Bharjari Bachelors New Show On Zee On June 24th Bharjari Bachelors: ನಮಗೆಲ್ಲ ಯಾರ್ ಬೀಳ್ತಾರೆ ಗುರೂ ಅಂತ ಬಂದ್ರು ಬ್ಯಾಚುಲರ್ಸ್; ಇದು ಕ್ರೆಜಿ ಸ್ಟಾರ್‌, ಡಿಂಪಲ್ ಕ್ವೀನ್ ಕಮಾಲ್‌! - Vistara News

ಕಿರುತೆರೆ

Bharjari Bachelors: ನಮಗೆಲ್ಲ ಯಾರ್ ಬೀಳ್ತಾರೆ ಗುರೂ ಅಂತ ಬಂದ್ರು ಬ್ಯಾಚುಲರ್ಸ್; ಇದು ಕ್ರೆಜಿ ಸ್ಟಾರ್‌, ಡಿಂಪಲ್ ಕ್ವೀನ್ ಕಮಾಲ್‌!

Bharjari Bachelors: ಈಗಾಗಲೇ ಜೀ ವಾಹಿನಿ ಹಲವು ಹೊಸ ಧಾರಾವಾಹಿಗಳನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ. ‘ವೀಕೆಂಡ್ ವಿತ್ ರಮೇಶ್’, ‘ಡಿಕೆಡಿ’ ಅಂತಹ ಕಾರ್ಯಕ್ರಮಗಳು ಜನರನ್ನು ರಂಜಿಸುತ್ತಿವೆ. ಇದರ ಜತೆಗೆ ಹೊಸ ಈಗ ಹೊಸದಾಗಿ ಸೇರ್ಪಡೆಯಾಗುತ್ತಿದೆ ಭರ್ಜರಿ ಬ್ಯಾಚುಲರ್ಸ್ ಶೋ.

VISTARANEWS.COM


on

Bharjari Bachelors New Show On Zee On June 24th
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಈಗಾಗಲೇ ಜೀ ವಾಹಿನಿ ಹಲವು ಹೊಸ ಧಾರಾವಾಹಿಗಳನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ. ‘ವೀಕೆಂಡ್ ವಿತ್ ರಮೇಶ್’, ‘ಡಿಕೆಡಿ’ ಅಂತಹ ಕಾರ್ಯಕ್ರಮಗಳು ಜನರನ್ನು ರಂಜಿಸುತ್ತಿವೆ. ಇದರ ಜತೆಗೆ ಹೊಸ ಈಗ ಹೊಸದಾಗಿ ಸೇರ್ಪಡೆಯಾಗುತ್ತಿದೆ ಭರ್ಜರಿ ಬ್ಯಾಚುಲರ್ಸ್ ಶೋ. ಮದುವೆ ವಯಸ್ಸಿಗೆ ಬಂದಿರುವ ಹದಿಹರೆಯದ ಹುಡುಗರಿಗೆ ಸಮಾಜದಲ್ಲಿ ಎದುರಾಗುತ್ತಿರುವ ತೊಂದರೆಗಳನ್ನು ಆಧಾರವಾಗಿಟ್ಟುಕೊಂಡು ಹಣೆದಿರುವ ಈ ಕಾರ್ಯಕ್ರಮ ಬ್ಯಾಚುಲರ್ ಲೈಫಿನಿಂದ ಮದುವೆಗೆ ಎಲಿಜಿಬಲ್ ಮಾಡುವ ಪ್ರಯತ್ನದ ಈ ಹೊಸ ರಿಯಾಲಿಟಿ ಶೋನೆ `ಭರ್ಜರಿ ಬ್ಯಾಚುಲರ್ಸ್’ (Bharjari Bachelors) ಕಾರ್ಯಕ್ರಮ.

ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿ ಅಕುಲ್ ಬಾಲಾಜಿ ಅವರದ್ದು. ಅಷ್ಟೇ ಅಲ್ಲದೇ ಗಾಯಕ ಹನುಮಂತ ಕೂಡ ಹೊಸ ಅವತಾರದಲ್ಲಿ ಎಂಟ್ರಿ ಕೊಡುತ್ತಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಈ ಶೋನಲ್ಲಿ ಲವ್ ಗುರು ಆಗಿ ಪಡ್ಡೆ ಹುಡುಗರನ್ನು ತಿದ್ದಿತೀಡುವ ಕೆಲಸ ಮಾಡಿದರೆ, ಡಿಂಪಲ್ ಕ್ವೀನ್ ರಚಿತಾರಾಮ್ (Rachitha Ram) ಬ್ಯಾಚುಲರ್ಸ್ ಪಾಲಿನ ಡ್ರೀಮ್ ಗರ್ಲ್ ಆಗಿ ಕಾಣಿಸಿಕೊಳ್ಳುವ ಮುಖಾಂತರ ತೀರ್ಪುಗಾರರಾಗಿದ್ದಾರೆ. ಈ ರಿಯಾಲಿಟಿ ಶೋದ ರಾಗ ಸಂಯೋಜನೆ ಮಾಡಿರುವುದು ಚಂದನ್‌ ಶೆಟ್ಟಿ. ಇದೇ ಜೂನ್ 24 ಶನಿವಾರ ರಾತ್ರಿ 9.00ಕ್ಕೆ ಜೀ ವಾಹಿನಿಯಲ್ಲಿ ಈ ಶೋ ಪ್ರಸಾರ ಕಾಣಲಿದೆ.

