Site icon Vistara News

Jote Joteyali Serial: ಇಂದು ʻಜೊತೆ ಜೊತೆಯಲಿʼ ಧಾರಾವಾಹಿ ಅಂತ್ಯ; ಕೊನೆಗೂ ಒಂದಾದ್ರ ಅನು-ಆರ್ಯ?

Jote Joteyali Serial Happy ENd

ಬೆಂಗಳೂರು: 2019ರ ಸೆಪ್ಟೆಂಬರ್‌ 9ರಂದು ಹೊಸ ಶೈಲಿಯ ಕಥೆಯೊಂದು (Kannada Serial) ಕಿರುತೆರೆಗೆ ಎಂಟ್ರಿ ಕೊಟ್ಟಿತ್ತು. ಅದುವೇ ʼಜೊತೆ ಜೊತೆಯಲಿʼ (Jote Joteyali Serial). ಈ ಧಾರಾವಾಹಿ ಬಂದಿದೇ ತಡ ಒಂದೇ ವಾರದಲ್ಲಿ ಕನ್ನಡದ ಎಲ್ಲಾ ಧಾರಾವಾಹಿಗಳ ದಾಖಲೆಗಳನ್ನು ಮುರಿದು ಅತಿ ಹೆಚ್ಚು ವೀಕ್ಷಣೆ ಪಡೆದ ಧಾರಾವಾಹಿ ಎನ್ನುವ ಖ್ಯಾತಿ ಪಡೆದುಕೊಂಡಿತು. ಇದೀಗ ಸಾಕಷ್ಟು ಏರಿಳಿತ ಉಂಟಾದ ಹಿನ್ನೆಲೆಯಲ್ಲಿ 953 ಎಪಿಸೋಡ್​ಗೆ ಧಾರಾವಾಹಿ ಪೂರ್ಣಗೊಳಿಸಲಾಗಿದೆ. ನಿರ್ದೇಶಕ ಆರೂರು ಜಗದೀಶ್ ಅವರು ಘೋಷಣೆ ಮಾಡಿದಂತೆ ಇಂದು (ಮೇ 19) ಧಾರಾವಾಹಿ ಪೂರ್ಣಗೊಳ್ಳುತ್ತಿದೆ. ಹ್ಯಾಪಿ ಎಂಡಿಂಗ್‌ನೊಂದಿಗೆ ಧಾರಾವಾಹಿ ಅಂತ್ಯ ಹಾಡಲಿದೆ.

ಅನಿರುದ್ಧ ಅವರನ್ನು ಧಾರಾವಾಹಿ ತಂಡದಿಂದ ಹೊರಹಾಕಿದ ನಂತರ ಅವರ ಸ್ಥಾನಕ್ಕೆ ಹರೀಶ್‌ ರಾಜ್‌ ಅವರನ್ನು ಕರೆತರಲಾಗಿತ್ತು. ಅದಕ್ಕಾಗಿಯೇ ಕೆಲವು ಹೊಸ ಉಪಕಥೆಯನ್ನೂ ಪರಿಚಯಿಸಲಾಗಿದೆ. ಹಾಗೆಯೇ ಜೋಡಿ ಹಕ್ಕಿ ಧಾರಾವಾಹಿ ಖ್ಯಾತಿಯ ಚೈತ್ರ ರಾವ್‌ ಅವರನ್ನೂ ಸಹ ಆರಾಧನಾ ಹೆಸರಿನಲ್ಲಿ ಧಾರಾವಾಹಿಯಲ್ಲಿ ಪರಿಚಯಿಸಲಾಗಿತ್ತು. ಇದೀಗ ರಾಜನಂದಿನಿಯನ್ನು ಕೊಂದಿದ್ದು ಝೇಂಡೆ ಎನ್ನುವ ವಿಚಾರ ರಿವೀಲ್ ಆಗಿದೆ. ಈತನಿಗೆ ಅನು ಸಿರಿಮನೆ (Anu Sirimane) ಪ್ರಾಣಭಿಕ್ಷೆ ನೀಡಿದ್ದಾಳೆ.

