ಬೆಂಗಳೂರು: ಬಿಗ್ ಬಾಸ್ ಸೀಸನ್ ನಾಲ್ಕರ ರನ್ನರ್ ಅಪ್ ಆದ ವರ್ತೂರ್ ಸಂತೋಷ್ (Varthur Santhosh) ಅವರ ಮ್ಯಾನರಿಸಂ ಅದೆಷ್ಟೋ ಫ್ಯಾನ್ಸ್‌ಗೆ ಇಷ್ಟ. ವರ್ತೂರು ಸಂತೋಷ್ ಅವರು ಹಳ್ಳಿಕಾರ್ ಹೋರಿಗಳ ತಳಿ ರಕ್ಷಣೆ ಮಾಡಲು ಪಣ ತೊಟ್ಟಿದ್ದಾರೆ. ಈ ಉದ್ದೇಶ ಇಟ್ಟುಕೊಂಡು ಬಿಗ್ ಬಾಸ್ ಮನೆಗೆ ಸೇರಿದರು. ಅವರ ಆಟದ ವೈಖರಿ ಕಂಡು ಫ್ಯಾನ್ಸ್ ಫಿದಾ ಆಗಿದ್ದರು. ಈಗ ಅವರು ಕೋಲಾರ ಸಮೀಪದ ಮಾಲೂರಿಗೆ ತೆರಳಿದ್ದರು. ಈ ವೇಳೆ ಜನ ಸೆಲ್ಫಿಗೆ ಮುಗಿ ಬಿದ್ದರು.
ವರ್ತೂರು ಸಂತೋಷ್ ಅವರು ಮಾಲೂರಿಗೆ ಭೇಟಿ ನೀಡಿದ್ದರು. ಅಷ್ಟೇ ಅಲ್ಲ ಹೂವಿನ ದಳಗಳನ್ನು ಹಾಕಿ ಅವರನ್ನು ಸ್ವಾಗತಿಸಲಾಯಿತು. ಇದೀಗ ಈ ವಿಡಿಯೊ ಹಂಚಿಕೊಂಡ ವರ್ತೂರ್ ಅವರು ‘ಸಮಸ್ತ ಮಾಲೂರು ಜನತೆಗೆ ಧನ್ಯವಾದ’ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗಿದೆ. ಅವರು ಹೋದಲೆಲ್ಲ ಜನರೇ ನೆರೆದಿದ್ದರು. ಹೊಸಕೋಟೆ, ಚನ್ನಪಟ್ಟಣಕ್ಕೆ ವರ್ತೂರು ಸಂತೋಷ್ ತೆರಳಿದ್ದರು. ವರ್ತೂರ್ ಸಂತೋಷ್ ಈಗಾಗಲೇ ಸಿನಿಮಾ ನಿರ್ಮಾಣ ಮಾಡುವ ಆಲೋಚನೆ ಬಗ್ಗೆಯೂ ಹೇಳಿಕೊಂಡಿದ್ದಾರೆ.
ಹೊರಗೆ ಬಂದ ಮೇಲೆ ರೇಸ್ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.ತಮ್ಮನ್ನು ವಿರೋಧಿಸುವ ಬಗ್ಗೆನೂ ವರ್ತೂರು ಸಂತೋಷ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಈಗಾಗಲೇ ವೈಯಕ್ತಿಕ ಜೀವನ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ವರ್ತೂರ್ ಅವರು ʻʻಇದು ಪರ್ಸನಲ್ ವಿಚಾರ. ಇದನ್ನು ಪಬ್ಲಿಕ್ನಲ್ಲಿ ಹೇಳುವ ಮುಠಾಳ ನಾನಲ್ಲ. ಯಾರೋ ಮುಠಾಳರು, ಅಂಥ ಕೆಲಸ ಮಾಡಿದ್ದಾರೆ ಎಂದರೆ ಅವರ ಮಟ್ಟಕ್ಕೆ ಇಳಿಯಲು ನಾವು ರೆಡಿ ಇಲ್ಲ. ಎಲ್ಲರ ಮನೆಯ ದೋಸೆ ಕೂಡ ತೂತು. ಕೆಲವರ ಮನೆ ಹಂಚೇ ತೂತಾಗಿರುತ್ತದೆ. ನಿಮಗೆ ಅರ್ಥ ಆಗಿದೆ ಎಂದು ಭಾವಿಸುತ್ತೇನೆʼʼ ಎಂದು ಗರಂ ಆಗಿಯೇ ಹೇಳಿದ್ದರು.
ಇದನ್ನೂ ಓದಿ: Varthur Santhosh: ಹಳ್ಳಿಕಾರ್ ರೇಸ್‌ಗೆ ಸಕಲ ಸಿದ್ಧತೆ; ಸುದೀಪಣ್ಣ ಬಂದಾಗ ಇದೇ ಜಾಕೆಟ್ ಎಂದ ವರ್ತೂರ್!
ಬಿಗ್‌ಬಾಸ್ ಮನೆಯೊಳಗೆ ಅಸಮರ್ಥರಾಗಿ ಒಳಗೆ ಹೋದವರು ವರ್ತೂರು ಸಂತೋಷ್. ಅಸಮರ್ಥರ ಗುಂಪಿನಿಂದ ಸಮರ್ಥರ ಗುಂಪಿಗೆ ಜಿಗಿದರೂ ಮನೆಯೊಳಗೆ ಅತ್ಯಂತ ಕ್ರಿಯಾತ್ಮಕವಾಗಿಯೇನೂ ವರ್ತೂರು ಪಾಲ್ಗೊಳ್ಳುತ್ತಿರಲಿಲ್ಲ. ಹಾಗಾಗಿಯೇ ಪ್ರತಿ ವಾರ ನಾಮಿನೇಷನ್ ಆಗುವಾಗಲೂ ಈ ಕಾರಣ ಎಲ್ಲರ ಬಾಯಿಯಲ್ಲಿ ಬರುತ್ತಿತ್ತು.
ಮುಗ್ಧತೆ, ಬದ್ಧತೆ ಎರಡನ್ನೂ ಸೇರಿಸಿ ಎರಕ ಹೊಯ್ದಂತಿರುವ ವರ್ತೂರು ಸಂತೋಷ್ ಅವರು ನಾಲ್ಕನೇ ರನ್ನರ್ ಅಪ್ ಆಗಿ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದರು. ಸಾಕಷ್ಟು ನೆನಪುಗಳನ್ನು ಬಿಗ್‌ಬಾಸ್ ಮನೆಯೊಳಗಿಂದ ಹೊತ್ತು ಬಂದಿದ್ದರು.