Lakshmi Nivasa: ಭಾವನಾ-ಸಿದ್ದೇಗೌಡ್ರು ಮದುವೆ ಆಗೋಯ್ತಾ? ವೈರಲ್‌ ಆಗ್ತಿದೆ ವಿಡಿಯೊ! - Vistara News

ಕಿರುತೆರೆ

Lakshmi Nivasa: ಭಾವನಾ-ಸಿದ್ದೇಗೌಡ್ರು ಮದುವೆ ಆಗೋಯ್ತಾ? ವೈರಲ್‌ ಆಗ್ತಿದೆ ವಿಡಿಯೊ!

Lakshmi Nivasa: ಸಾಯಿ ನಿರ್ಮಲ ಪ್ರೊಡಕ್ಷನ್‌ ಸಂಸ್ಥೆಯ ನಿರ್ಮಾಣ, ಆದರ್ಶ್ ಉಮೇಶ್ ಹೆಗಡೆ ನಿರ್ದೇಶನ ಈ ಧಾರಾವಾಹಿಗೆ (lakshmi nivasa kannada serial) ಇರಲಿದೆ. ಕಿರುತೆರೆಯಲ್ಲಿ ಈ ಹಿಂದೆ ಹೀರೊ ಹೀರೋಯಿನ್‌ಗಳಾಗಿ‌ ಮಿಂಚಿದ್ದ ಹಲವು ಅನುಭವಿ ಕಲಾವಿದರು ಈ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿದ್ದಾರೆ. ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಬೇಕು ಎಂದು ಕಷ್ಟಪಡುವ ತಂದೆಯ ಕಥೆ-ವ್ಯಥೆಯ ಜೊತೆ ಸಾಕಷ್ಟು ಭಾವನಾತ್ಮಕ ವಿಚಾರಗಳನ್ನು ಈ ಧಾರಾವಾಹಿಯಲ್ಲಿ ತೋರಿಸಲಾಗಿದೆ.ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

VISTARANEWS.COM


on

Lakshmi Nivasa siddhe gowdru bhavana wedding scene
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ʻಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ (Lakshmi Nivasa) ಭಾವನಾ ಹಾಗೂ ಸಿದ್ದೇಗೌಡರ ಜೋಡಿ ಪ್ರಮುಖ ಹೈಲೈಟ್‌. ಸಿದ್ದೇಗೌಡರು ಭಾವನ ಮೇಲಿರುವ ಪ್ರೀತಿಯನ್ನು ಹೇಳಲು ಒದ್ದಾಡುತ್ತಿದ್ದಾರೆ. ಆದರೆ ಭಾವನ ಸಿದ್ದೇಗೌಡರನ್ನ ನೋಡಿ ಎಷ್ಟೇ ಕೋಪಿಸಿಕೊಂಡರು, ಸಿದ್ದೇಗೌಡರ ಫೋನ್‌ ಕಾಲ್‌ ಬಂದರೆ ಸಾಕು ಫುಲ್ ಖುಷಿಯಾಗುತ್ತಾಳೆ. ಇದೀಗ ಈ ಜೋಡಿಯ ಮದುವೆ ರೀಲ್ಸ್‌ ವೈರಲ್‌ ಆಗುತ್ತಿದೆ.

ಸೌಪರ್ಣಿಕಾ ಹಾಗೂ ನೀಲೂ ಡಬ್ಬಲ್ ಗೇಮ್ ಶುರು ಮಾಡಿದ್ದರೂ ಈ ಜೋಡಿ ಮದುವೆ ಆಗೋದು ಗ್ಯಾರಂಟಿ ಎನ್ನತ್ತಿದ್ದಾರೆ ಫ್ಯಾನ್ಸ್‌.

ಸಿದ್ದೇಗೌಡರ ಪ್ರೀತಿ ನಿಲೂಗೆ ಮಾತ್ರ ಗೊತ್ತಿದೆ. ಹೀಗಾಗಿ ಸಿದ್ದೇಗೌಡರ ಜತೆ ಪೂರ್ವಿ ಜತೆ ಮದುವೆ ಮಾಡಬೇಕು ಎಂದು ಸೌಪರ್ಣಿಕಾ ಜತೆ ಕೈ ಜೋಡಿಸಿದ್ದಾಳೆ. ಆದರೀಗ ವೈರಲ್‌ ಆಗುತ್ತಿರುವ ವಿಡಿಯೊ ಕಂಡು ಸಿದ್ದೇಗೌಡರು ಭಾವನಾಳನ್ನೇ ಮದುವೆ ಆಗೋದು ಎನ್ನುತ್ತಿದ್ದಾರೆ.

ಇದನ್ನೂ ಓದಿ: Dhruva Sarja: ಬಾಲಿವುಡ್‌ ಸಿನಿಮಾಗೆ ಎಂಟ್ರಿ ಕೊಡ್ತಾರಾ ಧ್ರುವ ಸರ್ಜಾ? ಬಿಗ್‌ ಬಜೆಟ್‌ ಚಿತ್ರದಲ್ಲಿ ಸಹೋದರನ ಪಾತ್ರ?

ಆದರೆ ಇನ್ನೂ ಕೆಲವರು ಭಾವನಾಳಿಗೆ ಇರುವ ಕೋಪ, ಸಿದ್ದೇಗೌಡರ ಭಯ, ಸೌಪರ್ಣಿಕಾ ಕೈವಾಡ ಮಧ್ಯೆ ಮದುವೆಯಾಗೋದು ಡೌಟು. ಇದೆಲ್ಲ ಕನಸು ಆಗಿರಬಹುದು ಎಂದು ಕಮೆಂಟ್‌ ಮಾಡುತ್ತಿದ್ದಾರೆ.

