Site icon Vistara News

Jote Joteyali | 3000 ಕೋಟಿ ಒಡೆಯನನ್ನು ಈ ಥರ ತೋರಿಸೋದಾ? ನಿರ್ದೇಶಕರ ವಿರುದ್ಧ ಅನಿರುದ್ಧ್‌ ಆಕ್ರೋಶ!

Jote Joteyali

ಬೆಂಗಳೂರು: ಜೊತೆ ಜೊತೆಯಲಿ ಧಾರಾವಾಹಿ (Jote Joteyali) ಖ್ಯಾತಿಯ ನಟ ಅನಿರುದ್ಧ್‌ ಅವರನ್ನು ಕಿರುತೆರೆ ನಿರ್ಮಾಪಕರ ಸಂಘ ಎರಡು ವರ್ಷಗಳ ಕಾಲ ಕಿರುತೆರೆಯ ಹಾಗೂ ಬೇರೆ ಯಾವುದೇ ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಆಯ್ಕೆ ಮಾಡಿಕೊಳ್ಳಬಾರದು ಎಂದು ತೀರ್ಮಾನಿಸಿದೆ. ಈ ಕುರಿತು ನಟ ಅನಿರುದ್ಧ್‌ ಅವರೂ ನಿರ್ದೇಶಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ʻಧಾರಾವಾಹಿಯಲ್ಲಿ ತಮ್ಮ ಪಾತ್ರ 3 ಸಾವಿರ ಕೋಟಿ ರೂ. ಒಡೆಯನದು. ಆದರೆ ಪ್ರೊಡಕ್ಷನ್‌ ಅದಕ್ಕೆ ತಕ್ಕಂತಿಲ್ಲ ಎಂದು ಹೇಳಿಕೊಂಡಿದ್ದಾರೆ.

“ಜೊತೆ ಜೊತೆಯಲಿʼ ಧಾರಾವಾಹಿಯಲ್ಲಿ ಆರ್ಯವರ್ಧನ್‌ ಎಂಬ ಪಾತ್ರದ ಮೂಲಕ ಮನೆ ಮಾತಾದವರು ಅನಿರುದ್ಧ. ಮತ್ತು ಈ ಧಾರಾವಾಹಿ ಮೂಲಕ ಭಾರಿ ಯಶಸ್ಸನ್ನು ಪಡೆದುಕೊಂಡರು. ಇದೀಗ ನಿರ್ದೇಶಕರ ವಿರುದ್ಧವೇ ನಟ ಅನಿರುದ್ಧ್‌ ಆಕ್ರೋಶ ಹೊರ ಹಾಕಿದ್ದಾರೆ. ʻʻನಿರ್ದೇಶಕರು ಸೆಟ್‌ನಲ್ಲಿ ಕಿರುಚಾಡಿಕೊಂಡೇ ಕೆಲಸ ಮಾಡುತ್ತಾರೆ. ನನ್ನ ಮೇಲೆ ಸಾಲು ಸಾಲು ಅರೋಪಗಳು ಮಾಡಿದ್ದಾರೆ. ನನ್ನ ಮಾನಹಾನಿ ಆಗಿದೆ. ಈ ಹಿಂದೆ ಬೆಂಜ್ ಆಕ್ಸಿಡೆಂಟ್‌ ಯಾವಾಗ ಆಯಿತೊ ಅಂದಿನಿಂದ “ಜೊತೆ ಜೊತೆಯಲಿʼ ಚಿತ್ರತಂಡದವರಿಗೆ ದುಬಾರಿ ಕಾರುಗಳು ಕೊಡುತ್ತಿಲ್ಲ. ಸೀರಿಯಲ್‌ನಲ್ಲಿ 3 ಸಾವಿರ ಕೋಟಿ ರೂ. ಮಾಲೀಕ ನಾನು. ಆದರೆ ಇನ್ನೋವಾದಲ್ಲೇ ನನ್ನ ಪಾತ್ರ ಓಡಾಡುತ್ತದೆʼʼ ಎಂದು ತಮ್ಮ ವಾದ ಮಂಡಿಸಿದ್ದಾರೆ.

