ಕಿರುತೆರೆ
Gicchi Giligili: ಮದುವೆಗೆಂದು ಡೂಪ್ಲಿಕೆಟ್ ಆಧಾರ್ ಕಾರ್ಡ್ ಮಾಡ್ಸಿದ್ರಂತೆ ʻಗಿಚ್ಚಿ ಗಿಲಿಗಿಲಿʼ ವಿನ್ನರ್ ಚಂದ್ರಪ್ರಭ!
Gicchi Giligili: ಗಿಚ್ಚಿ ಗಿಲಿ ಗಿಲಿ ಸೀಸನ್ 2 ವಿನ್ನರ್ ಚಂದ್ರಪ್ರಭ ತಮ್ಮ ಮದುವೆ-ಸಾಂಸಾರಿಕ ಜೀವನದ ಕುರಿತು ಮಾತನಾಡುವಾಗ “ತಾವು ಫೇಕ್ ಆಧಾರ್ ಕಾರ್ಡ್ ಮಾಡಿದ್ದೆʼʼಎಂಬ ಸತ್ಯವನ್ನು ರಿವೀಲ್ ಮಾಡಿದ್ದಾರೆ.
ಬೆಂಗಳೂರು: ಮಜಾಭಾರತ, ಗಿಚ್ಚಿ ಗಿಲಿಗಿಲಿ ಶೋ (Gicchi Giligili) ಮೂಲಕ ಮನೆ ಮಾತಾದ ನಟ ಚಂದ್ರಪ್ರಭ (Chandraprabha) ಅವರು ಸದ್ದಿಲ್ಲದೇ ಹಸೆಮಣೆ ಏರಿದ್ದರು. ಮದುವೆಯ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ ಎಂದು ನೆಟ್ಟಿಗರು ಕಮೆಂಟ್ ಮೂಲಕ ಅಸಮಾಧಾನ ಹೊರಹಾಕಿದ್ದರು. ಇದೀಗ ವಿಸ್ತಾರ ನ್ಯೂಸ್‌ನಲ್ಲಿ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಒಂದು ತಮಾಷೆಯ ಸಂಗತಿಯನ್ನು ಹೇಳಿಕೊಂಡಿದ್ದಾರೆ. ಗಿಚ್ಚಿ ಗಿಲಿ ಗಿಲಿ ಸೀಸನ್ 2 ವಿನ್ನರ್ ಚಂದ್ರಪ್ರಭ ತಮ್ಮ ಮದುವೆ-ಸಾಂಸಾರಿಕ ಜೀವನದ ಕುರಿತು ಮಾತನಾಡುವಾಗ “ತಾವು ಫೇಕ್ ಆಧಾರ್ ಕಾರ್ಡ್ ಮಾಡಿದ್ದೆʼʼಎಂಬ ಸತ್ಯವನ್ನು ರಿವೀಲ್ ಮಾಡಿದ್ದಾರೆ.
ಚಂದ್ರಪ್ರಭ ಅವರು ಇದ್ದಕ್ಕಿದ್ದ ಹಾಗೇ ಸರಳವಾಗಿ ಆಪ್ತರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡರು. ಆದರೆ ತಮ್ಮ ಮದುವೆ ಬಗ್ಗೆ ಎಲ್ಲೂ ಕೂಡ ನಟ ಪೋಸ್ಟ್ ಹಾಕಿರಲಿಲ್ಲ. ಇದು ಲವ್ ಕಮ್ ಅರೇಂಜ್ ಮ್ಯಾರೇಜ್ ಎನ್ನುತ್ತಾರೆ ಚಂದ್ರಪ್ರಭ. ಚಂದ್ರಪ್ರಭ ಮದುವೆಯಾಗಿರುವ ಹುಡುಗಿ ಹೆಸರು ಭಾರತಿ ಪ್ರಿಯಾ ಎಂದು.
ಈ ಬಗ್ಗೆ ಚಂದ್ರಪ್ರಭ ಮಾತನಾಡಿ ʻಒಂದು ಡ್ಯಾನ್ಸ್ ವಿಡಿಯೊ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದೆ. ಅವಳು ನನಗೆ ಐ ಲೈಕ್ ಯು ಎಂದು ಹಾಕಿದ್ದಳು. ನನಗೆ ಐ ಲವ್ ಯು ಎಂದು ಕಂಡಿತು. ನಾನು ಅವಳ ಪ್ರೊಪೈಲ್ ಚೆಕ್ ಮಾಡಿ ಚೆನ್ನಾಗಿದ್ದಾಳಲ್ಲ ಹುಡುಗಿ ಎಂದು ʻಐ ಟು ಲವ್ ಯುʼ ಅಂತ ಹಾಕಿದೆ. ಹಾಗಾಗೇ ಲವ್ ಶುರು ಆಯ್ತು. ಅವಳು ಅಪ್ಪನಿಗೆ ನಮ್ಮಿಬ್ಬರ ಪ್ರೀತಿ ವಿಚಾರ ಹೇಳಿದಾಗ, ಹುಡುಗನಿಗೆ ವಯಸ್ಸಾಗಿದೆ ಬೇಡ ಎಂದು ಹೇಳಿದ್ರು. ಕೊನೆಗೆ ನಾನು ಆಧಾರ ಕಾರ್ಡ್‌ನ್ನು ಫೇಕ್ ಮಾಡಿ ಅವರ ತಂದೆಗೆ ಕೊಟ್ಟೆ. ಆದರೂ ಅವರಪ್ಪ ಡೌಟ್ ಇದೆ ಎಂದು ಅಂದಿದ್ದರು. ಹೇಗೇಗೊ ಮಾಡಿ ಒಪ್ಪಿಸಿ ಮದುವೆ ಆದೆ. ಈಗಲೂ ನನ್ನ ಹೆಂಡತಿಗೆ ಗೊತ್ತಿಲ್ಲದೇ ಹಾಗೇ ಆಧಾರ ಕಾರ್ಡ್‌ಅನ್ನು ಬಚ್ಚಿಟ್ಟಿದ್ದೇನೆʼʼ ಎಂದರು.
ಇದನ್ನೂ ಓದಿ: Gicchi Giligili: ಗಿಚ್ಚಿ-ಗಿಲಿಗಿಲಿ 2 ಗ್ರ್ಯಾಂಡ್ ಫಿನಾಲೆಯಲ್ಲಿ ಚಂದ್ರಪ್ರಭಾ ಮತ್ತೆ ಮದುವೆ!
ಚಂದ್ರಪ್ರಭ ಅವರು ಗಿಚ್ಚ ಗಿಲಿ ಗಿಲಿ ಬರುವ ಮುಂಚೆಯೇ ಸಿನಿಮಾದಲ್ಲಿ ನಟಿಸಿದ್ದರು. ಉಪೇಂದ್ರ ಅವರ ಐ ಲವ್ ಯು ಸಿನಿಮಾದಲ್ಲಿ ನಟಿಸಿದ್ದರು. ಉಪೇಂದ್ರ ಅವರ ಫ್ರೆಂಡ್ ಪಾತ್ರವನ್ನು ನಿಭಾಯಿಸಿದ್ದರು.