ಇದನ್ನೂ ಓದಿ: Bharjari Bachelors: ವಧುವಿಗಾಗಿ ಹೊಸ ಅವತಾರ ತಾಳ್ತಾನಾ ಹನುಮಂತ? ಶುರುವಾಗಲಿದೆ ʻಭರ್ಜರಿ ಬ್ಯಾಚುಲರ್ಸ್‌ʼ!

ಭರ್ಜರಿ ಬ್ಯಾಚುಲರ್ಸ್’ ಪ್ರೋಮೊಗೆ ವ್ಯಾಪಕ ಮೆಚ್ಚುಗೆಯು ವ್ಯಕ್ತವಾಗುತ್ತಿದೆ. ಸುಂದರವಾದ ಹುಡುಗಿಯರನ್ನು ರ‍್ಯಾಂಪ್ ಮೇಲೆ ವಾಕ್ ಮಾಡಿಸಿ ಶೋಗೆ ಗ್ಲಾಮರ್ ಸೇರಿಸಿದೆ ‘ಭರ್ಜರಿ ಬ್ಯಾಚುಲರ್ಸ್‌ʼ (Bharjari Bachelors) ತಂಡ. ಮದುವೆ ಆಗುವ ಹುಡುಗ ಹೇಗಿರಬೇಕು ಎನ್ನುವ ಪ್ರಶ್ನೆ ಮೂಲಕ ಹುಡುಗಿಯರ ಅಂತರಾಳವನ್ನ ಪ್ರೋಮೊ ಅನಾವರಣ ಮಾಡಲಾಗಿದೆ. ಇದೀಗ ಗಾಯಕ ಹನುಮಂತನದ್ದೇ ಎಲ್ಲೆಲ್ಲಿಯೂ ಜಪ. ತನ್ನ ಕಂಠಸಿರಿಯಿಂದ, ಮುಗ್ಧ ಮಾತುಗಳಿಂದ ಅದೆಷ್ಟೋ ಹೃದಯ ಗೆದ್ದ ಹನುಮಂತನಿಗೆ ಒಳ್ಳೆ ಹುಡುಗಿ ಸಿಗ್ಲಿ ಎಂದು ಅವರ ಫ್ಯಾನ್ಸ್‌ ಕಮೆಂಟ್‌ ಮಾಡುತ್ತಿದ್ದಾರೆ.

ಸೂರಜ್, ರಾಕೇಶ್, ಮನೋಹರ್, ಉಮೇಶ್, ನವಾಜ್, ರುದ್ರ ಮಾಸ್ಟರ್, ಹನುಮಂತ, ಜಗಪ್ಪ, ಗಿಲ್ಲಿ ನಟ, ರಾಕೇಶ್ ಭರ್ಜರಿ ಬ್ಯಾಚುಲರ್ಸ್ ಕಂಟೆಸ್ಟೆಂಟ್‌ಗಳಾಗಿದ್ದಾರೆ. ಆಸಕ್ತಿಕರವಾದ ಸಂಗತಿ ಎಂದರೆ ಈ ಶೋನಲ್ಲಿ ಸಾಕಷ್ಟು ಗೇಮ್‌ಗಳಿರಲಿವೆ ಎಂತಲೂ ವರದಿಯಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

Jyothi Rai: ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ವೈರಲ್‌: ನಟಿಯ ಸ್ಲಷ್ಟನೆ ಹೀಗಿದೆ!

Jyothi Rai: ಕೊಡಗಿನಲ್ಲಿ ಹುಟ್ಟಿ ಬೆಳೆದ ನಟಿ ಜ್ಯೋತಿ ರೈ ಎಂಎನ್‌ಸಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಂದೇ ಬರತಾವ ಕಾಲ’ ಧಾರಾವಾಹಿಯಲ್ಲಿ ನಟಿಸಿದರು. ಅಲ್ಲಿಂದ ಮುಂದೆ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿದರು. ನಿರೂಪಕಿಯಾಗಿಯೂ ಗಮನ ಸೆಳೆದು. 20ನೇ ವಯಸ್ಸಿನಲ್ಲಿ ಮದುವೆ ಆಗಿದ್ದರು .ತೆಲುಗಿನಲ್ಲಿ ಪ್ರಿಟಿ ಗರ್ಲ್ ಎಂಬ ವೆಬ್‌ ಸಿರೀಸ್‌ನಲ್ಲಿ ಜ್ಯೋತಿ ರೈ ನಟಿಸುತ್ತಿದ್ದು, ಆ ಸೀರೀಸ್‌ಗೆ ಸಂಬಂಧಿಸಿದ ಪೋಟೊಗಳು ಇವೆ. ಬೋಲ್ಡ್‌ ಫೋಟೊ ಅಲ್ಲದೇ ವೈಯಕ್ತಿಕ ವಿಚಾರಗಳಿಗೂ ಸುದ್ದಿಯಾಗಿದ್ದರು. ನಟಿ ‘ಶುಕ್ರ’, ‘ಮಾತರಾನಿ ಮೌನಮಿದಿ’, ‘ಎ ಮಾಸ್ಟರ್ ಪೀಸ್’ ಚಿತ್ರಗಳನ್ನು ನಿರ್ದೇಶಿಸಿದ ಸುಕುಪುರ್ವಜ್ ಅಲಿಯಾಸ್ ಸುರೇಶ್ ಕುಮಾರ್‌ ಜತೆ ಜತೆ ಸಹಜೀವನ ನಡೆಸುತ್ತಿದ್ದಾರೆ.

