುಗಿ ಸಿಗ್ಲಿ ಎಂದು ಅವರ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ಸೂರಜ್, ರಾಕೇಶ್, ಮನೋಹರ್, ಉಮೇಶ್, ನವಾಜ್, ರುದ್ರ ಮಾಸ್ಟರ್, ಹನುಮಂತ, ಜಗಪ್ಪ, ಗಿಲ್ಲಿ ನಟ, ರಾಕೇಶ್ ಭರ್ಜರಿ ಬ್ಯಾಚುಲರ್ಸ್ ಕಂಟೆಸ್ಟೆಂಟ್‌ಗಳಾಗಿದ್ದಾರೆ. ಆಸಕ್ತಿಕರವಾದ ಸಂಗತಿ ಎಂದರೆ ಈ ಶೋನಲ್ಲಿ ಸಾಕಷ್ಟು ಗೇಮ್‌ಗಳಿರಲಿವೆ ಎಂತಲೂ ವರದಿಯಾಗಿದೆ.