ಒಂದಾದ ಅನು-ಆರ್ಯ

ಅನಿರುದ್ಧ ಧಾರಾವಾಹಿಯಿಂದ ಹೊರ ಬರುತ್ತಿದ್ದಂತೆ ಟಿಆರ್‌ಪಿ ಕುಸಿತಗೊಂಡಿತ್ತು. ಧಾರಾವಾಹಿಯ ಕಥೆಯಲ್ಲಿ ಆರ್ಯನ ಮೊದಲ ಪತ್ನಿ ರಾಜನಂದಿನಿಯ ಕೊಂದಿದ್ದು ಝೇಂಡೆ. ಶಾರದಾ ದೇವಿಯ ಪತಿಯನ್ನು ಕೊಂದಿದ್ದೂ ಆತನೇ. ಈ ವಿಚಾರವನ್ನು ಶಾರದಾ ದೇವಿ ರಿವೀಲ್ ಮಾಡಿದರು. ಪ್ರಪಾತದಲ್ಲಿ ಸಿಕ್ಕಿ ಬಿದ್ದಿದ್ದ ರಾಜನಂದಿನಿ ಸಾವಿಗೆ ಝೇಂಡೆಯೇ ಕಾರಣ ಆಗಿದ್ದ. ಈಗ ಝೇಂಡೆಗೂ ಅದೇ ಪರಿಸ್ಥಿತಿ ಬಂದಿತ್ತು. ಪ್ರಪಾತಕ್ಕೆ ಬೀಳುವವನಿದ್ದ ಝೇಂಡೆ‌ಯನ್ನು ಅನು ಕಾಪಾಡಿದ್ದಾಳೆ. ಇದರಿಂದ ಅನುವಿನ ಋಣ ತೀರಿಸಲು ಝೇಂಡೆ ನಿರ್ಧರಿಸಿದ್ದಾನೆ. ಇತ್ತ ಆರಾಧನಾ ಮನೆ ಬಿಟ್ಟು ಹೋಗಿದ್ದಾಳೆ. ಆರ್ಯನನ್ನು ನೋಡಿದಾಗಲೆಲ್ಲ ಆಕೆಗೆ ತನ್ನ ಪತಿಯೇ (ವಿಶ್ವಾಸ್) ನೆನಪಾಗುತ್ತಿದ್ದ. ಹೀಗಾಗಿ ಪತಿಯನ್ನು ಬಿಟ್ಟುಕೊಡಲು ಅನು ಮುಂದಾಗಿದ್ದಳು. ಅದಕ್ಕೂ ಮೊದಲೇ ಆರಾಧನಾ ಮನೆ ಬಿಟ್ಟು ಹೋಗಿದ್ದಾಳೆ. ಈ ಮೂಲಕ ಅನು-ಆರ್ಯ ಮತ್ತೆ ಒಂದಾಗಿದ್ದಾರೆ.

ಇದನ್ನೂ ಓದಿ: Jote Joteyali Serial: ‘ಜೊತೆ ಜೊತೆಯಲಿ’ ಧಾರಾವಾಹಿ ಮುಕ್ತಾಯ; ಆ ಸಮಯಕ್ಕೆ ಹೊಸದೊಂದು ಕಥೆ ಶುರು!

ಭಾವುಕ ಪೋಸ್ಟ್‌ ಹಂಚಿಕೊಂಡ ಆರೂರು ಜಗದೀಶ್‌


ʻʻಕಥೆ ನಿಂತ ನೀರಲ್ಲ; ಅದು ಹರಿಯುವ ಹೊಳೆ! ಕಥೆಗಳಿಗೆ ಮುಕ್ತಾಯ ಎನ್ನುವುದು ಇರುವುದಿಲ್ಲ. ನಾವಾಗಿಯೇ ಅನಿವಾರ್ಯವಾಗಿ ‘ದಿ ಎಂಡ್’ ಕೊಟ್ಕೋಬೇಕು ಅಷ್ಟೆ! ಜೊತೆ ಜೊತೆಯಲಿ ಧಾರಾವಾಹಿಗೂ ಈ ಅನಿವಾರ್ಯತೆ ಬಂದಿದೆ. 951ನೇ ಸಂಚಿಕೆಗೆ ‘ಜೊತೆ ಜೊತೆಯಲಿ’ ಧಾರಾವಾಹಿ ಮುಗಿಯುತ್ತಿದೆ. 1000 ಸಂಚಿಕೆ ಮಾಡಬಹುದಿತ್ತಲ್ಲ ಎಂದು ಅನೇಕ ಅಭಿಮಾನಿಗಳು ಹೇಳಿದ್ದರು.ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗುತ್ತಿಲ್ಲ.
ಜೊತೆ ಜೊತೆಯಲಿ ಜೆ.ಎಸ್ ಪ್ರೊಡಕ್ಷನ್‌ಗೆ ದೊಡ್ಡ ಮೈಲಿಗಲ್ಲು. ಸಾಕಷ್ಟು ಪಾಠಗಳನ್ನು ಕಲಿಸಿದೆ, ಯಶಸ್ಸನ್ನು ತಂದು ಕೊಟ್ಟಿದೆ, ಏರಿಳಿತಗಳೆಲ್ಲವನ್ನೂ ನಾವು ಸಮಚಿತ್ತದಿಂದಲೇ ನೋಡಿದ್ದೇವೆ. ಮೊದಲ ವಾರದ ಟಿಆರ್‌ಪಿ ಬಂದಾಗ ಸುದ್ದಿ ವಾಹಿನಿಗಳೆಲ್ಲಾ ನಮ್ಮ ಸೆಟ್‌ಗೆ ಬಂದು ‘ಇದು ಟಿವಿ ಇತಿಹಾಸದಲ್ಲೇ ದಾಖಲೆ’ ಎಂದು ಹೇಳಿದಾಗ ನಾವು ಹೇಗಿದ್ದೆವೋ, ಈಗಲೂ ಹಾಗೇ ಇದ್ದೇವೆ.