ಗಿಚ್ಚಿ ಗಿಲಿಗಿಲಿ ಸೀಸನ್ 2ರ ಗ್ರ್ಯಾಂಡ್ ಫಿನಾಲೆ ದಿನ ವೇದಿಕೆ ಮೇಲೆ ಮತ್ತೊಮ್ಮೆ ನವ ಜೋಡಿಗಳನ್ನು ಕರೆಸಿ ಮತ್ತೊಮ್ಮೆ ಮದುವೆ ಮಾಡಿಸಿ ನೂರಾರು ಕೋಟಿ ಜನರ ಆಶೀರ್ವಾದ ಪಡೆಯುವ ಅವಕಾಶ ಮಾಡಿಕೊಟ್ಟಿತ್ತು ಕಲರ್ಸ್ ಕನ್ನಡ. ʻʻನಾನು ಇಷ್ಟ ಪಟ್ಟಿರುವ ಹುಡುಗಿ ಎಂದು ಹೇಳಿಕೊಳ್ಳುವುದಕ್ಕಿಂತ ನನ್ನನ್ನು ಹೆಚ್ಚಿಗೆ ಇಷ್ಟ ಪಡುತ್ತಿರುವ ವ್ಯಕ್ತಿ ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ. ಅವಳಿಗೆ ಕಣ್ಣೀರು ಹಾಕಿಸದಂತೆ ನೋಡಿಕೊಳ್ಳಬೇಕು ಎನ್ನುವುದೇ ನನ್ನ ನನ್ನ ಆಸೆ’ ಎಂದು ಚಂದ್ರಪ್ರಭ ಹೇಳಿದ್ದರು.
ಅಂಕಣ
Raja Marga Column : ನಿಮ್ಮ ಮಕ್ಕಳನ್ನು ಸೂಪರ್ ಹೀರೊ ಮಾಡಲು ಹೋಗ್ಬೇಡಿ; ರಿಯಾಲಿಟಿ ಶೋಗಳಿಗೆ ಬೇಕು ಬ್ರೇಕ್!
Raja Marga Column : ಟಿವಿ ವಾಹಿನಿಗಳ ಮಕ್ಕಳ ರಿಯಾಲಿಟಿ ಶೋಗಳಿಗೆ ಸ್ವಲ್ಪ ಬ್ರೇಕ್ ಬೇಕಿದೆ! ಯಾಕೆಂದರೆ ಅವು ಮಕ್ಕಳ ಬಾಲ್ಯವನ್ನು ಕಸಿಯುತ್ತಿವೆ. ದುಡ್ಡಿನ ದಂಧೆಯಾಗುತ್ತಿವೆ. ಈ ಬಗ್ಗೆ ಎಚ್ಚರವಿರಲಿ.
ಪ್ರಣವ್ ಧನವಾಡೇ : ಈ ಹೆಸರನ್ನು ಎಲ್ಲೋ ಕೇಳಿದ ನೆನಪು ನಿಮಗಿದೆಯಾ?
ಹೌದು! 2016ರಲ್ಲಿ ಮುಂಬೈಯ ಈ 16 ವರ್ಷದ ಹುಡುಗ (Pranav Dhanawade) ಒಂದು ಕ್ಲಾಸ್ ಒನ್ ಕ್ರಿಕೆಟ್ ಪಂದ್ಯದಲ್ಲಿ ಬರೋಬ್ಬರಿ 1000+ ರನ್ ಬಾರಿಸಿ ಮಿಂಚಿದ್ದ! ಅವನಿಗೆ ಆ ದಿನಗಳಲ್ಲಿ ಜಾಗತಿಕ ಮಟ್ಟದ ಪ್ರಚಾರ ಸಿಕ್ಕಿತ್ತು. ಸಚಿನ್ ತೆಂಡುಲ್ಕರ್ (Sachin Tendulkar) ಜೊತೆಗೆ ಆತನ ಭರ್ಜರಿ ಹೋಲಿಕೆಯು ಕೂಡ ನಡೆಯಿತು.ನೂರಾರು ಸನ್ಮಾನಗಳು ಮತ್ತು ನಗದು ಬಹುಮಾನಗಳು ಆತನಿಗೆ ದೊರೆತವು!
ಆದರೆ ಅವನು ಅದೇ ವೇಗದಲ್ಲಿ ಮುಂದೆ ಹೋಗಿರುತ್ತಿದ್ದರೆ ಅವನಿಗೆ ಈಗ 23 ವರ್ಷ ಆಗಿರಬೇಕಿತ್ತು! ಅವನು ಕನಿಷ್ಠ ಪಕ್ಷ ರಣಜಿ ಪಂದ್ಯ ಆದರೂ ಆಡಬೇಕಿತ್ತು! ಆದರೆ ಅವನು ಈಗ ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಎನ್ನುವುದು ನಮಗೆ ಯಾರಿಗೂ ಗೊತ್ತಿಲ್ಲ! (Raja Marga Column)
ನಮ್ಮ ಹೆಚ್ಚಿನ ಟಿವಿ ರಿಯಾಲಿಟಿ ಶೋ (Reality Show) ಹೀರೋಗಳ ಕಥೆ ಕೂಡ ಹೀಗೆಯೇ ಇದೆ!
ಖಾಸಗಿ ಟಿವಿಯ ವಾಹಿನಿಗಳಲ್ಲಿ (Private TV Channels) ಇಂದು ಪ್ರಸಾರ ಆಗುತ್ತಿರುವ ನೂರಾರು ರಿಯಾಲಿಟಿ ಶೋಗಳು ಮತ್ತು ಸ್ಪರ್ಧೆಗಳು ಹೆಚ್ಚು ಪ್ರಚಾರದಲ್ಲಿವೆ. ಅಂತ ಹಲವು ಟಿವಿ ಶೋಗಳು ಹಿಂದೆ ಕೂಡ ನಡೆದಿವೆ. ಅದರ ಎಲ್ಲ ವಿಜೇತರ ಪ್ರತಿಭೆಯ ಮೇಲೆ ಗೌರವ ಇರಿಸಿಕೊಂಡು ನಾನು ಕೇಳುವ ಒಂದೇ ಪ್ರಶ್ನೆ — ಅದರ ಸಾವಿರಾರು ವಿಜೇತರು ಮುಂದೆ ಎಲ್ಲಿಗೆ ಹೋಗುತ್ತಾರೆ? ಅವರ ಅನನ್ಯ ಪ್ರತಿಭೆಗಳನ್ನು ಅವರು ಎಷ್ಟು ಬೆಳೆಸಿದ್ದಾರೆ? ಅದರಿಂದ ನಾಡಿನ ಸಂಸ್ಕೃತಿಗೆ ಎಷ್ಟು ಲಾಭ ಆಗಿದೆ?