ವೈರಲ್‌ ಆಗಿರುವ ವಿಡಿಯೊದಲ್ಲಿ ಸಿದ್ದೇಗೌಡ್ರ ಸುತ್ತ ನಿಂತಿರುವ ಮನೆ ಮಂದಿ ಫುಲ್ ಸೈಲೆಂಟ್ ಆಗಿ ನಿಂತಿದ್ದಾರೆ. ಅಷ್ಟೇ ಅಲ್ಲ ಜವರೇಗೌಡ್ರು ಫುಲ್ ಗರಂ ಆಗಿ ನೋಡುತ್ತಿದ್ದಾರೆ. ಇದೀಗ ಪ್ರೇಕ್ಷಕರು ಈ ಎಪಿಸೋಡ್‌ಗೆ ಕಾತುರದಿಂದ ಕಾದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಿರುತೆರೆ

Nayana Nagaraj: 10 ವರ್ಷದ ಪ್ರೀತಿ! ಮನಮೆಚ್ಚಿದ ಹುಡುಗನ ಜತೆ ಸಪ್ತಪದಿ ತುಳಿದ ʻಗಿಣಿರಾಮʼ ನಟಿ

Nayana Nagaraj: ಪಾಪಾ ಪಾಂಡು’ ಹಾಗೂ ‘ಗಿಣಿರಾಮ’ ಧಾರಾವಾಹಿಗಳಲ್ಲಿ ಕಥಾನಾಯಕಿಯಾಗಿ ಮಿಂಚಿದ ಪ್ರತಿಭಾವಂತ ನಟಿ ನಯನ ನಾಗರಾಜ್. ಗಾಯಕಿ ಹಾಗೂ ನೃತ್ಯಗಾರ್ತಿಯೂ ಆಗಿದ್ದಾರೆ. ಈ ಹಿಂದೆ ನಯನ ನಾಗರಾಜ್ ಅವರ ಬ್ಯಾಚುಲರೇಟ್ ಪಾರ್ಟಿಯಲ್ಲಿ ‘ಲಕ್ಷ್ಮೀ ನಿವಾಸ’ ಸೀರಿಯಲ್ ಖ್ಯಾತಿಯ ಚಂದನಾ ಅನಂತಕೃಷ್ಣ ಭಾಗವಹಿಸಿದ್ದರು.

VISTARANEWS.COM


on

Nayana Nagaraj ginirama serial fame got married with suhas
Koo

ಪಾಪ ಪಾಂಡು’ ಹಾಗೂ ‘ಗಿಣಿರಾಮ’ ಧಾರಾವಾಹಿಗಳಲ್ಲಿ ನಾಯಕಿಯಾಗಿ ಮಿಂಚಿದ ನಯನ ನಾಗರಾಜ್ (Nayana Nagaraj) ದಾಂಪತ್ಯ ಜೀವನಕ್ಕೆ ಜೂ.16ರಂದು ಕಾಲಿಟ್ಟಿದ್ದಾರೆ.

ದೀರ್ಘಕಾಲದ ಗೆಳೆಯ ಸುಹಾಸ್ ಶಿವಣ್ಣ ಅವರೊಂದಿಗೆ ನಯನ ನಾಗರಾಜ್ ಸಪ್ತಪದಿ ತುಳಿದಿದ್ದಾರೆ

ಕುಟುಂಬಸ್ಥರ ಸಮ್ಮುಖದಲ್ಲಿ ನಯನ ನಾಗರಾಜ್ ಹಾಗೂ ಸುಹಾಸ್ ಶಿವಣ್ಣ ಮದುವೆಯಾದರು.

ಇದನ್ನೂ ಓದಿ: Nayana Nagaraj: ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ ‘ಗಿಣಿರಾಮ’ ಖ್ಯಾತಿಯ ನಟಿ ನಯನ ನಾಗರಾಜ್

ಈ ಮುಂಚೆ ಜೋಡಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.

ಹತ್ತು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ನಯನ ನಾಗರಾಜ್ ಹಾಗೂ ಸುಹಾಸ್ ಶಿವಣ್ಣ . ಇದೀಗ ಜೋಡಿಗೆ ಹಲವು ನಟ ನಟಿಯರು ಶುಭ ಹಾರೈಸಿದ್ದಾರೆ.
Continue Reading

ಬಿಗ್ ಬಾಸ್

Actress Siri: ಬಿಗ್​ಬಾಸ್​ನಲ್ಲಿ ಚಿಗುರಿತಾ ಪ್ರೇಮ? ‘ರಂಗೋಲಿ’ ಖ್ಯಾತಿಯ ಸಿರಿಯ ವರನ್ಯಾರು?

Actress Siri: ಬಿಗ್ ಬಾಸ್ ಸಿರಿ ಮದುವೆಯಾಗಿರುವ ಹುಡುಗ ಮೂಲತಃ ಮಂಡ್ಯದವರು ಸದ್ಯ ಬೆಂಗಳೂರಿನಲ್ಲಿ ನಲೆಸಿದ್ದಾರೆ. ಅವರ ಹೆಸರು ಪ್ರಭಾಕರ್ ಬೋರೇಗೌಡ. ಪ್ರಭಾಕರ್‌ ಬೋರೇಗೌಡ ಮತ್ತು ಸಿರಿ ಒಟ್ಟಿಗೆ ನಟಿಸಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್‌ ಮನೆಯಿಂದ ಸಿರಿ ಎಲಿಮಿನೇಟ್‌ ಆದ ಬಳಿಕ ಸಿರಿ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ.

VISTARANEWS.COM


on

Actress Siri marriage to actor prabhakar
Koo

ಬೆಂಗಳೂರು: ‘ರಂಗೋಲಿ’, ‘ಮನೆಯೊಂದು ಮೂರು ಬಾಗಿಲು’, ‘ಬದುಕು’ ಮುಂತಾದ ಧಾರಾವಾಹಿಗಳನ್ನು ಪ್ರೇಕ್ಷಕರು ಮನಗೆದ್ದ ಸಿರಿ ಬಿಗ್ ಬಾಸ್ (BBK Season 10) ಈಗ ಮದುವೆಯಾಗಿದ್ದಾರೆ. ಇನ್ನೂ (Actress Siri) ಯಾಕೆ ಮದುವೆ ಆಗಿಲ್ಲ? ಎಂಬ ಪ್ರಶ್ನೆಗಳನ ನಡುವೆ ಅವರು ಸದ್ದಿಲ್ಲದೇ, ಸಿಂಪಲ್‌ ಆಗಿ ಹಸೆ ಮಣೆ ಏರಿದ್ದಾರೆ. ಮೂಲಗಳ ಪ್ರಕಾರ ಸಿರಿ ಮದುವೆಯಾದ ಹುಡುಗನ ಹೆಸರು ಪ್ರಭಾಕರ್. ಮಂಡ್ಯ ಮೂಲದವರಾದ ಇವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಇವರಿಬ್ಬರೂ ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿ ಮದುವೆ ಮಾಡಿಕೊಂಡಿದ್ದಾರೆ.

