Site icon Vistara News

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

Bigg Boss' dominates TRP; Sita Rama fell to the sixth position

ಬೆಂಗಳೂರು: ಧಾರಾವಾಹಿಗಳ (Kannada Serials TRP) ಹೊರತಾಗಿ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳು ಕೂಡ ಅಷ್ಟೇ ಪ್ರಾಮುಖ್ಯತೆ ಪಡೆದುಕೊಂಡಿದೆ. ಅತಿದೊಡ್ಡ ರಿಯಾಲಿಟಿ ಶೋ ಎಂದು ಖ್ಯಾತಿ ಪಡೆದಿರುವ ಬಿಗ್ ಬಾಸ್ (Bigg Boss)ಕಳೆದ ವರ್ಷಕ್ಕಿಂತ ಈ ವರ್ಷ ಬಿಗ್ ಬಾಸ್ ನೋಡುವವರ ಸಂಖ್ಯೆ ಹೆಚ್ಚಿದೆ. ಒಳ್ಳೆಯ ಟಿಆರ್​ಪಿ ಪಡೆದು ಈ ರಿಯಾಲಿಟಿ ಶೋ ಮುನ್ನುಗ್ಗುತ್ತಿದೆ. ಈ ವಾರದ ಟಿಆರ್‌ಪಿ ಲಿಸ್ಟ್‌ ಇಲ್ಲಿದೆ!

ಬಿಗ್‌ ಬಾಸ್‌

ಬಿಗ್‌ ಬಾಸ್‌ ಮೂರನೇ ವಾರಕ್ಕೆ ಕಾಲಿಟ್ಟಿದೆ. ಕರ್ನಾಟಕ ಭಾಗದಲ್ಲಿ 5.0 ಟಿವಿಆರ್ ಪಡೆದಿದೆ. ನಗರ ಭಾಗದಲ್ಲಿ 6.4 ಟಿವಿಆರ್ ಸಿಕ್ಕಿದೆ. ಕರ್ನಾಟಕ ಭಾಗದಲ್ಲಿ 5.0 ಟಿವಿಆರ್ ಪಡೆದಿದೆ. ನಗರ ಭಾಗದಲ್ಲಿ 6.4 ಟಿವಿಆರ್ ಸಿಕ್ಕಿದೆ. ಸದ್ಯ ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್‌ ಹೈಲೈಟ್‌ ಆಗಿದ್ದಾರೆ. ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಪುಟ್ಟಕ್ಕನ ಮಕ್ಕಳು

ಉಮಾಶ್ರೀ ಮೊದಲಾದವರು ನಟಿಸುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಟಿಆರ್​ಪಿ ಹೆಚ್ಚಿದೆ. ಪುಟ್ಟಕ್ಕನ ಕಿರಿಯ ಮಗಳು ಸುಮ ಸದ್ಯ ಕಾಲೇಜಿಗೆ ಎಂಟ್ರಿ ಕೊಟ್ಟಿದ್ದಾಳೆ. ಹಿರಿಯ ಅಕ್ಕನ ಮನೆಯಲ್ಲಿ ಇದ್ದು ಓದುತ್ತಿದ್ದಾಳೆ. ಇತ್ತ ಮನೆಯಲ್ಲಿ ಮಕ್ಕಳಿಲ್ಲದೇ ಪುಟ್ಟಕ್ಕ ಒಬ್ಬಂಟಿ. ರಮೇಶ್ ಪಂಡಿತ್, ಉಮಾಶ್ರೀ, ಅಕ್ಷರಾ, ಸಂಜನಾ ಬುರ್ಲಿ, ಮಂಜು ಭಾಷಿಣಿ, ಹಂಸ, ಧನುಷ್, ಸೂರಜ್ ಹೊಳ್ಳ, ಪವನ್ ಕುಮಾರ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ.

ಇದನ್ನೂ ಓದಿ: Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

ಗಟ್ಟಿಮೇಳ

ಐದನೇ ಸ್ಥಾನದಲ್ಲಿದ್ದ ಗಟ್ಟಿಮೇಳ ಎರಡನೇ ಸ್ಥಾನಕ್ಕೆ ಬಂದು ನಿಂತಿದೆ. ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್, ಸುಧಾ ನರಸಿಂಹರಾಜು ಮೊದಲಾದವರು ನಟಿಸಿದ್ದಾರೆ. ಸೀತಾ ರಾಮ ಧಾರಾವಾಹಿಯನ್ನು ಬೀಟ್‌ ಮಾಡಿದೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.

ಅಮೃತಧಾರೆ

ಒಂಟಿ ಜೀವಗಳ ಜಂಟಿ ಪಯಣ ಒಲವ ‘ಅಮೃತಧಾರೆ’ಗೆ 100 ಸಂಚಿಕೆಗಳ ಸಂಭ್ರಮ. ಧಾರಾವಾಹಿ ಏಳನೇ ಸ್ಥಾನದಲ್ಲಿತ್ತು ಇದೀಗ ಮೂರನೇ ಸ್ಥಾನ ಪಡೆದುಕೊಂಡಿದೆ. ಗೌತಮ್‌ ಹಾಗೂ ಭೂಮಿಕಾ ಅರ್ಥ ಮಾಡಿಕೊಳ್ಳಲು ಶುರು ಮಾಡಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಸತ್ಯ

ಸತ್ಯ ಧಾರಾವಾಹಿ ಈ ನಡುವೆ ಒಳ್ಳೆಯ ಟಿಆರ್‌ಪಿ ಪಡೆದು ಮುನ್ನುಗ್ಗುತ್ತಿದೆ. ಸತ್ಯ ಮತ್ತು ಅತ್ತೆಯ ನಡುವೆ ಬಾಂಧವ್ಯ ಹೆಚ್ಚಾಗಿದೆ. ಅಷ್ಟೇ ಅಲ್ಲದೇ ಲಕ್ಷ್ಮಣ ಇನ್ನೊಂದು ಮದುವೆಯಾಗಿರುವ ಬಗ್ಗೆ ಕಥೆಯೂ ಸಾಗುತ್ತಿದೆ. ಇದೀಗ ಧಾರಾವಾಹಿ ನಾಲ್ಕನೇ ಸ್ಥಾನದಲ್ಲಿದೆ.ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಇದನ್ನೂ ಓದಿ: Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

ಶ್ರೀರಸ್ತು ಶುಭಮಸ್ತು

ಗಟ್ಟಿಮೇಳ ಧಾರಾವಾಹಿ ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಬಂದಿತ್ತು. ಅವಿನಾಶ್‌ ತುಳಸಿ ಹತ್ತಿರವಾಗುತ್ತಿದ್ದಾರೆ. ಈ ಧಾರಾವಾಹಿ ಇದೀಗ ಐದನೇ ಸ್ಥಾನದಲ್ಲಿದೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಸೀತಾ ರಾಮ

ಸದಾ ಎರಡನೇ ಸ್ಥಾನದಲ್ಲಿಯೇ ಇರುತ್ತಿದ್ದ ಸೀತಾ ರಾಮ ಆರೆನೇ ಸ್ಥಾನಕ್ಕೆ ಕುಸಿದಿದೆ. ಬಿಗ್‌ ಬಾಸ್‌ ಪ್ರಸಾರದ ಕಾರಣಕ್ಕೋ, ಧಾರಾವಾಹಿಗೆ ಕಡಿಮೆ ಟಿಆರ್‌ಪಿ ಸಿಕ್ಕಿದೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

Exit mobile version