ಬೆಂಗಳೂರು: ಕಿರುತೆರೆಯ ರವಿಚಂದ್ರನ್ ಎಂದೇ ಖ್ಯಾತಿಯನ್ನ ಗಳಿಸಿದ ʻರವಿಕಿರಣ್ʼ ಅವರು ‘ಟೆಲಿವಿಷನ್ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್’ನಲ್ಲಿ ಅವ್ಯವಹಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಲು ಕ್ಲಬ್ ಸದಸ್ಯರು ಮುಂದಾಗಿದ್ದಾರೆ. ಕಳೆದ 20 ವರ್ಷದಿಂದ ಇರುವ ಈ ಕ್ಲಬ್‌ಗೆ ರವಿಕಿರಣ್ ಅವರು ಮೊದಲಿಂದ ಕಾರ್ಯದರ್ಶಿ. ಆದರೆ ಸರ್ಕಾರ ಕೊಟ್ಟ ಅನುದಾನದಲ್ಲಿ ನಿರ್ಮಾಣವಾದ ಈ ಕ್ಲಬ್ ಗೆ ಸಂಬಂಧಿಸಿದಂತೆ GST, ಬಿಬಿಎಂಪಿ ಟ್ಯಾಕ್ಸ್ ಸೇರಿ ಯಾವುದೇ ತೆರಿಗೆ ಪಾವತಿ ಮಾಡಿಲ್ಲ. ಬದಲಿಗೆ ಹಣವನ್ನು ಪಾವತಿಸದೇ ಅದರ ಹೆಸರಲ್ಲಿ ಕ್ಲಬ್ ಸದಸ್ಯರಿಂದ ವಸೂಲಿ ಮಾಡಲಾಗಿದೆ ಎಂಬ ಆರೋಪವನ್ನ ಈಗ ಅನೇಕರು ಮಾಡುತ್ತಿದ್ದಾರೆ.
ʻʻಹಲವು ಕಲಾವಿದರು ಒಳಗೊಂಡ ಈ ಕ್ಲಬ್‌ಗೆ ಸರ್ಕಾರವೇ 3 ಕೋಟಿಗೂ ಅಧಿಕ ಹಣವನ್ನು ನೀಡಿದೆ. ಆದರೂ ಸರ್ಕಾರದ ಕಣ್ಣಿಗೆ ಮಣ್ಣೇರಚುವ ಪ್ರಯತ್ನವನ್ನ ರವಿಕಿರಣ್ ಮಾಡುತ್ತಿದ್ದಾರೆ. ಕ್ಲಬ್‌ಗೆ ಬಾರದಂತೆ ಆದೇಶ ಇದ್ದರೂ ರವಿಕಿರಣ್ 6 ಲಕ್ಷ ರೂಪಾಯಿ ಹಣವನ್ನ ಪಡೆದಿದ್ದಾರೆ. GST, ಬಿಬಿಎಂಪಿ ಟ್ಯಾಕ್ಸ್ ಸೇರಿ ಯಾವುದೇ ತೆರಿಗೆ ಪಾವತಿ ಮಾಡಿಲ್ಲ. ಹಣವನ್ನು ಪಾವತಿಸದೇ ಅದರ ಹೆಸರಲ್ಲಿ ಕ್ಲಬ್ ಸದಸ್ಯರಿಂದ ವಸೂಲಿ ಮಾಡಲಾಗಿದೆ’ ಎಂದು ಸದಸ್ಯರು ಆರೋಪಿಸಿದ್ದಾರೆ.
ರವಿಕಿರಣ್ ವಿರುದ್ಧ ಕ್ಲಬ್ನಲ್ಲಿ ಅವ್ಯವಹಾರದ ಆರೋಪ ಎದುರಾಗಿದ್ದು, ಕ್ಲಬ್ ಸದಸ್ಯರು ದೂರು ನೀಡಿದ ಹಿನ್ನೆಲೆಯಲ್ಲಿ ಸುಬ್ರಮಣ್ಯಪುರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೋರ್ಟ್ನಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಇನ್ಸ್ಪೆಕ್ಟರ್ ಅರ್ಜುನ್ ಮನವರಿಕೆ ಮಾಡಿದ್ದಾರೆ. ಅವರ ಮಾತು ಒಪ್ಪಿ ಸದಸ್ಯರು ತೆರಳಿರುವುದಾಗಿ ಪೊಲೀಸರಿಂದ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: Kannada New Movie: ʻಕೈಲಾಸʼ ಸಿನಿಮಾದ ಕಿಕ್ಕೇರಿಸೋ ಟ್ರಾನ್ಸ್ ಹಾಡು ಬಿಡುಗಡೆ
ಕಿರುತೆರೆಯ ಅನೇಕ ಧಾರಾವಾಹಿಗಳಲ್ಲಿ ಅವರು ನಟಿಸಿ, ನಿರ್ದೇಶನವನ್ನೂ ಮಾಡಿದ್ದಾರೆ. ಈಗ ‘ಟೆಲಿವಿಷನ್ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್’ ವಿಚಾರದಲ್ಲಿ ಅವರ ಮೇಲೆ ಆರೋಪ ಎದುರಾಗಿದೆ.