ಶಾಲಾ ಮಟ್ಟದಲ್ಲಿ ನೂರಾರು ಸಾಂಸ್ಕೃತಿಕ ಸ್ಪರ್ಧೆಗಳು, ಪ್ರತಿಭಾ ಸ್ಪರ್ಧೆಗಳು ನಿರಂತರವಾಗಿ ನಡೆಯುತ್ತಿವೆ. ಅಲ್ಲಿ ವಿಜೇತರ ಘೋಷಣೆ ಆಗುತ್ತದೆ. ಅದರಲ್ಲಿ ಎಷ್ಟು ಜನರು ಮುಂದೆ ಅವರ ಪ್ರತಿಭೆಯನ್ನು ತಮ್ಮ ಹೊಟ್ಟೆಪಾಡಾಗಿ ಮಾಡಿಕೊಳ್ಳುತ್ತಾರೆ? ಎಷ್ಟು ಮಂದಿ ತಮ್ಮ ಕಲೆಯನ್ನು ಪ್ರೀತಿಸುತ್ತಾರೆ? ತಮ್ಮ ಕಲೆಯಿಂದ ಸಮಾಜವನ್ನು ಬೆಳಗುತ್ತಾರೆ? ಕನಿಷ್ಠ ಪಕ್ಷ ಆತ್ಮ ಸಂತೋಷಕ್ಕಾಗಿ ಆದರೂ ಆ ಕಲೆಯನ್ನು ಮುಂದೆ ಕಲಿಯುತ್ತಾರಾ?
ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೋದಾಗ ನಮಗೆ ಹಲವು ಕಡೆ ನಿರಾಸೆಯೇ ಆಗುತ್ತದೆ ಮತ್ತು ಕಹಿ ಸತ್ಯಗಳು ಗೋಚರ ಆಗುತ್ತವೆ.
ಹಾಗಾದರೆ ಟಿವಿ ವಾಹಿನಿಗಳಿಂದ, ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಿಂದ ಪ್ರತಿಭಾ ಶೋಧ ಆಗ್ತಾ ಇಲ್ಲವೇ ಎನ್ನುವ ಪ್ರಶ್ನೆ ನೀವು ಕೇಳಬಹುದು. ಖಂಡಿತ ಆಗುತ್ತಿದೆ! ಆದರೆ ಅದರ ಅಡ್ಡ ಪರಿಣಾಮಗಳ ಬಗ್ಗೆ ಇದುವರೆಗೆ ಯಾರೂ ಯೋಚನೆ ಮಾಡಿದ ಹಾಗಿಲ್ಲ.
ಉದಾಹರಣೆಗೆ ಇಂದು ಬಾಲಿವುಡನ ಹಿನ್ನೆಲೆ ಗಾಯನ ಲೋಕದ ಸೂಪರ್ ಸ್ಟಾರ್‌ಗಳಾದ ಸುನಿಧಿ ಚೌಹಾಣ್, ಶ್ರೇಯಾ ಘೋಷಾಲ್, ಸೋನು ನಿಗಮ್ ಇವರೆಲ್ಲರೂ ಬೇರೆ ಬೇರೆ ರಿಯಾಲಿಟಿ ಶೋಗಳ ಮೂಲಕ ಬೆಳಕಿಗೆ ಬಂದವರು. ಕನ್ನಡದಲ್ಲಿಯೂ ಅಂತವರು ತುಂಬಾ ಮಂದಿ ಇದ್ದಾರೆ. ಆದರೆ ಅವರಲ್ಲಿ ಹೆಚ್ಚಿನ ಸ್ಟಾರ್‌ಗಳು ಒಳ್ಳೆಯ ನಿರ್ಣಾಯಕರ ಮೂಲಕ ಆಯ್ಕೆ ಆದವರು. ಇನ್ನೂ ವಿವರವಾಗಿ ಹೇಳಬೇಕೆಂದರೆ ಸುನಿಧಿ ಚೌಹಾಣ್, ಶ್ರೇಯಾ ಘೋಷಾಲ್, ಸೋನು ನಿಗಮ್ ಆಯ್ಕೆ ಆಗುವಾಗ ಲತಾ ಮಂಗೇಶ್ಕರ್ ಅಂತವರು ನಿರ್ಣಾಯಕರಾಗಿದ್ದರು!
ಪ್ರತಿಭೆಗಳಿಗೆ ಆಗ ಒಂದಿಷ್ಟೂ ಅನ್ಯಾಯ ಆಗುತ್ತಾ ಇರಲಿಲ್ಲ.
ಅಪಾಯಕಾರಿ ಆದ ಇಂಟರ್ನೆಟ್ ವೋಟಿಂಗ್!
ಆದರೆ ಮುಂದೆ ಯಾವಾಗ ಇಂಟರ್ನೆಟ್ ಮೆಸೇಜ್‌ಗಳ ಮೂಲಕ ವೋಟಿಂಗ್ ಆರಂಭ ಆಯಿತೋ ಅಲ್ಲಿಗೆ ದುಡ್ಡು, ಪ್ರಭಾವ ಇದ್ದವರು ವೋಟುಗಳನ್ನು ಖರೀದಿ ಮಾಡುವುದು ಆರಂಭ ಆಯಿತು. ನಮಗೆ ವೋಟ್ ಮಾಡಿ ಎಂದು ಕೈ ಮುಗಿದು ಭಿಕ್ಷೆ ಬೇಡುವ ದೈನ್ಯತೆಯು ಆ ಪ್ರತಿಭೆಗಳಿಗೆ ಬರಬಾರದಿತ್ತು.
ಕನ್ನಡದಲ್ಲಿ ಕೂಡ ಆರಂಭದ ಎದೆ ತುಂಬಿ ಹಾಡುವೆನು, ಕಾಮಿಡಿ ಕಿಲಾಡಿ, ಮಜಾ ಟಾಕೀಸ್, ಡ್ರಾಮಾ ಜೂನಿಯರ್ ರಿಯಾಲಿಟಿ ಶೋನಲ್ಲಿ ಗೆದ್ದವರು ಮುಂದೆ ನೂರಾರು ಅವಕಾಶಗಳನ್ನು ಪಡೆದರು. ಅವರ ಪ್ರತಿಭೆಯನ್ನು ನಾಡು ಗುರುತಿಸಿ ಬೆಳೆಸಿತು.
ಆದರೆ ಇಲ್ಲಿ ಕೂಡ ಇತ್ತೀಚಿನ ವರ್ಷಗಳಲ್ಲಿ ಯಾವಾಗ ಇಂಟರ್ನೆಟ್ ವೋಟಿಂಗ್ ಆರಂಭ ಆಯಿತೋ ಅಲ್ಲಿಂದ ವೋಟ್ ಖರೀದಿಗಳು, ಪ್ರಭಾವಗಳು ಆರಂಭ ಆದವು. ಆ ಸ್ಪರ್ಧೆಗಳಲ್ಲಿ ಭಾಗವಹಿಸುವ ಮಕ್ಕಳಿಗೆ ತರಬೇತು ಕೊಡುವ ಹಲವು ಶಾಲೆಗಳು ಮಹಾನಗರಗಳಲ್ಲಿ ನಾಯಿಕೊಡೆಗಳ ಹಾಗೆ ಆರಂಭ ಆದವು. ಹೆತ್ತವರು ತಮ್ಮ ಮಕ್ಕಳನ್ನು ಸೂಪರ್ ಹೀರೋ ಮಾಡುವ ಜಿದ್ದಿಗೆ ಬಿದ್ದು ಅಂತಹ ಶಾಲೆಗಳಿಗೆ ದುಡ್ಡು ಸುರಿಯಲು ತೊಡಗಿದರು.