VISTARANEWS.COM


on

Jyothi Rai clarity For torturing on indecent videos
Koo

ಬೆಂಗಳೂರು: ಕನ್ನಡದಲ್ಲಿ ‘ಜೋಗುಳ’ (Jyothi Rai) ಧಾರಾವಾಹಿ ಮೂಲಕ ಚಿರಪರಿಚಿತರಾದವರು ನಟಿ ಜ್ಯೋತಿ ರೈ. ಇದೀಗ ಜ್ಯೋತಿ ರೈ ಅವರದ್ದೇ ಎನ್ನಲಾಗುತ್ತಿರುವ ಅಶ್ಲೀಲ ವಿಡಿಯೊ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಆಗುತ್ತಿವೆ. ಇದೀಗ ನಟಿ ಜ್ಯೋತಿ ರೈ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮಗೆ ಕಿರುಕುಳ ನೀಡುತ್ತಿದ್ದಾರೆಂದು ನಟಿ ಪೋಸ್ಟ್‌ ಮುಖಾಂತರ ಅಳಲು ತೋಡಿಕೊಂಡಿದ್ದಾರೆ.

ಜ್ಯೋತಿ ರೈ ಎನ್ನಲಾದ ಮೂರು ಅಶ್ಲೀಲ ವಿಡಿಯೊ ಹಾಗು ಕೆಲವು ಫೋಟೊಗಳು ವೈರಲ್ ಆಗಿದ್ದವು. ಇದೀಗ ನಟಿ ಈ ಬಗ್ಗೆ ಸುದೀರ್ಘವಾಗಿ ಪತ್ರವನ್ನು ಬರೆದಿದ್ದಾರೆ. ʻʻನಾನು ಅಪರಿಚಿತ ವ್ಯಕ್ತಿಗಳಿಂದ ಕೆಲವು ಸಂದೇಶಗಳನ್ನು ಸ್ವೀಕರಿಸಿ ಆಘಾತಕ್ಕೆ ಒಳಗಾಗಿದ್ದೇನೆ. ಇಂತಹ ವ್ಯಕ್ತಿಗಳ ಬಗ್ಗೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ನನ್ನ ಕುಟುಂಬದ ಪ್ರತಿಷ್ಠೆ ಅಪಾಯದಲ್ಲಿದೆ. ಇಂತಹ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಇದ್ದರೆ, ಸರಿ ಮಾಡಲು ಸಾಧ್ಯವಾದಂತಹ ಡ್ಯಾಮೇಜ್ ಆಗಲಿದೆ. ನಿಮ್ಮ ತನಿಖೆಗೆ ಅನುಕೂಲವಾಗುವಂತೆ ಯೂಸರ್ ಐಡಿಗಳನ್ನು ಪೋಸ್ಟ್‌ ಮಾಡಿದ್ದೇನೆ.” ಎಂದು ಹೇಳಿಕೊಂಡಿದ್ದರು. ಹಾಸನದ ಎಂಪಿ ಪ್ರಜ್ವಲ್ ರೇವಣ್ಣ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಜ್ಯೋತಿ ರೈ ಅವರದ್ದೇ ಎನ್ನಲಾದ ಅಶ್ಲೀಲ ವಿಡಿಯೋಗಳ ಬಗ್ಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಇದನ್ನೂ ಓದಿ: Jyothi Rai: ನಿರ್ದೇಶಕನ ಜತೆ ʻಜೋಗುಳʼ ಖ್ಯಾತಿಯ ಜ್ಯೋತಿ ರೈ‌  ಎಂಗೇಜ್‌!

ಜ್ಯೋತಿ ರೈ ಪೋಸ್ಟ್‌

ಕನ್ನಡದಲ್ಲಿ ‘ಜೋಗುಳ’ (Jyothi Rai), ‘ಕನ್ಯಾದಾನ’, ‘ಅನುರಾಗ ಸಂಗಮ, ‘ಗೆಜ್ಜೆಪೂಜೆ’, ‘ಲವಲವಿಕೆ’, ‘ಗೆಜ್ಜೆಪೂಜೆ’, ‘ಪ್ರೇರಣಾ’, ‘ಕಿನ್ನರಿ’, ‘ಮೂರು ಗಂಟು’, ‘ಕಸ್ತೂರಿ ನಿವಾಸ’ ಸೇರಿದಂತೆ 15ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಜ್ಯೋತಿ ರೈ ನಟಿಸಿದ್ದಾರೆ. ನಟಿ ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ಬೋಲ್ಡ್ ಆಗಿ ಇರುವ ಫೋಟೊವನ್ನು ಶೇರ್ ಮಾಡುತ್ತ ಇರುತ್ತಾರೆ. ಕಮೆಂಟ್ ಸೆಕ್ಷನ್ ಬಂದ್ ಮಾಡಿದ್ದಾರೆ. ತೆಲುಗಿನಲ್ಲಿ ಪ್ರಿಟಿ ಗರ್ಲ್ ಎಂಬ ವೆಬ್‌ ಸಿರೀಸ್‌ನಲ್ಲಿ ಜ್ಯೋತಿ ರೈ ನಟಿಸುತ್ತಿದ್ದು, ಆ ಸೀರೀಸ್‌ಗೆ ಸಂಬಂಧಿಸಿದ ಪೋಟೊಗಳು ಇವೆ.

