ಬೆಂಗಳೂರು: ಹಿಂದಿನ ವಾರ ಟಿಆರ್‌ಪಿಯಲ್ಲಿ ಕಲರ್ಸ್ ಕನ್ನಡ ವಾಹಿನಿಯ (Kannada Serials TRP) ಹೆಚ್ಚಿನ ಧಾರಾವಾಹಿಗಳು ರೇಸ್‌ಗೆ ಬಂದಿದ್ದವು. ಇಷ್ಟು ದಿನ ಜೀ ವಾಹಿನಿ ಧಾರಾವಾಹಿಗಳು ಮಾತ್ರ ಟಿಆರ್‌ಪಿ ಪಟ್ಟಿಯಲ್ಲಿ ಇರುತ್ತಿತ್ತು. ಬಿಗ್ ಬಾಸ್ ಕೂಡ ಹೆಚ್ಚಿನ ಟಿಆರ್‌ಪಿ ಪಡೆದು ಮುನ್ನುಗುತ್ತಿದೆ. ಇತರ ವಾಹಿನಿಗಳ ಧಾರಾವಾಹಿಗಳ ಮೇಲೆ ನೇರ ಎಫೆಕ್ಟ್ ಬೀಳುತ್ತಿದೆ.
ಹಲವು ಸ್ಪರ್ಧಿಗಳು ಅಗ್ರೆಸ್ಸಿವ್ ಆಗಿ ನಡೆದುಕೊಳ್ಳುತ್ತಿದ್ದಾರೆ. ಈ ಎಲ್ಲಾ ಕಾರಣಕ್ಕೆ ಬಿಗ್ ಬಾಸ್ ಒಳ್ಳೆಯ ಟಿಆರ್‌ಪಿ ಪಡೆದುಕೊಳ್ಳುತ್ತಿದೆ. ಬಿಗ್ ಬಾಸ್ಗೆ ನಗರ ಭಾಗದಲ್ಲಿ ವಾರಾಂತ್ಯದಲ್ಲಿ 7.9 ಟಿವಿಆರ್ ಹಾಗೂ ವಾರದ ದಿನಗಳಲ್ಲಿ 7.2 ಟಿವಿಆರ್ ಸಿಕ್ಕಿದೆ. ಇದರಿಂದಾಗಿ ಸೀತಾ ರಾಮ ಟಿಆರ್‌ಪಿ ಬಹುತೇಕ ಇಳಿಕೆ ಕಂಡಿದೆ.
ಪುಟ್ಟಕ್ಕನ ಮಕ್ಕಳು
ಈ ಧಾರಾವಾಹಿಗೆ ಎಲ್ಲಾ ಧಾರಾವಾಹಿಗಿಂತ ಹೆಚ್ಚಿನ ಟಿಆರ್‌ಪಿ ಸಿಕ್ಕಿದೆ. ನಗರ ಭಾಗದಲ್ಲಿ ಪುಟ್ಟಕ್ಕನ ಮಕ್ಕಳು ಮೊದಲ ಸ್ಥಾನದಲ್ಲಿ ಇದೆ. ಈ ಮೂಲಕ ಹಲವು ತಿಂಗಳಿಂದ ಈ ಧಾರಾವಾಹಿ ಮೊದಲ ಸ್ಥಾನ ಕಾಪಾಡಿಕೊಂಡು ಮುಂದೆ ಸಾಗಿದೆ. . ರಮೇಶ್ ಪಂಡಿತ್, ಉಮಾಶ್ರೀ, ಅಕ್ಷರಾ, ಸಂಜನಾ ಬುರ್ಲಿ, ಮಂಜು ಭಾಷಿಣಿ, ಹಂಸ, ಧನುಷ್, ಸೂರಜ್ ಹೊಳ್ಳ, ಪವನ್ ಕುಮಾರ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ.
ಅಮೃತಧಾರೆ
ಗೌತಮ್ ಹಾಗೂ ಭೂಮಿಕಾ ಅರ್ಥ ಮಾಡಿಕೊಳ್ಳಲು ಶುರು ಮಾಡಿದ್ದಾರೆ. ಮೂರನೇ ಸ್ಥಾನದಲ್ಲಿದ್ದ ಧಾರಾವಾಹಿ ಎರಡನೇ ಸ್ಥಾನಕ್ಕೆ ಬಂದಿದೆ. ಗೌತಮ ಸ್ನೇಹಿತ ಆನಂದ ದಂಪತಿ ಮಾಡಿದ ಕಿತಾಪತಿಗೆ ಗೌತಮ್ ಜೋಡಿ ಹತ್ತಿರವಾಗಿದೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.
ಇದನ್ನೂ ಓದಿ: Kannada Serials TRP: ಟಿಆರ್‌ಪಿ ರೇಸ್‌ನಲ್ಲಿ ‘ಕೆಂಡ ಸಂಪಿಗೆ’, ‘ರಾಮಾಚಾರಿ’; ಐದನೇ ಸ್ಥಾನದಲ್ಲಿ ‘ಭಾಗ್ಯಲಕ್ಷ್ಮೀ’!
ಗಟ್ಟಿಮೇಳ
ಗಟ್ಟಿಮೇಳ ಮೂರನೇ ಸ್ಥಾನಕ್ಕೆ ಬಂದು ನಿಂತಿದೆ. ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್, ಸುಧಾ ನರಸಿಂಹರಾಜು ಮೊದಲಾದವರು ನಟಿಸಿದ್ದಾರೆ. ಸೀತಾ ರಾಮ ಧಾರಾವಾಹಿಯನ್ನು ಬೀಟ್ ಮಾಡಿದೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ಬಹುತೇಕ ಕ್ಲೈಮ್ಯಾಕ್ಸ್ ಹಂತ ತಲುಪಿದೆ.
ಶ್ರೀರಸ್ತು ಶುಭಮಸ್ತು
ಸುಧಾರಾಣಿ ಅವರು ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ಸೊಸೆಯ ಪಾತ್ರ ನಿರ್ವಹಿಸುತ್ತಿದ್ದಾರೆ. ತುಳಸಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸತ್ಯ
ಸತ್ಯ ಮತ್ತು ಅತ್ತೆಯ ನಡುವೆ ಬಾಂಧವ್ಯ ಹೆಚ್ಚಾಗಿದೆ. ಅಷ್ಟೇ ಅಲ್ಲದೇ ಲಕ್ಷ್ಮಣ ಇನ್ನೊಂದು ಮದುವೆಯಾಗಿರುವ ಬಗ್ಗೆ ಕಥೆಯೂ ಸಾಗುತ್ತಿದೆ. ಇದೀಗ ಧಾರಾವಾಹಿ ಐದನೇ ಸ್ಥಾನದಲ್ಲಿದೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.
‘ಸೀತಾ ರಾಮ’ ಧಾರಾವಾಹಿಯ ಟಿಆರ್‌ಪಿ ತಗ್ಗುತ್ತಲೇ ಇದೆ .‘ಸೀತಾ ರಾಮ’ ಧಾರಾವಾಹಿಯ ಟಿಆರ್‌ಪಿಯಲ್ಲಿ ಇಳಿಕೆ ಆಗಿದೆ. ಬಿಗ್ ಬಾಸ್ ಹಾಗೂ ಸೀತಾ ರಾಮ ಧಾರಾವಾಹಿಯ ಪ್ರಸಾರದ ಸಮಯ ಒಂದೇ ಆಗಿದೆ.