ಬೆಂಗಳೂರು: ಬೆಂಗಳೂರಿನ ಇಂದಿರಾನಗರದಲ್ಲಿರುವ ಮಸಾಜ್ ಪಾರ್ಲರ್ ಮತ್ತು ಸ್ಪಾದ ವ್ಯವಸ್ಥಾಪಕನಿಗೆ ಬೆದರಿಗೆ 15 ಲಕ್ಷ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ನಿರೂಪಕಿ (Divya Vasantha) ಹಾಗೂ ಕಲರ್ಸ್ ಕನ್ನಡದ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಭಾಗಿಯಾಗಿದ್ದ ದಿವ್ಯಾ ವಸಂತ ಅರೆಸ್ಟ್ ಆಗಿದ್ದಾರೆ. ಮಧ್ಯಮವರ್ಗದ ಕುಟುಂಬದಿಂದ ಬಂದ ದಿವ್ಯಾ ಶೋಕಿಗೆ ಬಿದ್ದು ಐಷಾರಾಮಿ ಜೀವನಕ್ಕಾಗಿ ಸುಲಿಗೆಕೋರರ ಜತೆ ಕೈ ಜೋಡಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ದಿವ್ಯಾ ವಸಂತ ಅತ್ಯಂತ ಶೋಕಿ ಜೀವನ ಕೂಡ ನಡೆಸುತ್ತಿದ್ದರು. ದಿವ್ಯಾ ವಸಂತ 6 ತಿಂಗಳ ಹಿಂದೆ ದುಬಾರಿ ಕಾರನ್ನು ಖರೀದಿಸಿದ್ದರು.
ನಿರೂಪಕಿ ದಿವ್ಯಾ ವಸಂತ ಖರೀದಿಸಿದ ಕಾರು, ಹ್ಯುಂಡೈ ಕ್ರೆಟಾ ಆಗಿತ್ತು. ಈ ಹ್ಯುಂಡೈ ಕ್ರೆಟಾ ಎಸ್‍ಯುವಿಯ ಪ್ರಾರಂಭಿಕ ಬೆಲೆಯು 13.79 ಲಕ್ಷ ರೂ. ಆದರೆ, ಟಾಪ್ ಎಂಡ್ ಮಾಡೆಲ್ ಬೆಲೆಯು 25.32 ಲಕ್ಷ ರೂ. ವಾಗಿದೆ. ಈ ಎಲ್ಲಾ ಬೆಲೆಗಳು ಆನ್ ರೋಡ್ ಪ್ರಕಾರವಾಗಿದೆ. ಈ ಕ್ರೆಟಾ ಎರಡು ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ. ಈ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ.
ಇದನ್ನೂ ಓದಿ: Divya Vasantha: ದಿವ್ಯಾ ವಸಂತ ಇಷ್ಟು ಫೇಮಸ್ ಆಗಿದ್ದು ಹೇಗೆ? ಟ್ರೋಲಿಗರು ಹುಚ್ಚ ನನ್ಮಕ್ಕಳು ಎಂದಿದ್ದ ನಿರೂಪಕಿ!
ಸೆಕೆಂಡ್ ಪಿಯುಸಿ ಮುಗಿದ ಬಳಿಕ ದಿವ್ಯಾ ಕೆಲಸ ಮಾಡಲು ಶುರು
ದಿವ್ಯಾ ವಸಂತ ಮೂಲತಃ ಹಾಸನದವರು. ಶ್ರವಣಬೆಳಗೊಳದ ಪುಟ್ಟ ಹಳ್ಳಿಯಲ್ಲಿ ಜನಿಸಿದರು. ಅಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ದಿವ್ಯಾ ಅವರು ಚಿಕ್ಕ ವಯಸ್ಸಿನಲ್ಲಿರುವಾಗಲೇ ತಂದೆ ಬೇರ್ಪಟ್ಟರಂತೆ. ಬಳಿಕ ದಿವ್ಯಾ ಅವರ ಅಮ್ಮ ವಸಂತ ಅವರು ಗಾರ್ಮೆಂಟ್ ಕೆಲಸ ಮಾಡಿ, ಮಗ ಮತ್ತು ಮಗಳನ್ನು ಓದಿಸಿ ಬೆಳೆಸಿದರು. ಹೀಗಾಗಿ ದಿವ್ಯಾ ಅವರು ತಮ್ಮ ಹೆಸರಿನ ಮುಂದೆ ಅಮ್ಮನ ಹೆಸರು ಇಟ್ಟುಕೊಂಡಿದ್ದಾರೆ. ಸೆಕೆಂಡ್ ಪಿಯುಸಿ ಮುಗಿದ ಬಳಿಕ ದಿವ್ಯಾ ಕೆಲಸ ಮಾಡಲು ಶುರು ಮಾಡುತ್ತಾರೆ. ರಸ್ತೆ ಬದಿ ಸಿಮ್ ಮಾರಾಟ ಮಾಡಿ ಜೀವನ ನಡೆಸುತ್ತಾರೆ. ಈ ವಿಚಾರವನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದರು ದಿವ್ಯಾ. ಆದರೆ ದಿವ್ಯಾ ಅವರಿಗೆ ಟಿವಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಹುಚ್ಚು ಇತ್ತಂತೆ. ಹೀಗಾಗಿ ಮಾಧ್ಯಮಗಳಲ್ಲಿ ಐದು ವರ್ಷಗಳ ಕಾಲ ಕೆಲಸ ಮಾಡುತ್ತಾರೆ. ಅಷ್ಟಾಗಿ ಅವರಿಗೆ ಸಂಬಳ ಸಿಗುವುದಿಲ್ಲ. ಈ ಬಗ್ಗೆಯೂ ಅವರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಬಳಿಕ ದಿವ್ಯಾಗೆ ಬ್ರೇಕ್ ಕೊಟ್ಟಿದ್ದು, ಗಿಚ್ಚ ಗಿಲಿಗಿಲಿ ಶೋ.
