ಬೆಂಗಳೂರು: ದಿವ್ಯಾ ವಸಂತ (Divya Vasantha) ಇದೀಗ ಅರೆಸ್ಟ್ ಆಗಿದ್ದಾರೆ. ಮೊದಲಿಗೆ ಸುದ್ದಿ ವಾಹಿನಿಯ ನಿರೂಪಕಿಯಾಗಿ ಗಮನ ಸೆಳೆದಿದ್ದ ಆಕೆ ಬಳಿಕ ಇನ್‌ಸ್ಟಾಗ್ರಾಂ ರೀಲ್ಸ್, ಯೂಟ್ಯೂಬ್ ವಿಡಿಯೊಗಳಿಂದ ಸದ್ದು ಮಾಡಿದ್ದರು. ಖಾಸಗಿ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡಿಕೊಂಡಿದ್ದ ದಿವ್ಯಾ ಕೆಲ ದಿನಗಳ ಹಿಂದೆ ಕೆಲಸ ಬಿಟ್ಟಿದ್ದರು. ಇದೀಗ , ಅಸ್ಸಾಂ ಹುಡುಗಿಯನ್ನು ಬಳಸಿಕೊಂಡು ಸುಲಿಗೆ ಮಾಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಇನ್ನೊಂದೆಡೆ ಆಕೆ ಹೇಳಿರುವ ಒಂದೊಂದು ಮಾತುಗಳು ಕೂಡ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಬೆಂಗಳೂರಿನ ಇಂದಿರಾನಗರದಲ್ಲಿರುವ ಮಸಾಜ್ ಪಾರ್ಲರ್ ಮತ್ತು ಸ್ಪಾದ ವ್ಯವಸ್ಥಾಪಕನಿಗೆ ಬೆದರಿಗೆ 15 ಲಕ್ಷ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ನಿರೂಪಕಿ ಹಾಗೂ ಕಲರ್ಸ್ ಕನ್ನಡದ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಭಾಗಿಯಾಗಿದ್ದ ದಿವ್ಯಾ ವಸಂತ ಕೂಡ ಆರೋಪಿಯಾಗಿದ್ದಾರೆ. ಆಕೆಯ ಸ್ನೇಹಿತ ಸಂದೇಶ್ ಈಗಾಗಲೇ ಬಂಧಿತನಾಗಿದ್ದಾನೆ. ಅದರೊಂದಿಗೆ ರಾಜ್ ನ್ಯೂಸ್ ಸುದ್ದಿವಾಹಿನಿಯ ಕಾರ್ಯನಿರ್ವಾಹಕ ಅಧಿಕಾರಿ ರಾಜಾನುಕುಂಟೆ ವೆಂಕಟೇಶ್‌ಎನ್ನಲಾಗುತ್ತಿದ್ದ ಜೆಬಿ ನಗರ ಪೊಲೀಸರು ಬಂಧಿಸಿದ್ದಾರೆ. ಇದರ ನಡುವೆ ದಿವ್ಯಾ ವಸಂತ ಹಾಗೂ ರಾಜಾನುಕುಂಟೆ ವೆಂಕಟೇಶ್ ಆಪ್ತವಾಗಿರುವ ಕೆಲವೊಂದು ವಿಡಿಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ದಿವ್ಯಾ ವಸಂತ ಇಷ್ಟು ಫೇಮಸ್ ಆಗಿದ್ದು ಹೇಗೆ?