ಬಿಗ್ ಬಾಸ್ ಸಿರಿ ಮದುವೆಯಾಗಿರುವ ಹುಡುಗ ಮೂಲತಃ ಮಂಡ್ಯದವರು ಸದ್ಯ ಬೆಂಗಳೂರಿನಲ್ಲಿ ನಲೆಸಿದ್ದಾರೆ. ಅವರ ಹೆಸರು ಪ್ರಭಾಕರ್ ಬೋರೇಗೌಡ. ಪ್ರಭಾಕರ್‌ ಬೋರೇಗೌಡ ಮತ್ತು ಸಿರಿ ಒಟ್ಟಿಗೆ ನಟಿಸಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್‌ ಮನೆಯಿಂದ ಸಿರಿ ಎಲಿಮಿನೇಟ್‌ ಆದ ಬಳಿಕ ಸಿರಿ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ. ‘ನಿಮ್ಮಲ್ಲರ ಸಪೋರ್ಟ್‌ಗೆ ವಂದನೆಗಳು’ ಎಂದು ಪ್ರಭಾಕರ್ ಬರೆದುಕೊಂಡಿದ್ದರು.

ಇವರಿಬ್ಬರ ಪರಿಚಯ ಆಗಿದ್ದು ಹೇಗೆ? ಲವ್ ಮ್ಯಾರೇಜ್ ಆಗಿರಬಹುದಾ? ಬಿಗ್ ಬಾಸ್‌ ನಂತರ ಅರಳಿದ ಪ್ರೀತಿನಾ ಎಂದು ಜನರು ಕಮೆಂಟ್‌ ಮೂಲಕ ಪ್ರಶ್ನೆ ಇಡುತ್ತಿದ್ದಾರೆ.

ಇದನ್ನೂ ಓದಿ: Actress Siri: ಸಿಂಪಲ್‌ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ `ಬಿಗ್‌ ಬಾಸ್‌ ಕನ್ನಡ 10′ ಸ್ಪರ್ಧಿ, ನಟಿ ಸಿರಿ!

ಸಿರಿ ಅವರಿಗೆ ಮೈತುಂಬ ಅರಿಷಿಣ ಹಚ್ಚಿರುವ ವಿಡಿಯೊ ವೈರಲ್ ಆಗಿದೆ. ಇದು ಸಿನಿಮಾ ಅಥವಾ ಧಾರಾವಾಹಿ ಶೂಟಿಂಗ್ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಸಿರಿ ಅವರು ರಿಯಲ್ ಲೈಫ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಹುಡುಗ ಯಾರು ಎಂಬುದು ಇನ್ನೂ ರಿವೀಲ್‌ ಆಗಿಲ್ಲ. ಹಾಗೇ ಸಿರಿ ಕೂಡ ಎಲ್ಲಿಯೂ ಪೋಸ್ಟ್‌ ಶೇರ್‌ ಮಾಡಿಕೊಂಡಿಲ್ಲ. ಸಿರಿ ಅವರಿಗೆ ಈಗ 40 ವರ್ಷ ವಯಸ್ಸು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಕಲರ್ಸ್‌ ಕನ್ನಡದ ʻರಾಮಾಚಾರಿʼ ಧಾರಾವಾಹಿಯಲ್ಲಿ ನಟಿ ಬಣ್ಣ ಹಚ್ಚಿದ್ದರು. ಈಗ ಪರಭಾಷೆಯ ಕಿರುತೆರೆಯಲ್ಲಿಯೂ ಮಿಂಚುತ್ತಿದ್ದಾರೆ. ಕೆಲ ಸಿನಿಮಾಗಳಲ್ಲಿ ಕೂಡ ಸಿರಿ ಅವರು ನಟಿಸಿದ್ದಾರೆ. 30 ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ ಸಿರಿವಂತೆಯಾಗಿ ಮೆರೆದ ಸಿರಿ ಯಾಕೆ ಮದುವೆಯಾಗಲಿಲ್ಲ ಎಂದು ನೆಟ್ಟಿಗರು ನಟಿಗೆ ಹಲವು ಬಾರಿ ಪ್ರಶ್ನೆ ಮಾಡಿದ್ದೂ ಇದೆ.

ಬಿಗ್‌ ಬಾಸ್‌ ವೇದಿಕೆಯಲ್ಲಿ ಈ ಬಗ್ಗೆ ಸಿರಿ ಮಾತನಾಡಿದ್ದು ಇದೆ. ಮದುವೆ ಬಗ್ಗೆ ಸಿರಿ ಮಾತನಾಡಿ ʻʻನಟನೆಯಲ್ಲಿ ಇರುವುದರಿಂದ ನನ್ನನ್ನು ಅರ್ಥ ಮಾಡಿಕೊಳ್ಳುವ ಹುಡುಗ ಬೇಕು. ಈಗ ನನ್ನ ಮನೆಗೆ ಅಳಿಯ ಎನ್ನುವುದಕ್ಕಿಂತ ಮಗನಾಗಿ ಬರಬೇಕು. ತಂದೆ ಹೋದ ಮೇಲೆ ನಾವು ಹೆಣ್ಣು ಮಕ್ಕಳೇ ಇರುವುದು. ಮದುವೆ ನನಗೆ ನಿಜವಾಗಲೂ ಬೇಕಾ ಎಂದು ಕೆಲವೊಮ್ಮೆ ಅನ್ನಿಸಿದಾಗ ನನಗೇನು ಮದುವೆ ಅವಶ್ಯ ಇದೆ ಎಂದು ಎನಿಸಲಿಲ್ಲʼʼ ಎಂದಿದ್ದರು. ಮದುವೆ ಬಗ್ಗೆ ಸಿರಿ ಮಾತನಾಡಿ ʻʻನಟನೆಯಲ್ಲಿ ಇರುವುದರಿಂದ ನನ್ನನ್ನು ಅರ್ಥ ಮಾಡಿಕೊಳ್ಳುವ ಹುಡುಗ ಬೇಕು. ಈಗ ನನ್ನ ಮನೆಗೆ ಅಳಿಯ ಎನ್ನುವುದಕ್ಕಿಂತ ಮಗನಾಗಿ ಬರಬೇಕು. ತಂದೆ ಹೋದ ಮೇಲೆ ನಾವು ಹೆಣ್ಣು ಮಕ್ಕಳೇ ಇರುವುದು. ಮದುವೆ ನನಗೆ ನಿಜವಾಗಲೂ ಬೇಕಾ ಎಂದು ಕೆಲವೊಮ್ಮೆ ಅನ್ನಿಸಿದಾಗ ನನಗೇನು ಮದುವೆ ಅವಶ್ಯ ಇದೆ ಎಂದು ಎನಿಸಲಿಲ್ಲʼʼ ಎಂದಿದ್ದರು.