ಆದರೆ ಇಲ್ಲಿ ಕೂಡ ಬಡವರ ಮಕ್ಕಳು, ಗ್ರಾಮಾಂತರ ಭಾಗದ ಪ್ರತಿಭೆಗಳು ನಿಜವಾಗಿಯೂ ಅವಕಾಶಗಳಿಂದ ವಂಚಿತರಾದರು!
ಒಂದು ಸಮೀಕ್ಷೆ ಮಾಡಿ ನೋಡಿ. ಇತ್ತೀಚಿನ ರಿಯಾಲಿಟಿ ಶೋಗಳಲ್ಲಿ ಗೆದ್ದವರಲ್ಲಿ ಎಷ್ಟು ಮಂದಿ ಹಳ್ಳಿಯ ಮಕ್ಕಳು ಇದ್ದಾರೆ? ಎಷ್ಟು ಮಂದಿ ಬಡವರ ಮಕ್ಕಳಿದ್ದಾರೆ? ಎಷ್ಟು ಮಂದಿ ಕನ್ನಡ ಮಾಧ್ಯಮದ ಮಕ್ಕಳಿದ್ದಾರೆ?
ಖಂಡಿತ ಇದ್ದಾರೆ. ಆದರೆ ಅವರ ಪ್ರಮಾಣ ತುಂಬಾ ಕಡಿಮೆ ಇದೆ!
ಜಗತ್ತಿನ ಪ್ರತೀ ಮಗುವೂ ಪ್ರತಿಭಾವಂತ ಮಗುವೇ!
ಈ ಜಗತ್ತಿನ ಪ್ರತೀ ಮಕ್ಕಳೂ ಪ್ರತಿಭಾವಂತರೇ ಆಗಿದ್ದಾರೆ. ಅವರಲ್ಲಿ ಒಂದಲ್ಲ ಒಂದು ಪ್ರತಿಭೆಯನ್ನು ಲೋಡ್ ಮಾಡಿ ಭಗವಂತ ಈ ಜಗತ್ತಿಗೆ ಅವರನ್ನು ಕಳುಹಿಸಿರುತ್ತಾನೆ. ನೀವು ಯಾವ ಮಕ್ಕಳನ್ನು ವಿಶೇಷ ಚೇತನ ಮಕ್ಕಳು ಎಂದು ಕರೆಯುತ್ತೀರೋ ಅವರಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಆ ಪ್ರತಿಭೆಯ ಪೋಷಣೆಗೆ ವೇದಿಕೆ ಬೇಕು. ತರಬೇತು ಬೇಕು. ಹೆತ್ತವರ, ಶಿಕ್ಷಕರ, ಸಮಾಜದ ಪ್ರೋತ್ಸಾಹ ಬೇಕು.
ಅವರ ಶಾಪ ಆದರೆ ನಮ್ಮ ಮಕ್ಕಳು ಎಷ್ಟು ಪ್ರತಿಭೆ ಹೊಂದಿದ್ದಾರೆ ಎಂದರೆ ಅವರು ಸ್ಪರ್ಧೆಯ ಸೋಂಕಿಲ್ಲದೆ ಕೂಡ ತಮ್ಮ ಅಗಾಧವಾದ ಪ್ರತಿಭೆಯನ್ನು ಬೆಳೆಸುವ ಸಾಮರ್ಥ್ಯವನ್ನು ಖಂಡಿತವಾಗಿ ಹೊಂದಿರುತ್ತಾರೆ! ಅವರನ್ನು ರೇಸಿನ ಕುದುರೆ ಮಾಡಿ ರೇಸಿಗೆ ನಿಲ್ಲಿಸುವ ಅಗತ್ಯ ಖಂಡಿತ ಇಲ್ಲ!
ಸ್ಪರ್ಧೆಗಳ ಬಗ್ಗೆ ಸಾಹಿತಿ ಶಿವರಾಮ ಕಾರಂತರು ಹೇಳಿದ್ದೇನು?
ಖ್ಯಾತ ಸಾಹಿತಿ ಮತ್ತು ಶಿಕ್ಷಣ ತಜ್ಞರಾದ ಕೋಟ ಶಿವರಾಮ ಕಾರಂತರು ಚಿಕ್ಕ ಮಕ್ಕಳನ್ನು ಸ್ಪರ್ಧೆಗೆ ನಿಲ್ಲಿಸಬೇಡಿ ಎಂದು ಹೇಳುತ್ತಿದ್ದರು. 12 ವರ್ಷಗಳವರೆಗೆ ಮಕ್ಕಳಿಗೆ ಯಾವ ಸ್ಪರ್ಧೆಯನ್ನು ಕೂಡ ಮಾಡಬಾರದು ಎನ್ನುವುದು ಅವರ ಖಚಿತ ಅಭಿಪ್ರಾಯ. ಸ್ಪರ್ಧೆ ಮಾಡಿದರೂ ಎಲ್ಲ ಮಕ್ಕಳಿಗೂ ಸಮಾನ ಬಹುಮಾನ ಕೊಡಿ ಎನ್ನುತ್ತಿದ್ದರು ಕಾರಂತರು.
ಆದರೆ ಇಂದು ಆಗುತ್ತಿರುವುದೆನು?
ಆದರೆ ಸ್ಪರ್ಧೆಯ ಗೆಲುವನ್ನು ತಮ್ಮ ಪ್ರತಿಷ್ಠೆಯನ್ನಾಗಿ ಮಾಡಿಕೊಂಡ ಶಿಕ್ಷಕರು ಮತ್ತು ಹೆತ್ತವರು ಮಕ್ಕಳನ್ನು ರೇಸಿನ ಕುದುರೆ ಮಾಡಿ ಈಗಾಗಲೇ ನಿಲ್ಲಿಸಿ ಆಗಿದೆ! ಈ ಸ್ಪರ್ಧೆಯಲ್ಲಿ ಸೋತವರ ಕಣ್ಣೀರನ್ನು ಮತ್ತು ಗೆದ್ದು ಬೀಗಿದವರ ಆನಂದ ಬಾಷ್ಪವನ್ನು ತಮ್ಮ ಟಿ ಆರ್ ಪಿ ಸರಕನ್ನಾಗಿ ಮಾಡಿಕೊಂಡ ಟಿವಿ ವಾಹಿನಿಗಳಿಗೆ ಈ ಸ್ಪರ್ಧೆಗಳು ಬೇಕೇ ಬೇಕು! ಮಕ್ಕಳ ಗೆಲುವನ್ನು ತಮ್ಮ ಪ್ರತಿಷ್ಠೆ ಎಂದು ಭಾವಿಸುವ ಹೆತ್ತವರು ಇರುವವರೆಗೆ ಈ ಮಕ್ಕಳ ರಿಯಾಲಿಟಿ ಶೋಗಳು ಖಂಡಿತ ನಿಲ್ಲುವುದಿಲ್ಲ. ಈ ಸ್ಪರ್ಧೆಗಳು ಮೆಗಾ ಮನರಂಜನೆಯ ಭಾಗ ಎಂದು ಪರಿಗಣಿಸುವ ವೀಕ್ಷಕರು ಕೂಡ ರಿಯಾಲಿಟಿ ಶೋ ಬೇಕು ಅಂತಾರೆ!