ಬೋಲ್ಡ್‌ ಫೋಟೊ ಅಲ್ಲದೇ ವೈಯಕ್ತಿಕ ವಿಚಾರಗಳಿಗೂ ಸುದ್ದಿಯಾಗಿದ್ದರು. ನಟಿ ‘ಶುಕ್ರ’, ‘ಮಾತರಾನಿ ಮೌನಮಿದಿ’, ‘ಎ ಮಾಸ್ಟರ್ ಪೀಸ್’ ಚಿತ್ರಗಳನ್ನು ನಿರ್ದೇಶಿಸಿದ ಸುಕುಪುರ್ವಜ್ ಅಲಿಯಾಸ್ ಸುರೇಶ್ ಕುಮಾರ್‌ ಜತೆ ಜತೆ ಸಹಜೀವನ ನಡೆಸುತ್ತಿದ್ದಾರೆ.

20ನೇ ವಯಸ್ಸಿನಲ್ಲಿ ಮದುವೆ

ಕೊಡಗಿನಲ್ಲಿ ಹುಟ್ಟಿ ಬೆಳೆದ ನಟಿ ಜ್ಯೋತಿ ರೈ ಎಂಎನ್‌ಸಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಂದೇ ಬರತಾವ ಕಾಲ’ ಧಾರಾವಾಹಿಯಲ್ಲಿ ನಟಿಸಿದರು. ಅಲ್ಲಿಂದ ಮುಂದೆ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿದರು. ನಿರೂಪಕಿಯಾಗಿಯೂ ಗಮನ ಸೆಳೆದು. 20ನೇ ವಯಸ್ಸಿನಲ್ಲಿ ಮದುವೆ ಆಗಿದ್ದರು .

ಜ್ಯೋತಿ ರೈ ಕೇವಲ ಕನ್ನಡ ಮಾತ್ರವಲ್ಲ ‘ಸೀತಾರಾಮ ಕಲ್ಯಾಣ’ ಸೇರಿದಂತೆ ಒಂದಷ್ಟು ಕನ್ನಡ ಸಿನಿಮಾಗಳಲ್ಲೂ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಕನ್ಯಾದಾನಂ’ ಧಾರಾವಾಹಿ ಮೂಲಕ ಆಕೆ ತೆಲುಗು ಕಿರುತೆರೆಗೆ ಪರಿಚಿತರಾಗಿದ್ದರು. ‘ಗುಪ್ಪೆಡಂತ ಮನಸು’ ಧಾರಾವಾಹಿ ಪಾತ್ರ ಒಳ್ಳೆ ಹೆಸರು ತಂದುಕೊಂಡಿತ್ತು.

ಇದನ್ನೂ ಓದಿ: Jyothi Rai: ಹಾಟ್‌ ಫೋಟೊಗಳ ಮೂಲಕ ಪಡ್ಡೆ ಹುಡುಗರ ನಿದ್ದೆ ಕಡೆಸಿದ ‘ಜೋಗುಳ’ ಖ್ಯಾತಿಯ ನಟಿ ಜ್ಯೋತಿ ರೈ!

ಆಟಿಸಂ ಕಾಯಿಲೆಯಿಂದ ಬಳಲುತ್ತಿದ್ದ ಮಗ

ನೆಟ್‌ವರ್ಕಿಂಗ್ ಇಂಜಿನಿಯರ್ ಪದ್ಮನಾಭ ಎಂಬುವವರ ಕೈ ಹಿಡಿದಿದ್ದರು. ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ. ಜ್ಯೋತಿ ರೈ ಮಗ ಆಟಿಸಂ ಕಾಯಿಲೆಯಿಂದ ಬಳಲುತ್ತಿದ್ದ. ಮಗನಿಗೆ ಒಂದು ವರ್ಷ ತುಂಬಿದ ಬಳಿಕ ಆತ ಯಾರೊಂದಿಗೆ ಐ ಕಾಂಟ್ಯಾಕ್ಟ್‌ ಮಾಡಿ ಮಾತನಾಡಿಸುತ್ತಿರಲಿಲ್ಲ. ಇಎನ್‌ಟಿ ಡಾಕ್ಟರ್‌ ಬಳಿ ಹೋದಾಗಲೂ ಯಾವುದೇ ಸಹಾಯವಾಗಲಿಲ್ಲ. ಬಳಿಕ ಥೆರಫಿ, ಶ್ಯಾಡೋ ಟೀಚರ್‌ ಮುಖಾಂತರ ಜ್ಯೋತಿ ರೈ ಪುತ್ರ ಬೆಳವಣಿಗೆಗೆ ಸಹಾಕಾರಿ ಆಗಿದೆ ಎಂದು ನಟಿ ಹಿಂದೊಮ್ಮೆ ಹೇಳಿಕೆ ನೀಡಿದ್ದರು.

Continue Reading

ಕಿರುತೆರೆ

Puttakkana Makkalu: ʻಪುಟ್ಟಕ್ಕʼನ ನಟನೆಗೆ ಕೋಟಿ ಕೋಟಿ ನಮನ ಅಂತಿದ್ದಾರೆ ಫ್ಯಾನ್ಸ್‌!

