Site icon Vistara News

Gicchi Giligili: ಮದುವೆಗೆಂದು ಡೂಪ್ಲಿಕೆಟ್‌ ಆಧಾರ್‌ ಕಾರ್ಡ್‌ ಮಾಡ್ಸಿದ್ರಂತೆ ʻಗಿಚ್ಚಿ ಗಿಲಿಗಿಲಿʼ ವಿನ್ನರ್‌ ಚಂದ್ರಪ್ರಭ!

Gicchi Giligili Fame chandraprabha

ಬೆಂಗಳೂರು: ಮಜಾಭಾರತ, ಗಿಚ್ಚಿ ಗಿಲಿಗಿಲಿ ಶೋ (Gicchi Giligili) ಮೂಲಕ ಮನೆ ಮಾತಾದ ನಟ ಚಂದ್ರಪ್ರಭ (Chandraprabha) ಅವರು ಸದ್ದಿಲ್ಲದೇ ಹಸೆಮಣೆ ಏರಿದ್ದರು. ಮದುವೆಯ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ ಎಂದು ನೆಟ್ಟಿಗರು ಕಮೆಂಟ್‌ ಮೂಲಕ ಅಸಮಾಧಾನ ಹೊರಹಾಕಿದ್ದರು. ಇದೀಗ ವಿಸ್ತಾರ ನ್ಯೂಸ್‌ನಲ್ಲಿ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಒಂದು ತಮಾಷೆಯ ಸಂಗತಿಯನ್ನು ಹೇಳಿಕೊಂಡಿದ್ದಾರೆ. ಗಿಚ್ಚಿ ಗಿಲಿ ಗಿಲಿ ಸೀಸನ್‌ 2 ವಿನ್ನರ್‌ ಚಂದ್ರಪ್ರಭ ತಮ್ಮ ಮದುವೆ-ಸಾಂಸಾರಿಕ ಜೀವನದ ಕುರಿತು ಮಾತನಾಡುವಾಗ “ತಾವು ಫೇಕ್‌ ಆಧಾರ್‌ ಕಾರ್ಡ್‌ ಮಾಡಿದ್ದೆʼʼಎಂಬ ಸತ್ಯವನ್ನು ರಿವೀಲ್‌ ಮಾಡಿದ್ದಾರೆ.

ಚಂದ್ರಪ್ರಭ ಅವರು ಇದ್ದಕ್ಕಿದ್ದ ಹಾಗೇ ಸರಳವಾಗಿ ಆಪ್ತರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡರು. ಆದರೆ ತಮ್ಮ ಮದುವೆ ಬಗ್ಗೆ ಎಲ್ಲೂ ಕೂಡ ನಟ ಪೋಸ್ಟ್ ಹಾಕಿರಲಿಲ್ಲ. ಇದು ಲವ್‌ ಕಮ್‌ ಅರೇಂಜ್ ಮ್ಯಾರೇಜ್‌ ಎನ್ನುತ್ತಾರೆ ಚಂದ್ರಪ್ರಭ. ಚಂದ್ರಪ್ರಭ ಮದುವೆಯಾಗಿರುವ ಹುಡುಗಿ ಹೆಸರು ಭಾರತಿ ಪ್ರಿಯಾ ಎಂದು.

