Site icon Vistara News

Bigg Boss Kannada: ಬಿಗ್‌ ಬಾಸ್‌ ಬಂದ ಮೇಲೆ ಈ ಮೂರು ಧಾರಾವಾಹಿಗಳು ಅಂತ್ಯ?

colors Kannada serial

ಬೆಂಗಳೂರು: ಕಲರ್ಸ್‌ ಕನ್ನಡ ಕಿಚ್ಚ ಸುದೀಪ್‌ ಅವರ ಜನುಮದಿನವೇ ಬಿಗ್‌ ಬಾಸ್‌ (Bigg Boss Kannada) ಪ್ರೋಮೊ ಹಂಚಿಕೊಂಡು ಬಿಗ್‌ ಬಾಸ್‌ ಪ್ರಿಯರಿಗೆ ಗುಡ್‌ನ್ಯೂಸ್‌ ನೀಡಿತ್ತು. ಅಕ್ಟೋಬರ್ ತಿಂಗಳ ಎರಡನೇ ವಾರದಲ್ಲಿ ಶೋ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಮೂರು ಜನಪ್ರಿಯ ಧಾರಾವಾಹಿಗಳು ಅಂತ್ಯ ಕಾಣಲಿವೆ ಎಂಬ ಚರ್ಚೆಗಳು ಆಗುತ್ತಿವೆ. ಈಗಾಗಲೇ ಅನುಬಂಧ ಕಾರ್ಯಕ್ರಮ ಮುಗಿದ ಮೇಲೆ ಬಿಗ್ ಬಾಸ್ ಸೀಸನ್ 10ರ ಶೋ ಚಾಲನೆ ದೊರತಿದೆ.

ಇದೀಗ ಬಿಗ್‌ ಬಾಸ್‌ ಬಳಿಕ ಜಗನ್, ವಿಜಯಲಕ್ಷ್ಮಿ ನಟನೆಯ ಲಕ್ಷಣ, ದಿವ್ಯಾ ಸುರೇಶ್ ನಟನೆಯ ತ್ರಿಪುರ ಸುಂದರಿ, ಪುಣ್ಯವತಿ ಸೀರಿಯಲ್ ಅಂತ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಧಾರಾವಾಹಿ ತಂಡ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ.

ʻಬಿಗ್‌ ಬಾಸ್‌ʼ ಸಮ್‌ಥಿಂಗ್‌ ಸ್ಪೆಷಲ್‌

ಪ್ರೋಮೊನಲ್ಲಿ ಸುದೀಪ್ ಇಲ್ಲ, ಬದಲಿಗೆ ‘ಬಿಗ್​ಬಾಸ್’ ಮಾತ್ರವೇ ಇದ್ದಾರೆ. ಈ ಹಿಂದಿನ ಬಿಗ್​ಬಾಸ್​ಗಳಿಗಿಂತಲೂ ಈ ಬಾರಿಯ ಬಿಗ್​ಬಾಸ್ ಭಿನ್ನವಾಗಿರಲಿದೆ ಎಂದು ಪ್ರೋಮೊನಲ್ಲಿ ಹೇಳಲಾಗಿದೆ. ಹತ್ತನೇ ಸೀಸನ್ ಶೀಘ್ರವೇ ಪ್ರಾರಂಭವಾಗಲಿದೆ.

ಈ ಬಾರಿಯ ಮನೆಯೊಳಗಿನ ಕ್ಯಾಮೆರಾದ ಬದಲಿಗೆ ಪ್ರೋಮೊನಲ್ಲಿ ರಸ್ತೆಯಲ್ಲಿನ ಕ್ಯಾಮೆರಾಗಳನ್ನು ತೋರಿಸಲಾಗಿದೆ. ರಸ್ತೆಯಲ್ಲಿ, ಕಟ್ಟಡಗಳಿಗೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ತೋರಿಸಿ, ರಸ್ತೆಯಲ್ಲಿ ಓಡಾಡುವ ವ್ಯಕ್ತಿಗಳ ದೃಶ್ಯಗಳನ್ನು ಸೆರೆ ಹಿಡಿದು ಪ್ರೋಮೊದಲ್ಲಿ ತೋರಿಸಲಾಗಿದೆ. ಈ ಮೂಲಕ ನೋಡುಗರಿಗೆ ಭಾರಿ ಕುತೂಹಲ ಹುಟ್ಟುಹಾಕಿದೆ.

ಇದನ್ನೂ ಓದಿ: Bigg Boss Kannada: ಈ ಬಾರಿಯ ʻಬಿಗ್‌ ಬಾಸ್‌ʼ ಸಮ್‌ಥಿಂಗ್‌ ಸ್ಪೆಷಲ್‌; ಪ್ರೋಮೊ ಔಟ್‌!

ತೆಲುಗು, ತಮಿಳು ಭಾಷೆಗಳಲ್ಲಿಯೂ ಬಿಗ್​ಬಾಸ್ ಪ್ರಾರಂಭವಾಗುತ್ತಿದೆ. ಅಂತೆಯೇ ಕನ್ನಡದಲ್ಲಿಯೂ ಇನ್ನು ಕೆಲವೇ ದಿನಗಳಲ್ಲಿ ಬಿಗ್​ಬಾಸ್ ರಿಯಾಲಿಟಿ ಶೋ ಪ್ರಾರಂಭವಾಗಲಿದೆ.

ಸುದೀಪ್​ ಅವರ ನಿರ್ವಹಣೆಯೇ ಸವಾಲು!

ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರಾಗಿದ್ದ ಪರಮೇಶ್ವರ್‌ ಗುಂಡ್ಕಲ್‌, ವಾಹಿನಿಯ ಕೆಲಸಕ್ಕೆ ರಾಜೀನಾಮೆ ನೀಡಿದ್ದರೂ ಅದೇ ಮಾತೃಸಂಸ್ಥೆಯ ಮತ್ತೊಂದು ವಿಭಾಗಕ್ಕೆ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. ಜಿಯೋ ಸ್ಟುಡಿಯೋಸ್ ಕನ್ನಡ ಬ್ಯುಸಿನೆಸ್ ಹೆಡ್ ಆಗಿ ಕೆಲಸ ಆರಂಭಿಸಿದ್ದಾರೆ. ಬಿಗ್‌ ಬಾಸ್‌ ಪ್ರತಿ ಜರ್ನಿಯಲ್ಲಿ ಪರಮೇಶ್ವರ್‌ ಗುಂಡ್ಕಲ್‌ ಅವರ ಶ್ರಮವಿದೆ.

ಈ ಬಾರಿ ಕಿರುತೆರೆ ನಟಿ ನಮ್ರತಾ ಗೌಡ, ಹುಚ್ಚ ಸಿನೆಮಾದ ನಟಿ ರೇಖಾ, ನಟಿ ಆಶಾ ಭಟ್, ರೀಲ್ಸ್ ನಲ್ಲಿ ಫೇಮಸ್‌ ಆಗಿರುವ ಭೂಮಿಕಾ ಬಸವರಾಜ್ ಅವರು ಸ್ಪರ್ಧಿಗಳಾಗಲಿದ್ದಾರೆ ಎಂದು ಸುದ್ದಿ ಹಬ್ಬಿದೆ.

Exit mobile version