ದಿವ್ಯಾ ವಸಂತ ಬೆಳೆದಿದ್ದೇ ಟ್ರೋಲಿಗರಿಂದ. ‘ಇದು ಇಡೀ ರಾಜ್ಯವೇ ಖುಷಿ ಪಡುವ ಸುದ್ದಿ..’ ಎನ್ನುವ ಲೈನ್ ಮೂಲಕವೇ ಎಂಟರ್‌ಟೇನ್‌ಮೆಂಟ್ ಜಗತ್ತಿಗೆ ಕಾಲಿಟ್ಟಾಕೆ ದಿವ್ಯಾ ವಸಂತ. ಆದರೆ, ಸಂದರ್ಶನವೊಂದರಲ್ಲಿ ತಮ್ಮ ಟ್ರೋಲ್ ಮಾಡೋರು, ನನ್ನ ಪೋಸ್ಟ್‌ಗೆ ಕಮೆಂಟ್ ಮಾಡೋರು ಹುಚ್ಚನನ್ಮಕ್ಕಳು ಎಂದು ಈಕೆ ಹೇಳಿದ್ದು ಭರ್ಜರಿ ವೈರಲ್ ಆಗಿತ್ತು.
ಇದನ್ನೂ ಓದಿ: Divya Vasantha: ʻರಾಜ್ಯವೇ ಖುಷಿ ಪಡೋ ಸುದ್ದಿʼ ನೀಡಿ ನೆರೆ ರಾಜ್ಯದಲ್ಲಿ ಅಡಗಿ ಕುಳಿತಿದ್ದ ನಿರೂಪಕಿ ದಿವ್ಯಾ ವಸಂತ ಅರೆಸ್ಟ್
ಇನ್ನು ಟ್ರೋಲ್ ಆದ ಬಳಿಕ ದಿವ್ಯಾ ವಸಂತ ಹೇಳಿರುವ ಮಾತು ಒಂದೆರಡಲ್ಲ. ʻಮೊದಲಿಗೆ ನನ್ನ ಬಗ್ಗೆ ಟ್ರೋಲ್ ಮಾಡುವಾಗ ನೆಗೆಟಿವ್ ಥಾಟ್ಸ್ ಇತ್ತು. ಹೀಗೆಲ್ಲ ಟ್ರೋಲ್ ಮಾಡ್ತಾರಾ? ಎಂದು ಅನ್ನಿಸುತ್ತಿತ್ತು. ಆ ಬಳಿಕ ಕಮೆಂಟ್ ನಲ್ಲಿಯೂ ಬೇಕಾ ಬಿಟ್ಟಿ ಹೇಳೋರು. ಅವರಂಥ ಹುಚ್ಚನನ್ಮಕ್ಕಳು ಬೇರೆ ಯಾರೂ ಇಲ್ಲ ಎಂದು ನನಗೆ ಅನಿಸಿತ್ತು. ಯಾಕೆಂದರೆ, ಅವರೆಲ್ಲಾ ಬಾಯಿಗೆ ಬಂದ ಹಾಗೆ ಕಮೆಂಟ್ ಮಾಡುತ್ತಿದ್ದರು. ಟಿವಿಯಲ್ಲಿ ಹೋಗಿರೊ ವಿಚಾರಗಳನ್ನು ಇಟ್ಟುಕೊಂಡು ನಮ್ಮ ಕ್ಯಾರಕಟ್ಟರ್ ಡಿಸೈಡ್ ಮಾಡುತ್ತಾರೆ. ಈ ತರ ಟ್ರೋಲ್ ಮಾಡುವುದಕ್ಕೆ ಹಕ್ಕು ಯಾರು ಕೊಟ್ಟಿದ್ದಾರೆ? ಎಂದು ಈ ಮುಂಚೆ ಹೇಳಿದ್ದರು.
ʻʻಫೇಕ್ ಅಕೌಂಟ್ ಇಟ್ಕೊಂಡೇ ಇವರು ಕಮೆಂಟ್ ಮಾಡ್ತಾರೆ. ಟ್ರೋಲ್ ಮಾಡೋರು, ಕಮೆಂಟ್ ಮಾಡೋರೆ ದೊಡ್ಡ ಫೇಕ್‌ಗಳು. ಆದರೆ, ನಮ್ಮ ಬಗ್ಗೆ ಅವರು ಜಡ್ಜ್ ಮಾಡೋಕೆ ಬರ್ತಾರೆ. ಹಾಗಾಗಿ ಕಮೆಂಟ್ ಮಾಡೋರನ್ನ ನಾನು ಯಾವಾಗಲೂ ಹೇಟ್ ಮಾಡ್ತೀನಿʼʼ ಎಂದಿದ್ದರು.