ತಮ್ಮ ಮಕ್ಕಳನ್ನು ಸೂಪರ್ ಹೀರೋ ಅಥವ ಸೂಪರ್ ಹೀರೋಯಿನ್ ಮಾಡಲು ಹೊರಟ ಹೆತ್ತವರು ಮಕ್ಕಳ ಬಾಲ್ಯವನ್ನು ಬರಿದು ಮಾಡುತ್ತಿದ್ದಾರೆ. ತಮ್ಮ ಮಕ್ಕಳು ಒಮ್ಮೆ ಟಿವಿಯಲ್ಲಿ ಕಂಡರೆ ಸಾಕು ಎಂದು ತೆವಲಿಗೆ ಪೋಷಕರು ಬಿದ್ದಿರುವ ಈ ದಿನಗಳಲ್ಲಿ ಅವರು ಬುದ್ಧಿ ಕಲಿಯುವುದು ಯಾವಾಗ?
ಇಲ್ಲೊಬ್ಬರು ತಾಯಿ ತನ್ನ ಎರಡನೇ ಕ್ಲಾಸಿನ ಮುಗ್ಧವಾದ ಮಗಳನ್ನು ದಿನವೂ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಲಘು ಸಂಗೀತ, ಕರಾಟೆ, ಚೆಸ್, ಕ್ರಿಕೆಟ್, ಯಕ್ಷಗಾನ, ಬ್ಯಾಡ್ಮಿಂಟನ್, ಸ್ವಿಮ್ಮಿಂಗ್ ಕೋಚಿಂಗ್ ಎಂದೆಲ್ಲ ಉಸಿರು ಬಿಗಿ ಹಿಡಿದು ಓಡುತ್ತಿರುವಾಗ ಆ ಮುಗ್ಧ ಮಗುವಿನ ಮೇಲಾಗುತ್ತಿರುವ ಒತ್ತಡವನ್ನು ನನಗೆ ಊಹೆ ಮಾಡಲು ಕಷ್ಟ ಆಗುತ್ತಾ ಇದೆ! ಯಾವುದೇ ಕಲಿಕೆಯು ಮಕ್ಕಳಿಗೆ ಹೊರೆ ಆಗಬಾರದು ಎಂಬ ಸಾಮಾನ್ಯ ಪ್ರಜ್ಞೆಯು ಅಂತಹ ಹೆತ್ತವರಿಗೆ ಬೇಡವಾ?
ಇದನ್ನೂ ಓದಿ: Raja Marga Column : ನೀವು ಜ್ಯೂಲಿ ನೋಡಿದ್ದೀರಾ? ಇದು KGFಗೂ ಮೊದಲು ಬಾಲಿವುಡ್‌ನ ಅಹಂ ಮುರಿದ ಸಿನಿಮಾ
ಡ್ಯಾಡಿ ನಂಬರ್ ಒನ್, ಮಮ್ಮಿ ನಂಬರ್ ಒನ್ ಮೊದಲಾದ ನಾನಸೆನ್ಸ್ ಸ್ಪರ್ಧೆಯ ಮೂಲಕ ಅಪ್ಪ, ಅಮ್ಮನ ಪ್ರೀತಿಯು ಅಳೆಯಲ್ಪಡಬೇಕಾ?
ನನ್ನ ಸಲಹೆ ಏನೆಂದರೆ ಮುಂದಿನ ಕೆಲವು ವರ್ಷಗಳ ಕಾಲ ಎಲ್ಲ ಟಿವಿ ವಾಹಿನಿಗಳ ಸ್ಪರ್ಧಾತ್ಮಕವಾದ ರಿಯಾಲಿಟಿ ಶೋಗಳನ್ನು ನಿಲ್ಲಿಸುವುದು ಒಳ್ಳೆಯದು! ಅಥವಾ ಅವುಗಳಿಗೆ ಒಂದು ಸಣ್ಣ ಬ್ರೇಕ್ ಆದರೂ ಬೇಕು. ವರ್ಷಾನುಗಟ್ಟಲೆ ಈ ಸ್ಪರ್ಧೆಗಳು ಮುಂದುವರಿದರೆ ಆ ಮಕ್ಕಳ ಶಿಕ್ಷಣದ ಮೇಲೆ ಆಗುವ ಕರಾಳತೆಯ ಬಗ್ಗೆ ಕೂಡ ನಾವು ಯೋಚನೆ ಮಾಡಬೇಕು ಅಲ್ಲವೇ?
ರಿಯಾಲಿಟಿ ಶೋಗಳ ಹಂಗಿಲ್ಲದೆ ಇಂದು ಸ್ಟಾರ್ ಆಗಿ ಮಿಂಚುತ್ತಿರುವ ನೂರಾರು ಪ್ರತಿಭೆಗಳು ನನ್ನ ಪಟ್ಟಿಯಲ್ಲಿ ಇವೆ. ಅವರೆಲ್ಲರಿಗೂ ನನ್ನ ಅಭಿನಂದನೆಗಳು.
ಕಿರುತೆರೆ
Actress Padmini: ಆಟೋ ಚಾರ್ಜ್ ಕೊಡದೆ ಚಾಲಕನ ಜತೆ ʻಪುನರ್ ವಿವಾಹʼ ಧಾರಾವಾಹಿ ನಟಿ ಪದ್ಮಿನಿ ಕಿರಿಕ್!
Actress Padmini: ಮಲ್ಲೇಶ್ವರದ ಮಾರ್ಗೋಸ ರಸ್ತೆಯಿಂದ ಬನಶಂಕರಿಗೆ ಆಟೋ ಬುಕ್ ಮಾಡಿದ್ದ ನಟಿ ಪದ್ಮಿನಿ ಅವರು, ಬನಶಂಕರಿ ಬಳಿ ಚಾಲಕ ಕುಲ್ದೀಪ್ ಜತೆ ಜಗಳವಾಡಿ ಬೇರೆ ಆಟೊ ಹತ್ತಿದ್ದಾರೆ.