ಬಿಗ್‌ಬಾಸ್‌ ಮನೆಗೆ ಇವರ ವ್ಯಕ್ತಿತ್ವ ಹೊಂದುವುದಿಲ್ಲ’, ‘ಯಾವುದರಲ್ಲಿಯೂ ಅಷ್ಟಾಗಿ ತೊಡಗಿಕೊಳ್ಳುವುದಿಲ್ಲ’ ‘ಟಾಸ್ಕ್‌ಗಳಲ್ಲಿ ಪರ್ಫಾರ್ಮ್‌ ಮಾಡಿಲ್ಲ’ ಇಂಥ ಮಾತುಗಳನ್ನೆಲ್ಲ ಮನೆಯ ಸದಸ್ಯರಿಂದ ಕೇಳುತ್ತಲೇ ಬಿಗ್‌ಬಾಸ್‌ ಸೀಸನ್‌ನ ಮುಕ್ಕಾಲು ದಾರಿಯನ್ನು ಕ್ರಮಿಸಿ ಸೈ ಎನಿಸಿಕೊಂಡಿದ್ದರು ಸಿರಿ.

Continue Reading

ಬಿಗ್ ಬಾಸ್

Actress Siri: ಸಿಂಪಲ್‌ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ `ಬಿಗ್‌ ಬಾಸ್‌ ಕನ್ನಡ 10′ ಸ್ಪರ್ಧಿ, ನಟಿ ಸಿರಿ!

Actress Siri: ಬಿಗ್‌ಬಾಸ್‌ ಮನೆಗೆ ಇವರ ವ್ಯಕ್ತಿತ್ವ ಹೊಂದುವುದಿಲ್ಲ’, ‘ಯಾವುದರಲ್ಲಿಯೂ ಅಷ್ಟಾಗಿ ತೊಡಗಿಕೊಳ್ಳುವುದಿಲ್ಲ’ ‘ಟಾಸ್ಕ್‌ಗಳಲ್ಲಿ ಪರ್ಫಾರ್ಮ್‌ ಮಾಡಿಲ್ಲ’ ಇಂಥ ಮಾತುಗಳನ್ನೆಲ್ಲ ಮನೆಯ ಸದಸ್ಯರಿಂದ ಕೇಳುತ್ತಲೇ ಬಿಗ್‌ಬಾಸ್‌ ಸೀಸನ್‌ನ ಮುಕ್ಕಾಲು ದಾರಿಯನ್ನು ಕ್ರಮಿಸಿ ಸೈ ಎನಿಸಿಕೊಂಡಿದ್ದರು ಸಿರಿ.

VISTARANEWS.COM


on

Actress Bbk 10 Siri Marriage Video Goes Viral
Koo

ಬೆಂಗಳೂರು: ‘ರಂಗೋಲಿ’, ‘ಮನೆಯೊಂದು ಮೂರು ಬಾಗಿಲು’, ‘ಬದುಕು’ ಮುಂತಾದ ಧಾರಾವಾಹಿಗಳನ್ನು ಪ್ರೇಕ್ಷಕರು ಮನಗೆದ್ದ ಸಿರಿ ಬಿಗ್ ಬಾಸ್ (BBK Season 10) ಈಗ ಮದುವೆಯಾಗಿದ್ದಾರೆ. ಇನ್ನೂ (Actress Siri) ಯಾಕೆ ಮದುವೆ ಆಗಿಲ್ಲ? ಎಂಬ ಪ್ರಶ್ನೆ ಅವರ ಫ್ಯಾನ್ಸ್‌ನಲ್ಲಿ ಪದೇ ಪದೇ ಕಾಡುತ್ತಿತ್ತು. ಈಗ ಸದ್ದಿಲ್ಲದೇ ಸಿಂಪಲ್‌ ಆಗಿ ಮದುವೆಯಾಗಿದ್ದಾರೆ ಸಿರಿ.

ಸಿರಿ ಅವರಿಗೆ ಮೈತುಂಬ ಅರಿಷಿಣ ಹಚ್ಚಿರುವ ವಿಡಿಯೊ ವೈರಲ್ ಆಗಿದೆ. ಇದು ಸಿನಿಮಾ ಅಥವಾ ಧಾರಾವಾಹಿ ಶೂಟಿಂಗ್ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಸಿರಿ ಅವರು ರಿಯಲ್ ಲೈಫ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಹುಡುಗ ಯಾರು ಎಂಬುದು ಇನ್ನೂ ರಿವೀಲ್‌ ಆಗಿಲ್ಲ. ಹಾಗೇ ಸಿರಿ ಕೂಡ ಎಲ್ಲಿಯೂ ಪೋಸ್ಟ್‌ ಶೇರ್‌ ಮಾಡಿಕೊಂಡಿಲ್ಲ. ಸಿರಿ ಅವರಿಗೆ ಈಗ 40 ವರ್ಷ ವಯಸ್ಸು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಕಲರ್ಸ್‌ ಕನ್ನಡದ ʻರಾಮಾಚಾರಿʼ ಧಾರಾವಾಹಿಯಲ್ಲಿ ನಟಿ ಬಣ್ಣ ಹಚ್ಚಿದ್ದರು. ಈಗ ಪರಭಾಷೆಯ ಕಿರುತೆರೆಯಲ್ಲಿಯೂ ಮಿಂಚುತ್ತಿದ್ದಾರೆ. ಕೆಲ ಸಿನಿಮಾಗಳಲ್ಲಿ ಕೂಡ ಸಿರಿ ಅವರು ನಟಿಸಿದ್ದಾರೆ. 30 ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ ಸಿರಿವಂತೆಯಾಗಿ ಮೆರೆದ ಸಿರಿ ಯಾಕೆ ಮದುವೆಯಾಗಲಿಲ್ಲ ಎಂದು ನೆಟ್ಟಿಗರು ನಟಿಗೆ ಹಲವು ಬಾರಿ ಪ್ರಶ್ನೆ ಮಾಡಿದ್ದೂ ಇದೆ.

