Site icon Vistara News

Kannada Serials TRP: ದಾಖಲೆ ಬರೆದ ಬಿಗ್‌ ಬಾಸ್‌; ಮೂರನೇ ಸ್ಥಾನಕ್ಕೆ ನೆಗೆದ ‘ಭಾಗ್ಯಲಕ್ಷ್ಮೀ’!

Kannada Serials with bbk

ಬೆಂಗಳೂರು: ಈ ಬಾರಿ ಹ್ಯಾಪಿ ಬಿಗ್‌ ಬಾಸ್‌ (Kannada Serials TRP) ಎನ್ನುವುದು ಗೊತ್ತೇ ಇದೆ. ಅಷ್ಟೇ ಅಲ್ಲದೇ ಕಳೆದ ವೀಕೆಂಡ್‌ ಪಂಚಾಯ್ತಿಗೆ ಪ್ರೇಕ್ಷಕರು ತುದಿಗಾಲಲ್ಲಿ ಕಾದಿದ್ದರು. ಶೋ ಆರಂಭ ಆದಾಗಿನಿಂದಲೂ ದೊಡ್ಮನೆಯಲ್ಲಿ ಸಾಕಷ್ಟು ಡ್ರಾಮಾಗಳು ನಡೆಯುತ್ತಿವೆ. ಅಷ್ಟೇ ಅಲ್ಲದೇ ಅಗ್ರೆಸಿವ್‌ ಆಗಿ ಸ್ಪರ್ಧಿಗಳು ಇದ್ದಾರೆ. ಇದೀಗ ಧಾರಾವಾಹಿಯ ಟಿಆರ್‌ಪಿ (Kannada Serials TRP) ಹೊರ ಬಿದ್ದಿದೆ. ‘ಬಿಗ್ ಬಾಸ್’ ರಿಯಾಲಿಟಿ ಶೋ ಭರ್ಜರಿ ಟಿಆರ್​ಪಿಯೊಂದಿಗೆ ಮುನ್ನುಗ್ಗುತ್ತಿದೆ. ಹೊಸ ದಾಖಲೆ ನಿರ್ಮಿಸಿದೆ.

ಶನಿವಾರದ ಬಿಗ್ ಬಾಸ್ ಎಪಿಸೋಡ್​ ನಗರ ಭಾಗದಲ್ಲಿ 8.1 ಟಿವಿಆರ್​ ಪಡೆದಿದೆ. ಭಾನುವಾರ 7.6 ಟಿವಿಆರ್ ಹಾಗೂ ವಾರದ ದಿನಗಳಲ್ಲಿ 7.5 ಟಿವಿಆರ್ ಪಡೆದಿದೆ. ಈ ಮೂಲಕ ಬಿಗ್ ಬಾಸ್ ಶೋ ಮೇಲುಗೈ ಸಾಧಿಸಿದಿದೆ. ಕಾರಣವಿಷ್ಟೆ. ಸ್ಪರ್ಧಿಗಳ ಕೆಟ್ಟ ಮಾತುಗಳು, ಟಾಸ್ಕ್‌ಗಳು, ವಿನಯ್‌ ಅವರ ನಾಮಿನೇಶನ್‌ ಪ್ರಕ್ರಿಯೆ, ಮನೆಯಲ್ಲಿ ಎರಡು ಟೀಂ, ಮಹಿಳೆಯರಿಗೆ ಅವಮಾನ ಸೇರದಂತೆ ಇನ್ನಷ್ಟು ಬಿಗ್‌ ಬಾಸ್‌ನಲ್ಲಿ ಹೈಲೈಟ್‌ ಆಗಿದೆ. ಈ ವಾರ ಡ್ರೋನ್‌ ಪ್ರತಾಪ್‌ ಪ್ರಬಲ ಸ್ಪರ್ಧಿಯಾಗಿದ್ದಾರೆ. ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಪುಟ್ಟಕ್ಕನ ಮಕ್ಕಳು

ಈ ಧಾರಾವಾಹಿಗೆ ಎಲ್ಲಾ ಧಾರಾವಾಹಿಗಿಂತ ಹೆಚ್ಚಿನ ಟಿಆರ್​ಪಿ ಸಿಕ್ಕಿದೆ. ನಗರ ಭಾಗದಲ್ಲಿ ಪುಟ್ಟಕ್ಕನ ಮಕ್ಕಳು ಮೊದಲ ಸ್ಥಾನದಲ್ಲಿ ಇದೆ. ಮನೆಯಲ್ಲಿ ಮಕ್ಕಳಿಲ್ಲದೇ ಪುಟ್ಟಕ್ಕ ಒಬ್ಬಂಟಿ. ರಮೇಶ್ ಪಂಡಿತ್, ಉಮಾಶ್ರೀ, ಅಕ್ಷರಾ, ಸಂಜನಾ ಬುರ್ಲಿ, ಮಂಜು ಭಾಷಿಣಿ, ಹಂಸ, ಧನುಷ್, ಸೂರಜ್ ಹೊಳ್ಳ, ಪವನ್ ಕುಮಾರ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ.

