Site icon Vistara News

Paaru Serial: ಬಾತ್‌ರೂಮ್‌ಗೆ ನುಗ್ಗುತ್ತಿದ್ರು, ಎಲ್ಲೆಲ್ಲೋ ಕೈ ಹಾಕ್‌ತಿದ್ರು! ಕಣ್ಣೀರಿಟ್ಟ ‘ಪಾರು’ ಧಾರಾವಾಹಿಯ ನಟಿ ಸಿತಾರಾ

Paaru Serial Daamini Fame Sitara

ಬೆಂಗಳೂರು: ಪಾರು ಧಾರಾವಾಹಿಯಲ್ಲಿ (Paaru Serial: ) ನಟಿ ಸಿತಾರಾ ಅವರು ದಾಮಿನಿ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಕಾಮಿಡಿಯನ್‌ ಪಾತ್ರ ಮಾಡಿದ್ದರೂ ಇವರೂ ಸಹ ತಮ್ಮದೇ ಅಭಿಮಾನಿ ಬಳಗ ಹೊಂದಿದ್ದಾರೆ. ಸಿತಾರಾ ಅವರು ಹಲವು ಬಾರಿ ಹಲವು ವೇದಿಕೆಯಲ್ಲಿ ತಮ್ಮ ವೈಯಕ್ತಿಕ ಜೀವನದ ಕುರಿತು ಮಾತನಾಡಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಡಿವೋರ್ಸ್‌ ಹಂತದಲ್ಲಿ ತನ್ನ ಜೀವನ ಇದೆ ಎಂದು ನಟಿ ಹೇಳಿಕೊಂಡಿದ್ದಾರೆ. ತನ್ನ ಜತೆಗೆ ಕೆಟ್ಟದಾಗಿ ವರ್ತಿಸಿದವರ ಹೆಸರನ್ನು ಹೇಳದೇ, ಅಂದಿನ ಕರಾಳ ಸ್ಥಿತಿಯನ್ನು ನಟಿ ಕಣ್ಣೀರಿಡುತ್ತಲೇ ವಿವರಿಸಿದ್ದಾರೆ.

ನನ್ನ ಜೀವನದ ದೊಡ್ಡ ತಪ್ಪು ಸಾಣೆಹಳ್ಳಿ ಮಠ ಬಿಟ್ಟು ಬಂದದ್ದು

ನಟಿ ಮಾತನಾಡಿ ʻʻನಿಮ್ಮ ಮೇಲೆ ನಿಮಗೆ ನಂಬಿಕೆ ಇದ್ದರೆ ಮಾತ್ರ ಹೊರಬರಬೇಕು. ಬದುಕುತ್ತೇನೆ ಎಂದಾಗ ಮಾತ್ರ ಹೊರಬನ್ನಿ. ಯಾರೋ ಸಾಕುತ್ತಾರೆ, ಯಾರೋ ಬಂದು ಅನ್ನ ಹಾಕುತ್ತಾರೆ ಎಂದು ಹೊರಬಂದರೆ, ನನ್ನ ಥರ ಕಣ್ಣೀರು ಹಾಕಬೇಕಾಗುತ್ತದೆ. ಸಾಣೆಹಳ್ಳಿ ಮಠ ಬಿಟ್ಟು ಹೊರಬಂದಿದ್ದು ನನ್ನ ಜೀವನದ ದೊಡ್ಡ ತಪ್ಪು. ಕೆಲಸ ಅರಸಿ ನೀನಾಸಂಗೆ ಬಂದೆ. ನಾಟಕದ ಜತೆ ಅಭಿನಯ ಕಲಿಸಿ ಜೀವನದ ಜತೆಗೆ ಅನ್ನವನ್ನೂ ಕೊಟ್ಟ ಸಂಸ್ಥೆಯದು. ದೇಶದ ಹಲವೆಡೆ ಸಾಕಷ್ಟು ನಾಟಕ ಮಾಡಿದ್ದೇವೆ. ತಿರುಗಾಟದ ಜೀವನವೇ ನನ್ನದಾಗಿತ್ತು. ಮೊದಲೇ ಮನೆ ಇರಲಿಲ್ಲ. ನನ್ನ ಕೆಲಸವೇ ತಿರುಗಾಟವಾಗಿತ್ತುʼʼಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Paaru Serial: ಡಿವೋರ್ಸ್‌ ಹಂತದಲ್ಲಿPaaru Serial Kannadaದೆ ಎಂದು ವೈಯಕ್ತಿಕ ಜೀವನದ ಬಗ್ಗೆ ರಿವೀಲ್‌ ಮಾಡಿದ ʻಪಾರುʼ ಧಾರಾವಾಹಿಯ ಸಿತಾರಾ!