ಇದನ್ನೂ ಓದಿ: Kotee Movie: ಡಾಲಿ ಧನಂಜಯ್ ಅಭಿನಯದ ‘ಕೋಟಿ’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ

ಬಿಗ್‌ ಬಾಸ್‌ ವೇದಿಕೆಯಲ್ಲಿ ಈ ಬಗ್ಗೆ ಸಿರಿ ಮಾತನಾಡಿದ್ದು ಇದೆ. ಮದುವೆ ಬಗ್ಗೆ ಸಿರಿ ಮಾತನಾಡಿ ʻʻನಟನೆಯಲ್ಲಿ ಇರುವುದರಿಂದ ನನ್ನನ್ನು ಅರ್ಥ ಮಾಡಿಕೊಳ್ಳುವ ಹುಡುಗ ಬೇಕು. ಈಗ ನನ್ನ ಮನೆಗೆ ಅಳಿಯ ಎನ್ನುವುದಕ್ಕಿಂತ ಮಗನಾಗಿ ಬರಬೇಕು. ತಂದೆ ಹೋದ ಮೇಲೆ ನಾವು ಹೆಣ್ಣು ಮಕ್ಕಳೇ ಇರುವುದು. ಮದುವೆ ನನಗೆ ನಿಜವಾಗಲೂ ಬೇಕಾ ಎಂದು ಕೆಲವೊಮ್ಮೆ ಅನ್ನಿಸಿದಾಗ ನನಗೇನು ಮದುವೆ ಅವಶ್ಯ ಇದೆ ಎಂದು ಎನಿಸಲಿಲ್ಲʼʼ ಎಂದಿದ್ದರು. ಮದುವೆ ಬಗ್ಗೆ ಸಿರಿ ಮಾತನಾಡಿ ʻʻನಟನೆಯಲ್ಲಿ ಇರುವುದರಿಂದ ನನ್ನನ್ನು ಅರ್ಥ ಮಾಡಿಕೊಳ್ಳುವ ಹುಡುಗ ಬೇಕು. ಈಗ ನನ್ನ ಮನೆಗೆ ಅಳಿಯ ಎನ್ನುವುದಕ್ಕಿಂತ ಮಗನಾಗಿ ಬರಬೇಕು. ತಂದೆ ಹೋದ ಮೇಲೆ ನಾವು ಹೆಣ್ಣು ಮಕ್ಕಳೇ ಇರುವುದು. ಮದುವೆ ನನಗೆ ನಿಜವಾಗಲೂ ಬೇಕಾ ಎಂದು ಕೆಲವೊಮ್ಮೆ ಅನ್ನಿಸಿದಾಗ ನನಗೇನು ಮದುವೆ ಅವಶ್ಯ ಇದೆ ಎಂದು ಎನಿಸಲಿಲ್ಲʼʼ ಎಂದಿದ್ದರು.

ಬಿಗ್‌ಬಾಸ್‌ ಮನೆಗೆ ಇವರ ವ್ಯಕ್ತಿತ್ವ ಹೊಂದುವುದಿಲ್ಲ’, ‘ಯಾವುದರಲ್ಲಿಯೂ ಅಷ್ಟಾಗಿ ತೊಡಗಿಕೊಳ್ಳುವುದಿಲ್ಲ’ ‘ಟಾಸ್ಕ್‌ಗಳಲ್ಲಿ ಪರ್ಫಾರ್ಮ್‌ ಮಾಡಿಲ್ಲ’ ಇಂಥ ಮಾತುಗಳನ್ನೆಲ್ಲ ಮನೆಯ ಸದಸ್ಯರಿಂದ ಕೇಳುತ್ತಲೇ ಬಿಗ್‌ಬಾಸ್‌ ಸೀಸನ್‌ನ ಮುಕ್ಕಾಲು ದಾರಿಯನ್ನು ಕ್ರಮಿಸಿ ಸೈ ಎನಿಸಿಕೊಂಡಿದ್ದರು ಸಿರಿ.

Continue Reading

ಕಿರುತೆರೆ

Kannada Serials TRP: ಟ್ರ್ಯಾಕ್‌ಗೆ ಬಂದ ʻಸೀತಾ ರಾಮʼ ; ʻನಿನಗಾಗಿʼ ಧಾರಾವಾಹಿಗೆ ಕಡಿಮೆ ಟಿಆರ್‌ಪಿ

Kannada Serials TRP: ಕಳೆದ ಕೆಲ ವಾರಗಳಿಂದ ‘ಪುಟ್ಟಕ್ಕನ ಮಕ್ಕಳು’ (Puttakkana Makkalu) ಧಾರಾವಾಹಿ ಮೊದಲ ಸ್ಥಾನ ಕಾಪಾಡಿಕೊಂಡು ಬರುತ್ತಿದೆ. ಎಂದಿನಂತೆ ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿಗೆ ಆರಂಭದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿತ್ತು. ಹಾಗೇ ಕಲರ್ಸ್‌ ಕನ್ನಡದ ನಿನಗಾಗಿ ಎಂಬ ಹೊಸ ಧಾರಾವಾಹಿ ಈ ಬಾರಿ ಟಿಆರ್‌ಪಿಯಲ್ಲಿ ಕುಸಿದಿದೆ.

