Site icon Vistara News

Kannada Serials TRP: ಏರುತ್ತಲೇ ಇದೆ ʻಬಿಗ್‌ ಬಾಸ್‌ʼ ಟಿಆರ್‌ಪಿ; ʻಸೀತಾ ರಾಮʼ ಪರಿಸ್ಥಿತಿ ಅಧೋಗತಿ!

Kannada serial TRP

ಬೆಂಗಳೂರು; ಈ ವಾರ ಸೀತಾ ರಾಮ ಧಾರಾವಾಹಿ (Kannada Serials TRP) ಬಿಗ್‌ ಬಾಸ್‌ ನಿಂದಾಗಿ ಭಾರಿ ಕುಸಿತ ಕಂಡಿದೆ. ವಾರ ಕಳೆದಂತೆ ಬಿಗ್ ಬಾಸ್ ನೋಡುವರ ಸಂಖ್ಯೆ ಹೆಚ್ಚುತ್ತಿದೆ. ಸೋಷಿಯಲ್‌ ಮೀಡಿಯಾಗಳಲ್ಲಿ ಕೂಡ ಬಿಗ್‌ ಬಾಸ್‌ ಬಗ್ಗೆಯೇ ಹೆಚ್ಚು ಚರ್ಚೆಗಳು ಆಗುತ್ತಿವೆ. ಹಲವು ಸ್ಪರ್ಧಿಗಳು ಅಗ್ರೆಸ್ಸಿವ್ ಆಗಿ ನಡೆದುಕೊಳ್ಳುತ್ತಿದ್ದಾರೆ. ಈ ಎಲ್ಲಾ ಕಾರಣಕ್ಕೆ ಬಿಗ್ ಬಾಸ್ ಒಳ್ಳೆಯ ಟಿಆರ್​ಪಿ ಪಡೆದುಕೊಳ್ಳುತ್ತಿದೆ. ಈ ವಾರದ ಟಿಆರ್‌ಪಿ ಬಗ್ಗೆ ವಿವರ ಇಲ್ಲಿದೆ.

ಬಿಗ್ ಬಾಸ್

ನಗರ ಭಾಗದಲ್ಲಿ ವಾರದ ದಿನಗಳಲ್ಲಿ 7.6 ಹಾಗೂ ವಾರಾಂತ್ಯದಲ್ಲಿ 8.4 ರೇಟಿಂಗ್ ಪಡೆದಿದೆ. ಬಿಗ್ ಬಾಸ್​ನಲ್ಲಿ ಈ ಬಾರಿ ಜಗಳ ಜೋರಾಗಿದೆ. ಈ ಕಾರಣಕ್ಕೆ ವೀಕ್ಷಕರನ್ನು ಶೋ ಸೆಳೆಯುತ್ತಿದೆ. ಕಲರ್ಸ್ ಕನ್ನಡ ವಾಹಿನಿ ಹಾಗೂ ಜಿಯೋ ಸಿನಿಮಾ ಒಟಿಟಿಯಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಬಿಗ್‌ ಬಾಸ್‌ನಲ್ಲಿ ಈ ವಾರ ಹಿರಿಯ ಪ್ರಾಥಮಿಕ ಶಾಲೆ ಜೋರಾಗಿ ನಡೆಯುತ್ತಿದೆ. ಇರುವುದು ಎಂಟೇ ವಿದ್ಯಾರ್ಥಿಗಳಾದರೂ ಪರಮ ತುಂಟತನ ತೋರುತ್ತಿದ್ದಾರೆ. ಒಬ್ಬರಿಗಿಂತ ಇನ್ನೊಬ್ಬರು ಕಿಲಾಡಿತನದಲ್ಲಿ ಜೋರು. ಮೇಷ್ಟ್ರುಗಳನ್ನು ಗೋಳು ಹೊಯ್ದುಕೊಳ್ಳುವುದರಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಮುಂದೆ ಇದ್ದಾರೆ. ಗಲಾಟೆ ಜತೆ ಮಜವಾಗಿಯೂ ಇದೆ.