ಹುಡುಗರೆಂದರೇ ನನಗೆ ಕೈ ಕಾಲು ನಡುಕ

ನಟಿ ಮತ್ತಷ್ಟು ಮಾತನಾಡಿ ʻʻನನಗೆ ತಿರುಗಾಟದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದೇನೆ. ಹುಡುಗಿ ಎನ್ನುವ ಕಾರಣಕ್ಕೆ, ಹಾಗೇ ಹೇಳೋರು ಕೇಳೋರು ಯಾರೂ ಇಲ್ಲ ಎಂದಾಕ್ಷಣ ಅವರ ವರ್ತನೆ ನಿಜಕ್ಕೂ ಅದು ನರಕ! ಅದಕ್ಕಾಗಿಯೇ ನಾನು ಜನರೊಂದಿಗೆ ತುಂಬ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದೆ. ಹುಡುಗರೆಂದರೇ ನನಗೆ ಕೈ ಕಾಲು ನಡುಕ. ಇದೀಗ ನನ್ನ ಜೀವನದಲ್ಲಿ ಕಾಟ ಕೊಟ್ಟವರ ಹೆಸರು ಹೇಳಿದರೆ, ಅವರ ಫ್ಯಾಮಿಲಿ ಬೀದಿಗೆ ಬಂದು ಬಿಡುತ್ತೆ. ಜತೆಯಲ್ಲಿ ನಾಟಕ ಮಾಡ್ತಿದ್ದ ಸ್ನೇಹಿತರು ನಾಟಕದ ವೇದಿಕೆ ಮೇಲೆಯೇ ಟಾರ್ಚರ್‌ ಕೊಟ್ಟಿದ್ದಾರೆ. ಹೇಳೋಕೆ ಯಾರೂ ಇಲ್ಲ. ಹೇಳಿದ್ರೆ ನಂಬುವವರು ಬೇಕಲ್ಲ. ಯಾಕಂದ್ರೆ ಅವರು ತುಂಬ ಚೆನ್ನಾಗಿಯೇ ಮುಖವಾಡ ಹಾಕಿಕೊಂಡು ನಟನೆ ಮಾಡ್ತಾರೆ. ನಿಜಕ್ಕೂ ಅಂತವರು ಅದ್ಭುತ ಕಲಾವಿದರು. ಸ್ನಾನ ಮಾಡ್ತಿದ್ರೆ ಬಾತ್‌ರೂಮ್‌ಗೆ ನುಗ್ಗುತ್ತಿದ್ದರು. ಗ್ರೀನ್‌ ರೂಮ್‌ನಲ್ಲೂ ಬಿಡ್ತಿರಲಿಲ್ಲ. ಮಲಗಿದ್ದರೆ ಅಲ್ಲೂ ಬರೋರು. ಎಲ್ಲೆಲ್ಲಿ ಕೈ ಹಾಕಬಾರದೋ ಅಲ್ಲೆಲ್ಲ ಕೈ ಹಾಕೋರು. ಅವರೆಲ್ಲ ಜತೆಗಿದ್ದವರೇʼ ಎಂದು ಕಣ್ಣೀರು ಹಾಕಿದ್ದಾರೆ.

Exit mobile version