Puttakkana Makkalu: ಮಗಳನ್ನು ಕಳೆದುಕೊಂಡ ಪುಟ್ಟಕ್ಕ ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ, ಅವರ ಅದ್ಭುತ ನಟನೆ ನೋಡಿ ವೀಕ್ಷಕರು ಕಣ್ತುಂಬಿಕೊಂಡಿದ್ದಾರೆ.ಹಿರಿಮಗಳು ಸಹನಾಳನ್ನು ಕಳೆದುಕೊಂಡ ಪುಟ್ಟಕ್ಕನ ಆಕ್ರಂದನ ಮುಗಿಲು ಮುಟ್ಟಿದೆ. ಒಂದೇ ಒಂದು ಸಲ ʻʻಓ ಅನ್ನು ಮಗಳೆ, ನಾನೇ ಪಾಪಿ, ಆ ಮಗುನ ಅತ್ತೆ ಮನೆಗೆ ಹೋಗು ಹೋಗು ಅಂತ ಹೇಳಿ ಹೇಳಿ ಈಗ ನಾನೇ ಆ ಮಗುವ ಬೆಂಕಿಗೆ ಹಾಕಿದೆʼʼ ಎಂದು ಎದೆ ಬಡಿದುಕೊಂಡು ಅಳುತ್ತಿದ್ದಾಳೆ ಪುಟ್ಟಕ್ಕ. ಉಮಾಶ್ರೀ ಅವರ ಈ ದೃಶ್ಯಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

VISTARANEWS.COM


on

Puttakkana Makkalu umashree acting praised
Koo

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʻಪುಟ್ಟಕ್ಕನ ಮಕ್ಕಳುʼ (Puttakkana Makkalu) ಧಾರಾವಾಹಿಯಲ್ಲಿ ಸದ್ಯ ಸಹನಾ ಮೃತಪಟ್ಟಿದ್ದಾಳೆ. ಸಹನಾ ಅಂತ್ಯಕ್ರಿಯೆಯ ದೃಶ್ಯ ಪ್ರೇಕ್ಷಕರಲ್ಲಿ ಕಣ್ಣೀರು ತರಸಿವಂತೆ ಇತ್ತು.

ಮಗಳನ್ನು ಕಳೆದುಕೊಂಡ ಪುಟ್ಟಕ್ಕ ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ, ಅವರ ಅದ್ಭುತ ನಟನೆ ನೋಡಿ ವೀಕ್ಷಕರು ಕಣ್ತುಂಬಿಕೊಂಡಿದ್ದಾರೆ.

ಈ ಎಪಿಸೋಡ್ ನೋಡಿದ ಪ್ರೇಕರೊಬ್ಬರು ಹೀಗೆ ಕಮೆಂಟ್‌ ಮಾಡಿದ್ದಾರೆ. ʻʻದಯವಿಟ್ಟು ತಂದೆ ತಾಯಿ ಗಮನಿಸಿ. ನಿಮ್ಮ ಹೆಣ್ಣು ಮಕ್ಕಳು ಗಂಡನ ಮನೆಯಲ್ಲಿ ತೊಂದರೆ ಎಂದು ಬಂದಾಗ ಅವಳಿಗೆ ಸ್ವಲ್ಪ ಸಮಯ ಕೊಡಿ ಯೊಚನೆ ಮಾಡೋಕೆ. ಮನೆಯ ಮಾನ ಮರ್ಯಾದೆ ಹೋಗುತ್ತೆ ಅಂತ ಗಂಡನ ಮನೆಗೆ ಹೋಗು ಅಂತ ಬಲವಂತ ಮಾಡಬೇಡಿ. ಅಕ್ಕಪಕ್ಕದ ಮನೆಯವರು ಏನೋ ಹೇಳ್ತಾರೆ ಅಂತ ಮನೆ ಮಗಳಿಗೆ ಹಿಂಸೆ ನೀಡಬೇಡಿ ಪ್ಲೀಸ್ʼʼಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ʻʻಉಮಾಶ್ರೀ ಅಮ್ಮ ನಿಮ್ಮ ನಟನೆ ಬೇರೆ ಲೆವೆಲ್‌! ಎಷ್ಟು ನ್ಯಾಚುರಲ್ ಆಗಿ ಅಭಿನಹಿಸುತ್ತಿದ್ದೀರಾ. ನಿಮಗೆ ನನ್ನ ಕೋಟಿ ಕೋಟಿ ನಮನಗಳುʼʼಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Puttakkana Makkalu: ಸಹನಾಳ ಸಾವಿನ ಸುದ್ದಿ ಕೇಳಿ ಮುಗಿಲುಮುಟ್ಟಿತು ಪುಟ್ಟಕ್ಕನ ಆಕ್ರಂದನ