VISTARANEWS.COM


on

Kannada Serials TRP seetha rama grow Ninagaagi serial full down
Koo

ಬೆಂಗಳೂರು: ಪ್ರತಿ ಬಾರಿ ಜೀ ಕನ್ನಡ ವಾಹಿನಿ ಧಾರಾವಾಹಿಯ (Kannada Serials TRP) ʻಲಕ್ಷ್ಮೀ ನಿವಾಸʼ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುತ್ತಿತ್ತು. ಆದರೆ ʻಪುಟ್ಟಕನ ಮಕ್ಕಳುʼ ಧಾರಾವಾಹಿ ಭಾರಿ ಪೈಪೋಟಿ ನೀಡುತ್ತಿರುವುದರಿಂದ ಭರ್ಜರಿ ಟಿಆರ್‌ಪಿ ಪಡೆದುಕೊಳ್ಳುತ್ತಿದೆ. ಕಳೆದ ಕೆಲ ವಾರಗಳಿಂದ ‘ಪುಟ್ಟಕ್ಕನ ಮಕ್ಕಳು’ (Puttakkana Makkalu) ಧಾರಾವಾಹಿ ಮೊದಲ ಸ್ಥಾನ ಕಾಪಾಡಿಕೊಂಡು ಬರುತ್ತಿದೆ. ಎಂದಿನಂತೆ ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿಗೆ ಆರಂಭದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿತ್ತು. ಹಾಗೇ ಕಲರ್ಸ್‌ ಕನ್ನಡದ ನಿನಗಾಗಿ ಎಂಬ ಹೊಸ ಧಾರಾವಾಹಿ ಈ ಬಾರಿ ಟಿಆರ್‌ಪಿಯಲ್ಲಿ ಕುಸಿದಿದೆ.

‘ಪುಟ್ಟಕ್ಕನ ಮಕ್ಕಳು’

ಈ ವಾರ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಈಗಾಗಲೇ ಧಾರಾವಾಹಿ 675 ಎಪಿಸೋಡ್​ಗಳನ್ನು ಪೂರ್ಣಗೊಳಿಸಿದೆ. ಉಮಾಶ್ರೀ, ಸಂಜನಾ ಬುರ್ಲಿ ಮೊದಲಾದವರ ನಟನೆ ಗಮನ ಸೆಳೆದಿದೆ. ʼಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಪುಟ್ಟಕ್ಕ ಕುಟುಂಬ ಸಹನಾ ತೀರಿ ಹೋಗಿದ್ದಾಳೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಸಹನಾ ಏನನ್ನಾದರೂ ಸಾಧಿಸಬೇಕೆಂಬ ಛಲ ಹೊತ್ತಿದ್ದಾಳೆ. ಹೀಗಾಗಿ ಈ ಕಥೆ ಹಲವು ಟ್ವಿಸ್ಟ್ ಪಡೆದು ಸಾಗುತ್ತಿರುವುದರಿಂದ ಪ್ರೇಕ್ಷಕರು ಕೂಡ ಧಾರಾವಾಹಿಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಈ ಮೊದಲು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಎರಡಂಕಿಯ ಟಿಆರ್​ಪಿ ಪಡೆದಿತ್ತು. ಈಗಲೂ ಧಾರಾವಾಹಿಗೆ ಮತ್ತೆ ಅದೇ ರೀತಿಯ ಬೇಡಿಕೆ ಸೃಷ್ಟಿ ಆಗಿದೆ. ಈ ಧಾರಾವಾಹಿಗೆ ಹಲವು ಟ್ವಿಸ್ಟ್​ಗಳು ಸಿಕ್ಕಿರುವುದರಿಂದ ಧಾರಾವಾಹಿಯನ್ನು ಜನರು ಹೆಚ್ಚೆಚ್ಚು ವೀಕ್ಷಿಸುತ್ತಿದ್ದಾರೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (puttakkana makkalu Serial) ಶುರುವಾಗಿ ಎರಡು ವರ್ಷಗಳು ಸಂದಿವೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಇದನ್ನೂ ಓದಿ: Kannada Serials TRP: ಟಿಆರ್‌ಪಿ ರೇಸ್‌ನಲ್ಲಿ ʻಶ್ರೀಗೌರಿ,ʼ ʻನಿನಗಾಗಿʼ; ʻಅಮೃತಧಾರೆʼ ಜಿಗಿತ!

ಲಕ್ಷ್ಮೀ ನಿವಾಸ ಧಾರಾವಾಹಿ

ಸಾಯಿ ನಿರ್ಮಲ ಪ್ರೊಡಕ್ಷನ್‌ ಸಂಸ್ಥೆಯ ನಿರ್ಮಾಣ, ಆದರ್ಶ್ ಉಮೇಶ್ ಹೆಗಡೆ ನಿರ್ದೇಶನ ಈ ಧಾರಾವಾಹಿಗೆ (lakshmi nivasa kannada serial) ಇದೆ. ಕಿರುತೆರೆಯಲ್ಲಿ ಈ ಹಿಂದೆ ಹೀರೊ ಹೀರೋಯಿನ್‌ಗಳಾಗಿ‌ ಮಿಂಚಿದ್ದ ಹಲವು ಅನುಭವಿ ಕಲಾವಿದರು ಈ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿದ್ದಾರೆ. ಆರಂಭದಲ್ಲಿ ಒಳ್ಳೆಯ ಟಿಆರ್‌ಪಿಯನ್ನು ಪಡೆದುಕೊಂಡಿತ್ತು. ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಿಂದಾಗಿ ಈಗ ಟಿಆರ್‌ಪಿ ಅಂಕದಲ್ಲಿ ಕುಸಿತ ಕಂಡಿದೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಎರಡನೇ ಸ್ಥಾನದಲ್ಲಿ ಈ ಬಾರಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಮೊದಲು ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇರುತ್ತಿತ್ತು. ಆ ಧಾರಾವಾಹಿಯನ್ನು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಹಿಂದಿಕ್ಕಿದೆ. ಎಂದಿನಂತೆ ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿಗೆ ಆರಂಭದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿತ್ತು. ಕೆಲವು ವಾರ ಈ ಧಾರಾವಾಹಿ ಮೊದಲ ಸ್ಥಾನ ಕೂಡ ಪಡೆದಿತ್ತು. ಈಗ ಅದೇ ಬೇಡಿಕೆಯನ್ನು ಧಾರಾವಾಹಿ ಉಳಿಸಿಕೊಂಡಿದೆಯಾದರೂ, ‘ಪುಟ್ಟಕನ ಮಕ್ಕಳು’ ಧಾರಾವಾಹಿಯನ್ನು ಹಿಂದಿಕ್ಕಲು ಸಾಧ್ಯವಾಗುತ್ತಿಲ್ಲ.