ಒಂದು ವಾರದಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ದಿವ್ಯಾ ಅವರನ್ನು ಕೊನೆಗೂ ಬಂದನ ಮಾಡಿದ್ದಾರೆ ಪೊಲೀಸರು. ತಮಿಳುನಾಡಿನಿಂದ ಕೇರಳದಲ್ಲಿ ತಲೆ ಮರೆಸಿಕೊಂಡಿದ್ದರು ದಿವ್ಯಾ. ಕೇರಳದಿಂದ ಬಂಧಿಸಿ ಪೊಲೀಸರು ಕರೆತಂದಿದ್ದಾರೆ. ಸದ್ಯ ಇದೀಗ ಕೇಸ್ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳಿಗೂ ರಾಜ್ ನ್ಯೂಸ್ ಗೂ ಯಾವುದೇ ಸಂಬಂಧವಿಲ್ಲ
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್‌ನ್ಯೂಸ್ ಸುದ್ದಿವಾಹಿನಿ ಸಿಇಓ ಎನ್ನಲಾಗುತ್ತಿದ್ದ ವೆಂಕಟೇಶ್ ಹಾಗೂ ರಾಜ್ ನ್ಯೂಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ರಾಜ್ ನ್ಯೂಸ್ ಸ್ಪಷ್ಟೀಕರಣ ನೀಡಿದೆ. ʻʻಬ್ಲಾಕ್ ಮೇಲ್ ಮಾಡಿ ಹಲವು ಕಡೆ ಹಣ ಸುಲಿಗೆ ಮಾಡಿರುವ ಆರೋಪದ ಮೇಲೆ ಬಂಧಿತರಾಗಿರುವ ಆರೋಪಿಗಳಿಗೂ ರಾಜ್‌ನ್ಯೂಸ್‌ಗೂ
ಯಾವುದೇ ಸಂಬಂಧವಿಲ್ಲ. ರಾಜ್ ನ್ಯೂಸ್‌ನಲ್ಲಿ ನಾವು ಯಾವುದೇ ಸಿಇಓ ಹುದ್ದೆಯನ್ನು ಸೃಷ್ಠಿಸಿಲ್ಲ. ರಾಜಾನುಕುಂಟೆ ವೆಂಕಟೇಶ್ ಎಂಬವರು 3 ತಿಂಗಳಿನಿಂದ ನಮ್ಮಸಂಸ್ಥೆಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಹೊರಗುತ್ತಿಗೆ
ಆಧಾರದಲ್ಲಿ ಕೆಲಸ ಮಾಡುತಿದ್ದರು. ನಮ್ಮ ಸಂಸ್ಥೆಯ ಸಿಇಓ ಹಾಗೂ ಉದ್ಯೋಗಿ ಅಲ್ಲ. ಅವರು ಸಿಇಓ ಎಂದು ಹೇಳಿಕೊಂಡಿರುವುದಕ್ಕೆ ಕಾನೂನು ಕ್ರಮ ಕೈಗೊಳ್ಳುತಿದ್ದೇವೆ. ಉಳಿದಂತೆ ಇತರ ಯಾವ ಆರೋಪಿಗಳು ನಮ್ಮ ಸಂಸ್ಥೆಯ ಉದ್ಯೋಗಿಗಳಲ್ಲ. ಆರೋಪಿಗಳು ರಾಜ್ ನ್ಯೂಸ್ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವುದರಿಂದ ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ. ದಯವಿಟ್ಟು ರಾಜ್ ನ್ಯೂಸ್ ಹೆಸರನ್ನು ಈ ಆರೋಪಿಗಳ ಜತೆ
ಸೇರಿಸಬಾರದೆಂದು ತಮಲ್ಲಿಕಳಕಳಿಯ ಮನವಿ ಮಾಡುತ್ತೇನೆʼʼಎಂದು ಹೇಳಿಕೊಂಡಿದೆ.