ಈ ಬಗ್ಗೆ ಚಂದ್ರಪ್ರಭ ಮಾತನಾಡಿ ʻಒಂದು ಡ್ಯಾನ್ಸ್‌ ವಿಡಿಯೊ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದೆ. ಅವಳು ನನಗೆ ಐ ಲೈಕ್‌ ಯು ಎಂದು ಹಾಕಿದ್ದಳು. ನನಗೆ ಐ ಲವ್‌ ಯು ಎಂದು ಕಂಡಿತು. ನಾನು ಅವಳ ಪ್ರೊಪೈಲ್‌ ಚೆಕ್‌ ಮಾಡಿ ಚೆನ್ನಾಗಿದ್ದಾಳಲ್ಲ ಹುಡುಗಿ ಎಂದು ʻಐ ಟು ಲವ್‌ ಯುʼ ಅಂತ ಹಾಕಿದೆ. ಹಾಗಾಗೇ ಲವ್‌ ಶುರು ಆಯ್ತು. ಅವಳು ಅಪ್ಪನಿಗೆ ನಮ್ಮಿಬ್ಬರ ಪ್ರೀತಿ ವಿಚಾರ ಹೇಳಿದಾಗ, ಹುಡುಗನಿಗೆ ವಯಸ್ಸಾಗಿದೆ ಬೇಡ ಎಂದು ಹೇಳಿದ್ರು. ಕೊನೆಗೆ ನಾನು ಆಧಾರ ಕಾರ್ಡ್‌ನ್ನು ಫೇಕ್‌ ಮಾಡಿ ಅವರ ತಂದೆಗೆ ಕೊಟ್ಟೆ. ಆದರೂ ಅವರಪ್ಪ ಡೌಟ್‌ ಇದೆ ಎಂದು ಅಂದಿದ್ದರು. ಹೇಗೇಗೊ ಮಾಡಿ ಒಪ್ಪಿಸಿ ಮದುವೆ ಆದೆ. ಈಗಲೂ ನನ್ನ ಹೆಂಡತಿಗೆ ಗೊತ್ತಿಲ್ಲದೇ ಹಾಗೇ ಆಧಾರ ಕಾರ್ಡ್‌ಅನ್ನು ಬಚ್ಚಿಟ್ಟಿದ್ದೇನೆʼʼ ಎಂದರು.

ಇದನ್ನೂ ಓದಿ: Gicchi Giligili: ಗಿಚ್ಚಿ-ಗಿಲಿಗಿಲಿ 2 ಗ್ರ್ಯಾಂಡ್ ಫಿನಾಲೆಯಲ್ಲಿ ಚಂದ್ರಪ್ರಭಾ ಮತ್ತೆ ಮದುವೆ!

ಚಂದ್ರಪ್ರಭ ಅವರು ಗಿಚ್ಚ ಗಿಲಿ ಗಿಲಿ ಬರುವ ಮುಂಚೆಯೇ ಸಿನಿಮಾದಲ್ಲಿ ನಟಿಸಿದ್ದರು. ಉಪೇಂದ್ರ ಅವರ ಐ ಲವ್‌ ಯು ಸಿನಿಮಾದಲ್ಲಿ ನಟಿಸಿದ್ದರು. ಉಪೇಂದ್ರ ಅವರ ಫ್ರೆಂಡ್‌ ಪಾತ್ರವನ್ನು ನಿಭಾಯಿಸಿದ್ದರು.

ಗಿಚ್ಚಿ ಗಿಲಿಗಿಲಿ ಸೀಸನ್ 2ರ ಗ್ರ್ಯಾಂಡ್ ಫಿನಾಲೆ ದಿನ ವೇದಿಕೆ ಮೇಲೆ ಮತ್ತೊಮ್ಮೆ ನವ ಜೋಡಿಗಳನ್ನು ಕರೆಸಿ ಮತ್ತೊಮ್ಮೆ ಮದುವೆ ಮಾಡಿಸಿ ನೂರಾರು ಕೋಟಿ ಜನರ ಆಶೀರ್ವಾದ ಪಡೆಯುವ ಅವಕಾಶ ಮಾಡಿಕೊಟ್ಟಿತ್ತು ಕಲರ್ಸ್‌ ಕನ್ನಡ. ʻʻನಾನು ಇಷ್ಟ ಪಟ್ಟಿರುವ ಹುಡುಗಿ ಎಂದು ಹೇಳಿಕೊಳ್ಳುವುದಕ್ಕಿಂತ ನನ್ನನ್ನು ಹೆಚ್ಚಿಗೆ ಇಷ್ಟ ಪಡುತ್ತಿರುವ ವ್ಯಕ್ತಿ ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ. ಅವಳಿಗೆ ಕಣ್ಣೀರು ಹಾಕಿಸದಂತೆ ನೋಡಿಕೊಳ್ಳಬೇಕು ಎನ್ನುವುದೇ ನನ್ನ ನನ್ನ ಆಸೆ’ ಎಂದು ಚಂದ್ರಪ್ರಭ ಹೇಳಿದ್ದರು.

Exit mobile version