ಪುಟ್ಟಕ್ಕನ ಮಕ್ಕಳು

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಶುರುವಾಗಿ ಇಂದಿಗೆ ಎರಡು ವರ್ಷಗಳು ಸಂದಿದೆ. ರೌಡಿಗಳು ಪುಟ್ಟಕ್ಕನನ್ನು ಅಡ್ಡಗಟ್ಟಿ ಇನ್ನೇನು ಸಾಯಿಸಬೇಕು ಎಂದು ಅಂದುಕೊಂಡಾಗ ಅಲ್ಲಿಗೆ ಬಂದ ಕಂಠಿ ಎಲ್ಲರಿಗೆ ಸರಿಯಾದ ಪಾಠ ಕಲಿಸಿ ರೌಡಿಯನ್ನ ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಬಂದು ಎಲ್ಲರಿಗೂ ಶಾಕ್ ನೀಡುತ್ತಾನೆ. ಇನ್ನು ಎಲ್ಲರೂ ಹೋದ ಬಳಿಕ ಪುಟ್ಟಕ್ಕ ಹಾಗೂ ಕಂಠಿ ಮನೆಗೆ ಬರುತ್ತಾರೆ. ಟಿಆರ್​ಪಿ ಕೊಂಚ ಕಡಿಮೆ ಆದರೂ, ಮೊದಲ ಸ್ಥಾನಕ್ಕೆ ಕುತ್ತು ಬಂದಿಲ್ಲ.ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಇದನ್ನೂ ಓದಿ: Kannada Serials TRP: ಬಿಗ್‌ ಬಾಸ್‌ ಇಂಪ್ಯಾಕ್ಟ್‌; ‘ಸೀತಾ ರಾಮ’ ಧಾರಾವಾಹಿ ಟಿಆರ್‌ಪಿ ಇಳಿಕೆ!

ಅಮೃತಧಾರೆ’ ಧಾರಾವಾಹಿ

ಭೂಮಿ ಹಿಂದಿದ್ದ ಕಿರಣ್ ಎನ್ನುವ ಕಹಿ‌ ನೆನಪಿನ ಸತ್ಯ ಗೌತಮ್‌ಗೆ ಗೊತ್ತಾಗಿದೆ. ಇಷ್ಟೂ ದಿನ ಗೌತಮ್‌ ಹಾಗೂ ಭೂಮಿ ಒಂದಾಗಿ ಇದ್ದರು. ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಗಟ್ಟಿಮೇಳ

ಟಿಆರ್‌ಪಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್, ಸುಧಾ ನರಸಿಂಹರಾಜು ಮೊದಲಾದವರು ನಟಿಸಿದ್ದಾರೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ. 

ನಾಲ್ಕನೇ ಸ್ಥಾನದಲ್ಲಿ ‘ಭಾಗ್ಯಲಕ್ಷ್ಮಿ’

ಭಾಗ್ಯ ಇದೀಗ ಡ್ಯಾನ್ಸ್‌ ಮಾಡಿ ತಾಂಡವ್‌ಗೆ ಬುದ್ಧಿ ಕಲಿಸಿದ್ದಾಳೆ. ಇನ್ನು ಅತ್ತೆ ಕೂಡ ಭಾಗ್ಯ ಧೈರ್ಯಕ್ಕೆ ಮೆಚ್ಚಿ ಹಾಡಿ ಹೊಗಳಿದ್ದಾಳೆ. ʼಹೆಣ್ಣುʼ ಒಂದು ಪದವಷ್ಟೇ ಅಲ್ಲ, ಅದೊಂದು ಶಕ್ತಿ ಎಂದು ಧಾರಾವಾಹಿ ಈ ವಾರ ಒಂದು ಸಂದೇಶವನ್ನು ನೀಡಿದೆ. ಈ ಧಾರಾವಾಹಿ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಐದನೇ ಸ್ಥಾನದಲ್ಲಿ ‘ಶ್ರೀರಸ್ತು ಶುಭಮಸ್ತುʼ

ಸುಧಾರಾಣಿ ಅವರು ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ಸೊಸೆಯ ಪಾತ್ರ ನಿರ್ವಹಿಸುತ್ತಿದ್ದಾರೆ. ತುಳಸಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಧವ ಹಾಗೂ ತುಳಸಿ ಮಧ್ಯೆ ಮಕ್ಕಳು ಅಡ್ಡಲಾಗಿ ನಿಂತರೂ ಈ ಜೋಡಿ ಮಾತ್ರ ಮನೆಯವರಿಗಾಗಿ ಸದಾ ದುಡಿಯುತ್ತಿರುತ್ತದೆ. ಮಾಧವ ಹಾಗೂ ತುಳಿಸಿ ಒಟ್ಟಿಗೆ ಇರುವುದು ದತ್ತನ ಖುಷಿಗೆ ಕಾರಣವಾಗಿದೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಸೀತಾ ರಾಮ’ ಧಾರಾವಾಹಿಯ ಟಿಆರ್​ಪಿ ತಗ್ಗುತ್ತಲೇ ಇದೆ .‘ಸೀತಾ ರಾಮ’ ಧಾರಾವಾಹಿಯ ಟಿಆರ್​ಪಿಯಲ್ಲಿ ಇಳಿಕೆ ಆಗಿದೆ. ಬಿಗ್ ಬಾಸ್ ಹಾಗೂ ಸೀತಾ ರಾಮ ಧಾರಾವಾಹಿಯ ಪ್ರಸಾರದ ಸಮಯ ಒಂದೇ ಆಗಿದೆ. ಸೀತಾ ರಾಮ ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

Exit mobile version