ಬೆಂಗಳೂರು; `ಪುನರ್ ವಿವಾಹ’ ಧಾರಾವಾಹಿ ನಟಿ ಪದ್ಮಿನಿ (Actress Padmini) ಆಟೋ ಚಾಕನೊಂದಿಗೆ ಗಲಾಟೆ ಮಾಡಿಕೊಂಡು ಹಣ ನೀಡದೇ ಅರ್ಧ ದಾರಿಯಲ್ಲಿ ಇಳಿದು ಹೋಗಿ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಆಟೋ ಡ್ರೈವರ್ ವಿಡಿಯೊ ಕೂಡ ಮಾಡಿಕೊಂಡಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಟಿಯ ಈ ನಡವಳಿಕೆಗೆ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ಮಲ್ಲೇಶ್ವರದ ಮಾರ್ಗೋಸ ರಸ್ತೆಯಿಂದ ಬನಶಂಕರಿಗೆ ಆಟೋ ಬುಕ್ ಮಾಡಿದ್ದ ಪದ್ಮಿನಿ ಅವರು, ಬನಶಂಕರಿ ಬಳಿ ತಲುಪಿದ ಬಳಿಕ ಚಾಲಕ ಕುಲ್ದೀಪ್ ಬಳಿ ಕಿರಿಕ್ ಮಾಡಿಕೊಂಡಿದ್ದಾರೆ. ಅನವಶ್ಯಕ ವಾಗ್ವಾದ ಮಾಡಿದ್ದಲ್ಲದೆ, ಆಟೋ ಶುಲ್ಕ 437 ರೂಪಾಯಿ ನೀಡದೆ ಹೋಗಿದ್ದಾರೆ. ಆಟೋದಲ್ಲಿ ಬನಶಂಕರಿಗೆ ಹೋಗುವಾಗ ದಾರಿಯಲ್ಲಿ ತುಸು ಟ್ರಾಫಿಕ್ ಎದುರಾಗಿದೆ. ಇದರಿಂದ ಬೇರೆ ದಾರಿಯಲ್ಲಿ ಹೋಗಬೇಕಿತ್ತು ಎಂದು ನಟಿ ಆಟೋ ಚಾಲಕನ ಜತೆ ವಾಗ್ವಾದಕ್ಕೆ ಇಳಿದು ಬೇರೆ ಆಟೋ ಹತ್ತಿದ್ದಾರೆ.
ಇದನ್ನೂ ಓದಿ: Sathya Serial Kannada: ಸತ್ಯ ಧಾರಾವಾಹಿ ಖ್ಯಾತಿಯ ರಕ್ಷಿತಾ ʻಎದೆ ತುಂಬಿ ಹಾಡುವೆನುʼ ವಿನ್ನರ್!
ಆಟೋ ಚಾರ್ಜ್ ಕೊಡದೇ ಗಲಾಟೆ ಮಾಡಿಕೊಂಡು ಪುನರ್ ವಿವಾಹ ಖ್ಯಾತಿಯ ನಟಿ ಪದ್ಮಿನಿ ಕಾಲ್ಕಿತ್ತಿದ್ದಾರೆ.
— Vistara News (@VistaraNews) September 24, 2023
ಕಿರಿಕ್.. ಗಲಾಟೆ.. ನಟಿ ಪದ್ಮಿನಿ ಪರಾರಿ! | Kannada serial actress padmini news | Vistara news
#vistaranews #actresspadmini pic.twitter.com/HEqvCbElzD
ಆಟೋ ಚಾಲಕನಿಗೆ ನಟಿ 437 ರೂಪಾಯಿಯನ್ನು ನೀಡಬೇಕಿತ್ತು. ಚಾಲಕ ಕೇಳಿದ್ದಕ್ಕೆ ನಟಿ ಕೂಗಾಡಿದ್ದು, ಆಟೋ ಚಾಲಕನ ವಿರುದ್ಧ ಊಬರ್ನಲ್ಲಿ ದೂರು ದಾಖಲಿಸಿದ್ದಾರೆ. ಚಾಲಕ ಕುಲ್ದೀಪ್ 437 ರೂಪಾಯಿ ಲಾಸ್ ಮಾಡಿಕೊಂಡಿದ್ದು ಅಲ್ಲದೇ ದುರ್ನಡತೆ ಆರೋಪದ ಮೇಲೆ ಉಬರ್‌ನವರು ತಾತ್ಕಾಲಿಕವಾಗಿ ಅವರ ಕರ್ತವ್ಯಕ್ಕೆ ನಿರ್ಬಂಧ ಹಾಕಿದ್ದಾರೆ. ಇದೀಗ ಈ ವಿಡಿಯೊ ವೈರಲ್ ಆಗಿದ್ದು, ನಟಿಯ ಈ ವರ್ತನೆಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.
ಕಿರುತೆರೆ
Brindavana Serial Kannada: ಅಪರೂಪದ ಕತೆಯೊಂದಿಗೆ ʻಕನ್ನಡತಿ’ ಅಮ್ಮಮ್ಮ; ʻಬೃಂದಾವನʼಕ್ಕೆ ಯೋಗರಾಜ್ ಭಟ್ ಸಾಥ್!
Brindavana Serial Kannada: ‘ಪುಟ್ಟಗೌರಿ ಮದುವೆ’, ‘ಮಂಗಳಗೌರಿ ಮದುವೆ’, ‘ರಂಗನಾಯಕಿ’, ‘ನಾಗಿಣಿ- 2’, ‘ಗೀತಾ’, ‘ರಾಣಿ’ ಮುಂತಾದ ಧಾರಾವಾಹಿಗಳನ್ನು ನಿರ್ದೇಶಿಸಿರುವ ಕೆ. ಎಸ್ ರಾಮ್ ಜೀ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.