ಶ್ರಾವಣಿ ಸುಬ್ರಮಣ್ಯ

ಕೆಲವು ದಿನಗಳ ಹಿಂದೆಯಷ್ಟೇ ಜೀ ಕನ್ನಡ ಧಾರಾವಾಹಿಯಲ್ಲಿ ಶ್ರಾವಣಿ ಸುಬ್ರಮಣ್ಯ ಪ್ರಸಾರ ಕಾಣುತ್ತಿದೆ. ಇದು ಈಗ ಮೂರನೇ ಸ್ಥಾನದಲ್ಲಿದೆ. ಸೀತಾ ರಾಮ ಧಾರಾವಾಹಿ ಹಿಂದಿಕ್ಕಿ ಮುಂದೆ ಸಾಗುತ್ತಿದೆ. ಈ ಮೊದಲು ಪ್ರಸಾರ ಕಾಣುತ್ತಿದ್ದ ಬೇಡಿಕೆಯ ಧಾರಾವಾಹಿಗಳ ಟಿಆರ್​ಪಿಯನ್ನು ಈ ಧಾರಾವಾಹಿ ಹಿಂದಿಕ್ಕಿದೆ. ಮನೆಯಲ್ಲಿ ಸಿರಿವಂತಿಕೆಯ ತುಂಬಿದ್ದರೂ ಅಪ್ಪನ ಪ್ರೀತಿಗಾಗಿ ಹಾತೊರೆಯುವ ಮಗಳು ಒಂದೆಡೆಯಾದರೆ ಮನೆಯಲ್ಲಿ ಬಡತನವಿದ್ದರೂ ಪ್ರೀತಿಯಲ್ಲಿ ಶ್ರೀಮಂತರಾಗಿರುವ ಮಧ್ಯಮ ವರ್ಗದ ಕುಟುಂಬದ ಕಥೆಯ ಜತೆ ಎರಡು ಹೃದಯಗಳ ಕಥೆಯನ್ನು ಶ್ರಾವಣಿ ಸುಬ್ರಹ್ಮಣ್ಯ ಮೂಲಕ ಚಾನೆಲ್‌ ಪ್ರೇಕ್ಷಕರ ಮುಂದಿಟ್ಟಿದೆ. ಹಿರಿಯ ಕಲಾವಿದರಾದ ಮೋಹನ್‌ ಮತ್ತು ಬಾಲರಾಜ್‌ , ಕಿರುತೆರೆಯ ಖ್ಯಾತ ಕಲಾವಿದೆಯೆರಾದ ಅಪೂರ್ವ ಮತ್ತು ಸ್ನೇಹ ಇವರು ಜೊತೆ ಯುವ ಕಲಾವಿದರು ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಸೀತಾರಾಮ

ನಾಲ್ಕನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ. ರಾಮ್ ಹಾಗೂ ಸೀತಾಳ ಎಂಗೇಜ್​ಮೆಂಟ್ ಆಗಿದೆ. ಇವರ ಮಧ್ಯೆ ಪ್ರೀತಿ ಮೂಡಿದೆ. ಈ ಧಾರಾವಾಹಿ ಕೂಡ ಪ್ರೇಕ್ಷಕರಿಗೆ ಇಷ್ಟ ಆಗಿದೆ.

ಅಮೃತಧಾರೆ

ಐದನೇ ಸ್ಥಾನದಲ್ಲಿ ʼಅಮೃತಧಾರೆ’ ಧಾರಾವಾಹಿ ಇದೆ. ಸಾಕಷ್ಟು (amrithadhare serial kannada) ಟ್ವಿಸ್ಟ್​ಗಳನ್ನು ಪಡೆದು ಸಾಗುತ್ತಿದೆ. ಭೂಮಿಕಾ ಮತ್ತು ಗೌತಮ್‌ ಫಸ್ಟ್‌ನೈಟ್‌ ಎಪಿಸೋಡ್‌ ಒಳ್ಳೆಯ ವೀಕ್ಷಣೆ ಕಂಡಿದೆ. ಛಾಯಾ ಸಿಂಗ್ ಹಾಗೂ ರಾಜೇಶ್ ನಟರಂಗ ಅವರ ಕಾಂಬಿನೇಷನ್ ಜನರಿಗೆ ಇಷ್ಟ ಆಗಿದೆ. ಈ ಧಾರಾವಾಹಿ ಉತ್ತಮ ಟಿಆರ್​ಪಿ (Kannada Serials TRP) ಪಡೆದುಕೊಳ್ಳುತ್ತಿದೆ. ನಟರಂಗ, ಛಾಯಾ ಸಿಂಗ್, ಸಾರಾ ಅಣ್ಣಯ್ಯ ಮೊದಲಾದವರು ನಟಿಸುತ್ತಿದ್ದಾರೆ. 

ಹೊಸ ಧಾರಾವಾಹಿ ‘ನಿನಗಾಗಿ’ ಟಿಆರ್​ಪಿ ಕಡಿಮೆ ಆಗಿದೆ. ಈ ಧಾರಾವಾಹಿ 22ನೇ ವಾರದಲ್ಲಿ ಆರನೇ ಸ್ಥಾನ ಪಡೆದಿತ್ತು. 23ನೇ ವಾರದ ಧಾರಾವಾಹಿಯಲ್ಲಿ ಒಂಭತ್ತನೇ ಸ್ಥಾನಕ್ಕೆ ಇಳಿದಿದೆ. ಈ ಧಾರಾವಾಹಿಯಲ್ಲಿ ದಿವ್ಯಾ ಉರುಡುಗ ನಟಿಸುತ್ತಿದ್ದಾರೆ. ನಿನಗಾಗಿ’ ಧಾರಾವಾಹಿಯಲ್ಲಿ ಕಥಾನಾಯಕನಾಗಿ ರಿತ್ವಿಕ್ ಮಠದ್ ಅಭಿನಯಿಸುತ್ತಿದ್ದಾರೆ. ಪ್ರಿಯಾಂಕಾ ಕಾಮತ್, ಕಿಶನ್ ಬೆಳಗಲಿ, ಲೋಕೇಶ್, ವಿಜಯ್ ಕೌಂಡಿನ್ಯ, ಸಾನಿಯಾ ಪೊಣ್ಣಮ್ಮ ದೇವಿ, ಸಿರಿ ಸಿಂಚನ ಮುಂತಾದವರಿದ್ದಾರೆ.

