Site icon Vistara News

Lakshmi Nivasa: ಭಾವನಾ-ಸಿದ್ದೇಗೌಡ್ರು ಮದುವೆ ಆಗೋಯ್ತಾ? ವೈರಲ್‌ ಆಗ್ತಿದೆ ವಿಡಿಯೊ!

Lakshmi Nivasa siddhe gowdru bhavana wedding scene

ʻಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ (Lakshmi Nivasa) ಭಾವನಾ ಹಾಗೂ ಸಿದ್ದೇಗೌಡರ ಜೋಡಿ ಪ್ರಮುಖ ಹೈಲೈಟ್‌. ಸಿದ್ದೇಗೌಡರು ಭಾವನ ಮೇಲಿರುವ ಪ್ರೀತಿಯನ್ನು ಹೇಳಲು ಒದ್ದಾಡುತ್ತಿದ್ದಾರೆ. ಆದರೆ ಭಾವನ ಸಿದ್ದೇಗೌಡರನ್ನ ನೋಡಿ ಎಷ್ಟೇ ಕೋಪಿಸಿಕೊಂಡರು, ಸಿದ್ದೇಗೌಡರ ಫೋನ್‌ ಕಾಲ್‌ ಬಂದರೆ ಸಾಕು ಫುಲ್ ಖುಷಿಯಾಗುತ್ತಾಳೆ. ಇದೀಗ ಈ ಜೋಡಿಯ ಮದುವೆ ರೀಲ್ಸ್‌ ವೈರಲ್‌ ಆಗುತ್ತಿದೆ.

ಸೌಪರ್ಣಿಕಾ ಹಾಗೂ ನೀಲೂ ಡಬ್ಬಲ್ ಗೇಮ್ ಶುರು ಮಾಡಿದ್ದರೂ ಈ ಜೋಡಿ ಮದುವೆ ಆಗೋದು ಗ್ಯಾರಂಟಿ ಎನ್ನತ್ತಿದ್ದಾರೆ ಫ್ಯಾನ್ಸ್‌.

ಸಿದ್ದೇಗೌಡರ ಪ್ರೀತಿ ನಿಲೂಗೆ ಮಾತ್ರ ಗೊತ್ತಿದೆ. ಹೀಗಾಗಿ ಸಿದ್ದೇಗೌಡರ ಜತೆ ಪೂರ್ವಿ ಜತೆ ಮದುವೆ ಮಾಡಬೇಕು ಎಂದು ಸೌಪರ್ಣಿಕಾ ಜತೆ ಕೈ ಜೋಡಿಸಿದ್ದಾಳೆ. ಆದರೀಗ ವೈರಲ್‌ ಆಗುತ್ತಿರುವ ವಿಡಿಯೊ ಕಂಡು ಸಿದ್ದೇಗೌಡರು ಭಾವನಾಳನ್ನೇ ಮದುವೆ ಆಗೋದು ಎನ್ನುತ್ತಿದ್ದಾರೆ.

ಇದನ್ನೂ ಓದಿ: Dhruva Sarja: ಬಾಲಿವುಡ್‌ ಸಿನಿಮಾಗೆ ಎಂಟ್ರಿ ಕೊಡ್ತಾರಾ ಧ್ರುವ ಸರ್ಜಾ? ಬಿಗ್‌ ಬಜೆಟ್‌ ಚಿತ್ರದಲ್ಲಿ ಸಹೋದರನ ಪಾತ್ರ?

ಆದರೆ ಇನ್ನೂ ಕೆಲವರು ಭಾವನಾಳಿಗೆ ಇರುವ ಕೋಪ, ಸಿದ್ದೇಗೌಡರ ಭಯ, ಸೌಪರ್ಣಿಕಾ ಕೈವಾಡ ಮಧ್ಯೆ ಮದುವೆಯಾಗೋದು ಡೌಟು. ಇದೆಲ್ಲ ಕನಸು ಆಗಿರಬಹುದು ಎಂದು ಕಮೆಂಟ್‌ ಮಾಡುತ್ತಿದ್ದಾರೆ.

ವೈರಲ್‌ ಆಗಿರುವ ವಿಡಿಯೊದಲ್ಲಿ ಸಿದ್ದೇಗೌಡ್ರ ಸುತ್ತ ನಿಂತಿರುವ ಮನೆ ಮಂದಿ ಫುಲ್ ಸೈಲೆಂಟ್ ಆಗಿ ನಿಂತಿದ್ದಾರೆ. ಅಷ್ಟೇ ಅಲ್ಲ ಜವರೇಗೌಡ್ರು ಫುಲ್ ಗರಂ ಆಗಿ ನೋಡುತ್ತಿದ್ದಾರೆ. ಇದೀಗ ಪ್ರೇಕ್ಷಕರು ಈ ಎಪಿಸೋಡ್‌ಗೆ ಕಾತುರದಿಂದ ಕಾದಿದ್ದಾರೆ.

Exit mobile version