ಅಂದು ಆ ಖುಷಿಯನ್ನು ಸಂಭ್ರಮವನ್ನು ಕೆಲಸದ ಒತ್ತಡದಲ್ಲಿ ಸಂಪೂರ್ಣವಾಗಿ ಅನುಭವಿಸಲು ಆಗಲಿಲ್ಲ. ಕನಸ್ಸಿನಂತೆ ಬಂದು ಮಾಯವಾದ ಅನುಭವ.. ಪ್ರಾಮಾಣಿಕ ಪ್ರಯತ್ನ ಮತ್ತು ಶ್ರಮಕ್ಕೆ ಯಾವತ್ತೂ ಪ್ರತಿಫಲ ಸಿಗುತ್ತದೆ ಎನ್ನುವುದಕ್ಕೆ ಜೊತೆ ಜೊತೆಯಲಿ ಸಾಕ್ಷಿ! ಆರಂಭದ ದಿನಗಳಲ್ಲಿ ಒಂದೊಂದು ಎಪಿಸೋಡ್ ಚಿತ್ರೀಕರಣವೂ ಹರಸಾಹಸವೇ ಸರಿ. ಅರ್ಧ ಗಂಟೆಯ ಎಪಿಸೋಡ್‌ಗೆ ಆರೇಳು ದಿನಗಳ ಶ್ರಮ. ಜನ ಚಪ್ಪಾಳೆ ತಟ್ಟಿದಾಗಷ್ಟೇ ಸಮಾಧಾನ! ಒಂದು ಸಿನಿಮಾ ಹಿಟ್ ಆದರೆ ಅದರ ಯಶಸ್ಸನ್ನು ಎಂಜಾಯ್ ಮಾಡಲು ಒಂದೆರಡು ತಿಂಗಳಾದರೂ ಸಿಗುತ್ತದೆ. ಇಲ್ಲಿ ಹಾಗಲ್ಲ. ಓಡು! ಓಡುತ್ತಲೇ ಇರು. ದಣಿವಾದಾಗೆಲ್ಲಾ ಬೆನ್ನು ತಟ್ಟಿ ನಡೆಸಿದವರನ್ನೆಲ್ಲಾ ಈ ಕ್ಷಣದಲ್ಲಿ ನೆನೆಯಲೇ ಬೇಕುʼʼ ಎಂದು ಸಮಗ್ರವಾಗಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Kannada Serials: ಅಂತ್ಯ ಕಾಣಲಿವೆ ಕನ್ನಡದ ಎರಡು ಪ್ರಮುಖ ಧಾರಾವಾಹಿಗಳು? ಕಾರಣವೇನು?

ಈಗಾಗಲೇ ಜೀ ವಾಹಿನಿಯಲ್ಲಿ ಕೆಲವು ಧಾರಾವಾಹಿಗಳು ಪ್ರಸಾರ ನಿಲ್ಲಿಸಿವೆ ಹಾಗೂ ಹೊಸ ಧಾರಾವಾಹಿಗಳು ಪ್ರಾರಂಭವಾಗುತ್ತಿದೆ. ಇದೇ ಕಾರಣಕ್ಕೆ ಅನೇಕ ಧಾರಾವಾಹಿಗಳು ವಿದಾಯ ಹೇಳುತ್ತಿವೆ. ಸತತ ನಾಲ್ಕು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿರುವ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿಯ ಅಭಿನಯಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದರು.

Exit mobile version