ಬೆಂಗಳೂರು: ಬಿಗ್ ಬಾಸ್ ಪ್ರಸಾರದ ಅನೌನ್ಸ್ ಬೆನ್ನಲ್ಲೇ ಕಲರ್ಸ್ ಕನ್ನಡ ಮತ್ತೊಮ್ಮೆ ಸಿಹಿ ಸುದ್ದಿಯನ್ನು ಹೊತ್ತು ತಂದಿದೆ. ಅಷ್ಟೇ ಅಲ್ಲದೇ ‘ಕನ್ನಡತಿ’ ಧಾರಾವಾಹಿ ಮೂಲಕ ಅಮ್ಮಮ್ಮ ಎಂದೇ ಖ್ಯಾತಿ ಪಡೆದ ಚಿತ್ಕಲಾ ಬಿರಾದಾರ್ (Chitkala Biradar) ಅವರು ಮತ್ತೊಮ್ಮೆ ಕಿರುತೆರೆಯಲ್ಲಿ ಮಿಂಚಲು ರೆಡಿ ಆಗಿದ್ದಾರೆ. ‘ಪುಟ್ಟಗೌರಿ ಮದುವೆ’, ‘ಮಂಗಳಗೌರಿ ಮದುವೆ’, ‘ರಂಗನಾಯಕಿ’, ‘ನಾಗಿಣಿ- 2’, ‘ಗೀತಾ’, ‘ರಾಣಿ’ ಮುಂತಾದ ಧಾರಾವಾಹಿಗಳನ್ನು ನಿರ್ದೇಶಿಸಿರುವ ಕೆ. ಎಸ್ ರಾಮ್ ಜೀ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಮತ್ತೆ ಬೃಂದಾವನ(Brundavana Serial Kannada) ಧಾರಾವಾಹಿ ಮೂಲಕ ಹೊಸ ಕತೆಯನ್ನು ಹೊತ್ತು ತರುತ್ತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿ ಬೃಂದಾವನ ಧಾರಾವಾಹಿಯ ಪ್ರೋಮೊ ಹಂಚಿಕೊಂಡಿದೆ. ಪ್ರೋಮೊದಲ್ಲಿ ಅಮ್ಮಮ್ಮ ಪ್ರಮುಖ ಹೈಲೈಟ್. ಈ ಪ್ರೋಮೊದಲ್ಲಿ ಕೂಡು ಕುಟುಂಬದ ಕಥೆ ಎದ್ದು ಕಾಣುತ್ತಿದೆ. ಈ ಕುಟುಂಬದಲ್ಲಿ 36 ಜನ ಇದ್ದಾರೆ. ಯೋಗರಾಜ್ ಭಟ್ ಧ್ವನಿಯಲ್ಲಿ ಪ್ರೋಮೊ ಮೂಡಿ ಬಂದಿದೆ. ಮೊಮ್ಮೊಗನಿಗೆ ಮದುವೆ ಮಾಡಬೇಕು ಎನ್ನುವುದು ಸುಧಾ ಮೂರ್ತಿ (ಚಿತ್ಕಲಾ ಬಿರಾದಾರ್) ಆಸೆ. ಆದರೆ, ಮನೆಯಲ್ಲಿರುವ ಎಲ್ಲರ ಒಪ್ಪಿಗೆ ಇದಕ್ಕೆ ಸಿಗಬೇಕು. ಸದ್ಯ ಧಾರಾವಾಹಿ ಪ್ರೋಮೊ ಗಮನ ಸೆಳೆಯುತ್ತಿದೆ. ನೋಡುಗರು ʻʻಬೃಂದಾವನ ಹೆಸರು ಕೇಳಿದಾಗಲೇ ಗೊತ್ತಿತ್ತು. ಇದು ಕೂಡು ಕುಟುಂಬ ಅಂತ. ಆದರೆ ಇಷ್ಟೊಂದು ದೊಡ್ಡ ಕುಟುಂಬ ಅಂತ ಗೊತ್ತಿರಲಿಲ್ಲ. ಪ್ರೋಮೊ ಮಾತ್ರ ಯಾವ ಸಿನಿಮಾ ಟೀಸರ್‌ಗೂ ಕಡಿಮೆ ಇಲ್ಲʼʼಎಂದು ಕಮೆಂಟ್ ಮಾಡಿದ್ದಾರೆ.
ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಗೀತಾ’ ಮತ್ತು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ರಾಣಿ’ ಧಾರಾವಾಹಿಯನ್ನು ರಾಮ್ ಜೀ ನಿರ್ದೇಶಿಸುತ್ತಿದ್ದಾರೆ. ಮೂಲಗಳ ಪ್ರಕಾರ ‘ಗೀತಾ’ ಧಾರಾವಾಹಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಈ ಧಾರಾವಾಹಿ ಮುಗಿದ ಬಳಿಕ ‘ಬೃಂದಾವನ’ ಆರಂಭ ಆಗಲಿದೆ ಎನ್ನಲಾಗುತ್ತಿದೆ. ಪ್ರೋಮೊ ಕಂಡವರು ʻಕನ್ನಡತಿ’ ಧಾರಾವಾಹಿಯ ಅಮ್ಮಮ್ಮ ಅವರನ್ನು ಕಂಡು ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ‘ಬೃಂದಾವನ’ ಧಾರಾವಾಹಿಯಲ್ಲಿ ಹೊಸ ರೀತಿಯ ಪಾತ್ರದ ಮೂಲಕ ಮತ್ತೆ ಬಂದಿದ್ದಾರೆ.
ಇದನ್ನೂ ಓದಿ: Kannada Serials TRP: ʻಅಮೃತಧಾರೆʼ ಬೀಟ್ ಮಾಡಿದ ʻಗಟ್ಟಿಮೇಳʼ; ಟಿಆರ್‌ಪಿ ರೇಸ್‌ನಲ್ಲಿ ʻಶ್ರೀರಸ್ತು ಶುಭಮಸ್ತುʼ!
‘ರಾಮಾಚಾರಿ’ ಸೇರಿ ಹಲವು ಧಾರಾವಾಹಿಗಳು ಇನ್ನು ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದು, ಇವುಗಳ ಜತೆಗೆ ಈಗ ‘ಬೃಂದಾವನ’ ಧಾರಾವಾಹಿ ಕೂಡ ಪ್ರಸಾರ ಕಾಣಲಿದೆ. ಈ ಧಾರಾವಾಹಿ ಸಂಜೆ 7 ಗಂಟೆ ಸ್ಲಾಟ್‌ಗೆ ಬಿಗ್ ಬಾಸ್ – ಸೀಸನ್ 10 ಮುಗಿದ ಬಳಿಕ ಪ್ರಸಾರವಾಗಲಿದೆ ಎಂದು ವರದಿಯಾಗಿದೆ.
ಕಿರುತೆರೆ
Kannada Serials TRP: ʻಅಮೃತಧಾರೆʼ ಬೀಟ್ ಮಾಡಿದ ʻಗಟ್ಟಿಮೇಳʼ; ಟಿಆರ್‌ಪಿ ರೇಸ್‌ನಲ್ಲಿ ʻಶ್ರೀರಸ್ತು ಶುಭಮಸ್ತುʼ!
ʻಸೀತಾ ರಾಮ’ ಧಾರಾವಾಹಿ (Kannada Serials TRP) ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಗೆ ದಿನೇದಿನೆ ಹೆಚ್ಚು ಪೈಪೋಟಿ ನೀಡಲು ಶುರು ಮಾಡಿದೆ. ಈ ವಾರದ ಟ ಆರ್‌ಪಿ ಡಿಟೇಲ್ಸ್ ಇಲ್ಲಿದೆ.
ಬೆಂಗಳೂರು: ‘ಪುಟ್ಟಕ್ಕನ ಮಕ್ಕಳು’ (Puttakkana Makkalu Serial) ಧಾರಾವಾಹಿಯು ಟಿಆರ್‌ಪಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಹಲವು ಧಾರಾವಾಹಿಗಳ ಟಿಆರ್‌ಪಿಯಲ್ಲಿ ಬದಲಾವಣೆ ಆಗಿದೆ. ʻಸೀತಾ ರಾಮ’ ಧಾರಾವಾಹಿ (Kannada Serials TRP) ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಗೆ ದಿನೇದಿನೆ ಹೆಚ್ಚು ಪೈಪೋಟಿ ನೀಡಲು ಶುರು ಮಾಡಿದೆ. ಈ ವಾರದ ಟ ಆರ್‌ಪಿ ಡಿಟೇಲ್ಸ್ ಇಲ್ಲಿದೆ.