ಹಿರಿಮಗಳು ಸಹನಾಳನ್ನು ಕಳೆದುಕೊಂಡ ಪುಟ್ಟಕ್ಕನ ಆಕ್ರಂದನ ಮುಗಿಲು ಮುಟ್ಟಿದೆ. ಒಂದೇ ಒಂದು ಸಲ ʻʻಓ ಅನ್ನು ಮಗಳೆ, ನಾನೇ ಪಾಪಿ, ಆ ಮಗುನ ಅತ್ತೆ ಮನೆಗೆ ಹೋಗು ಹೋಗು ಅಂತ ಹೇಳಿ ಹೇಳಿ ಈಗ ನಾನೇ ನನ್ನ ಮಗುವನ್ನ ಬೆಂಕಿಗೆ ಹಾಕಿದೆʼʼ ಎಂದು ಎದೆ ಬಡಿದುಕೊಂಡು ಅಳುತ್ತಿದ್ದಾಳೆ ಪುಟ್ಟಕ್ಕ. ಉಮಾಶ್ರೀ ಅವರ ಈ ದೃಶ್ಯಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ಗಂಡನ ಮನೆಬಿಟ್ಟು ಅಮ್ಮನ ಮನೆ ಸೇರಿರುವ ಸಹನಾ, ಕೊನೆಗೆ ತಾನು ಅಮ್ಮನಿಗೆ ಭಾರವಾಗಿರೋದು ಬೇಡ ಎಂದು ಬೇಸರದಲ್ಲಿ ಮನೆಯನ್ನೇ ಬಿಟ್ಟು ಹೊರಟಿರುತ್ತಾಳೆ. ರಾತ್ರೋ ರಾತ್ರಿ ಬ್ಯಾಗ್ ಹಿಡಿದು ಮನೆಯಿಂದ ಹೊರಟಿದ್ದ ಸಹನಾಳಿಗಾಗಿ ಎಲ್ಲೆಡೆಯೂ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಆಕೆ ಸಿಕ್ಕಿದ್ದು, ಶವವಾಗಿ. ಜಜ್ಜಿದ ಮುಖದ, ಗುರುತಿಸಲಾರದ ಸ್ಥಿತಿಯಲ್ಲಿ ಸಹನಾ ಶವ ಪತ್ತೆಯಾಗಿದ್ದು, ಅದರ ಪಕ್ಕ ಸಹನಾ ಐಡೆಂಟಿಟಿ ಕಾರ್ಡ್ ಕೂಡ ಲಭ್ಯವಾಗಿರುತ್ತದೆ. ಸಹನಾಳದ್ದೆ ಸಾವಾಗಿದೆ ಎಂದು ಎಲ್ಲರೂ ಒಪ್ಪಿಕೊಂಡು ಬಳಿಕ ಅಂತ್ಯಕ್ರಿಯೆ ನೆರವೇರಿಸಿದರು. ಇಂದಿನ ಪ್ರೋಮೊದಲ್ಲಿ ಸಹನಾ ಜೀವಂತವಾಗಿರುವ ಬಗ್ಗೆ ಜೀ ವಾಹಿನಿ ಪೋಸ್ಟ್‌ ಮಾಡಿದೆ. ಮುಂದೆ ಸಹನಾಳ ಕಥೆ ಏನು ಎಂಬುದು ಇಂದಿನ ಎಪಿಸೋಡ್‌ನಲ್ಲಿ ಪ್ರಸಾರ ಆಗಲಿದೆ.

Continue Reading

ಕಿರುತೆರೆ

Puttakkana Makkalu: ಸಹನಾಳ ಸಾವಿನ ಸುದ್ದಿ ಕೇಳಿ ಮುಗಿಲುಮುಟ್ಟಿತು ಪುಟ್ಟಕ್ಕನ ಆಕ್ರಂದನ

Puttakkana Makkalu: ಮುರಳಿ-ಸಹನಾ ದಾಂಪತ್ಯ ಜೀವನದಲ್ಲಿ ಒಡಕು ಮೂಡಿದೆ. ಸಹನಾಗೆ ವಿಚ್ಛೇದನ ಬೇಕು, ಮುರಳಿಗೆ ತನ್ನ ತಪ್ಪಿನ ಅರಿವಾಗಿದೆ. ಮುರಳಿ ಜತೆ ಬಾಳಲು ರೆಡಿ ಇಲ್ಲ ಸಹನಾ. ಸಹನಾ ಈಗ ಮನೆ ಬಿಟ್ಟು ಹೋಗಿದ್ದಾಳೆ.ತಾಯಿಗೆ ಎಲ್ಲಿ ತಾನು ಭಾರವಾಗುತ್ತೇನೋ ಎಂದು ಸಹನಾ ಮನೆಯಿಂದ ಆಚೆ ನಡೆದಿದ್ದಾಳೆ. ಸದ್ಯ ಪುಟ್ಟಕ್ಕನ ಮಗಳು ಸಹನಾ ಮನೆ ಬಿಟ್ಟು ಹೋಗಿದ್ದಾಳೆ.

VISTARANEWS.COM


on

Puttakkana makkalu sahana dead
Koo
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ʻಪುಟ್ಟಕನ ಮಕ್ಕಳುʼ (Puttakkana Makkalu) ಸತತ ಎರಡನೇ ವಾರ ಒಳ್ಳೆಯ ಟಿಆರ್‌ಪಿ ಕಂಡಿದೆ. ಸದ್ಯ ಪುಟ್ಟಕ್ಕನ ಮಗಳು ಸಹನಾ ಮನೆ ಬಿಟ್ಟು ಹೋಗಿದ್ದಾಳೆ.

ಸಹನಾ ಶವ ಪತ್ತೆ ಆಗಿದೆ, ಎಲ್ಲರೂ ಮನೆ ಮಗಳನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.

ಇದನ್ನೂ ಓದಿ: Puttakkana Makkalu Serial: ಅವ್ವನಂತೆ ಯಾರ ಹಂಗಿಲ್ಲದೆ ಬದುಕಲು ಮನೆ ಬಿಟ್ಟು ಹೊರಟೇ ಬಿಟ್ಟಳು ಸಹನಾ!

ಬಾಳಬೇಕಾದ ಮಗಳು ಶವವಾಗಿ ಮಲಗಿರೋದು ನೋಡಿ ಪುಟ್ಟಕ್ಕ ಅಳುತ್ತಿದ್ದಾಳೆ. ಸಹನಾ ಅಂತ್ಯಸಂಸ್ಕಾರ ಮುಗಿದಿದೆ.

