Site icon Vistara News

Kapil Sharma: ಮೋದಿಗೆ ಕಪಿಲ್ ಶರ್ಮಾ ಶೋ ಆಹ್ವಾನ, ಪಿಎಂ ರೆಸ್ಪಾನ್ಸ್‌ ಏನಿತ್ತು?

Kapil Sharma reveals inviting PM Modi

ಬೆಂಗಳೂರು: ಹಿಂದಿ ಕಿರುತೆರೆಯ ಪ್ರಸಿದ್ಧ ಕಾಮಿಡಿ ಶೋ ಅಂದರೆ ಕಪಿಲ್ ಶರ್ಮಾ (Kapil Sharma) ಶೋ. ಕಪಿಲ್ ಶರ್ಮಾ ತಮ್ಮ ಮುಂಬರುವ ಚಿತ್ರದ ಪ್ರಚಾರದಲ್ಲಿದ್ದಾರೆ. ಈ ವೇಳೆ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನವನ್ನು ನೀಡಿದ್ದು, ತಮ್ಮ ಶೋಗೆ ಒಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಕಪಿಲ್‌ ಶರ್ಮಾ ಅಭಿನಯಿಸಿರುವ ಹೊಸ ಸಿನಿಮಾ ‘ಸ್ವಿಗಾಟೋ’ ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್​ 17ರಂದು ರಿಲೀಸ್​ ಆಗಲಿರುವ ಈ ಚಿತ್ರಕ್ಕೆ ನಂದಿತಾ ದಾಸ್​ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಪ್ರಚಾರ ವೇಳೆ ಮೋದಿ ಅವರ ಕುರಿತು ಮಾತನಾಡಿದ್ದಾರೆ.

ʻʻನಾನು ಪ್ರಧಾನಿ ಮೋದಿ ಅವರನ್ನು ಭೇಟಿಯಾದಾಗ, ನಮ್ಮ ಕಾರ್ಯಕ್ರಮಕ್ಕೆ ಬರುವಂತೆ ನಾನು ಅವರನ್ನು ಕೇಳಿಕೊಂಡೆ. ಅವರು ಇಲ್ಲ ಅಂತ ಹೇಳಲಿಲ್ಲ. ಯಾವಾಗಲಾದರೂ ಬರುವುದಾಗಿ ತಿಳಿಸಿದರು. ಅದಕ್ಕಿಂತ ಹೆಚ್ಚಾಗಿ ವಿರೋಧ ಪಕ್ಷದವರೇ ಸಿಕ್ಕಾಪಟ್ಟೆ ಕಾಮಿಡಿ ಮಾಡುತ್ತಿದ್ದಾರೆʼʼ ಎಂದು ಹೇಳಿದರು. ನಮ್ಮ ಶೋನಲ್ಲಿ ಅವರನ್ನು ಹೋಸ್ಟ್ ಮಾಡುವುದು ನಮ್ಮ ಗೌರವ’ ಎಂದು ಹೇಳಿದರು. ಜಗತ್ತು ಪ್ರಧಾನಿ ಮೋದಿಯವರ ಕಡೆ ನೋಡುವಂತೆ ಮಾಡಬೇಕೆಂಬುದು ಕಪಿಲ್ ಅವರ ಆಸೆಯಾಗಿದೆ. ಅವಕಾಶ ಸಿಕ್ಕಾಗಲೆಲ್ಲ ಅವರನ್ನು ಆಹ್ವಾನಿಸುತ್ತಲೇ ಇರುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Modi in Karnataka: ಕರ್ನಾಟಕದ ರೈತರ ಖಾತೆಗೆ 12 ಸಾವಿರ ಕೋಟಿ ರೂ. ಬಂದಿದೆ: ಇದು ಡಬಲ್‌ ಇಂಜಿನ್‌ ಸರ್ಕಾರ ಎಂದ ಪ್ರಧಾನಿ ನರೇಂದ್ರ ಮೋದಿ

ಸಿನಿಮಾ ಗಣ್ಯರು ಮಾತ್ರವಲ್ಲದೇ ಕ್ರಿಕೆಟ್ ತಾರೆಯರು ಕೂಡ ಕಪಿಲ್ ಶೋನಲ್ಲಿ ಭಾಗಿಯಾಗಿದ್ದರು. ಶಾರುಖ್ ಖಾನ್, , ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಸಿಸಿಎಲ್​ ಸಲುವಾಗಿ ‘ಗೋಲ್ಡನ್​ ಸ್ಟಾರ್​’ ಗಣೇಶ್​ ಕೂಡ ಈ ಕಾರ್ಯಕ್ರಮಕ್ಕೆ ತೆರಳಿದ್ದರು.

Exit mobile version