ಪುಟ್ಟಕ್ಕನ ಮಕ್ಕಳು
ಉಮಾಶ್ರೀ ನಟನೆಯ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನವನ್ನು ಉಳಿಸಿಕೊಂಡು ಬರುತ್ತಲೇ ಇದೆ. ಈಗಲೂ ಒಳ್ಳೆಯ ಟಿಆರ್ಪಿಯೊಂದಿಗೆ ಈ ಧಾರಾವಾಹಿ ಮುನ್ನುಗ್ಗುತ್ತಿದೆ. ಪುಟ್ಟಕ್ಕನ ಮೆಸ್‌ಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ. ಬಂಗಾರಮ್ಮ ಇದೀಗ ಆರೋಪಿಗಳನ್ನು ಪುಟ್ಟಕ್ಕನ ಮುಂದೆ ತಂದು ನಿಲ್ಲಿಸಿದ್ದಾಳೆ. ಪುಟ್ಟಕ್ಕನ ಮಗಳು ಹಾಗೂ ಬಂಗಾರಮ್ಮನ ಮಗ ಕಂಠಿ ನಡುವೆ ಆಪ್ತತೆ ಹೆಚ್ಚಾಗುತ್ತಿದೆ. ರಮೇಶ್ ಪಂಡಿತ್, ಉಮಾಶ್ರೀ, ಅಕ್ಷರಾ, ಸಂಜನಾ ಬುರ್ಲಿ, ಮಂಜು ಭಾಷಿಣಿ, ಹಂಸ, ಧನುಷ್, ಸೂರಜ್ ಹೊಳ್ಳ, ಪವನ್ ಕುಮಾರ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ನಗರ ಭಾಗದಲ್ಲೂ ಮೊದಲ ಸ್ಥಾನದಲ್ಲಿದೆ ಎನ್ನುವುದು ವಿಶೇಷ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.
ಸೀತಾ ರಾಮ
‘ಸೀತಾ ರಾಮ’ ಧಾರಾವಾಹಿ ಕಳೆದ ವಾರವೂ ಎರಡನೇ ಸ್ಥಾನದಲ್ಲಿ ಇತ್ತು. ಈ ವಾರವೂ ಎರಡನೇ ಸ್ಥಾನ ಪಡೆದುಕೊಂಡಿದೆ. ಅಷ್ಟೇ ಅಲ್ಲದೇ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ. ರಾಮ ಹಾಗೂ ಸೀತಾ (ವೈಷ್ಣವಿ-ಗಗನ್) ಮಧ್ಯೆ ಈಗ ತಾನೇ ಆಪ್ತತೆ ಮೂಡುತ್ತಿದೆ. ರೀತು ಸಿಂಗ್ ಹೆಸರಿನ ಬಾಲಕಿ ವೈಷ್ಣವಿ ಗೌಡ ಮಗಳಾಗಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾಳೆ. ಈ ಧಾರಾವಾಹಿ 50ನೇ ಎಪಿಸೋಡ್‌ಗಳನ್ನು ಪೂರೈಸಿದೆ. ಸೀತಾ ರಾಮ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ.
ಇದನ್ನೂ ಓದಿ: Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!
ಗಟ್ಟಿಮೇಳ
‘ಗಟ್ಟಿಮೇಳ’ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ಕರ್ನಾಟಕದ ಟಿಆರ್‌ಪಿ ಪರಿಗಣಿಸಿದರೆ ‘ಗಟ್ಟಿಮೇಳ’ ಹಾಗೂ ‘ಸೀತಾ ರಾಮ’ ಧಾರಾವಾಹಿ ಟಿಆರ್‌ಪಿ ಸಮನಾಗಿದೆ. ಆದರೆ, ನಗರ ವಿಭಾಗದಲ್ಲಿ ಸೀತಾ ರಾಮ ಧಾರಾವಾಹಿ ಮೇಲುಗೈ ಸಾಧಿಸಿದೆ. ‘ಸೀತಾ ರಾಮ’ ಬರುವುದಕ್ಕೂ ಮೊದಲು ಈ ಧಾರಾವಾಹಿ ಎರಡನೇ ಸ್ಥಾನದಲ್ಲಿ ಇತ್ತು. ಹಿಂದಿನ ವಾರ ಅಮೃತಧಾರೆ ಧಾರಾವಾಹಿ ಬೀಟ್ ಮಾಡಿತ್ತು. ಟಿಆರ್‌ಪಿಯಲ್ಲಿ ಭಾರಿ ಕುಸಿತ ಕಂಡಿತ್ತು. ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್, ಸುಧಾ ನರಸಿಂಹರಾಜು ಮೊದಲಾದವರು ನಟಿಸಿದ್ದಾರೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.
ಅಮೃತಧಾರೆ
‘ಅಮೃತಧಾರೆ’ ಧಾರಾವಾಹಿಯಲ್ಲಿ ಭೂಮಿಕಾ ಬಲಗಾಲಿಟ್ಟು ಗೌತಮ್ ಮನೆಗೆ ಬಂದಾಗಿದೆ. ಕಳೆದ ವಾರ ‘ಗಟ್ಟಿಮೇಳ’ ಧಾರಾವಾಹಿ ಹಿಂದಿಕ್ಕಿ ಮೂರನೇ ಸ್ಥಾನ ಪಡೆದುಕೊಂಡಿತ್ತು. ರಾಜೇಶ್ ನಟರಂಗ, ಛಾಯಾ ಸಿಂಗ್ ಮೊದಲಾದವರು ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.
ಇದನ್ನೂ ಓದಿ: Kannada Serials TRP: ಈ ಬಾರಿಯೂ ‘ಸೀತಾ ರಾಮ’ ಟಾಪ್; ಸುಧಾರಿಸಿದ ‘ಅಮೃತಧಾರೆ’ ಧಾರಾವಾಹಿ!
ಸತ್ಯ -ಶ್ರೀರಸ್ತು ಶುಭಮಸ್ತು
‘ಸತ್ಯ’ ಹಾಗೂ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಐದು ಹಾಗೂ ಆರನೇ ಸ್ಥಾನದಲ್ಲಿದೆ. ಈ ಧಾರಾವಾಹಿಗಳಿಗೆ ವೀಕ್ಷಕರಿಂದ ಮೆಚ್ಚುಗೆ ಸಿಗುತ್ತಿದೆ. ‘ಸತ್ಯ’ ಧಾರಾವಾಹಿ ಮೊದಲಿನಿಂದಲೂ ಒಳ್ಳೆಯ ಟಿಆರ್‌ಪಿ ಪಡೆದುಕೊಂಡಿರುವ ಧಾರಾವಾಹಿ. ಅತ್ತೆ ಕೂಡ ಸತ್ಯಳನ್ನು ಪ್ರೀತಿಸಲು ಶುರು ಮಾಡಿದಂತಿದೆ. ಈ ಎರಡೂ ಧಾರಾವಾಹಿಗಳು ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.
-
Live News21 hours ago
Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!
-
ವಿದೇಶ11 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ದೇಶ3 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
South Cinema14 hours ago
Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್ಗೆ ಹೃದಯಾಘಾತ?
-
ಕರ್ನಾಟಕ14 hours ago
Bengaluru Bandh : ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್ ಇಲಿ!
-
ಆಟೋಮೊಬೈಲ್10 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ11 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್15 hours ago
ರಾಜ್ಕೋಟ್ನಲ್ಲಿ ಈಡೇರಲಿ ಭಾರತದ ಕ್ಲೀನ್ ಸ್ವೀಪ್ ಯೋಜನೆ; ನಾಳೆ ಅಂತಿಮ ಏಕದಿನ