ಸಂಬಳ ಸರಿಯಾಗಿ ಕೊಡುತ್ತಿಲ್ಲ

“ನಿರ್ದೇಶಕರ ನಡವಳಿಕೆಯಿಂದ ಕಲಾವಿದರು ಕಣ್ಣೀರು ಹಾಕಿದ್ದಾರೆ. ಕೊರೊನಾ ವೇಳೆ ಸಂಭಾವನೆ ಕಡಿಮೆ ಮಾಡಿಕೊಂಡರು. ಮೊದಲು ಎಷ್ಟು ಕೊಡುತ್ತಿದ್ದರು ಅಷ್ಟೇ ಕೊಡಿ ಎಂದೆ. ಎರಡನೇ ತಿಂಗಳು ಕೂಡ ಕಟ್‌ ಮಾಡಿ ಕೊಟ್ಟಿದ್ದಾರೆ. ಆದರೆ ನಾನು ಹೋರಾಡಿದ್ದು ಸ್ಕ್ರಿಪ್ಟ್‌ಗಾಗಿ ಮಾತ್ರ. ನಾನು ನೆಗೆಟಿವ್‌ ಪಾತ್ರ ಮಾಡುವುದಿಲ್ಲ ಎಂದು ಹೇಳಿಲ್ಲ. ನಿರ್ದೇಶಕರಾದ ಮಧು ಮತ್ತು ಉತ್ತಮ್‌ ಅವರ ನಡವಳಿಕೆ ಸರಿಯಿಲ್ಲ. ಮುಂದೆ ಏನಾಗುತ್ತದೆಯೋ ಗೊತ್ತಿಲ್ಲ. ಪ್ರತಿದಿನ ಒತ್ತಡದಲ್ಲಿ ಯಾರು ಕೆಲಸ ಮಾಡುತ್ತಾರೆ? ಒಂದೂವರೆ ವರ್ಷ ನಾನು ನೀರು ಸಹ ಪ್ರೊಡಕ್ಷನ್‌ ಹೌಸ್‌ನಿಂದ ಸೇವಿಸಿಲ್ಲ. ಮನೆಯಿಂದಲೇ ಪ್ರತಿದಿನ ಊಟ, ನೀರು ತರುತ್ತಿದ್ದೆ. ನಾನು 5 ಸ್ಟಾರ್ ಹೊಟೆಲ್‌ನಲ್ಲೇ ಊಟ ಬೇಕು ಎಂದು ಯಾವತ್ತೂ ಹೇಳಿಲ್ಲ. ಶೂಟಿಂಗ್ ವೇಳೆ ಹೈದರಾಬಾದ್‌ಗೆ ಹೋದಾಗ ಹೋಟೆಲ್ ಒಂದರಲ್ಲಿ ಎರಡೂವರೆ ಲಕ್ಷ ಬಿಲ್ ಆಗಿತ್ತು. ಅದು ಅವರೇ ಪ್ರೀತಿಯಿಂದ ಕೊಡಿಸಿದ್ದು. ಆದರೆ ನಾನು ಅದೇ ಬೇಕು ಅಂದಿರಲಿಲ್ಲʼʼ ಎಂದು ಅನಿರುದ್ಧ್‌ ಹೇಳಿದ್ದಾರೆ.

ಇದನ್ನೂ ಓದಿ | Jote Joteyali | ಧಾರಾವಾಹಿ ಖ್ಯಾತಿಯ ಅನಿರುದ್ಧ್‌ ಕಿರುತೆರೆಯಿಂದ ಬ್ಯಾನ್‌ ಆಗುತ್ತಿದ್ದಾರಾ? ಹೇಳಿದ್ದೇನು?

