Site icon Vistara News

Divyanka Tripathi: ವಿದೇಶದಲ್ಲಿ ದರೋಡೆಗೆ ಒಳಗಾದ ಕಿರುತೆರೆ ದಂಪತಿ; ಕಾರಿನ ಗಾಜುಗಳೆಲ್ಲ ಪೀಸ್‌ ಪೀಸ್‌!

Divyanka Tripathi Vivek Dahiya Share Update On Robbery Incident

ಬೆಂಗಳೂರು: ದಿವ್ಯಾಂಕಾ ತ್ರಿಪಾಠಿ (Divyanka Tripathi) ಮತ್ತು ವಿವೇಕ್ ದಹಿಯಾ (Vivek Dahiya) ಹಿಂದಿ ಕಿರುತೆರೆಯ ಪ್ರಸಿದ್ಧಿ ಪಡೆದಿರುವ ದಂಪತಿ. ತಮ್ಮ ವಿವಾಹ ವಾರ್ಷಿಕೋತ್ಸವಕ್ಕಾಗಿ ವಿದೇಶ ಪ್ರವಾಸದಲ್ಲಿರುವ ದಿವ್ಯಾಂಕಾ ತ್ರಿಪಾಠಿ ಮತ್ತು ವಿವೇಕ್ ದಹಿಯಾ ಜುಲೈ 11 ರಂದು ಇಟಲಿಯಲ್ಲಿ ಕಳ್ಳರಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಈ ಬಗ್ಗೆ ಪೋಸ್ಟ್‌ ಕೂಡ ಹಂಚಿಕೊಂಡಿದ್ದರು. ಇದೀಗ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ದಿವ್ಯಾಂಕಾ ತನ್ನ ಎಲ್ಲಾ ಅಭಿಮಾನಿಗಳು ಮತ್ತು ಫ್ಯಾನ್ಸ್‌ಗಳಿಗೆ ಇಂಥಹ ಕಠಿಣ ಸಮಯದಲ್ಲಿ ಬೆಂಬಲ ಮತ್ತು ಪ್ರೀತಿಗಾಗಿ ಧನ್ಯವಾದ ಹೇಳಿದ್ದಾರೆ. ಇದೀಗ ಸ್ನೇಹಿತರ ಸಹಾಯದಿಂದ ಸಮಸ್ಯೆಗಳು ಬಗೆ ಹರಿದಿವೆ ಎಂದು ಪೋಸ್ಟ್‌ ಮಾಡಿದ್ದಾರೆ.

ತಮ್ಮ ವಿವಾಹ ವಾರ್ಷಿಕೋತ್ಸವಕ್ಕಾಗಿ ವಿದೇಶ ಪ್ರವಾಸದಲ್ಲಿರುವ ದಿವ್ಯಾಂಕಾ ತ್ರಿಪಾಠಿ ಮತ್ತು ವಿವೇಕ್ ದಹಿಯಾ ವಿದೇಶದಲ್ಲಿ ಸಂಕಷ್ಟದಲ್ಲಿದ್ದು, ಪೊಲೀಸರೂ ಈ ವಿಚಾರದಲ್ಲಿ ಅಸಹಾಯಕತೆ ತೋರಿದ್ದಾರೆ ಎಂದು ದಿವ್ಯಾಂಕಾ-ವಿವೇಕ್ ಆರೋಪಿಸಿದ್ದರು. ಇಟಲಿಯಲ್ಲಿ ಪ್ರಯಾಣಿಸುತ್ತಿದ್ದ ವಿವೇಕ್-ದಿವ್ಯಾಂಕಾ ಅವರ ಪಾಸ್‌ಪೋರ್ಟ್, ಕ್ರೆಡಿಟ್ ಕಾರ್ಡ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದರು. ದಂಪತಿಯ ಶಾಪ್ ಮಾಡಿದ ವಸ್ತುಗಳು, ವ್ಯಾಲೆಟ್‌ಗಳು, ಪಾಸ್‌ಪೋರ್ಟ್‌ಗಳು ಸೇರಿದಂತೆ ಸುಮಾರು 10 ಲಕ್ಷ ಮೌಲ್ಯದ ಸೊತ್ತುಗಳನ್ನು ಕಳವು ಮಾಡಲಾಗಿತ್ತು. ದಂಪತಿಯ ಸಾಮಾನುಗಳನ್ನು ಇಟ್ಟಿದ್ದ ಕಾರಿನ ಗಾಜು ಒಡೆದ ಕಳ್ಳರು ಎಲ್ಲ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು. ಇದೀಗ ನಟಿ ಹಣದ ಸಮಸ್ಯೆ ಬಗೆ ಹರಿದಿದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Shiva Rajkumar: ಶಿವರಾಜ್‌ಕುಮಾರ್‌ ಅಭಿನಯದ ʻ45ʼ ಸಿನಿಮಾದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿದ ರಿಷಬ್ ಶೆಟ್ಟಿ!

ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ದಿವ್ಯಾಂಕಾ ಹೀಗೆ ಬರೆದಿದ್ದಾರೆ, “ಪ್ರಿಯರೇ, ನಿಮ್ಮ ಅಪಾರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ತುಂಬಾ ಕಳೆದುಕೊಂಡ ನಂತರ, ಅದೃಷ್ಟವಶಾತ್, ಪ್ರೀತಿ ಕಳೆದುಹೋಗಿಲ್ಲ! ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಉತ್ತರಿಸಲು ನಮಗೆ ಸಾಧ್ಯವಾಗದ ಕಾರಣ ನಮ್ಮ ಪ್ರೀತಿಪಾತ್ರರಿಗೆ ಮತ್ತು ಸಂಬಂಧಪಟ್ಟ ಜನರಿಗೆ ಅಪ್‌ಡೇಟ್‌ ನೀಡುತ್ತಿದ್ದೇನೆ. ಪ್ರಸ್ತುತ ನಾವು ಸ್ನೇಹಿತನಿಂದ ಸಹಾಯವನ್ನು ಪಡೆದಿರುವುದರಿಂದ ಹಣದ ಸಮಸ್ಯೆ ಬಗೆ ಹರಿಯಿತು. ನಾವು ವರದಿ ಮಾಡಿದಂತೆ ಎಲ್ಲವನ್ನೂ ಕಳೆದುಕೊಂಡಿಲ್ಲ. ಕಾರಿನ ಬೂಟ್‌ನಲ್ಲಿದ್ದ ಕೆಲವು ವಸ್ತುಗಳು ನಮ್ಮ ಬಳಿ ಉಳಿದಿವೆʼʼಎಂದು ಹೇಳಿಕೊಂಡಿದ್ದಾರೆ.

ಜುಲೈ 11 ರಂದು ಇಟಲಿಯ ಫ್ಲಾರೆನ್ಸ್‌ನಲ್ಲಿ ದಿವ್ಯಾಂಕಾ ತ್ರಿಪಾಠಿ ಮತ್ತು ವಿವೇಕ್ ದಹಿಯಾ ಅವರ ಸಾಮಾನುಗಳನ್ನು ಇಟ್ಟಿದ್ದ ಕಾರಿನ ಗಾಜು ಒಡೆದ ಕಳ್ಳರು ಎಲ್ಲ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು. ದರೋಡೆಯಲ್ಲಿ ತಮ್ಮ ಪಾಸ್‌ಪೋರ್ಟ್, ನಗದು, ಕಾರ್ಡ್‌ಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಡಿದ್ದರು.

Exit mobile version