Site icon Vistara News

Chandan Kumar | ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್‌ಗೆ ಕಪಾಳಮೋಕ್ಷ ಮಾಡಿದ ಟೆಕ್ನಿಶಿಯನ್ಸ್: ವಿಡಿಯೊ ವೈರಲ್‌

Chandan Kumar

ಬೆಂಗಳೂರು: ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನಟ ಚಂದನ್ (Chandan Kumar) ಹಾಗೂ ಟೆಕ್ನಿಶಿಯನ್ಸ್ ನಡುವೆ ಜಟಾಪಟಿ ನಡೆದಿದೆ.

ಸಾವಿತ್ರಮ್ಮಗಾರು ಅಬ್ಬಾಯಿ ಧಾರಾವಾಹಿ ಸೆಟ್‌ನಲ್ಲಿ ಕ್ಯಾಮೆರಾ ಅಸಿಸ್ಟೆಂಟ್ ಮೇಲೆ ನಟ ಹಲ್ಲೆ ಮಾಡಿರುವುದಾಗಿ ತಿಳಿದು ಬಂದಿದೆ. ಹೈದರಾಬಾದ್‌ನಲ್ಲಿ ನಿನ್ನೆ ಭಾನುವಾರ (ಜು.31) ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಇದೀಗ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಆ ವಿಡಿಯೊ ಹರಿದಾಡುತ್ತಿದೆ. ಚಂದನ್‌ರನ್ನು ಮುತ್ತಿಗೆ ಹಾಕಿ ಬೈದ ಗುಂಪು, ಕೊನೆಗೆ ಅವರಿಂದ ಕ್ಷಮೆ ಕೇಳಿಸಿದೆ.

ಇದನ್ನೂ ಓದಿ | Chandan & Kavitha | ಸಿಹಿ ಸುದ್ದಿ ನೀಡಿದ್ದಾರೆ ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್‌ ಮತ್ತು ಕವಿತಾ

ಹಲವು ಕನ್ನಡ ಹಾಗೂ ತೆಲುಗು ಸೀರಿಯಲ್‌ಗಳಲ್ಲಿ ಚಂದನ್‌ ನಟಿಸಿದ್ದರು. ಪ್ರೇಮ ಬರಹ ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದರು. ಬಿಗ್ ಬಾಸ್‌ನಲ್ಲೂ ಚಂದನ್‌ ಸ್ಪರ್ಧಿಯಾಗಿದ್ದರು.

Exit mobile version