ʻʻಮೂರ್ಖರ ಥರ ಕೆಲಸ ಮಾಡಬಾರದು ಎಂದು ನಿರ್ಮಾಪಕರಿಗೆ ಹೇಳಿದ್ದೀನಿ ನಿಜ. ಆದರೆ ಮೂರ್ಖ ಯಾರು ಎಂದು ನಾನು ಯಾವತ್ತೂ ಹೇಳಿಲ್ಲ. ಈ ಧಾರಾವಾಹಿಯಿಂದ ಶ್ರೀಲಂಕಾ, ಕೇರಳ ಕಡೆಯಿಂದಲೂ ನನಗೆ ಮೆಸೇಜ್ ಬರುತ್ತವೆ. ನನ್ನಿಂದ ಈ ಧಾರಾವಾಹಿಗೆ ಹಾಗೂ ಯಾರಿಗೂ ತೊಂದರೆಯಾಗಿಲ್ಲ. ಕ್ಯಾಮೆರಾಮ್ಯಾನ್‌ ಒಬ್ಬರನ್ನು ಕೆಲಸದಿಂದ ತೆಗೆದು ಹಾಕಲು ಮುಂದಾದಾಗ ನಾನೇ ಬೇಡ ಎಂದಿದ್ದೆ. ನಟಿ ಮೇಘಾ ಶೆಟ್ಟಿ ಅವರ ವಿಷಯ ಬಂದಾಗಲೂ ಕೆಲಸದಿಂದ ತೆಗೆಯಬೇಡಿ ಎಂದಿದ್ದೆ. ಈಗ ನಾನೇ ಈ ಪರಿಸ್ಥಿತಿಯಲ್ಲಿ ಇದ್ದೇನೆ, ಇದು ದುರಂತʼʼ ಎಂದರು.

ʻʻನಮ್ಮ ಪ್ರೊಡಕ್ಷನ್‌ ಹೌಸ್‌ನಲ್ಲಿ ಏನೇ ಸಮಸ್ಯೆ ಆದರೂ ನಿರ್ಮಾಪಕರು ವಹಿಸಿಕೊಳ್ಳುತ್ತಾರೆ ಎಂದು ಹೇಳಿದ್ದರು. ಆದರೆ ಅವರು ಕೆಲಸ ಮಾಡಿಲ್ಲ. ಅಧ್ಯಕ್ಷ ಶಿವಕುಮಾರ್ ಅವರ ಜತೆ ಮಾತನಾಡಿದ್ದೇನೆ. ನಿರ್ಮಾಪಕ ಜಗ್ಗಿ ಅವರೊಂದಿಗೂ ಸಾಕಷ್ಟು ಮೆಸೇಜ್‌ ಮಾಡಿದ್ದೇನೆ. ಆದರೆ ಅವರ ಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲ. ನಾಳೆಯಿಂದ ಸೆಟ್‌ಗೆ ಕರೆದರೆ ನಾನು ಹೋಗುತ್ತೇನೆ. ಸೀನ್‌ ಪೇಪರ್‌ ಸರಿಯಾಗಿಲ್ಲ ಎಂದಾದರೆ ನಾನು ಚೇಂಜ್‌ ಮಾಡಿ ಎಂದೇ ಹೇಳುತ್ತೇನೆ. ಕಲಾವಿದನಾಗಿ ಅದು ನನ್ನ ಕರ್ತವ್ಯʼʼ ಎಂದು ಅನಿರುದ್ಧ ವಿವರಿಸಿದ್ದಾರೆ.

ಇದನ್ನೂ ಓದಿ | Jote Joteyali | ಧಾರಾವಾಹಿಯಿಂದ ಅನಿರುದ್ಧ್‌ಗೆ ಗೇಟ್‌ ಪಾಸ್‌, ಎರಡು ವರ್ಷ ಬ್ಯಾನ್‌ಗೆ ನಿರ್ಮಾಪಕರ ನಿರ್ಧಾರ

Exit mobile version