ಗಟ್ಟಿಮೇಳ

ಗಟ್ಟಿಮೇಳ ಎರಡನೇ ಸ್ಥಾನಕ್ಕೆ ಬಂದು ನಿಂತಿದೆ. ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್, ಸುಧಾ ನರಸಿಂಹರಾಜು ಮೊದಲಾದವರು ನಟಿಸಿದ್ದಾರೆ. ಸೀತಾ ರಾಮ ಧಾರಾವಾಹಿಯನ್ನು ಬೀಟ್‌ ಮಾಡಿದೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.ಈ ಧಾರಾವಾಹಿ ಬಹುತೇಕ ಕ್ಲೈಮ್ಯಾಕ್ಸ್ ಹಂತ ತಲುಪಿದೆ.

‘ಭಾಗ್ಯಲಕ್ಷ್ಮೀ’

ಕಳೆದ ವಾರ ಐದನೇ ಸ್ಥಾನದಲ್ಲಿ ‘ಭಾಗ್ಯಲಕ್ಷ್ಮಿ’ ಧಾರಾವಾಹಿ ಇದೀಗ ಮೂರನೇ ಸ್ಥಾನಕ್ಕೆ ಇದೆ. ಶ್ರೇಷ್ಠಾಳ ಕಿತಾಪತಿ ಹೆಚ್ಚಾಗಿದೆ. ತಾಂಡವ್‌ ಸಮಸ್ಯೆಗೆ ಗುರಿಯಾಗಿದ್ದಾನೆ. ಭಾಗ್ಯ ಮುಂಚಿನ ಹಾಗೇ ಇಲ್ಲ. ಅವಳ ದಿಟ್ಟ ಹೆಜ್ಜೆ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಸುದರ್ಶನ್ ರಂಗಪ್ರಸಾದ್, ಸುಷ್ಮಾ ಕೆ ರಾವ್, ಪದ್ಮಜಾ ರಾವ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕಲರ್ಸ್‌ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.

ಇದನ್ನೂ ಓದಿ; Kannada Serials TRP: ಟಾಪ್‌ 5ನಲ್ಲಿಲ್ಲ ‘ಸೀತಾ ರಾಮ’; ಟಿಆರ್‌ಪಿಯಲ್ಲಿ ʻಬಿಗ್‌ ಬಾಸ್‌ʼ!

ಅಮೃತಧಾರೆ

ಧಾರಾವಾಹಿ ಕಳೆದ ವಾರ ಏಳನೇ ಸ್ಥಾನದಲ್ಲಿತ್ತು ಇದೀಗ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಗೌತಮ್‌ ಹಾಗೂ ಭೂಮಿಕಾ ಅರ್ಥ ಮಾಡಿಕೊಳ್ಳಲು ಶುರು ಮಾಡಿದ್ದಾರೆ. ಮನೆಯಲ್ಲಿ ಪ್ರತಿ ಸದಸ್ಯರ ಮುಖವಾಡ ಗೌತಮ್‌ ಮುಂದೆ ಬಯಲಾಗುತ್ತಿದೆ. ಸ್ನೇಹಿತ ಆನಂದ್‌ ಹಾರ ಕದ್ದಿಲ್ಲ ಎಂಬುದು ಬಹಿರಂಗಗೊಂಡಿದೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಐದನೇ ಸ್ಥಾನದಲ್ಲಿ ‘ಸತ್ಯ ಹಾಗೂ ಶ್ರೀರಸ್ತು ಶುಭಮಸ್ತು’

ಶ್ರೀರಸ್ತು ಶುಭಮಸ್ತು

ಅವಿನಾಶ್‌ ತುಳಸಿ ಹತ್ತಿರವಾಗುತ್ತಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.ಸುಧಾರಾಣಿ ಅವರು ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ಸೊಸೆಯ ಪಾತ್ರ ನಿರ್ವಹಿಸುತ್ತಿದ್ದಾರೆ. ತುಳಸಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಸತ್ಯ ಧಾರಾವಾಹಿ ಈ ನಡುವೆ ಒಳ್ಳೆಯ ಟಿಆರ್‌ಪಿ ಪಡೆದು ಮುನ್ನುಗ್ಗುತ್ತಿದೆ. ಸತ್ಯ ಮತ್ತು ಅತ್ತೆಯ ನಡುವೆ ಬಾಂಧವ್ಯ ಹೆಚ್ಚಾಗಿದೆ. ಅಷ್ಟೇ ಅಲ್ಲದೇ ಲಕ್ಷ್ಮಣ ಇನ್ನೊಂದು ಮದುವೆಯಾಗಿರುವ ಬಗ್ಗೆ ಕಥೆಯೂ ಸಾಗುತ್ತಿದೆ. ಇದೀಗ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ.ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಸೀತಾ ರಾಮ

ಸೀತಾಳನ್ನು ರಾಮ ಸೀರೆಯಲ್ಲಿ ಕಂಡು ಫಿದಾ ಆಗಿದ್ದಾನೆ. ಸದಾ ಎರಡನೇ ಸ್ಥಾನದಲ್ಲಿಯೇ ಇರುತ್ತಿದ್ದ ಸೀತಾ ರಾಮ ಆರೆನೇ ಸ್ಥಾನಕ್ಕೆ ಕುಸಿದಿದೆ. ಬಿಗ್‌ ಬಾಸ್‌ ಪ್ರಸಾರದ ಕಾರಣಕ್ಕೋ, ಧಾರಾವಾಹಿಗೆ ಕಡಿಮೆ ಟಿಆರ್‌ಪಿ ಸಿಕ್ಕಿದೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

Exit mobile version