ಮುರಳಿಯಿಂದ ಡಿವೋರ್ಸ್ ಪಡೆದಿರುವ ಸಹನಾ ತವರುಮನೆಗೂ ಕೂಡ ಸ್ವಲ್ಪವೂ ಭಾರವಾಗದೆ, ತನ್ನ ಜೀವನ ತಾನೇ ನಡೆಸಬೇಕು ಅಂತ ಅಂದುಕೊಂಡಿದ್ದಳು. ಹೀಗೆ ಅಂದುಕೊಂಡವಳು ಹೇಗೆ ಶವವಾದಳು. ಆದರೆ ವೀಕ್ಷಕರು ಸಹನಾ ಸತ್ತಿಲ್ಲ ಬದುಕಿದ್ದಾಳೆ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರು ಸಹನಾ ಮುಖ ಪ್ಲಾಸ್ಟಿಕ್‌ ಸರ್ಜರಿ ಆಗರಿಬಹುದೆಂದು ಕಮೆಂಟ್‌ ಮಾಡಿದ್ದಾರೆ!

Continue Reading

ಕಿರುತೆರೆ

Shine Shetty: ಸಖತ್‌ ಫಿಟ್‌ ಆದ ‘ಬಿಗ್ ಬಾಸ್‌’ ವಿನ್ನರ್ ಶೈನ್ ಶೆಟ್ಟಿ!

Shine Shetty: ಶೈನ್‌ ಶೆಟ್ಟಿ ಅವರು ʻಜಸ್ಟ್‌ ಮ್ಯಾರಿಡ್‌ʼ ಮತ್ತು ʻನಿದ್ರಾದೇವಿ ನೆಕ್ಸ್ಟ್‌ ಡೋರ್‌ʼ ಎಂಬ ಎರಡು ಹೊಸ ಚಿತ್ರಗಳಿಗೆ ನಾಯಕರಾಗಿದ್ದಾರೆ. ಶೈನ್‌ ಶೆಟ್ಟಿ ಬಿಗ್‌ ಬಾಸ್‌ ಮೂಲಕ ಸಖತ್‌ ಫೇಮಸ್‌ ಆಗಿದ್ದರು. ದೀಪಿಕಾ ದಾಸ್‌ ಅವರು ಶೈನ್‌ ಶೆಟ್ಟಿ (Shyne Shetty) ಅವರ ಜತೆ ಬಿಗ್‌ ಬಾಸ್‌ ಮನೆಯಲ್ಲಿ ತುಂಬ ಕ್ಲೋಸ್‌ ಆಗಿದ್ದರು. ಬಿಗ್‌ ಬಾಸ್‌ ಮನೆಯಿಂದ ಆಚೆ ಬಂದ ನಂತರವೂ ಇಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಜನ ಅಂದುಕೊಳ್ಳುತ್ತಿದ್ದರು.

VISTARANEWS.COM


on

Shine Shetty follows diet and fitness
Koo

ಸ್ಯಾಂಡಲ್‌ವುಡ್‌, ನಟ ಬಿಗ್‌ ಬಾಸ್‌ ವಿಜೇತ, ಕನ್ನಡ ಕಿರುತೆರೆ ಜನಪ್ರಿಯ ನಟ ಶೈನ್ ಶೆಟ್ಟಿ (Shine Shetty) ಕೈಯಲ್ಲಿ ಎರಡು ಬಿಗ್ ಪ್ರಾಜೆಕ್ಟ್ ಸಿನಿಮಾಗಳಿವೆ. ಇದೀಗ ಚಿತ್ರಕ್ಕೆಂದು ಫಿಟ್ನೆಸ್‌ ಬಗ್ಗೆ ಗಮನ ಕೊಟ್ಟಿದ್ದಾರೆ.

ಫಿಟ್‌ ಆಗಿರುವ ಹಾಗೂ ವರ್ಕೌಟ್‌ ಮಾಡಿರುವ ಫೋಟೊಗಳನ್ನು ಶೈನ್‌ ಶೆಟ್ಟಿ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಸುಮಾರು 11 ದಿನಗಳ ಕಾಲ ಕಠಿಣ ವರ್ಕೌಟ್ ಮತ್ತು ಡಯಟ್ ಫಾಲೋ ಮಾಡಿ ಸಿಕ್ಸ್‌ ಪ್ಯಾಕ್ ಮಾಡಿರುವ ಶೈನ್‌ ಇದೀಗ ರಗಡ್‌ ಆಗಿ ಕಾಣುತ್ತಿದ್ದಾರೆ.

ಶೈನ್‌ ಶೆಟ್ಟಿ ಅವರು ʻಜಸ್ಟ್‌ ಮ್ಯಾರಿಡ್‌ʼ ಮತ್ತು ʻನಿದ್ರಾದೇವಿ ನೆಕ್ಸ್ಟ್‌ ಡೋರ್‌ʼ ಎಂಬ ಎರಡು ಹೊಸ ಚಿತ್ರಗಳಿಗೆ ನಾಯಕರಾಗಿದ್ದಾರೆ.

ಇದನ್ನೂ ಓದಿ: Ranjani Raghavan: ರಂಜನಿ ರಾಘವನ್ ಸಿನಿಮಾದಲ್ಲಿ ಇರಲಿದೆ ಪಂಜುರ್ಲಿ ದೈವದ ಕಥೆ! ಬಿಡುಗಡೆ ಯಾವಾಗ?