ಇದೀಗ , ಅಸ್ಸಾಂ ಹುಡುಗಿಯನ್ನು ಬಳಸಿಕೊಂಡು ಸುಲಿಗೆ ಮಾಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಬೆಂಗಳೂರಿನ ಇಂದಿರಾನಗರದಲ್ಲಿರುವ ಮಸಾಜ್ ಪಾರ್ಲರ್ ಮತ್ತು ಸ್ಪಾದ ವ್ಯವಸ್ಥಾಪಕನಿಗೆ ಬೆದರಿಗೆ 15 ಲಕ್ಷ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ನಿರೂಪಕಿ ಹಾಗೂ ಕಲರ್ಸ್ ಕನ್ನಡದ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಭಾಗಿಯಾಗಿದ್ದ ದಿವ್ಯಾ ವಸಂತ ಕೂಡ ಆರೋಪಿಯಾಗಿದ್ದಾರೆ. ಆಕೆಯ ಸ್ನೇಹಿತ ಸಂದೇಶ್ ಈಗಾಗಲೇ ಬಂಧಿತನಾಗಿದ್ದಾನೆ. ಅದರೊಂದಿಗೆ ರಾಜ್ ನ್ಯೂಸ್ ಸುದ್ದಿವಾಹಿನಿಯ ಕಾರ್ಯನಿರ್ವಾಹಕ ಅಧಿಕಾರಿ ಎನ್ನಲಾಗುತ್ತಿದ್ದ ರಾಜಾನುಕುಂಟೆ ವೆಂಕಟೇಶ್‌ನನ್ನು ಜೆಬಿ ನಗರ ಪೊಲೀಸರು ಬಂಧಿಸಿದ್ದಾರೆ. ಇದರ ನಡುವೆ ದಿವ್ಯಾ ವಸಂತ ಹಾಗೂ ರಾಜಾನುಕುಂಟೆ ವೆಂಕಟೇಶ್ ಆಪ್ತವಾಗಿರುವ ಕೆಲವೊಂದು ವಿಡಿಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಆರೋಪಿಗಳಿಗೂ ರಾಜ್ ನ್ಯೂಸ್ ಗೂ ಯಾವುದೇ ಸಂಬಂಧವಿಲ್ಲ
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್‌ನ್ಯೂಸ್ ಸುದ್ದಿವಾಹಿನಿ ಸಿಇಓ ಎನ್ನಲಾಗುತ್ತಿದ್ದ ವೆಂಕಟೇಶ್ ಹಾಗೂ ರಾಜ್ ನ್ಯೂಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ರಾಜ್ ನ್ಯೂಸ್ ಸ್ಪಷ್ಟೀಕರಣ ನೀಡಿದೆ. ʻʻಬ್ಲಾಕ್ ಮೇಲ್ ಮಾಡಿ ಹಲವು ಕಡೆ ಹಣ ಸುಲಿಗೆ ಮಾಡಿರುವ ಆರೋಪದ ಮೇಲೆ ಬಂಧಿತರಾಗಿರುವ ಆರೋಪಿಗಳಿಗೂ ರಾಜ್‌ನ್ಯೂಸ್‌ಗೂ
ಯಾವುದೇ ಸಂಬಂಧವಿಲ್ಲ. ರಾಜ್ ನ್ಯೂಸ್‌ನಲ್ಲಿ ನಾವು ಯಾವುದೇ ಸಿಇಓ ಹುದ್ದೆಯನ್ನು ಸೃಷ್ಠಿಸಿಲ್ಲ. ರಾಜಾನುಕುಂಟೆ ವೆಂಕಟೇಶ್ ಎಂಬವರು 3 ತಿಂಗಳಿನಿಂದ ನಮ್ಮಸಂಸ್ಥೆಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಹೊರಗುತ್ತಿಗೆ
ಆಧಾರದಲ್ಲಿ ಕೆಲಸ ಮಾಡುತಿದ್ದರು. ನಮ್ಮ ಸಂಸ್ಥೆಯ ಸಿಇಓ ಹಾಗೂ ಉದ್ಯೋಗಿ ಅಲ್ಲ. ಅವರು ಸಿಇಓ ಎಂದು ಹೇಳಿಕೊಂಡಿರುವುದಕ್ಕೆ ಕಾನೂನು ಕ್ರಮ ಕೈಗೊಳ್ಳುತಿದ್ದೇವೆ. ಉಳಿದಂತೆ ಇತರ ಯಾವ ಆರೋಪಿಗಳು ನಮ್ಮ ಸಂಸ್ಥೆಯ ಉದ್ಯೋಗಿಗಳಲ್ಲ. ಆರೋಪಿಗಳು ರಾಜ್ ನ್ಯೂಸ್ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವುದರಿಂದ ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ. ದಯವಿಟ್ಟು ರಾಜ್ ನ್ಯೂಸ್ ಹೆಸರನ್ನು ಈ ಆರೋಪಿಗಳ ಜತೆ
ಸೇರಿಸಬಾರದೆಂದು ತಮಲ್ಲಿಕಳಕಳಿಯ ಮನವಿ ಮಾಡುತ್ತೇನೆʼʼಎಂದು ಹೇಳಿಕೊಂಡಿದೆ.