ಶ್ರೀಗೌರಿ ಕೂಡ ಬೇಡಿಕೆ ಉಳಿಸಿಕೊಂಡಿದೆ. ‘ಭಾಗ್ಯಲಕ್ಷ್ಮೀ’ ಹಾಗೂ ‘ಲಕ್ಷ್ಮಿ ಬಾರಮ್ಮ’ಗೆ ಮೊದಲಿನಷ್ಟು ಬೇಡಿಕೆ ಇಲ್ಲ. ಮುಖ್ಯ ಭೂಮಿಕೆಯಲ್ಲಿ ‘ಕಮಲಿ’ ಧಾರಾವಾಹಿಯ ಅಮೂಲ್ಯ ಗೌಡ ಅಭಿನಯ ಮಾಡಿದ್ದಾರೆ. ಅಮೂಲ್ಯ ಮೊದಲು ʻಅನುರಾಗ ಸಂಗಮʼ ಎನ್ನುವ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು. ʻಸ್ವಾತಿ ಮುತ್ತುʼ, ʻಪುನರ್ ವಿವಾಹʼ, ʻಅರಮನೆʼ, ಧಾರಾವಾಹಿಯಲ್ಲಿ ಅಭಿನಯ ಮಾಡಿದ್ದಾರೆ. ಅಮೂಲ್ಯ ಗೌಡಗೆ ಹೆಚ್ಚು ಖ್ಯಾತಿ ತಂದುಕೊಟ್ಟ ಧಾರಾವಾಹಿ ಕಮಲಿ. ‘ಬಿಗ್ ಬಾಸ್ ಒಟಿಟಿ’ ಮೂಲಕ ಜನಪ್ರಿಯತೆ ಪಡೆದ ಅಮೂಲ್ಯ ಗೌಡ ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ.

Continue Reading
Advertisement
Actor Chikkanna
ಕರ್ನಾಟಕ27 mins ago

Actor Chikkanna: ದರ್ಶನ್‌ ಊಟಕ್ಕೆ ಕರೆದಿದ್ರು, ಹೋಗಿದ್ದೆ; ಪೊಲೀಸ್‌ ವಿಚಾರಣೆ ಬಳಿಕ ಚಿಕ್ಕಣ್ಣ ಫಸ್ಟ್‌ ರಿಯಾಕ್ಷನ್!

Kalki 2898 AD Movie Bhairava Anthem Released
ಕರ್ನಾಟಕ1 hour ago

Kalki 2898 AD: ʼಕಲ್ಕಿ 2898 ADʼ ಚಿತ್ರದ ಭೈರವ ಆಂಥಮ್‌ ರಿಲೀಸ್‌!

Union Minister HD Kumaraswamy visit Shira
ತುಮಕೂರು1 hour ago

Shira News: ಶಿರಾಕ್ಕೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಭೇಟಿ

Maharashtra government appoints Marathi teachers to Kannada schools; Ashoka Chandragi wrote a letter to CM Siddaramaiah
ಬೆಳಗಾವಿ1 hour ago

Belagavi News: ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರು! ಮುಖ್ಯಮಂತ್ರಿಗಳೇ ಗಮನ ಹರಿಸಿ

District administration failed to prevent illegal activities in the district MLA Janardhana Reddy alleges
ಕರ್ನಾಟಕ1 hour ago

Koppala News: ಜಿಲ್ಲೆಯಲ್ಲಿ ಕಾನೂನುಬಾಹಿರ ಚಟುವಟಿಕೆ ತಡೆಯುವಲ್ಲಿ ಜಿಲ್ಲಾಡಳಿತ ವಿಫಲ; ಶಾಸಕ ಜನಾರ್ದನ ರೆಡ್ಡಿ ಆರೋಪ

Pushpa 2
ಸಿನಿಮಾ1 hour ago

Pushpa 2: ಪುಷ್ಪ 2 ಸಿನಿಮಾ ಬಿಡುಗಡೆ 5 ತಿಂಗಳು ಮುಂದೂಡಿಕೆ; ಇಲ್ಲಿದೆ ಹೊಸ ಡೇಟ್

HD Kumaraswamy
ಕರ್ನಾಟಕ2 hours ago

HD Kumaraswamy: ಕೊಬ್ಬರಿಗೆ 16-18 ಸಾವಿರ ಬೆಂಬಲ ಬೆಲೆ ಕೊಡಿಸುವೆ: ರೈತರಿಗೆ ಎಚ್‌ಡಿಕೆ ಭರವಸೆ

Narendra Modi
ದೇಶ2 hours ago

ಪೋಪ್‌-ಮೋದಿ ಭೇಟಿಯನ್ನು ಲೇವಡಿ ಮಾಡಲು ಹೋದ ಕಾಂಗ್ರೆಸ್‌ಗೆ ಮುಖಭಂಗ; ಕ್ರೈಸ್ತರ ಕ್ಷಮೆ ಕೇಳಿದ್ದೇಕೆ?

Health Tips Kannada
Latest2 hours ago

Health Tips Kannada: ನೆನಪಿಡಿ, ನಾಲಿಗೆ ಬಯಸುವ ಆಹಾರಗಳನ್ನೆಲ್ಲ ನಿಮ್ಮ ಮಿದುಳು ಬಯಸದು!

Petrol Diesel Price Hike
ಕರ್ನಾಟಕ2 hours ago

Petrol Diesel Price Hike: ಕೇಂದ್ರ ಸರ್ಕಾರ ಹಣ ಕೊಟ್ಟಿದ್ರೆ ತೆರಿಗೆ ಹೆಚ್ಚಿಸುವ ಅಗತ್ಯವೇ ಇರ್ತಿರಲಿಲ್ಲ: ಸಿಎಂ ಸಿದ್ದರಾಮಯ್ಯ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು9 hours ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು10 hours ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 day ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 day ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 day ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