ಶೈನ್‌ ಶೆಟ್ಟಿ ಬಿಗ್‌ ಬಾಸ್‌ ಮೂಲಕ ಸಖತ್‌ ಫೇಮಸ್‌ ಆಗಿದ್ದರು. ದೀಪಿಕಾ ದಾಸ್‌ ಅವರು ಶೈನ್‌ ಶೆಟ್ಟಿ (Shyne Shetty) ಅವರ ಜತೆ ಬಿಗ್‌ ಬಾಸ್‌ ಮನೆಯಲ್ಲಿ ತುಂಬ ಕ್ಲೋಸ್‌ ಆಗಿದ್ದರು. ಬಿಗ್‌ ಬಾಸ್‌ ಮನೆಯಿಂದ ಆಚೆ ಬಂದ ನಂತರವೂ ಇಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಜನ ಅಂದುಕೊಳ್ಳುತ್ತಿದ್ದರು. ಬಿಗ್‌ ಬಾಸ್‌ ಸಂದರ್ಭದಲ್ಲಿ ಈ ಜೋಡಿಗೆ ಜನರೇ ‘ಶಿನಿಕಾ’ ಎಂದು ಹೆಸರಿಟ್ಟು, ತುಂಬಾ ಮುದ್ದಾದ ಜೋಡಿ ಎಂದು ಹೇಳುತ್ತಿದ್ದರು.

Continue Reading
Advertisement
gadag crime murder case
ಕ್ರೈಂ3 mins ago

Murder Case: ಪಾರ್ಟಿ ಮಾಡಿ ಮಲಗಿದ ಯುವಕನ ಕೊಲೆ, ಜೊತೆಗಿದ್ದ ಸ್ನೇಹಿತರಿಗೆ ಗೊತ್ತೇ ಆಗಲಿಲ್ಲ!

PBKS vs RCB
ಕ್ರೀಡೆ9 mins ago

PBKS vs RCB: ಮಳೆಯ ಕೈಯಲ್ಲಿದೆ ಆರ್​ಸಿಬಿ-ಪಂಜಾಬ್​ ಪ್ಲೇ ಆಫ್​ ಭವಿಷ್ಯ

Viral News
ವೈರಲ್ ನ್ಯೂಸ್33 mins ago

Viral News: ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದ: ಹೊಸ ಕಾರಿನ ಪೂಜೆ ವೇಳೆ ನಡೆಯಿತು ಅವಘಡ; ಇಲ್ಲಿದೆ ವಿಡಿಯೊ

viral video
ಕ್ರಿಕೆಟ್42 mins ago

Viral Video: ಪಂದ್ಯ ಸೋತ ಸಿಟ್ಟಿನಲ್ಲಿ ರಾಹುಲ್​ಗೆ ಮೈದಾನದಲ್ಲೇ ಬೈದ ಲಕ್ನೋ ತಂಡದ ಮಾಲಿಕ

Cancer Causing Chemicals
ವಿದೇಶ45 mins ago

Cancer-Causing Chemicals: ಕಾರು ಪ್ರಿಯರೇ ಎಚ್ಚರ …ಎಚ್ಚರ..‌ ಕಾರಿನಲ್ಲಿ ಉತ್ಪತ್ತಿ ಆಗ್ತಿದೆ ಕ್ಯಾನ್ಸರ್‌ ಕಾರಕ ಕೆಮಿಕಲ್

hd revanna jailed 2
ಕ್ರೈಂ1 hour ago

HD Revanna Jailed: ಇಂದು ಜನಪ್ರತಿನಿಧಿ ನ್ಯಾಯಾಲಯದಲ್ಲಿ ಹೆಚ್.ಡಿ ರೇವಣ್ಣ ಭವಿಷ್ಯ ನಿರ್ಧಾರ

Jyothi Rai clarity For torturing on indecent videos
ಕಿರುತೆರೆ1 hour ago

Jyothi Rai: ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ವೈರಲ್‌: ನಟಿಯ ಸ್ಲಷ್ಟನೆ ಹೀಗಿದೆ!

IPL 2024 - Points Table
ಕ್ರೀಡೆ1 hour ago

IPL 2024 Points Table: ಸನ್​ರೈಸರ್ಸ್​ಗೆ 10 ವಿಕೆಟ್​ ಗೆಲುವು; ಅಂಕಪಟ್ಟಿಯಲ್ಲಿ ಕುಸಿದ ಚೆನ್ನೈ

Reservation Row
Lok Sabha Election 20241 hour ago

Reservation Row: ಎಸ್‌ಸಿ / ಎಸ್‌ಟಿ ಮೀಸಲಾತಿಗೆ ನೆಹರೂ ವಿರೋಧ ವ್ಯಕ್ತಪಡಿಸಿದ್ದರು: ಸಾಕ್ಷಿ ಸಮೇತ ಬಹಿರಂಗಪಡಿಸಿದ ಬಿಜೆಪಿ

Gurpatwant Singh Pannun
ವಿದೇಶ2 hours ago

Gurpatwant Singh Pannun: ಪನ್ನುನ್‌ ಹತ್ಯೆ ಸಂಚಿನಲ್ಲಿ ಭಾರತದ ಕೈವಾಡ; ಅಮೆರಿಕ ಆರೋಪಕ್ಕೆ ರಷ್ಯಾ ಟಾಂಗ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ2 days ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ2 days ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ2 days ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ3 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ3 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ3 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ4 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ4 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